Asianet Suvarna News Asianet Suvarna News

ನಾಳೆಯಿಂದ ಅಮರನಾಥ ಯಾತ್ರೆ ಶುರು: 3 ಲಕ್ಷ ಜನರ ನೋಂದಣಿ

ಹಿಂದುಗಳ ಪವಿತ್ರ ಅಮರನಾಥ ಯಾತ್ರೆ ನಾಳೆಯಿಂದ ಶುರುವಾಗಲಿದ್ದು, ಈಗಾಗಲೇ 3 ಲಕ್ಷ ಯಾತ್ರಿಗಳು ನೋಂದಾಯಿಸಿಕೊಂಡಿದ್ದಾರೆ. ಯಾತ್ರೆಯ ಅವಧಿಯು ಹಿಂದೆಂದಿಗಿಂತಲೂ ಹೆಚ್ಚೆನ್ನಬಹುದಾದ 62 ದಿನ ಇರಲಿದೆ.

Amarnath Yatra to start from tomorrow 3 lakh pilgrims Registered for Yatra akb
Author
First Published Jun 30, 2023, 8:32 AM IST

ಶ್ರೀನಗರ: ಹಿಂದುಗಳ ಪವಿತ್ರ ಅಮರನಾಥ ಯಾತ್ರೆ ನಾಳೆಯಿಂದ ಶುರುವಾಗಲಿದ್ದು, ಈಗಾಗಲೇ 3 ಲಕ್ಷ ಯಾತ್ರಿಗಳು ನೋಂದಾಯಿಸಿಕೊಂಡಿದ್ದಾರೆ. ಯಾತ್ರೆಯ ಅವಧಿಯು ಹಿಂದೆಂದಿಗಿಂತಲೂ ಹೆಚ್ಚೆನ್ನಬಹುದಾದ 62 ದಿನ ಇರಲಿದ್ದು, ಕಳೆದ ಬಾರಿಗಿಂತ ಶೇ.10ರಷ್ಟುಹೆಚ್ಚು ಜನರು ವಿವಿಧ ಮೂಲಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಜತೆಗೆ ಸ್ಥಳದಲ್ಲೇ ನೋಂದಾವಣಿಗೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಿಕರ ಮೊದಲ ತಂಡವು ಜೂ.30ರಂದು ಜಮ್ಮುವಿನಿಂದ ತೆರಳಲಿದೆ. ಯಾತ್ರೆಯುದ್ದಕ್ಕೂ ಜನರಿಗೆ ಅನುಕೂಲವಾಗಲು ಹಾದಿ ಸುಗಮಗೊಳಿಸಲಾಗಿದ್ದು, ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಹಿಡಿಕೆ ಕಂಬಿಗಳನ್ನು ಅಳವಡಿಸಲಾಗಿದೆ. ಅಂತರ್ಜಾಲ ಕಲ್ಪಿಸಲು ಎಲ್ಲ ಕಡೆ ಕೇಬಲ್‌ಗಳನ್ನು ಅಳವಡಿಸಲಾಗಿದೆ.

ಜನರ ಭದ್ರತೆಯ ಆದ್ಯ ಕರ್ತವ್ಯವಾಗಿರುವ ಕಾರಣ ಚಾರಣದುದ್ದಕ್ಕೂ ಭದ್ರತಾ ಸಿಬ್ಬಂದಿ, ಡ್ರೋನ್‌ಗಳನ್ನು ನಿಯೋಜನ ಮಾಡಲಾಗಿದೆ. ಇದನ್ನು ಜಮ್ಮು ಕಾಶ್ಮೀರ ಪೊಲೀಸ್‌ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ಮಂದೀಪ್‌ ಕುಮಾರ್‌ ಬಂಢಾರಿ ತಿಳಿಸಿದರು.

ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರ ಸಂಚು: ಪಾಕ್‌​ನಿಂದ ಇಬ್ಬರು ಉಗ್ರರ ನಿಯೋ​ಜ​ನೆ

Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

Latest Videos
Follow Us:
Download App:
  • android
  • ios