Asianet Suvarna News Asianet Suvarna News

Full Moon Day: ಹುಣ್ಣಿಮೆಯ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡ್ಬೇಡಿ!

ಹುಣ್ಣಿಮೆಯ ದಿನ ಕೆಲ ಕಾರ್ಯಗಳಿಗೆ ಅತ್ಯುತ್ತಮವೆನಿಸಿದ್ದರೆ ಮತ್ತೆ ಕೆಲ ವಿಷಯಗಳಿಗೆ ಒಳ್ಳೆಯದಲ್ಲ. ಹೀಗಾಗಿ ಅಂದು ಮಾಡಬಾರದ ಕೆಲಸಗಳು ಯಾವುವು ಎಂಬುದು ತಿಳಿದಿರಲಿ. 

A List of What Not To Do During Full Moons skr
Author
Bangalore, First Published Feb 16, 2022, 12:44 PM IST | Last Updated Feb 16, 2022, 12:44 PM IST

ಹುಣ್ಣಿಮೆಯಂದು ಉಪವಾಸ ವ್ರತ ಮಾಡಿ, ಪವಿತ್ರ ನದಿಗಳಲ್ಲಿ ಮುಳುಗುವುದೆಲ್ಲ ಉತ್ತಮ ಕೆಲಸವೇ. ಬಡಬಗ್ಗರಿಗೆ ದಾನ ಮಾಡುವುದು, ಪಿತೃದೋಷ, ಚಂದ್ರ ದೋಷ ಇತ್ಯಾದಿಗಳ ಪರಿಹಾರ ಕಾರ್ಯ ಕೈಗೊಳ್ಳುವುದು ಕೂಡಾ ಉತ್ತಮವೇ.  ಆದರೆ, ಈ ದಿನ ಮಾಡಬಾರದಾದ ಕೆಲಸಗಳ ಬಗ್ಗೆಯೂ ತಿಳಿದಿರಬೇಕು. ಏಕೆಂದರೆ ಚಂದ್ರನು ಭಾವನೆಗಳ ನಿಯಂತ್ರಕ. ಆತ ನಮ್ಮನ್ನು ಭಾವನೆಗಳ ಮೂಲಕವೇ ಆಡಿಸುತ್ತಾನೆ. ಜಾತಕದಲ್ಲಿ ಚಂದ್ರ ಎಲ್ಲಿದ್ದಾನೆ ಎಂಬ ಆಧಾರದಲ್ಲಿ ನಮ್ಮ ಭಾವಲೋಕ, ಅದನ್ನು ನಿಭಾಯಿಸುವ ಶಕ್ತಿ ದೊರೆಯುತ್ತದೆ. ಹುಣ್ಣಿಮೆಯು ಕೆಲ ಅಭ್ಯಾಸಗಳು ಹಾಗೂ ಸಂಪ್ರದಾಯ ಆಚರಣೆಗೆ ಉತ್ತಮ ದಿನವಾಗಿದ್ದರೆ, ಮತ್ತೆ ಕೆಲ ಕೆಲಸಗಳಿಗೆ ಒಳ್ಳೆಯ ದಿನವಲ್ಲ. ಜ್ಯೋತಿಷ್ಯದ ಪ್ರಕಾರ ಈ ದಿನ ಮಾಡಬಾರದ ಕೆಲಸಗಳೇನೇನು ನೋಡಿ. 

ಹೊಸತನ್ನು ಆರಂಭಿಸುವುದು(new beginnings)
ಹುಣ್ಣಿಮೆಯು ಕೆಲಸಗಳನ್ನು ಮುಗಿಸುವ ಸಮಯ. ಎಲ್ಲ ಬಾಕಿ ಕೆಲಸಗಳಿಗೆ ಇತಿ ಹಾಡಲು ಉತ್ತಮ ಸಮಯ. ಆದರೆ, ಯಾವುದೇ ಕೆಲಸದ ಆರಂಭಕ್ಕಲ್ಲ. ಈ ದಿನ ಆರಂಭಿಸುವ ಹೊಸ ಕೆಲಸವು ಅಷ್ಟೊಂದು ಫಲಪ್ರದವಾಗಿರುವುದಿಲ್ಲ. ಹೊಸ ಯೋಜನೆ ಆರಂಭ ಮಾಡಲು ಹುಣ್ಣಿಮೆ ಶುಭವಲ್ಲ, ಆದರೆ, ಆ ಯೋಜನೆಗೆ ನೆಗೆಟಿವ್ ಆಗುವಂಥ ಜನರನ್ನು, ಅಂಶಗಳನ್ನು ಕೈ ಬಿಡಲು ಉತ್ತಮ ಸಮಯ. 

Magha Purnima Vrat 2022: ಮಾಘ ಪೌರ್ಣಮಿಯ ಈ ದಿನ ನೀವೇನು ಮಾಡಬೇಕು?

ಪ್ರಮುಖ ವಿಚಾರ ಮಾತುಕತೆ
ಹುಣ್ಣಿಮೆಯ ದಿನ ಯಾವುದೋ ಪ್ರಮುಖ ವಿಚಾರ, ವಾದವಿವಾದ ಚರ್ಚೆ ನಡೆಸಿದರೆ ಅದು ತಾರಕಕ್ಕೇರುವ ಸಾಧ್ಯತೆ ಹೆಚ್ಚು. ಚರ್ಚೆಗಳು ಜಗಳದಲ್ಲಿ ಅಂತ್ಯ ಕಾಣಬಹುದು. ಮಾತುಗಳು ಹೆಚ್ಚು ಮೊನಚಾಗಬಹುದು. ಹುಣ್ಣಿಮೆಯ ಶಕ್ತಿಯು ನಿಮ್ಮನ್ನು ಭಾವೋದ್ವೇಗಕ್ಕೆ ತಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ, ಈ ದಿನ ಯಾವುದೇ ಪ್ರಮುಖ ವಿಚಾರಗಳ ಚರ್ಚೆ, ಮಾತುಕತೆ ಕೈಗೆತ್ತಿಕೊಳ್ಳಬೇಡಿ. ಯಾರೊಂದಿಗೂ ವಾದಿಸಲು ಹೋಗಬೇಡಿ. ಆದಷ್ಟು ಜಪತಪಗಳಲ್ಲಿ ತೊಡಗಿಸಿಕೊಳ್ಳಿ.

ಮನಸ್ಸನ್ನು ಬದಲಿಸುವ ವಸ್ತುಗಳ ಸೇವನೆ(mind-altering substances)
ಈ ದಿನ ಆಲ್ಕೋಹಾಲ್, ಡ್ರಗ್ಸ್, ಸಿಗರೇಟ್, ತಂಬಾಕು ಸೇರಿದಂತೆ ಮನಸ್ಸನ್ನು ಕದಡುವ ಯಾವುದೇ ವಸ್ತುಗಳ ಸೇವನೆ ಮಾಡಕೂಡದು. ಮೊದಲೇ ಚಂದ್ರನ ಎನರ್ಜಿ ಮನಸ್ಸಿನ ಮೇಲೆ ಹೆಚ್ಚಿದ್ದು, ಈ ಸಂದರ್ಭದಲ್ಲಿ ಇಂಥ ಅಮಲು ತರುವ ಪದಾರ್ಥಗಳ ಸೇವನೆ ಮಾಡಿದರೆ ಅದರಿಂದ ಬುದ್ಧಿಗೇಡಿ ವರ್ತನೆ ಹೆಚ್ಚುವುದು. ಸರಿಯಾದ ಒಂದು ನಿರ್ಧಾರ ತೆಗೆದುಕೊಳ್ಳಲೂ ಸಾಧ್ಯವಾಗದೆ ಎಡವಟ್ಟುಗಳು ಹೆಚ್ಚುತ್ತವೆ. ಮನಸ್ಸಿನ ಭಾವೋದ್ವೇಗ ಹೆಚ್ಚಿ ಅತಿಯಾದ ಪ್ರತಿಕ್ರಿಯೆ ನೀಡುವಿರಿ. ಇದರಿಂದ ಸಂಬಂಧಗಳು ಹದಗೆಡಬಹುದು. 

Caring zodiacs: ಈ ಐದು ರಾಶಿಗಳು ಸಿಕ್ಕಾಪಟ್ಟೆ ಕೇರಿಂಗ್..

ಹೆಚ್ಚು ಹೊರಗಿರುವುದು, ಅತಿಯಾದ ಕೆಲಸ
ಹುಣ್ಣಿಮೆಯ ದಿನ ಸಾಧ್ಯವಾದಷ್ಟು ಮನೆಯಲ್ಲಿದ್ದು ವಿಶ್ರಾಂತಿ ತೆಗೆದುಕೊಳ್ಳುವತ್ತ ಗಮನ ಹರಿಸಿ. ಇಂದು ಕೆಲಸದ ಸಮಯ ಹಿಗ್ಗಿಸುವುದು ಬೇಡ. ಕಚೇರಿ ಅಥವಾ ಮತ್ತೆಲ್ಲೇ ಹೋಗಿದ್ದರೂ ತಡವಾಗಿ ಮನೆಗೆ ಹೊರಡುವುದನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ಇಂದು ಹೆಚ್ಚು ಅಪಘಾತಗಳು(accidents) ಹಾಗೂ ಗೊಂದಲಗಳು ಸಂಭವಿಸುತ್ತವೆ. ಬದಲಿಗೆ, ನಿಮ್ಮ ಕೆಲಸ, ಯೋಚನೆಗಳ ಬಗ್ಗೆ ಆತ್ಮವಿಮರ್ಶೆ ನಡೆಸಬಹುದು. 

Celebrity Style : ಸುಷ್ಮಾ ಸ್ವರಾಜ್ ಸೀರೆಗಿತ್ತು ಜ್ಯೋತಿಷ್ಯದ ನಂಟು!

ಗಡಿಬಿಡಿ ಮಾಡಬೇಡಿ
ಹುಣ್ಣಿಮೆಯ ಎನರ್ಜಿ ಸುಮಾರು 2 ವಾರಗಳ ಕಾಲ ಇರುತ್ತದೆ. ಅಂದರೆ, ಈ ಸಂದರ್ಭದಲ್ಲಿ ಯಾವುದೇ ವಿಷಯಕ್ಕೆ ಗಡಿಬಿಡಿ ಮಾಡಬೇಡಿ. ಮದುವೆ, ಕಚೇರಿಯ ವಿಷಯಗಳು, ಮಕ್ಕಳ ವಿಷಯದಲ್ಲಿ ಗಡಿಬಿಡಿಯಲ್ಲಿ ಯಾವುದೇ ವಿಚಾರ ವಿನಿಮಯ ಬೇಡ. ತಾಳ್ಮೆ ಅಗತ್ಯ. ಶುಕ್ಲ ಪಕ್ಷದಲ್ಲಿ ವಿಷಯವನ್ನು ಮುಂದುವರಿಸಿ. 

Latest Videos
Follow Us:
Download App:
  • android
  • ios