Asianet Suvarna News Asianet Suvarna News

ಈ ನಾಲ್ಕು ರಾಶಿಗಳ ಜನ ತಮ್ಮ ಆರೋಗ್ಯ ಲೆಕ್ಕಿಸದೆ ಇತರರನ್ನು ಕಾಳಜಿ ಮಾಡ್ತಾರೆ!

ನೀವು ನಿಮ್ಮ ಪ್ರೀತಿಪಾತ್ರರ ಕುರಿತು ಅಪಾರ ಕಾಳಜಿ ವಹಿಸುತ್ತೀರಾ? ಅವರಿಗೆ ಚೂರು ಅನಾರೋಗ್ಯವಾದರೂ ಸಹಿಸಿಕೊಳ್ಳಲು ನಿಮಗೆ ಕಷ್ಟವಾಗುತ್ತದೆಯೇ? ಅವರು ಖುಷಿಯಾಗಿರಲು ನಿಮ್ಮ ಆರೋಗ್ಯವನ್ನೂ ಲೆಕ್ಕಿಸದ ಗುಣ ನಿಮ್ಮಲ್ಲಿದೆಯೇ? ಹಾಗಿದ್ದರೆ ನೀವು ಈ ನಾಲ್ಕು ರಾಶಿಗಳಲ್ಲಿ ಯಾವುದಾದರೂ ಒಂದು ರಾಶಿಗೆ ಸೇರಿರಬಹುದು, ಚೆಕ್‌ ಮಾಡಿ.

Zodiac signs who neglect their health while caring for others
Author
Bangalore, First Published May 1, 2022, 10:54 AM IST

ಕೆಲವರು ತಮ್ಮ ಆರೋಗ್ಯದ (Health) ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ, ಆದರೆ ಮತ್ತೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವರು ತಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುತ್ತಾರೆ, ಮನೆಯ ಇತರ ಸದಸ್ಯರ ಆರೋಗ್ಯದ ಕುರಿತೂ ಗಮನ ನೀಡುತ್ತಾರೆ. ಆದರೆ, ಇನ್ನು ಕೆಲವರಿರುತ್ತಾರೆ. ಅವರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ (Care) ವಹಿಸುವುದಿಲ್ಲ, ಬದಲಿಗೆ ಇತರರ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡುತ್ತಾರೆ. ಇಂತಹ ಗುಣ ಹನ್ನೆರಡು ರಾಶಿಗಳಲ್ಲಿ (Zodiac Sign) ಕೇವಲ ನಾಲ್ಕು ರಾಶಿಗಳ ಜನರಲ್ಲಿ ಮಾತ್ರ ಕಂಡುಬರುತ್ತದೆ.

ಇಂದಿನ ದಿನಗಳಲ್ಲಿ ಸ್ವಾರ್ಥವೇ (Selfish) ಹೆಚ್ಚು. ಆದರೆ, ಪ್ರಪಂಚದಲ್ಲಿ ನಿಸ್ವಾರ್ಥಿಗಳೂ (Selfless) ಸಾಕಷ್ಟಿದ್ದಾರೆ. ಯಾವುದೇ ನಿರೀಕ್ಷೆಯಿಲ್ಲದೆ ನಿಸ್ವಾರ್ಥದಿಂದ ಬೇರೆಯವರ ಸೇವೆ ಮಾಡುವವರಿದ್ದಾರೆ. ಹಾಗೆಯೇ ತಮ್ಮ ಪಾಲಕರು(Parents), ಮನೆಯ ಜನರ ಬಗ್ಗೆಯೂ ಅತೀವ ಕಾಳಜಿ ವಹಿಸುವವರಿದ್ದಾರೆ. ಅಂತಹ ಜನರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿದ್ದಾರೆ. ನಿಮ್ಮದೂ ಈ ನಾಲ್ಕರಲ್ಲಿ ಒಂದಾಗಿದೆಯಾ ಎಂದು ನೋಡಿಕೊಳ್ಳಿ.

•    ಮೇಷ (Aries)
ಮೇಷ ರಾಶಿಯವರಿಗೆ ತಮ್ಮ ಜತೆ ಇರುವವರ ಆರೋಗ್ಯ ಚೆನ್ನಾಗಿರಬೇಕು ಎನ್ನುವ ಬಯಕೆ ಹೆಚ್ಚು. ಇದಕ್ಕಾಗಿ ಅವರು ಅತೀವ ಕಾಳಜಿ ವಹಿಸುತ್ತಾರೆ. ಸ್ನೇಹಿತರ ಬಗ್ಗೆಯೂ ಸಾಕಷ್ಟು ಗಮನ ನೀಡುತ್ತಾರೆ. ಸಂಗಾತಿಯ ಬಗ್ಗೆಯಂತೂ ವಿಪರೀತ ಎನ್ನುವಷ್ಟು ಎಚ್ಚರಿಕೆ ವಹಿಸುತ್ತಾರೆ. ತಮಗೆ ಕೆಲಸದ ಒತ್ತಡವಾದರೂ ಸರಿ, ಜತೆಗಾರರು ಕಂಫರ್ಟ್‌ (Comfort) ಆಗಿರಲೆಂದು ತಾವೇ ಅವರ ಕೆಲಸವನ್ನು ವಹಿಸಿಕೊಳ್ಳುತ್ತಾರೆ. ಹೀಗಾಗಿ, ಮೇಷ ರಾಶಿಯವರಿಗೆ ಆತಂಕದ ಸಮಸ್ಯೆ ಹೆಚ್ಚು ಕಾಡುತ್ತದೆ. ಮಾನಸಿಕ (Mental) ಆರೋಗ್ಯವೂ ಏರುಪೇರಾಗುವ ಸಾಧ್ಯತೆ ಹೆಚ್ಚು. ಇನ್ನೊಬ್ಬರ ಬಗ್ಗೆ ಅತಿಯಾಗಿ ಯೋಚಿಸದೆ ತಮ್ಮ ಆರೋಗ್ಯದ ಬಗ್ಗೆಯೂ ಅವರು ಗಮನ ನೀಡುವುದು ಉತ್ತಮ. ಹಾಗೂ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟೇ ಸಹಾಯ ಮಾಡಲು ಮುಂದಾಗುವುದು ಜಾಣತನ.

ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಇನ್ನೊಂದು ಹೆಸರು!

•    ತುಲಾ (Libra)
ತುಲಾ ರಾಶಿಯವರು ಸದಾಕಾಲ ಕುಟುಂಬದ (Family) ಯೋಗಕ್ಷೇಮ ಹಾಗೂ ಸ್ನೇಹಿತರ ಒಳಿತಿಗಾಗಿಯೇ ಯೋಚಿಸುತ್ತಾರೆ. ತಮ್ಮ ಕೆಲಸದಲ್ಲಿ ನಿರತರಾಗಿದ್ದರೂ ಅವರ ಒಂದು ಯೋಚನೆ ಕುಟುಂಬದ ಕುರಿತಾಗಿಯೇ ಇರುತ್ತದೆ. ನಿಮ್ಮ ಸಮಸ್ಯೆಯ ಬಗ್ಗೆ ಅವರು ಅತಿಯಾಗಿ ಯೋಚಿಸುತ್ತಾರೆ. ಅದರ ಪರಿಹಾರದ ಬಗ್ಗೆ ನೂರೆಂಟು ಮಾರ್ಗಗಳನ್ನು ಹುಡುಕುತ್ತಾರೆ. ಈ ನಡುವೆ, ತಮಗೆ ಏನಾದರೂ ಆರೋಗ್ಯದ ಸಮಸ್ಯೆಯಾಗಿದ್ದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ಮೊದಲು ನಿಮ್ಮ ಸಮಸ್ಯೆ ನಿವಾರಣೆಯಾಗುವುದು ಮುಖ್ಯ ಎಂಬಂತೆ ವರ್ತಿಸುತ್ತಾರೆ. 

•    ಕರ್ಕಾಟಕ ರಾಶಿ (Cancer)
ಸದಾಕಾಲ ತಮ್ಮೊಂದಿಗೆ ಪ್ರೀತಿಪಾತ್ರರು ಇರಬೇಕೆಂದು ಬಯಸುವ ಜನ ಕರ್ಕಾಟಕ ರಾಶಿಯವರು. ಯಾರಾದರೂ ಅವರ ಮನಸ್ಸಿಗೆ ಬಂದರೆ ಸಾಕು, ಅವರ ಒಳಿತಿಗಾಗಿ ಹಾರೈಸುತ್ತಾರೆ. ಅವರ ಬೇಕು-ಬೇಡಗಳನ್ನು ಗಮನಿಸಿಕೊಳ್ಳುತ್ತಾರೆ. ಒಂದೊಮ್ಮೆ ಅವರ ಪ್ರೀತಿಪಾತ್ರರಿಗೆ ಹುಷಾರಿಲ್ಲವೆಂದಾದರೆ ತಾವೇ ಖುದ್ದಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ. ಸಮಯದ ಪರಿವೆಯಿಲ್ಲದೆ, ತಮ್ಮ ಕೆಲಸದ ಬಗ್ಗೆ ಏನೊಂದೂ ಯೋಚಿಸದೆ ನಿಸ್ವಾರ್ಥದಿಂದ ಅವರ ಸೇವೆ ಸಲ್ಲಿಸುತ್ತಾರೆ. ತಮ್ಮ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂದು ಇನ್ನೊಬ್ಬರಿಗೆ ಭಾಷಣ ಬಿಗಿಯುತ್ತಾರೆ ಆದರೆ, ಸ್ವತಃ ತಾವು ಅದನ್ನು ಪಾಲನೆ ಮಾಡುವುದಿಲ್ಲ. 

Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ

•    ಸಿಂಹ ರಾಶಿ (Leo)
ಜೀವನದ ಎಲ್ಲ ಸ್ವಾದವನ್ನೂ ಅನುಭವಿಸಬೇಕು ಎನ್ನುವವರಲ್ಲಿ ಸಿಂಹ ರಾಶಿಯವರಿಗೆ ಪ್ರಮುಖ ಸ್ಥಾನ. ಹಾಗೆಯೇ ಪ್ರೀತಿ(Love)ಯನ್ನು ಕೊಟ್ಟು ಪಡೆದುಕೊಳ್ಳಬೇಕು ಎನ್ನುವುದೂ ಅವರ ನಿಯಮ. ಇತರರಿಗೆ ಕಂಫರ್ಟ್‌ ನೀಡಲು ಯತ್ನಿಸುತ್ತಾರೆ. ತಮ್ಮ ತಂದೆ-ತಾಯಿಯರ ಕುರಿತು ಅಪಾರ ಕಾಳಜಿ ವಹಿಸುತ್ತಾರೆ. ತಮ್ಮ ಕೈ ಬೆರಳು ಕತ್ತರಿಸಿ ಹೋಗಿದ್ದರೂ ತಮ್ಮ ಪ್ರೀತಿಪಾತ್ರರು ಸಹಾಯಕ್ಕೆ ಕರೆ ಮಾಡಿದರೆ ಅದರಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರು ಸ್ವಂತ ಆರೋಗ್ಯ ಹಾಗೂ ಕಲ್ಯಾಣದ (Welfare) ಬಗ್ಗೆ ಹೆಚ್ಚು ಯೋಚಿಸಬೇಕಾಗುತ್ತದೆ.

Follow Us:
Download App:
  • android
  • ios