Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?
ಅಮರನಾಥ ಯಾತ್ರೆಯು ಜುಲೈ 1ರಿಂದ ಪ್ರಾರಂಭವಾಗಲಿದ್ದು ಅಮರನಾಥ ಬಾಬಾ ಅವರ ಮೊದಲ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮರನಾಥ ಯಾತ್ರೆಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
ಅಮರನಾಥ ಯಾತ್ರೆಗೆ ಸಿದ್ಧತೆಗಳು ಆರಂಭವಾಗಿದ್ದು, ಈ ನಡುವೆ ಬಾಬಾ ಬರ್ಫಾನಿಯ ಈ ವರ್ಷದ ಮೊದಲ ಚಿತ್ರ ಹೊರ ಬಿದ್ದಿದೆ.
ಪವಿತ್ರ ಅಮರನಾಥ ಗುಹೆಯಲ್ಲಿ ಪ್ರತಿ ವರ್ಷ ನೈಸರ್ಗಿಕವಾಗಿ ಶಿವಲಿಂಗವು ಹಿಮದಿಂದ ಉಂಟಾಗುತ್ತದೆ. ನೈಸರ್ಗಿಕ ಹಿಮದಿಂದ ಮಾಡಲ್ಪಟ್ಟಿರುವ ಕಾರಣ, ಈ ಶಿವಲಿಂಗವನ್ನು ಸ್ವಯಂಭೂ ಹಿಮಾನಿ ಶಿವಲಿಂಗ ಮತ್ತು ಬಾಬಾ ಬರ್ಫಾನಿ ಎಂದೂ ಕರೆಯುತ್ತಾರೆ.
ಅಮರನಾಥ ಯಾತ್ರೆಗೆ ಆಡಳಿತವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬಾಬಾ ಬರ್ಫಾನಿಯ ದರ್ಶನಕ್ಕಾಗಿ ಯಾತ್ರೆಯು ಜುಲೈ 1, 2023 ರ ಶನಿವಾರದಿಂದ ಪ್ರಾರಂಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನು ಈ ಸ್ಥಳದಲ್ಲಿ ತಾಯಿ ಪಾರ್ವತಿಗೆ ಮೋಕ್ಷದ ಮಾರ್ಗವನ್ನು ತೋರಿಸಿದನು. ಈ ಜ್ಞಾನವನ್ನು ಅಮರ್ ಕಥಾ ಎಂದು ಕರೆಯಲಾಗುತ್ತದೆ, ಆದ್ದರಿಂದ ಈ ಪವಿತ್ರ ಸ್ಥಳಕ್ಕೆ ಅಮರನಾಥ ಎಂದು ಹೆಸರು ಬಂದಿದೆ.
ಬೆಳಿಗ್ಗೆ ಮತ್ತು ಸಂಜೆ ಆರತಿ ಲೈವ್..
ಚಿತ್ರದಲ್ಲಿ, ಬಾಬಾ ಬರ್ಫಾನಿ ಆಕರ್ಷಕ ರೂಪ ಭಕ್ತರನ್ನು ಸೆಳೆಯುತ್ತಿದೆ. ಬಾಬಾ ಬರ್ಫಾನಿಯ ಮೊದಲ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಬಾ ಅಮರನಾಥನ ಮೊದಲ ಪೂಜೆಯಲ್ಲಿ ಭಾಗವಹಿಸಿದರು. ಇದರೊಂದಿಗೆ ಅಮರನಾಥ ಪುಣ್ಯಕ್ಷೇತ್ರ ಮಂಡಳಿಯು ಬಾಬಾ ಅಮರನಾಥರ ಬೆಳಗ್ಗೆ ಮತ್ತು ಸಂಜೆಯ ಆರತಿಯನ್ನು ನೇರಪ್ರಸಾರ ಮಾಡಲಿದೆ.
ನೀವು ಇಲ್ಲಿ ನೋಂದಾಯಿಸಿಕೊಳ್ಳಬಹುದು..
ಅಮರನಾಥ ಯಾತ್ರೆಯು ಜುಲೈ 1ರಂದು ಆರಂಭಗೊಂಡು ಆಗಸ್ಟ್ 30 ರಕ್ಷಾ ಬಂಧನದಂದು ಕೊನೆಗೊಳ್ಳಲಿದೆ. ಏಪ್ರಿಲ್ 10ರಂದು ಅಮರನಾಥ ಯಾತ್ರೆಯ ವೇಳಾಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಅಮರನಾಥ ಯಾತ್ರೆಗೆ ಸರ್ಕಾರ ವಯಸ್ಸನ್ನು ನಿಗದಿ ಮಾಡಿದೆ. ಪ್ರಯಾಣಿಸಲು, ವಯಸ್ಸು 13 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
ಈ ಬಾರಿ 8 ಲಕ್ಷಕ್ಕೂ ಹೆಚ್ಚು ಭಕ್ತರು ಬಾಬಾ ಬರ್ಫಾನಿಯನ್ನು ದರ್ಶನ ಮಾಡಬಹುದು ಎಂದು ಹೇಳಲಾಗುತ್ತಿದೆ. ಏಪ್ರಿಲ್ 17ರಿಂದ ಅಮರನಾಥ್ ಯಾತ್ರೆಗೆ ಹೋಗಲು ನೋಂದಣಿ ಪ್ರಾರಂಭವಾಗಿದೆ. ಅಧಿಕೃತ ವೆಬ್‌ಸೈಟ್ https://jksasb.nic.in/ ಗೆ ಭೇಟಿ ನೀಡುವ ಮೂಲಕ ನೀವು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಮತ್ತು ಈ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.
ಹಿಮಾಲಯದ ಮಡಿಲಲ್ಲಿ
ಹಿಮಾಲಯದ ಮಡಿಲಲ್ಲಿರುವ ಅಮರನಾಥವನ್ನು ಶಿವನ ಪವಿತ್ರ ಯಾತ್ರಾ ಕೇಂದ್ರವೆಂದು ಪರಿಗಣಿಸಲಾಗಿದೆ. ಚಂದ್ರನ ಬೆಳಕಿನ ಆಧಾರದ ಮೇಲೆ ಗಾತ್ರವನ್ನು ನಿರ್ಧರಿಸುವ ಏಕೈಕ ಶಿವಲಿಂಗ ಇದಾಗಿದೆ.
ಈ ಶಿವಲಿಂಗವು ಶ್ರಾವಣ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಪೂರ್ಣಗೊಳ್ಳುತ್ತದೆ ಮತ್ತು ನಂತರ ಬರುವ ಅಮಾವಾಸ್ಯೆಯ ದಿನದವರೆಗೆ ಗಾತ್ರದಲ್ಲಿ ಬಹಳ ಚಿಕ್ಕದಾಗುತ್ತದೆ. ಮುಸ್ಲಿಂ ಕುರುಬನು ಬಾಬಾ ಬರ್ಫಾನಿಯ ಪವಿತ್ರ ಗುಹೆಯನ್ನು ಕಂಡುಹಿಡಿದನು ಎಂದು ನಂಬಲಾಗಿದೆ. ಇಂದಿಗೂ ಅವರ ವಂಶಸ್ಥರಿಗೆ ಬಾಬಾರವರ ದಾನದಲ್ಲಿ ನೀಡಲಾಗುವ ಮೊತ್ತದ ಒಂದು ಭಾಗವನ್ನು ನೀಡಲಾಗುತ್ತದೆ.