ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿಯು ಏನು ಮಾಡಬೇಕೆಂದು ಜ್ಯೋತಿಷ್ಯದಲ್ಲಿ ಪರಿಹಾರ ಸಲಹೆಗಳನ್ನು ನೀಡಲಾಗಿದೆ. 

ಆರೋಗ್ಯವಂತ ಮಗುವನ್ನು ಹೊಂದಲು ಕೇವಲ ಸ್ತ್ರೀ ಮತ್ತು ಪ್ರಸೂತಿ ತಜ್ಞರ ಬಳಿ ಹೋದರೆ ಸಾಕಾಗುವುದಿಲ್ಲ. ಏಕೆಂದರೆ ಮಗು ಗರ್ಭದಲ್ಲಿರುವ ಆ ನವಮಾಸಗಳೂ ನವಗ್ರಹಗಳಿಂದ ಆಳಲ್ಪಡುತ್ತವೆ. ಗರ್ಭಧಾರಣೆ ಸಂದರ್ಭದಲ್ಲಿ ಒಂದೊಂದು ತಿಂಗಳನ್ನು ಒಂದೊಂದು ಗ್ರಹ ಆಳುತ್ತದೆ. ಹಾಗಾಗಿ, ಗ್ರಹಗಳ ಸ್ಥಾನಗಳು ನಿಮ್ಮ ಪ್ರಗ್ನೆನ್ಸಿ ಪರವಾಗಿವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಒಂದು ವೇಳೆ ಗ್ರಹ ದೋಷವು ಯಾವುದಾದರೂ ತಿಂಗಳಲ್ಲಿ ಕಂಡುಬಂದರೆ ಅದಕ್ಕೆ ಸಂಬಂಧಿಸಿದಂತೆ ಆ ಗ್ರಹವನ್ನು ಮೆಚ್ಚಿಸಲು ಕೆಲ ಕಾರ್ಯ ಮಾಡಬೇಕು. ಪ್ರತಿ ತಿಂಗಳು ಕೂಡಾ ಪ್ರಗ್ನೆನ್ಸಿಯನ್ನಾಳುವ ಗ್ರಹದ ಶುಭ ಕೃಪೆಗಾಗಿ ಜ್ಯೋತಿಷ್ಯದ ಪ್ರಕಾರ ಏನು ಮಾಡಬೇಕೆಂಬುದನ್ನು ಇಲ್ಲಿ ನೀಡಲಾಗಿದೆ. 

Add Asianetnews Kannada as a Preferred SourcegooglePreferred

ಮೊದಲ ಮಾಸ(1st Month)
ಗರ್ಭವತಿಯಾದ ಬಳಿಕ ಶುಕ್ರ ಗ್ರಹವು ಉತ್ತಮ ಫಲಿತಾಂಶ ನೀಡುತ್ತದೆ. ತಾಯಿಯಾಗುವವಳ ಜಾತಕದಲ್ಲಿ ಶುಕ್ರ(Venus) ದುರ್ಬಲನಾಗಿದ್ದರೆ, ಆಗ ತಾಯಿಯು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 
ಶುಕ್ರವನ್ನು ಬಲಪಡಿಸಲು

  •  ಗಂಡ ಹೆಂಡತಿ ಇಬ್ಬರೂ ಮನೆಯ ಪೂಜಾ ಗೃಹವನ್ನು ಸ್ವಚ್ಛಗೊಳಿಸಬೇಕು. 
  • ಮನೆಯನ್ನು ತುಂಬಾ ಸ್ವಚ್ಛವಾಗಿಯೂ, ಶಿಸ್ತಾಗಿಯೂ ಜೋಡಿಸಿ ಇಟ್ಟುಕೊಳ್ಳಬೇಕು. 

ಎರಡನೇ ಮಾಸ(2nd Month)
ಇದು ಮಂಗಳ(Mars)ನಿಗೆ ಸೇರಿದ್ದು. ಮಂಗಳನು ಮೂಳೆ ಹಾಗೂ ರಕ್ತದ ಅಧಿಪತಿ. ಈ ಸಂದರ್ಭದಲ್ಲಿ ಭ್ರೂಣದ ಈ ಎರಡು ದೈಹಿಕ ರಚನೆಗಳು ಜರುಗುತ್ತವೆ. ಮಂಗಳ ಬಲವಾಗಿದ್ದಾಗ ಮಾತ್ರ ಆರೋಗ್ಯವಂತವಾದ, ಬಲವಾದ, ಧೈರ್ಯವಂತ ಮಗು ಜನಿಸಲು ಸಾಧ್ಯ. ಮಂಗಳನನ್ನು ಬಲಪಡಿಸಲು

  • ಬೆಲ್ಲ ದಾನ ಮಾಡಿ.
  • ಈ ತಿಂಗಳಲ್ಲಿ ಮಸಾಲೆ ಪದಾರ್ಥಗಳನ್ನು ತಿನ್ನಬೇಡಿ. 
  • ಧಾರ್ಮಿಕವಾಗಿ ಸುಂದರಕಾಂಡದ ಹಾದಿ ಹಿಡಿಯಿರಿ. 
  • ಬಲಗೈಗೆ ತಾಮ್ರದ ಬ್ರೇಸ್‌ಲೆಟ್ ಹಾಕಿಕೊಳ್ಳಿ. 
  • 10 ಗ್ರಾಂ ಶತಾವರಿ ಮತ್ತಿ 10 ಗ್ರಾಂ ಬೆಲ್ಲವನ್ನು ಕುದಿವ ಹಾಲಿಗೆ ಸೇರಿಸಿಕೊಂಡು ಕುಡಿಯಿರಿ. 

ಮೂರನೇ ಮಾಸ(3rd Month)
ಮೂರನೇ ಮಾಸವು ಗುರು(Jupiter)ವಿಗೆ ಸಂಬಂಧಿಸಿದೆ. ತಾಯಿಯ ಜಾತಕದಲ್ಲಿ ಗುರುಬಲವಿದ್ದಾಗ ಮಗುವಿನ ಚರ್ಮ ಕಾಂತಿಯುತವಾಗಿ ಆರೋಗ್ಯದಿಂದ ಕೂಡಿರುತ್ತದೆ. ಗುರುವನ್ನು ಬಲಪಡಿಸಲು

  • ಮೂರನೇ ತಿಂಗಳಲ್ಲಿ ಸಾಹಿತ್ಯ ಮತ್ತು ವಿಜ್ಞಾನವನ್ನು ಓದಿ ಮತ್ತು ಚರ್ಚಿಸಿ.
  • ಬಿಳಿ ಮತ್ತು ಕೇಸರಿ ಶ್ರೀಗಂಧದ ತಿಲಕವನ್ನು ಹಣೆಗಿಡಿ. 

ನಾಲ್ಕನೇ ಮಾಸ(4th Month)
ಈ ಮಾಸವು ಸೂರ್ಯ(Sun)ನಿಗೆ ಸೇರಿದೆ. ಆತ್ಮದ ಉನ್ನತಿಗೆ ಮತ್ತು ಸದಾಚಾರಕ್ಕೆ, ಸೂರ್ಯ ಮುಖ್ಯ. ತಾಯಿಯ ಸೂರ್ಯನು ಬಲಶಾಲಿಯಾಗಿದ್ದರೆ, ಮಗುವಿಗೆ ಬಲವಾದ ಮುಖವಿರುತ್ತದೆ ಮತ್ತು ಈ ಮಗು ಗಣಿತ ಮತ್ತು ತತ್ವಶಾಸ್ತ್ರದಲ್ಲಿ ಉತ್ತಮವಾಗಿರುತ್ತದೆ. ಈ ತಿಂಗಳಲ್ಲಿ,

5ನೇ ಮಾಸ(5th Month)
ಈ ತಿಂಗಳು ಚಂದ್ರ(moon)ನಿಗೆ ಸೇರಿದೆ. ತಾಯಿಯ ಚಂದ್ರನು ಉತ್ತಮ ಮತ್ತು ಬಲಶಾಲಿಯಾಗಿದ್ದರೆ, ಮಗುವಿನ ನಡವಳಿಕೆ ಮತ್ತು ಭಾವನೆಗಳು ಸಮತೋಲಿತವಾಗಿರುತ್ತವೆ. ಈ ಮಗು ಸಂತೋಷವಾಗಿರುತ್ತದೆ ಮತ್ತು ವೈಜ್ಞಾನಿಕತೆಯತ್ತ ಒಲವು ತೋರುತ್ತದೆ. ತಮ್ಮ ಮಗುವಿಗೆ ಚಂದ್ರನ ಆಶೀರ್ವಾದ ಬಲ ತರಲು ಗಂಡ ಮತ್ತು ಹೆಂಡತಿ ಇಬ್ಬರೂ ಈ ಪರಿಹಾರಗಳನ್ನು ಮಾಡಬೇಕು.

  • ಬೆಳ್ಳಿಯ ಲೋಟದಲ್ಲಿ ನೀರು ಕುಡಿಯಬೇಕು. ಫ್ರಿಡ್ಜ್ ನೀರು ಕುಡಿಯಬಾರದು.
  • ಅನುಲೋಮ ವಿಲೋಮ ಉಸಿರಾಟ ಅಭ್ಯಸಿಸಬೇಕು. 
  • ಒಂದು ಲೋಟ ಬೆಚ್ಚಗಿನ ಹಾಲಿಗೆ 1 ಚಮಚ ತುಪ್ಪವನ್ನು ಬೆರೆಸಿ ಮತ್ತು ಅದರಲ್ಲಿ ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಸೇರಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಹಾಲನ್ನು ಕುಡಿಯಿರಿ.
  • ಈ ತಿಂಗಳಲ್ಲಿ ಆಧ್ಯಾತ್ಮಿಕ ಸಾಹಿತ್ಯವನ್ನು ಚರ್ಚಿಸಿ ಮತ್ತು ವೈಜ್ಞಾನಿಕ ವಿಷಯಗಳನ್ನು ಚರ್ಚಿಸಿ.

6ನೇ ಮಾಸ(6th Month)
ಇದು ಶನಿಯ ಮಾಸ. ಶನಿ ಬಲವಾಗಿದ್ದರೆ ಉತ್ತಮ ನರವ್ಯವಸ್ಥೆ ಮಗುವಿಗೆ ರೂಪುಗೊಳ್ಳುತ್ತದೆ. 

7ನೇ ಮಾಸ(7th Month)
ಗರ್ಭಿಣಿಯ ಏಳನೇ ತಿಂಗಳು ಬುಧನಿಗೆ ಸೇರಿದ್ದು. ಈ ಸಂದರ್ಭದಲ್ಲಿ ಮಗುವಿನ ಮೆದುಳು ಚುರುಕಾಗುತ್ತದೆ. ಬುಧ ಕೃಪೆ ಇದ್ದಾಗ ಮಗು ಬಹಳ ಜಾಣನಾಗುತ್ತದೆ. 

  • ಈ ಮಾಸದಲ್ಲಿ ಓಂ ಜಪ ಮಾಡಿ.
  • ಕಬ್ಬಿಣದ ವಸ್ತುಗಳನ್ನು ಧರಿಸಿದ್ದರೆ ತೆಗೆದುಬಿಡಿ. 

8ನೇ ಮಾಸ(8th Month)
8ನೇ ತಿಂಗಳು ಇಷ್ಟದೇವರಿಗೆ ಸಂಬಂಧಿಸಿದ್ದು. ಈ ತಿಂಗಳು ನಿಮಗಿಷ್ಟದ ದೇವರನ್ನು ಆರಾಧಿಸಿ. 

9ನೇ ಮಾಸ(9th Month)
9 ನೇ ತಿಂಗಳು ಮಗುವಿಗೆ ಜನ್ಮ ನೀಡಬೇಕಾದ ಸಮಯ. ಈ ತಿಂಗಳು ಮತ್ತೆ ಚಂದ್ರನಿಗೆ ಸೇರಿದೆ.

  • ಬೆಳ್ಳಿ ಉಂಗುರ ಅಥವಾ ಬಳೆ ಬಿಟ್ಟು ಬೇರೆ ಯಾವುದೇ ಲೋಹವನ್ನು ಧರಿಸಬೇಡಿ.
  • ತಿಳಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಿ ಉದಾ, ಬಿಳಿ, ಕೆನೆ ಅಥವಾ ತಿಳಿ ಹಳದಿ
  • ರೇಖಾಚಿತ್ರಗಳನ್ನು ಮಾಡಿ. ಗಣಿತವನ್ನು ಅಧ್ಯಯನ ಮಾಡಿ.