Asianet Suvarna News Asianet Suvarna News

ಮನೆಯ ಸುಖ ಶಾಂತಿಗಿರಲಿ ಶಂಖಪುಷ್ಪ, ಹೂವಲ್ಲೇನಿದೆ ವಿಶೇಷ!

ವಾಸ್ತು ಶಾಸ್ತ್ರದಲ್ಲಿ ಮನೆಗೆ ಸಕಾರಾತ್ಮಕ ಶಕ್ತಿಯನ್ನು ನೀಡುವ ಸಸ್ಯಗಳ ಬಗ್ಗೆ ತಿಳಿಸಲಾಗಿದೆ. ಅಂಥ ಸಸ್ಯಗಳಲ್ಲಿ ಶಂಖಪುಷ್ಪವು ಸಹ ಒಂದು. ಇದು ಔಷಧೀಯ ಗುಣವನ್ನು ಹೊಂದಿರುವುದಲ್ಲದೇ, ಮನೆಗೆ ಅತ್ಯಂತ ಶುಭವನ್ನುಂಟು ಮಾಡುವ ಸಸ್ಯವಾಗಿದೆ. ಈ ಸಸ್ಯದಿಂದ ಮನೆಗೆ ದೇವರ ಕೃಪೆ ಲಭಿಸುವುದಲ್ಲದೇ, ಇನ್ನೂ ಅನೇಕ ಪ್ರಯೋಜನಗಳು ಮತ್ತು ನೆಡುವ ಮೊದಲು ಪಾಲಿಸಬೇಕಾದ ಅಂಶಗಳ ಬಗ್ಗೆ ತಿಳಿಯೋಣ...

For peaceful life plant Aparajitha at home
Author
Bangalore, First Published Jul 6, 2022, 4:47 PM IST

ಮನೆಯಲ್ಲಿ ನೆಮ್ಮದಿ ಇದ್ದರೆ ಮಾತ್ರ ಜೀವನದಲ್ಲಿ (Life) ಸುಖ –ಸಮೃದ್ಧಿ ನೆಲೆಸಲು ಸಾಧ್ಯ. ಮನೆಯ ಸುತ್ತಮುತ್ತ ನೆಟ್ಟು ಪೋಷಿಸುವ ಕೆಲವು ಸಸ್ಯಗಳು (Plant) ಮನೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವುದಲ್ಲದೇ, ಮನೆಯ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ (Vastu Shastra) ಅಂತಹ ಅನೇಕ ವಿಧವಾದ ಸಸ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅಂಥ ಸಸ್ಯಗಳಲ್ಲಿ ಶಂಖಪುಷ್ಪವು (Aparajitha) ಸಹ ಒಂದಾಗಿದೆ. ವಿಷ್ಣುವಿಗೆ (Lord Vishnu) ಪ್ರಿಯವಾಗಿರುವ ಶಂಖಪುಷ್ಪವು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೇ, ವಾತಾವರಣವನ್ನು ಶುದ್ಧಗೊಳಿಸುವಲ್ಲಿ (Clean) ಸಹ ಸಹಕಾರಿಯಾಗಿರುತ್ತದೆ. ಮನೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಸ್ಯಗಳಲ್ಲಿ ಶಂಖಪುಷ್ಪವು ಸಹ ಒಂದು ಎಂದು ವಾಸ್ತು ಶಾಸ್ತ್ರ ಉಲ್ಲೇಖಿಸುತ್ತದೆ. ಅಷ್ಟೇ ಅಲ್ಲದೆ ಶಂಖಪುಷ್ಪದ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆಯೂ ತಿಳಿಸಿದೆ. ಅವು ಯಾವುವು ಎಂಬುದನ್ನು ತಿಳಿಯೋಣ...

ಶಂಖದ (Conch) ಆಕಾರದಲ್ಲಿರುವ ನೀಲಿ (Blue) ಬಣ್ಣದ ಪುಷ್ಪವೇ ಶಂಖಪುಷ್ಪ. ಇದು ಅನೇಕ ಔಷಧೀಯ (Medicine) ಗುಣವನ್ನು ಹೊಂದಿರುವುದಲ್ಲದೇ, ಮನೆಯಲ್ಲಿ ಸುಖ- ಶಾಂತಿ ನೆಲೆಸುವಂತೆ ಮಾಡುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಗೆ ಲಕ್ಷ್ಮೀ ದೇವಿಯ (Goddess lakshmi) ಆಗಮನವಾಗುತ್ತದೆ ಎಂದು ಹೇಳಲಾಗುತ್ತದೆ. ಶಂಖಪುಷ್ಪ ಸಸ್ಯವನ್ನು ಎಲ್ಲೆಂದರಲ್ಲಿ ನೆಡುವುದಲ್ಲ, ಈ ಸಸ್ಯವನ್ನು ನೆಡುವ ಮೊದಲು ಕೆಲವು ನಿಯಮಗಳನ್ನು ಅಗತ್ಯವಾಗಿ ಪಾಲಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸಸ್ಯ ಮನೆಯಲ್ಲಿರುವುದರಿಂದ ಆಗುವ ಲಾಭ (Benefit) ಮತ್ತು ಇದನ್ನು ನೆಡುವಾಗ ಪಾಲಿಸಬೇಕಾದ ನಿಯಮಗಳ (Rules) ಬಗ್ಗೆ ತಿಳಿಯುವುದು ಅವಶ್ಯಕ.

ಇದನ್ನು ಓದಿ: ರವಿ ಯೋಗದಲ್ಲಿ ಚಾತುರ್ಮಾಸ ಆರಂಭ ಈ ಮೂರು ರಾಶಿಯವರಿಗೆ ಧನಲಾಭ

ದಿಕ್ಕಿನ ಬಗ್ಗೆ ಇರಲಿ ಗಮನ (Direction)
ವಾಸ್ತು ಶಾಸ್ತ್ರದ ಪ್ರಕಾರ ಈ ಸಸ್ಯವನ್ನು ಮನೆಯ ಪೂರ್ವ (East), ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಮನೆಗೆ ಒಳಿತಾಗುತ್ತದೆ. ಈ ದಿಕ್ಕಿನಲ್ಲಿ ಶಂಖಪುಷ್ಪ ಇದ್ದರೆ ಶುಭ ಮತ್ತು ಮನೆಯಲ್ಲಿ ಸುಖ –ಸಮೃದ್ಧಿ ಹೆಚ್ಚುತ್ತದೆ ಎಂದು ಶಾಸ್ತ್ರ ಉಲ್ಲೇಖಿಸುತ್ತದೆ. ಈ ಸಸ್ಯವನ್ನು ಪಾಟ್‌ನಲ್ಲಿ ಇಟ್ಟು ಬೆಳೆಸಬಹುದಾದ್ದರಿಂದ ಮನೆಯ ಮುಖ್ಯದ್ವಾರದ (Entrance) ಬಲಭಾಗಕ್ಕೆ ನೆಡುವುದು ಸಹ ಅತ್ಯಂತ ಶುಭವೆಂದು ಹೇಳಲಾಗುತ್ತದೆ.

ಯಾವಾಗ ನೆಡಬೇಕು (Planting)
ಶಂಖಪುಷ್ಪವನ್ನು ಗುರುವಾರ (Thursday) ಮತ್ತು ಶುಕ್ರವಾರದ (Friday) ದಿನ ನೆಡಬಹುದಾಗಿದೆ. ಶಂಖಪುಷ್ಪವು ಶ್ರೀ ಮಹಾವಿಷ್ಣುವಿಗೆ ಪ್ರಿಯವಾದ ಪುಷ್ಪವಾದ್ದರಿಂದ, ವಿಷ್ಣುವಿಗೆ ಸಮರ್ಪಿತವಾದ ಗುರುವಾರದಂದು ನೆಡುವುದು ಶುಭ ಇದರಿಂದ ಶ್ರೀ ವಿಷ್ಣುವಿನ ಕೃಪೆ ಪ್ರಾಪ್ತವಾಗುತ್ತದೆ. ಮಹಾಲಕ್ಷ್ಮೀಯ ವಾರವಾದ ಶುಕ್ರವಾರ ಸಹ ಈ ಸಸ್ಯವನ್ನು ನೆಡಬಹುದೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಈ ದಿನ ಶಂಖಪುಷ್ಪವನ್ನು  ನೆಡುವುದರಿಂದ, ಮನೆಗೆ ಮಹಾಲಕ್ಷ್ಮೀಯ ಆಗಮನವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಎರಡು ದಿನಗಳಲ್ಲಿ ಯಾವ ದಿನ ನೆಟ್ಟರೂ ಶುಭವೆಂದು ಹೇಳಲಾಗುತ್ತದೆ. 

ಪ್ರಯೋಜನಗಳು ಹೀಗಿವೆ (Benefit)
ವಾಸ್ತು ಶಾಸ್ತ್ರದ ಪ್ರಕಾರ ಈ ಸಸ್ಯವು ಮನೆಯಲ್ಲಿದ್ದರೆ, ಹಣಕ್ಕೆ (Money) ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ನೀಲಿ ಬಣ್ಣದ ಶಂಖಪುಷ್ಪವು ಹಣವನ್ನು ಆಕರ್ಷಿಸುತ್ತದೆ (Attracts) ಎಂದು ಶಾಸ್ತ್ರ ಹೇಳುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ (Positive) ಹರಿವು ಹೆಚ್ಚುತ್ತದೆ. ಇದರಿಂದ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಕೆಲಸಕಾರ್ಯಗಳಿಗೆ ಬಂದಿರುವ ಅಡೆತಡೆಗಳು ದೂರವಾಗುತ್ತವೆ. ಅಂದುಕೊಂಡ ಕಾರ್ಯಗಳು ಸಂಪನ್ನಗೊಳ್ಳುತ್ತವೆ. 

ಇದನ್ನು ಓದಿ: ಇಷ್ಟಾರ್ಥ ಸಿದ್ಧಿಗೆ ಗ್ರಹಗಳ ಪೂಜೆ ಹೀಗೆ ಮಾಡಿ

ಶನಿದೇವರ ಕೃಪೆ (Saturn)
ಶನಿವಾರದ (Saturday) ದಿನ ಶನಿ ದೇವರಿಗೆ ಶಂಖಪುಷ್ಪವನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಶನಿದೇವರಿಗೆ ಶಂಖಪುಷ್ಪವನ್ನು ಅರ್ಪಿಸಿ, ಆರಾಧಿಸುವುದರಿಂದ ಶನಿ ದೇವರ ವಕ್ರದೃಷ್ಠಿಯಿಂದ ಪಾರಾಗಬಹುದಾಗಿದೆ. ಅಷ್ಟೇ ಅಲ್ಲದೇ ಶನಿದೇವರ ಕೃಪೆ (Blessings) ಸಹ ಲಭ್ಯವಾಗುತ್ತದೆ.

Follow Us:
Download App:
  • android
  • ios