ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರ ಸಂಚು: ಪಾಕ್ನಿಂದ ಇಬ್ಬರು ಉಗ್ರರ ನಿಯೋಜನೆ
ಜಮ್ಮು-ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ವೇಳೆ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆರಸಲು ಪಾಕಿಸ್ತಾನ ಮೂಲ ಭಯೋತ್ಪಾದಕರು ಯೋಜಿಸಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ವೇಳೆ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆರಸಲು ಪಾಕಿಸ್ತಾನ ಮೂಲ ಭಯೋತ್ಪಾದಕರು ಯೋಜಿಸಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯಾತ್ರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ಎಸಗಿ ಯಾತ್ರೆಗೆ ಅಡ್ಡಿಪಡಿಸಲು ಭಯೋತ್ಪಾದಕರು ಮುಂದಾಗಿದ್ದು ಈಗಾಗಲೇ ಈ ದಾಳಿಯ ಹೊಣೆಯನ್ನು ರಫೀಕ್ ನಾಯ್ (Rafiq Nai) ಮತ್ತು ಮೊಹಮ್ಮದ್ ಅಮಿನ್ ಬಟ್‌ಗೆ (Mohammad Amin Butt) ನೀಡಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಇದಲ್ಲದೆ, ಇವರಿಬ್ಬರಿಗೆ ರಜೌರಿ-ಪೂಂಛ್ (Rajouri-Poonch) ಪೀರ್ ಪಂಜಾಲ್ ಹಾಗೂ ಚೆನಾಬ್ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವಂತೆ ಕೂಡ ಪಾಕಿಸ್ತಾನದ ಗುಪ್ತಚರ ಸಂಸ್ಥೆ (Pakistan's intelligence agency) ಐಎಸ್ಐ ಸೂಚಿಸಿದೆ ಎಂದು ಅವು ತಿಳಿಸಿವೆ. ಬಟ್ ಪೂಂಛ್ ಜಿಲ್ಲೆಯವನಾಗಿದ್ದು, ಬಟ್ ದೋಡಾ ಜಿಲ್ಲೆಯವನಾಗಿದ್ದಾನೆ. ಆದರೆ ಈಗ ಇವರು ಪಾಕ್ ಆಕ್ರಮಿತ (Pakistan occupied Kashmir)ಪ್ರದೇಶಕ್ಕೆ ತೆರಳಿ ಭಯೋತ್ಪಾದನೆ ತರಬೇತಿ ಪಡೆಯುತ್ತಿದ್ದಾರೆ.
Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?
ಜುಲೈ 1 ರಂದು ಪ್ರಾರಂಭಗೊಳ್ಳಲಿರುವ ಅಮರನಾಥ ಯಾತ್ರೆ ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದ್ದು 62 ದಿನಗಳ ಕಾಲ ನಡೆಯಲಿದೆ. ಈ ವೇಳೆ ಭಾರೀ ಸಂಖ್ಯೆಯ ಭಕ್ತರು ಅಮರನಾಥ ಯಾತ್ರೆಗೆ ಆಗಮಿಸುತ್ತಾರೆ. ಯಾತ್ರಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಮಂಗಳವಾರ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು ಸನ್ನದ್ಧತೆಯನ್ನು ಪರಿಶೀಲಿಸಿತ್ತು. ಕಳೆದ ವರ್ಷ ಈ ಪ್ರದೇಶದಲ್ಲಿ ಪ್ರವಾಹಕ್ಕೆ 60 ಜನ ಬಲಿಯಾಗಿದ್ದರು.
Amarnath Yatra 2023ಗೆ ನೋಂದಣಿ ಆರಂಭ, ಇಲ್ಲಿದೆ ಸಂಪೂರ್ಣ ವಿವರ..m