Gemini: ಇತರ ರಾಶಿಗಳೊಂದಿಗೆ ಮಿಥುನ ರಾಶಿಯವರ ಸ್ನೇಹ, ಲವ್, ಲೈಂಗಿಕ ಲೈಫ್ ಹೇಗಿರುತ್ತೆ?
Astrology Prediction: ಮಿಥುನ ರಾಶಿಯ ಹೆಸರೇ ಹೇಳುವ ಹಾಗೆ ಈ ರಾಶಿಯವರು ಮೋಸ್ಟ್ ರೊಮ್ಯಾಂಟಿಕ್ ಅಂತ ಕರೆಸಿಕೊಂಡವರು. ಇವರ ಪ್ರೀತಿ, ಲೈಂಗಿಕ ಲೈಫ್ ಎಲ್ಲ ಬೇರೆ 12 ರಾಶಿಯ ವಿರುದ್ಧ ಲಿಂಗದವರೊಂದಿಗೆ ಹೇಗಿರುತ್ತೆ?
ಮೇಷ ರಾಶಿಯೊಂದಿಗೆ ಮಿಥುನ (Gemini with Aries): ಮೇಷ ರಾಶಿಯವರ ಸಂಪರ್ಕಕ್ಕೆ ಮಿಥುನ ರಾಶಿಯವರು ಬಂದರೆ ಒಂಥರಾ ಕಳೆದು ಹೋದ ಫೀಲ್ ಉಂಟಾಗಬಹುದು. ಮೇಷರಾಶಿಯವರಿಗೆ ಮಿಥುನವರೊಂದಿಗೆ ಲೈಫು ಚೆನ್ನಾಗಿದೆ, ಲೈಂಗಿಕತೆಗಿಂತಲೂ ಪ್ರೀತಿ ಲೈಫನ್ನು ಕೂಲಾಗಿಡುತ್ತೆ ಅನಿಸಬಹುದು. ಆದರೆ ಮಿಥುನದವರಿಗೆ ಒಮ್ಮೆ ಈ ಮೇಷರಾಶಿಯವರಿಂದ ಕಳಚಿಕೊಂಡರೆ ಸಾಕಪ್ಪಾ ಅನಿಸಬಹುದು.
ಲೈಂಗಿಕ ಜೀವನ: 3
ಪ್ರೀತಿ: 4
ಮಾತುಕತೆ: 2
ವೃಷಭ ರಾಶಿಯೊಂದಿಗೆ ಮಿಥುನ (Gemini with Taurus): ಈ ಎರಡು ರಾಶಿಯವರು ಜೊತೆಗಿದ್ದಾಗ ತಮ್ಮ ತಮ್ಮ ಗುರಿಯೆಡೆಗೆ ದೃಷ್ಟಿ ನೆಟ್ಟಿರುತ್ತಾರೆ. ಸಪರೇಟ್ ಆಗಿ ಥಿಂಕ್ ಮಾಡ್ತಾರೆ. ಅತಿಯಾಗಿ ಹಚ್ಚಿಕೊಳ್ಳೋದಿಲ್ಲ. ಇನ್ನೊಬ್ಬರು ಜೊತೆಗಿಲ್ಲದಿದ್ದರೂ ತಲೆ ಕೆಡಿಸಿಕೊಳ್ಳೋದಿಲ್ಲ. ವೈಯುಕ್ತಿಕವಾಗಿ ತಮಗೆ ಬೇಕಾದ್ದನ್ನು ಪಡೆಯುತ್ತಾರೆ. ಈ ಎರಡು ರಾಶಿಗಳ ಲವ್ ಲೈಫ್ ಸಖತ್ತಾಗಿರುತ್ತೆ. ಆದರೆ ಹಾಸಿಗೆಯಲ್ಲಿ ಮಾತ್ರ ಅವರೊಂದು ಮೂಲೆ, ಇವರೊಂದು ಮೂಲೆ. ಅಂದರೆ ಲೈಂಗಿಕ ಜೀವನ ಹೇಳಿಕೊಳ್ಳುವಷ್ಟು ಚೆನ್ನಾಗಿರೋದಿಲ್ಲ.
ಲೈಂಗಿಕ ಜೀವನ: 2
ಪ್ರೀತಿ: 5
ಮಾತುಕತೆ: 1
ಮಿಥುನ ರಾಶಿಯೊಂದಿಗೆ ಮಿಥುನ ರಾಶಿ (Gemini with Gemini): ಲೈಫು ಚೆನ್ನಾಗಿರುತ್ತೆ. ಲೈಂಗಿಕ ಜೀವನದಲ್ಲೂ ಖುಷಿ ಇರುತ್ತೆ. ಏನೇನೋ ಎಕ್ಸ್‌ಪರಿಮೆಂಟ್ ಮಾಡಿ ಲೈಂಗಿಕ ಜೀವನದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾರೆ. ಯಶಸ್ವಿಯಾಗುತ್ತಾರೆ. ಇಷ್ಟು ಮಾತ್ರ ಅಲ್ಲ, ಜೀವನದಲ್ಲಿ ಹೆಚ್ಚು ತಮಾಷೆ ಮತ್ತು ಹೆಚ್ಚು ಪ್ರಬುದ್ಧತೆ ಇಷ್ಟಪಡುತ್ತಾರೆ. ಅಪರಿಚಿತರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ. ಹೆಚ್ಚೆಚ್ಚು ಸಂತೋಷದಿಂದಿರಲು ಬಯಸುತ್ತಾರೆ. ಮಾತುಕತೆ ಅಷ್ಟಾಗಿ ನಡೆಯದಿದ್ದರೂ ಲವ್, ಲೈಂಗಿಕ ಜೀವನ ಇತ್ಯಾದಿ ಒಂದೇ ರಾಶಿಯ ಹೆಣ್ಣು, ಗಂಡಿನ ನಡುವೆ ಚೆನ್ನಾಗಿರುತ್ತದೆ.
ಲೈಂಗಿಕ ಜೀವನ: 4
ಪ್ರೀತಿ: 4
ಮಾತುಕತೆ: 3
ಕರ್ಕಾಟಕದೊಂದಿಗೆ ಮಿಥುನ (Gemini with Cancer): ಈ ಎರಡು ರಾಶಿಗಳವರ ನಡುವೆ ಲೈಂಗಿಕ ಜೀವನ ಅದ್ಭುತವಾಗಿರುತ್ತೆ. ಅನೇಕ ಪ್ರಯೋಗಗಳನ್ನು ಮಾಡುತ್ತಾ ಪರಸ್ಪರರಿಗೆ ಸರ್ಪೈಸ್, ಅಚ್ಚರಿಗಳನ್ನು ನೀಡುತ್ತಲೇ ಇರುತ್ತಾರೆ. ಈ ಎರಡು ರಾಶಿಯವರು ಒಟ್ಟಿಗಿದ್ದಾಗ ಲೈಂಗಿಕ ಜೀವನ ಚೆನ್ನಾಗಿರುತ್ತೆ. ಆದರೆ ಪ್ರೀತಿ ಅಷ್ಟಕ್ಕಷ್ಟೇ. ಆದರೆ ಕೆಲವೊಮ್ಮೆ ಎಷ್ಟೋ ಸಮಯದ ಸ್ನೇಹಿತರಂತೆ ಗಂಟೆಗಟ್ಟಲೆ ಮಾತಾಡುತ್ತಾರೆ. ಫ್ಯೂಚರ್ ಪ್ಲಾನ್‌ಗಳ ಬಗ್ಗೆ ಡಿಸ್‌ಕಸ್ ಮಾಡುತ್ತಾರೆ.
ಲೈಂಗಿಕ ಜೀವನ: 5
ಪ್ರೀತಿ: 2
ಮಾತುಕತೆ: 4
ಸಿಂಹ ರಾಶಿಯೊಂದಿಗೆ ಮಿಥುನ (Gemini with Leo): ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಲೈಫಲ್ಲಿ ಜೊತೆಗಿರಬಹುದು. ಆದರೆ ಲೈಂಗಿಕ ಜೀವನದಲ್ಲಿ ಹೇಳಿಕೊಳ್ಳುವಂಥಾ ಖುಷಿ ಇರೋದಿಲ್ಲ. ಹಾಗಂತ ಹೇಳಿಕೊಳ್ಳುವಂಥಾ ಅತೃಪ್ತಿಯೂ ಇರೋದಿಲ್ಲ. ಜೊತೆಗಿದ್ದು ಸಮಾಜಸೇವೆ ಮಾಡ್ತೀವಿ ಅನ್ನೋ ಥರದ ಉದಾರತೆ ಈ ಎರಡು ರಾಶಿಗಳ ನಡುವೆ ಇರುತ್ತದೆ. ಇವರ ನಡುವೆ ಹೊಂದಾಣಿಕೆ ಇರುತ್ತದೆ ಅನ್ನೋದು ಬಿಟ್ಟರೆ ಪ್ರೀತಿಯೂ ಅಷ್ಟಾಗಿ ಇರೋದಿಲ್ಲ.
ಲೈಂಗಿಕ ಜೀವನ: 2
ಪ್ರೀತಿ: 1
ಮಾತುಕತೆ: 1
ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಇನ್ನೊಂದು ಹೆಸರು!
ಕನ್ಯಾ ರಾಶಿಯೊಂದಿಗೆ ಮಿಥುನ (Gemini with Virgo): ಮಿಥುನ ರಾಶಿಯವರಿಗೆ ಕನ್ಯಾ ರಾಶಿಯವರನ್ನು ಕಂಡಾಗ ಬದುಕಿನಲ್ಲಿ ಹೊಸತೇನೋ ಶುರುವಾದ ಫೀಲ್. ಈ ರಾಶಿಯವರ ಸಹವಾಸದಲ್ಲಿ ಮಿಥುನದವರು ಹಳೆಯದೆಲ್ಲವನ್ನೂ ಮರೆತು ಹೊಸ ಲೈಫು ಶುರು ಮಾಡಿಕೊಳ್ಳುತ್ತಾರೆ. ಈ ರಾಶಿಯವರ ನಡುವೆ ಹೊಂದಾಣಿಕೆ, ಲೈಂಗಿಕ ಜೀವನ ಎರಡೂ ಚೆನ್ನಾಗಿರುತ್ತೆ. ಅದರಲ್ಲೂ ಲೈಂಗಿಕ ಜೀವನವನ್ನು ಪರಸ್ಪರರ ಸಂಗದಲ್ಲಿ ಇಬ್ಬರೂ ಎನ್‌ಜಾಯ್ ಮಾಡುತ್ತಾರೆ.
ಲೈಂಗಿಕ ಜೀವನ: 5
ಪ್ರೀತಿ: 2
ಮಾತುಕತೆ: 3
ತುಲಾ ರಾಶಿಯೊಂದಿಗೆ ಮಿಥುನ (Gemini with Libra): ಮಿಥುನ ರಾಶಿಯವರು ತುಲಾ ರಾಶಿಯವರನ್ನು ಮದುವೆ ಆದರೆ ಹೊಸ ಬಗೆಯ ಬದುಕು ನಿಮ್ಮದಾಗುತ್ತದೆ. ಒಟ್ಟಿಗೆ ಬದುಕುವುದರಲ್ಲಿ ಖುಷಿ ಸಿಗುತ್ತದೆ. ಆದರೆ ಪ್ರೀತಿ ಒಂದು ಹಂತದ ನಂತರ ಕಡಿಮೆಯಾಗುತ್ತಾ ಬರುತ್ತದೆ. ಲೈಂಗಿಕ ಜೀವನ ಓಕೆ ಓಕೆ ಅನ್ನೋ ಥರ ಇರುತ್ತದೆ. ಆದರೆ ವಿಚಿತ್ರ ಅಂದರೆ ಈ ಎರಡು ರಾಶಿಯವರು ಪರಸ್ಪರ ಮಾತಿಗೆ ಕೂತರೆ ಅಪ್ಪಟ ಸ್ನೇಹಿತರಾಗುತ್ತಾರೆ. ಆದರೆ ಪ್ರೇಮಿಯಾಗಿ, ಕಾಮಿಯಾಗಿ ಅಂಥಾ ಖುಷಿ ಇರಲ್ಲ.
ಲೈಂಗಿಕ ಜೀವನ: 2
ಪ್ರೀತಿ: 1
ಮಾತುಕತೆ: 4
Focus ಮಾಡಲು ಕಷ್ಟವೇ? ಈ ಮಂತ್ರ ಪಠಿಸಿ, ಏಕಾಗ್ರತೆ ಹೆಚ್ಚುತ್ತೆ!
ವೃಶ್ಚಿಕ ರಾಶಿಯೊಂದಿಗೆ ಮಿಥುನ (Gemini with Scorpio): ಈ ಎರಡು ರಾಶಿಯವರ ನಡುವೆ ಲೈಂಗಿಕ ಜೀವನ ಸಖತ್ತಾಗಿರುತ್ತೆ. ವೃಶ್ಚಿಕ ರಾಶಿಯರಿಂದ ಮಿಥುನ ರಾಶಿಯವರಿಗೆ ಲೈಂಗಿಕ ಜೀವನದಲ್ಲಿ ಹೆಚ್ಚು ಸುಖ, ತೃಪ್ತಿ ಸಿಗುತ್ತದೆ. ಈ ಇಬ್ಬರ ನಡುವಿನ ಹೊಂದಾಣಿಕೆಯೂ ಚೆನ್ನಾಗಿರುತ್ತದೆ. ಜೊತೆಗಿದ್ದರೆ ಒಟ್ಟಾಗಿ ಲೈಫ್ ಲೀಡ್ ಮಾಡಲು ಅಡೆತಡೆಗಳೇನೂ ಇರುವುದಿಲ್ಲ. ಪ್ರೀತಿಯೂ ಸಾಮಾನ್ಯವಾಗಿರುತ್ತದೆ. ಮಾತುಕತೆಯೂ ಚೆನ್ನಾಗಿರುತ್ತದೆ.
ಲೈಂಗಿಕ ಜೀವನ: 5
ಪ್ರೀತಿ: 2
ಮಾತುಕತೆ: 4
ಧನು ರಾಶಿಯವರು ರಿಲೇಶನ್ ಶಿಪ್ ನಲ್ಲಿ ಮಾಡೋ ತಪ್ಪುಗಳಿವು
ಧನು ರಾಶಿಯೊಂದಿಗೆ ಮಿಥುನ (Gemini with Sagittarius): ಇವರು ದಂಪತಿಗಳಾಗಿದ್ದರೆ ಆಂತರಿಕವಾಗಿ ಪ್ರೀತಿ ಬೆಳೆಸಿಕೊಳ್ಳುತ್ತಾ ಹೃದಯಪೂರ್ವಕವಾಗಿ ಚಿಂತಿಸುತ್ತಾ ಲೈಫನ್ನು ಚೆನ್ನಾಗಿಟ್ಟಿರುತ್ತಾರೆ. ಧನು ರಾಶಿಯವರೊಂದಿಗೆ ಮಿಥುನದವರ ಲೈಂಗಿಕ ಜೀವನ ಸಿಕ್ಕಾಪಟ್ಟೆ ಚೆನ್ನಾಗಿರುತ್ತದೆ. ಆದರೆ ಪ್ರೇಮಿಗಳಾಗಿರುವಾಗ ಬದುಕಿನ ಕೆಲವು ಕರಾಳ ಅನುಭವಗಳಿಗೆ ಸಾಕ್ಷಿಯಾಗಬಹುದು. ಹೀಗಾಗಿ ಲೈಂಗಿಕ ಜೀವನ, ಸ್ನೇಹ ಚೆನ್ನಾಗಿದ್ದರೂ ಎಚ್ಚರಿಕೆಯಿಂದ ಬದುಕೋದು ಅಗತ್ಯ.
ಲೈಂಗಿಕ ಜೀವನ: 5
ಪ್ರೀತಿ: 2
ಮಾತುಕತೆ: 4
ಮಕರದೊಂದಿಗೆ ಮಿಥುನ (Gemini with Capriocorn): ಒಟ್ಟಿಗೆ ಇರುವಾಗ ಮಿಥುನ ರಾಶಿಯವರು ಮಕರ ರಾಶಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಪರಸ್ಪರರ ಆಕರ್ಷಣೆಯಲ್ಲಿ ಬಿದ್ದಿರುತ್ತಾರೆ. ಆದರೆ ಇದೇ ಆಕರ್ಷಣೆ ಬೆಡ್ ಮೇಲಿರುವಾಗಲೂ ಇರುತ್ತೆ ಅಂತ ಹೇಳೋದು ಕಷ್ಟ. ಲೈಂಗಿಕ ಜೀವನದಲ್ಲಿ ವಿನಾಕಾರಣ ಭಯ, ಅಭದ್ರತಾ ಭಾವ ಕಾಡಬಹುದು. ಆದರೆ ಮಾತಿಗೆ ಕೂತಾಗ ಈ ರಾಶಿಯವರ ಸಂಬಂಧ ಚೆನ್ನಾಗಿರುತ್ತದೆ. ಇವರ ನಡುವೆ ಪ್ರೀತಿಯೂ ಉತ್ತಮವಾಗಿರುತ್ತದೆ.
ಲೈಂಗಿಕ ಜೀವನ: 3
ಪ್ರೀತಿ: 4
ಮಾತುಕತೆ: 4
ಕುಂಭ ರಾಶಿಯೊಂದಿಗೆ ಮಿಥುನ (Gemini with Aquarius): ಕೊಂಚ ಮೈಗಳ್ಳರೂ, ಸೋಮಾರಿಗಳೂ ಆದ ಕುಂಭ ರಾಶಿಯವರ ಜೊತೆಗೆ ಹೊಂದಾಣಿಕೆ ಏನೋ ಚೆನ್ನಾಗಿರುತ್ತದೆ. ಆದರೆ ಈ ರಾಶಿಯವರಿಂದ ಮಿಥುನ ರಾಶಿಯವರಿಗೆ ಲೈಂಗಿಕ ಜೀವನದಲ್ಲಿ ಬಯಸಿದ ಸುಖ ಸಿಗಲಾರದು. ಪ್ರೀತಿಯೇನೋ ಸಿಗುತ್ತದೆ. ಅಂದುಕೊಂಡದ್ದಕ್ಕಿಂತ ಹೆಚ್ಚು ಈ ರಾಶಿಯವರು ಮಿಥುನ ರಾಶಿಯವರನ್ನು ಕಾಳಜಿ ಮಾಡಬಹುದು. ಆದರೆ ಅವರ ಬೇಡಿಕೆ ಹೆಚ್ಚಾಗಬಹುದು. ಇದು ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು.
ಲೈಂಗಿಕ ಜೀವನ: 2
ಪ್ರೀತಿ: 4
ಮಾತುಕತೆ: 3
ಮೀನ ರಾಶಿಯೊಂದಿಗೆ ಮಿಥುನ: ಮಿಥುನ ರಾಶಿಯವರು ಮೀನ ರಾಶಿಯವರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಜೊತೆಯಾಗಿ ಬದುಕು ತೃಪ್ತಿಕರವಾಗಿರುತ್ತದೆ. ಇವರು ಸ್ನೇಹಿತರಾಗಿ ತುಂಬ ಕಾಲ ಜೊತೆಯಾಗಬಲ್ಲರು. ಆದರೆ ಲೈಂಗಿಕ ಜೀವನದಲ್ಲಿ ಮಿಥುನ ರಾಶಿಯವರಿಗೆ ಈ ರಾಶಿಯವರೊಂದಿಗೆ ಹೆಚ್ಚಿನ ಸುಖ, ಬಯಸಿದ ತೃಪ್ತಿ ಸಿಗಲಿಕ್ಕಿಲ್ಲ. ಪ್ರೀತಿ, ಸ್ನೇಹ ಚೆನ್ನಾಗಿರುತ್ತದೆ.
ಲೈಂಗಿಕ ಜೀವನ: 2
ಪ್ರೀತಿ: 3
ಮಾತುಕತೆ: 4