Asianet Suvarna News Asianet Suvarna News

Caring zodiacs: ಈ ಐದು ರಾಶಿಗಳು ಸಿಕ್ಕಾಪಟ್ಟೆ ಕೇರಿಂಗ್..

ಕೆಲವರು ಹಾಗೆಯೇ, ಅಗತ್ಯ ಸಂದರ್ಭಗಳಲ್ಲಿ ತಾಯಿಯಂತೆ ಕಾಳಜಿ ವಹಿಸುತ್ತಾರೆ. ಅದು ಅವರ ಹುಟ್ಟು ಗುಣ. ಈ ಗುಣ ಹೊಂದಿರುವ ಐದು ರಾಶಿಗಳು ಯಾವೆಲ್ಲ ಗೊತ್ತಾ?

Aquarius to Sagittarius Zodiac signs that are caring skr
Author
Bangalore, First Published Feb 15, 2022, 5:11 PM IST

ಹಾಸ್ಟೆಲಲ್ಲಿದ್ದಾಗ ಜ್ವರ ಬಂದ ರಾತ್ರಿಯಿಡೀ ಎಚ್ಚರಿದ್ದು ನೋಡಿಕೊಂಡ ಗೆಳತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಹೊರ ಹೋದಾಗೆಲ್ಲ ತಿನ್ನು ತಿನ್ನು ಎಂದು ತಿನ್ನಿಸುವ ಗೆಳೆಯ ಎಲ್ಲರಿಗೂ ಸಿಗುವುದಿಲ್ಲ. ಸ್ವಲ್ಪ ಯಾರಾದರೂ ನೋವು ಮಾಡಿದರೆ ನಮ್ಮ ಪರ ನಿಂತು ನೋವು ಮಾಡಿದವರಿಗೆ ಎದಿರೇಟು ನೀಡೋ ಅಣ್ಣನನ್ನು ಪಡೆಯಲೂ ಅದೃಷ್ಟ ಮಾಡಿರಬೇಕು. ಹೀಗೆ ತಾಯಿಯಂತೆ ಕಾಳಜಿ ವಹಿಸುವವರ ಜೊತೆಯಿದ್ದರೆ ಸದಾ ಸುರಕ್ಷಿತ ಭಾವ ನಮ್ಮದಾಗಿರುತ್ತದೆ. ಇಂಥವರನ್ನು ನಾವೆಂದೂ ಜೀವನದಲ್ಲಿ ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗೆ ಸಿಕ್ಕಾಪಟ್ಟೆ ಕಾಳಜಿ ವಹಿಸುವ, ವಾತ್ಸಲ್ಯ ತೋರುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

ಕುಂಭ(Aquarius)
ರಾಶಿಗಳಲ್ಲೇ ಅತಿ ಹೆಚ್ಚು ಕಾಳಜಿ ವಹಿಸುವ ರಾಶಿ ಕುಂಭ. ಈ ರಾಶಿಯವರು ತಾವು ಪ್ರೀತಿಸುವವರನ್ನು ಬದುಕಿನ ಮತ್ತೆಲ್ಲ ಸಂಗತಿಗಳಿಗಿಂತ ಮೇಲಿಡುತ್ತಾರೆ. ಅವರಿಗೆ ಸಹಾಯ ಬೇಕಾದಾಗ ಎಷ್ಟೇ ಕಷ್ಟವಾದರೂ ಕೈ ಚಾಚುತ್ತಾರೆ. ಇಂಥವರು ಒಮ್ಮೆ ಸಿಕ್ಕರೆ ಮತ್ತೆ ಅವರನ್ನು ದೂರ ಮಾಡುವುದು ಸುಲಭವಲ್ಲ. ಅವರ ಮಾತೃ ಹೃದಯ ಸದಾ ನಮ್ಮ ಕಾಳಜಿ ವಹಿಸುವ ಜೊತೆಗೆ, ಆ ಕುರಿತ ಬೆಚ್ಚಗಿನ ನೆನಪುಗಳು ನಮ್ಮಲ್ಲುಳಿಯುತ್ತವೆ. ಇವರ ಪ್ರತಿ ಮಾತು, ಕೃತಿಯಲ್ಲೂ ಕಾಳಜಿ ಕಾಣಿಸುತ್ತದೆ.

ಕನ್ಯಾ(Virgo)
ಈ ರಾಶಿಯವರ ಹೃದಯ ಚಿನ್ನದಲ್ಲೇ ಮಾಡಿದ್ದಿರಬೇಕು. ಇವರು ಅವರಿವರೆನ್ನದೆ ಎಲ್ಲರ ಕಾಳಜಿಗೆ ಮೊದಲು ಓಡುತ್ತಾರೆ. ತಮ್ಮ ಸಂತೋಷವನ್ನು ಪಣಕ್ಕಿಟ್ಟಾದರೂ ಮತ್ತೊಬ್ಬರ ಆರೈಕೆಗೆ ನಿಲ್ಲುತ್ತಾರೆ. ಹೆಚ್ಚಾಗಿ ಮಾತಿನಲ್ಲಿ ತಮ್ಮ ಪ್ರೀತಿ, ಕಾಳಜಿಯನ್ನು ಹೇಳಿಕೊಳ್ಳದ ಇವರು, ಕೃತಿಯಲ್ಲಿ ಅದನ್ನು ವ್ಯಕ್ತಪಡಿಸುತ್ತಾರೆ. ಏನೇ ಮಾಡಿದರೂ ಅದನ್ನು ಹೃದಯದಿಂದ ಮಾಡುವ ಸ್ವಭಾವ ಇವರದು. ಹೆಚ್ಚಾಗಿ ಆಶ್ರಮ ನಡೆಸುವುದು, ವಾಲಂಟೀರ್ ಆಗಿ ಕಾರ್ಯ ನಿರ್ವಹಿಸುವವರು ಈ ರಾಶಿಯವರೇ ಆಗಿರುತ್ತಾರೆ.

Astro tips : ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ ಚಿನ್ನ!

ಸಿಂಹ(Leo)
ಈ ರಾಶಿಯ ಜನರು ರಾಜ, ರಾಣಿಯರೇ ಸೈ. ಇವರು ಸದಾ ತಮ್ಮ ಪ್ರೀತಿಪಾತ್ರರ ಹತ್ತಿರವೇ ಇದ್ದು, ಅವರನ್ನು ಚೆನ್ನಾಗಿ ಕಾಳಜಿ ವಹಿಸುತ್ತಾರೆ. ಅಪರಿಚಿತರಾದರೂ ಸರಿ, ಹಿಂದೆ ಮುಂದೆ ನೋಡದೆ ಅವರಿಗೆ ಅಗತ್ಯವಿದ್ದರೆ ಕಾಳಜಿಯನ್ನು ತೋರುತ್ತಾರೆ. ಗೆಳೆಯರು ಕಷ್ಟದಲ್ಲಿದ್ದರೆ ಮೊದಲು ಅವರ ಸಹಾಯಕ್ಕೆ ಓಡುತ್ತಾರೆ, ಹೆಚ್ಚಾಗಿ ತಾವು ಮಾಡುವ ಸಹಾಯ ಅನುಕಂಪದ್ದು ಎಂದು ತೋರದಂತೆ ಮಾಡುತ್ತಾರೆ. ಬಹಳ ಸಹಾನುಭೂತಿ ಉಳ್ಳ ಇವರು, ತಮ್ಮ ಪ್ರೀತಿ ಪಾತ್ರರನ್ನು ನೋಯದಂತೆ ನೋಡಿಕೊಳ್ಳುತ್ತಾರೆ. 

ವೃಷಭ(Taurus)
ವೃಷಭ ರಾಶಿಯವರು ತುಂಬಾನೇ ಕೇರಿಂಗ್. ಆದರೆ ಅವರ ಈ ಕಾಳಜಿ ತಮ್ಮ ಅತಿ ಪ್ರೀತಿ ಪಾತ್ರರ ವಲಯಕ್ಕೆ ಮಾತ್ರ ಸೀಮಿತ. ಹಾಗಂಥ ಅವರೇನು ಸ್ವಾರ್ಥಿಗಳಲ್ಲ. ಎಲ್ಲ ಕಡೆಗೂ ತಾವು ಹೋಗಿ ಕೇರ್ ಮಾಡಬೇಕಾಗಿಲ್ಲ, ತಮ್ಮವರಿಗೆ ತಾನಿದ್ದರೆ ಸಾಕು ಎಂದುಕೊಳ್ಳುತ್ತಾರೆ. ಯಾವಾಗಲೇ ಆಪ್ತರು ತಮ್ಮನ್ನು ಬಯಸಿದರೂ ಹಾಜರಿದ್ದು ಅವರ ಆರೈಕೆಗೆ ನಿಲ್ಲುತ್ತಾರೆ. 

Kodimutt Shree Predicts ಕೊರೋನಾ, ಭೂಕಂಪ ಆಯ್ತು, ಕಾದಿದೆ ಗಾಳಿ ಗಂಡಾಂತರ: ಕೋಡಿಶ್ರೀ ಭವಿಷ್ಯ

ಧನು(Sagittarius)
ಇವರು ಅಪರಿಚರ ಜೊತೆ ಕೊಂಚ ಒರಟಾಗಿ ನಡೆದುಕೊಳ್ಳಬಹುದು. ಆದರೆ, ತಮ್ಮ ಕುಟುಂಬ ಹಾಗೂ ಗೆಳೆಯರ ವಿಷಯಕ್ಕೆ ಬಂದಾಗ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಾರೆ. ಅವರೆಲ್ಲರ ಒಳಿತಿನ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ತಮ್ಮ ಸಂಗಾತಿಗೆ ಹೆಚ್ಚು ಹೊಂದಿಕೊಳ್ಳುವ ಇವರು, ಅರ್ಧ ರಾತ್ರಿಯಲ್ಲೆದ್ದುಕಾಫಿ ಮಾಡಿ ಕೊಡಬೇಕೆಂದರೂ ಸಿದ್ಧರಿರುತ್ತಾರೆ. ಮಸಾಜ್ ಮಾಡುವುದು, ತಮ್ಮವರಿಗಿಷ್ಟದ ಅಡುಗೆ ಮಾಡುವುದು.. ಹೀಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. 

Latest Videos
Follow Us:
Download App:
  • android
  • ios