Astro Tips: ನವಗ್ರಹ ದೋಷದಿಂದ ಮುಕ್ತರಾಗಲು ಈ 9 ವೃಕ್ಷಗಳನ್ನು ಪೂಜಿಸಿ..

 ಗ್ರಹಕ್ಕೆ ಸಂಬಂಧಿಸಿದ ಮರಗಳು ಮತ್ತು ಸಸ್ಯಗಳನ್ನು ಪೂಜಿಸುವುದರಿಂದ, ಗ್ರಹ ದೋಷಗಳು ದೂರವಾಗುತ್ತವೆ ಮತ್ತು ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ.

Astro Tips worship these 9 plants and trees to get rid of Navgrah dosh skr

ಜ್ಯೋತಿಷ್ಯದಲ್ಲಿ, ಗ್ರಹಗಳನ್ನು ಅನುಕೂಲಕರವಾಗಿಸಲು ಸಸ್ಯಗಳ ಪಾತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅದರ ಪ್ರಕಾರ, ಗಿಡಗಳನ್ನು ನೆಟ್ಟು ಪೂಜೆ ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಗ್ರಹಕ್ಕೆ ಸಂಬಂಧಿಸಿದ ಮರಗಳು ಮತ್ತು ಸಸ್ಯಗಳನ್ನು ಪೂಜಿಸುವುದರಿಂದ, ಗ್ರಹ ದೋಷಗಳು ದೂರವಾಗುತ್ತವೆ ಮತ್ತು ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ, ಜೊತೆಗೆ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ. ನವಗ್ರಹಗಳಲ್ಲಿ ಯಾವ ಗ್ರಹದ ದೋಷ ತೊಡೆದು ಹಾಕಲು ಯಾವ ಮರಕ್ಕೆ ಪೂಜಿಸಬೇಕು ನೋಡೋಣ.

ಬಿಳಿ ಎಕ್ಕ(ಸೂರ್ಯ)
ಸುಲಭವಾಗಿ ಬೆಳೆಯುವ ಎಕ್ಕದ ಸಸ್ಯವು ಸೂರ್ಯ ಗ್ರಹಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಈ ಸಸ್ಯವನ್ನು ಆಕ್ ಎಂದೂ ಕರೆಯುತ್ತಾರೆ. ಈ ಸಸ್ಯದ ಪೂಜೆಯು ಬೌದ್ಧಿಕ ಪ್ರಗತಿ ಮತ್ತು ಜ್ಞಾಪಕ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯಗ್ರಹದ ಸ್ಥಾನವೂ ಅನುಕೂಲಕರವಾಗಿರುತ್ತದೆ.

ಮುತ್ತುಗ (ಚಂದ್ರ)
ಚಂದ್ರನು ಮನಸ್ಸಿನ ಅಂಶ ಎಂದು ಹೇಳಲಾಗುತ್ತದೆ. ಪಲಾಶ್ ಸಸ್ಯವು ಚಂದ್ರ ಗ್ರಹಕ್ಕೆ ಸಂಬಂಧಿಸಿದೆ. ಇದರ ಆರಾಧನೆಯಿಂದ ಮಾನಸಿಕ ರೋಗಗಳು ಗುಣವಾಗುತ್ತವೆ ಮತ್ತು ಚಂದ್ರನಿಂದ ಶುಭ ಫಲಗಳು ದೊರೆಯುತ್ತವೆ. ಇದರ ಎಲೆಗಳನ್ನು ಪೂಜಿಸುವುದರಿಂದ ಚಂದ್ರನ ವಿಶೇಷ ಕೃಪೆಯೂ ದೊರೆಯುತ್ತದೆ, ವ್ಯಕ್ತಿಯ ಮಾನಸಿಕ ನೆಮ್ಮದಿ ಹೆಚ್ಚುತ್ತದೆ.

ಕಗ್ಗಲಿ (ಮಂಗಳ)
ಕಗ್ಗಲಿ ಸಸ್ಯವು ಮಂಗಳಕ್ಕೆ ಸಂಬಂಧಿಸಿದೆ. ಈ ವೃಕ್ಷವನ್ನು ಆರೈಕೆ ಮಾಡಿ ಪೂಜಿಸುವುದರಿಂದ ವ್ಯಕ್ತಿಯ ರಕ್ತ ದೋಷಗಳು, ಚರ್ಮರೋಗಗಳು ದೂರವಾಗಿ ಪ್ರತಿಷ್ಠೆ ಹೆಚ್ಚುತ್ತದೆ. ಜಾತಕದಲ್ಲಿ ಮಂಗಳವನ್ನು ನಿಯಂತ್ರಿಸಲು ಕಗ್ಗಲಿಯನ್ನು ಪೂಜಿಸುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ.

ಸಿಂಹ ರಾಶಿಗೆ ಮಂಗಳ; ಮಿಥುನ ಸೇರಿ 3 ರಾಶಿಗಳಿಗೆ ಶುಭ ಮಂಗಳ

ಉತ್ತರಾಣಿ (ಬುಧ)
ಬುಧ ಗ್ರಹದಿಂದ ಬಳಲುತ್ತಿರುವ ಜನರು ಅನೇಕ ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ನಿಮ್ಮ ಕಷ್ಟಗಳು ದೂರವಾಗಲು ಉತ್ತರಾಣಿ ಗಿಡವನ್ನು ಪೂಜಿಸಿದರೆ ತುಂಬಾ ಫಲ ಸಿಗುತ್ತದೆ.

ಅಶ್ವತ್ಥ(ಗುರು)
ಅಶ್ವತ್ಥ ಮರವು ವಿಷ್ಣುವಿನ ಜೀವಂತ ಮತ್ತು ಸಂಪೂರ್ಣ ಸಾಕಾರ ರೂಪವಾಗಿದೆ. ಇದು ಗುರು ಗ್ರಹಕ್ಕೆ ಸಂಬಂಧಿಸಿದೆ. ಇದರ ಆರಾಧನೆಯಿಂದ ಜ್ಞಾನ ವೃದ್ಧಿಯಾಗುತ್ತದೆ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಪದ್ಮ ಪುರಾಣದ ಪ್ರಕಾರ, ಅಶ್ವತ್ಥ ಮರಕ್ಕೆ ನಮಸ್ಕರಿಸುವುದು ಮತ್ತು ಅದಕ್ಕೆ ಪ್ರದಕ್ಷಿಣೆ ಹಾಕುವುದು ಮನುಷ್ಯನ ಆಯುಷ್ಯವನ್ನು ಹೆಚ್ಚಿಸುತ್ತದೆ.

ತುಳಸಿ (ಶುಕ್ರ)
ಜಾತಕದಲ್ಲಿ ಶುಕ್ರ ದೋಷ ಇದ್ದರೆ ಮನೆಯ ಅಂಗಳದಲ್ಲಿ ತುಳಸಿ ಗಿಡ ನೆಡಿ. ಹೀಗೆ ಮಾಡುವುದರಿಂದ ಮನೆಯಿಂದ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಹರಡುತ್ತದೆ. ಇದರೊಂದಿಗೆ ಕುಟುಂಬದ ಎಲ್ಲ ಸದಸ್ಯರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ನೆನಪಿನಲ್ಲಿಡಿ, ಯಾರ ಜಾತಕದಲ್ಲಿ ಶುಕ್ರವು ದುರ್ಬಲವಾಗಿದೆಯೋ ಅವರು ನಿಯಮಿತವಾಗಿ ಸಂಜೆ ತುಳಸಿಯ ಮುಂದೆ ದೀಪವನ್ನು ಬೆಳಗಿಸಬೇಕು.

ಶಮಿ (ಶನಿ)
ಶಮಿ ಸಸ್ಯವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಇದನ್ನು ಪೂಜಿಸುವುದರಿಂದ ಶನಿಯ ಅನುಗ್ರಹ ದೊರೆಯುತ್ತದೆ ಮತ್ತು ಸಂಪತ್ತು, ಬುದ್ಧಿವಂತಿಕೆ, ಕೆಲಸದಲ್ಲಿ ಪ್ರಗತಿ ಮತ್ತು ಬಯಸಿದ ಫಲಿತಾಂಶಗಳನ್ನು ಪಡೆಯುವಿರಿ. ಜೊತೆಗೆ ಜೀವನದಲ್ಲಿ ಬರುವ ಅಡೆತಡೆಗಳು ಸಹ ದೂರವಾಗುತ್ತವೆ.

Dream Astrology: ಈ ಕನಸುಗಳು ಸಾವಿನ ಸಂಕೇತ ನೀಡುತ್ತವೆ..

ಶ್ರೀಗಂಧ (ರಾಹು)
ರಾಹುವಿನ ದೋಷವನ್ನು ಹೋಗಲಾಡಿಸಲು ಶ್ರೀಗಂಧದ ಮರವನ್ನು ಪೂಜಿಸಬೇಕು.

ಅಶ್ವಗಂಧ (ಕೇತು)
ಅಶ್ವಗಂಧ ಮರವು ಕೇತು ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಮರವನ್ನು ಪೂಜಿಸುವುದರಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios