Asianet Suvarna News Asianet Suvarna News

Magha Purnima Vrat 2022: ಮಾಘ ಪೌರ್ಣಮಿಯ ಈ ದಿನ ನೀವೇನು ಮಾಡಬೇಕು?

ಇಂದು ಮಾಘ ಪೂರ್ಣಿಮಾ. ಈ ದಿನದ ಪ್ರಾಮುಖ್ಯತೆ, ವಿಶೇಷತೆ ಹಾಗೂ ವ್ರತಕತೆಗಳೇನು ಇಲ್ಲಿದೆ..

All you need to know about Magha Purnima Vrat skr
Author
Bangalore, First Published Feb 16, 2022, 9:54 AM IST | Last Updated Feb 16, 2022, 10:32 AM IST

ಒಂದಾನೊಂದು ಕಾಲದಲ್ಲಿ ಕಂಟಿಕಾ ಎಂಬ ಹಳ್ಳಿಯಲ್ಲಿ ಬಡ ಬ್ರಾಹ್ಮಣ ದಾನೇಶ್ವರ್ ತನ್ನ ಪತ್ನಿಯೊಂದಿಗೆ ಬದುಕುತ್ತಿದ್ದ. ಆತ ಭಿಕ್ಷೆ ಬೇಡಿ ಪತ್ನಿಯನ್ನು ಸಾಕುತ್ತಿದ್ದ. ಅವನಿಗೆ ವಿವಾಹವಾಗಿ ಬಹಳ ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ(childless). ಹೀಗಾಗಿ ಆತನ ಪತ್ನಿಯನ್ನು ಎಲ್ಲರೂ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದರು. ಒಮ್ಮೆ ಊರಿಗೆ ಬಂದ ಸನ್ಯಾಸಿಯೊಬ್ಬರು ದಾನೇಶ್ವರ್ ಹಾಗೂ ಪತ್ನಿಯ ಕೊರಗನ್ನು ತಿಳಿದು, ಸತತ 16 ದಿನಗಳ ಕಾಲ ಕಾಳಿಯ ಉಪಾಸನೆ ಮಾಡಲು ಸೂಚಿಸಿದರು. 

ಅದರಂತೆ ಪತಿ ಪತ್ನಿ ಇಬ್ಬರೂ ತುಂಬು ಭಕ್ತಿಯಿಂದ ಕಾಳಿ(Kali)ಯನ್ನು ಪೂಜಿಸಿದರು. 16ನೇ ದಿನ ಕಾಣಿಸಿಕೊಂಡ ಕಾಳಿಯು, ಇವರಿಬ್ಬರಿಗೂ ಸತತ 32 ಹುಣ್ಣಿಮೆಗಳಂದು ದೀಪ ಹಚ್ಚಿ ಪೂರ್ಣಿಮಾ ವ್ರತ ಆಚರಿಸುವಂತೆ ಹೇಳಿದಳು. 32 ಪೂರ್ಣಿಮಾ ತಿಥಿಗಳ ಬಳಿಕ ದಾನೇಶ್ವರನ ಪತ್ನಿ ಗರ್ಭವತಿ(pregnant)ಯಾದಳು. ಆಕೆಗೆ ಮಗ ಹುಟ್ಟಿದ. ಅವನಿಗೆ ದೇವಿದಾಸ್ ಎಂದು ನಾಮಕರಣ ಮಾಡಿದರು. 

Celebrity Style : ಸುಷ್ಮಾ ಸ್ವರಾಜ್ ಸೀರೆಗಿತ್ತು ಜ್ಯೋತಿಷ್ಯದ ನಂಟು!

ದಾನೇಶ್ವರ್ ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲದೆ ವರ್ಷಗಳು ಉರುಳಿದವು. ದೇವಿದಾಸ್‌ಗೆ 16 ವರ್ಷವಾದಾಗ ಆತ ತನ್ನ ಮಾವನೊಂದಿಗೆ ಕಾಶಿಗೆ ಹೊರಟ. ದಾರಿಯಲ್ಲಿ ಕಾರಣಾಂತರಗಳಿಂದ ಆತನಿಗೆ ವಿವಾಹ ಮಾಡಬೇಕಾಯಿತು. ಕೆಲ ದಿನಗಳಾಗುತ್ತಿದ್ದಂತೆಯೇ ಯಮರಾಜ ದೇವಿದಾಸನ ಜೀವ ತೆಗೆದುಕೊಳ್ಳಲು ಬಂದ. ಆದರೆ, ಆತನ ತಂದೆ ತಾಯಿ ಮಾಡಿದ ಪೂರ್ಣಿಮ ವ್ರತ( Purnima Vrat)ದ ಫಲವಾಗಿ ದೇವಿದಾಸ್ ಪ್ರಾಣ ತೆಗೆಯಲು ಯಮನಿಗೆ ಸಾಧ್ಯವಾಗಲಿಲ್ಲ. ಅವರ ವ್ರತದ ಫಲವಾಗಿ ಮಗ ಅಕಾಲಿಕ ಸಾವು ನೋವಿನಿಂದ ಮುಕ್ತನಾಗಿದ್ದ. ಇದಕ್ಕೇ ಅಲ್ಲವೇ ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳನ್ನು ಕಾಯುತ್ತದೆ ಎನ್ನುವುದು. ಇದೇ ಪೂರ್ಣಿಮಾ ವ್ರತದ ಕತೆ. 

ಮಾಘ ಪೂರ್ಣಿಮಾ(Magha Purnima)
ಪೂರ್ಣಿಮಾ ವ್ರತ ಆಚರಿಸುವವರು ಹುಣ್ಣಿಮೆಯ ದಿನವಿಡೀ ಉಪವಾಸ(fasting) ಆಚರಿಸಿ, ಸಂಜೆ ಪೂರ್ಣ ಚಂದಿರ((the Moon God))ನ ದರ್ಶನ ಮಾಡಿ ಆತನಿಗೆ ಅರ್ಘ್ಯವಿಟ್ಟು, ಆಹಾರ ಸೇವಿಸುತ್ತಾರೆ. 
ಇನ್ನೂ ಹಲವು ಭಕ್ತರು ಪವಿತ್ರ ನದಿಗಳ ತಟಕ್ಕೆ ಹೋಗಿ ನೀರಿನಲ್ಲಿ ಮುಳುಗೇಳುತ್ತಾರೆ. ಮಾಘ ಪೂರ್ಣಿಮೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ದೊರಕುವುದು ಎಂಬ ನಂಬಿಕೆ ಇದೆ. ಇದಲ್ಲದೆ, ಬಡಬಗ್ಗರಿಗೆ ಕೈಲಾದ ಸಹಾಯ(charity) ಮಾಡುತ್ತಾರೆ. ಈ ಕಾರ್ಯದಿಂದ ಅದೃಷ್ಟ ನಮ್ಮ ಪರವಾಗುತ್ತದೆ.
ಈ ಬಾರಿ ಹುಣ್ಣಿಮೆ ಇಂದು ಬಂದಿದೆ. ಫೆ.15ರ ರಾತ್ರಿ 9:42ಕ್ಕೆ ಆರಂಭವಾಗಿರುವ ಮಾಘ ಪೂರ್ಣಿಮಾ ಇಂದು ರಾತ್ರಿ 10: 25ರವರೆಗೂ ಇರಲಿದೆ. 

Panchanga: ಇಂದು ಮಾಘ ಪೌರ್ಣಮಿ, ತಿಲ ದಾನ ಮಾಡುವುದರಿಂದ ವಿಶೇಷ ಫಲ

ಈ ದಿನದ ವಿಶೇಷ
ಪ್ರತಿ ಹುಣ್ಣಿಮೆಯೂ ವಿಶೇಷವೇ. ಏಕೆಂದರೆ ಚಂದ್ರನು ನಮ್ಮ ಮನಸ್ಸನ್ನು ನಿಯಂತ್ರಿಸುವವನು. ಆತ ಮನಸ್ಸು, ಶಾಂತಿ, ನೆಮ್ಮದಿ, ಆಧ್ಯಾತ್ಮ(spirituality)ದ ಪ್ರತಿನಿಧಿ. ಹಾಗಾಗಿಯೇ ಹುಣ್ಣಿಮೆಯ ದಿನ ಹಲವೆಡೆ ಹಲವಾರು ರೀತಿಯ ಆಚರಣೆ, ಸಂಪ್ರದಾಯಗಳನ್ನು ಕಾಣಬಹುದು. 
ಅದರಲ್ಲೂ ಮಾಘ ಮಾಸದ ಈ ಹುಣ್ಣಿಮೆ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಮಾಘ ಮಾಸವು ಶಿವ(Lord Shiva) ಹಾಗೂ ವಿಷ್ಣು(Lord Vishnu)ವಿಬ್ಬರಿಗೂ ವಿಶೇಷ ತಿಂಗಳಾಗಿದೆ. ಮಾಘ ಪೂರ್ಣಿಮೆಯು ಮಾಘ ಮಾಸದ ಕಡೆಯ ದಿನವಾಗಿದೆ. ಈ ದಿನ ಸತ್ಯನಾರಾಯಣ ವ್ರತ ಆಚರಣೆ ಮಾಡುವುದು ಇಲ್ಲವೇ ಕುಲ ದೇವರಿಗೆ ವಿಶೇಷ ಪೂಜೆ ಕೈಗೊಳ್ಳುವುದರಿಂದ ಲಾಭ ಹೆಚ್ಚಿರಲಿದೆ ಎನ್ನಲಾಗುತ್ತದೆ. 

ಚಂದ್ರನು ತನ್ನದೇ ರಾಶಿಯಾದ ಕಟಕ(Cancer)ದಲ್ಲಿದ್ದು, ಸೂರ್ಯನು ಕುಂಭ(Aquarius)ದಲ್ಲಿ ಅಂದರೆ, ತನ್ನ ಪುತ್ರ ಶನಿಯ ರಾಶಿಯಲ್ಲಿರುವಾಗ ಮಾಘ ಪೂರ್ಣಿಮೆ ಬಂದಿದೆ. ಹೀಗಾಗಿ, ಚಂದ್ರ ದೋಷ, ಪಿತೃ ದೋಷ, ಸೂರ್ಯ ದೋಷ ಇರುವವರು ಈ ದಿನ ದೋಷ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬಹುದು. 

Latest Videos
Follow Us:
Download App:
  • android
  • ios