ಈ ರಾಶಿಯವರ ಬಗ್ಗೆ ತಪ್ಪು ತಿಳಿಯೋದೇ ಹೆಚ್ಚು!

ನಾಚಿಕೆ ಸ್ವಭಾವದಿಂದ ನೀವು ಯಾರೊಂದಿಗೂ ಮಾತಾಡದೇ ಉಳಿದರೆ ಅಹಂಕಾರವೆನ್ನುತ್ತಾರೆ. ಅಳುಕಿನಿಂದ ಸುಮ್ಮನಿದ್ದರೆ ನಸುಗುನ್ನಿ ಎನ್ನುತ್ತಾರೆ. ನಿಮಗೂ ಹೀಗನಿಸಬಹುದು- ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು. ಹೀಗೆ ಜನರಿಂದ ಸದಾ ತಪ್ಪಾಗಿ ಜಡ್ಜ್ ಆಗುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

5 most misunderstood zodiac signs on the wheel skr

ಎಲ್ಲರ ಬಗ್ಗೆಯೂ ಜನರು ತಮ್ಮ ಮನಸ್ಸಿಗೆ ಬಂದಂತೆ ಜಡ್ಜ್ ಮಾಡುತ್ತಾರೆ. ಅವರು ಹೀಗೆಯೇ ಎಂದು ನಿರ್ಧರಿಸಿ ಷರಾ ಬರೆಯುತ್ತಾರೆ. ಒಂದು ಹಾಯ್ ಹೇಳುವುದರೊಳಗೆ ಅವರ ವ್ಯಕ್ತಿತ್ವ ಅಳೆದು ತೂಗಿ ಗಾಸಿಪ್ ಮಾಡುವಂಥ ಹುಂಬತನ ತೋರುತ್ತಾರೆ. ಆದರೆ, ಕೆಲವರ ಬಗ್ಗೆ ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದು ಉಳಿದವರಿಗಿಂತ ಹೆಚ್ಚು. ಅದನೋ ಈ ಕೆಲವರು ಏನು ಮಾಡಿದರೂ ನೋಡುವವರಿಗೆ ಅದರಲ್ಲಿ ಬೇರೆಯೇ ಅರ್ಥ ಕಾಣುತ್ತದೆ. ಬೇರೆಯೇ ರೀತಿ ಕಾಣಿಸುತ್ತಾರೆ. ಬೋಲ್ಡಾಗಿ ಕಾಣಿಸಿಕೊಂಡರೆ ಸಾಕು, ಅವರು ಗಂಡುಬೀರಿಯರೆಂದೋ, ಬೇಕಾದ ಚಟವೆಲ್ಲ ಅಂಟಿಸಿಕೊಂಡವರೆಂದೋ ಅಸ್ಯೂಮ್ ಮಾಡಿಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಅವರು ತುಂಬಾ ಸಾಧು ಸ್ವಭಾವದವರಾಗಿರುತ್ತಾರೆ. ಹೀಗೆ ಸಾಮಾನ್ಯವಾಗಿ ಜನರಿಂದ ತಪ್ಪಾದ ತೀರ್ಪಿಗೆ ಒಳಗಾಗುವವರು ಯಾವ ರಾಶಿಗೆ ಸೇರಿದವರು ಗೊತ್ತಾ?

ವೃಶ್ಚಿಕ(Scorpio)
ಈ ರಾಶಿಚಕ್ರದ ಚಿಹ್ನೆಯನ್ನು ಕತ್ತಲೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ  ಈ ರಾಶಿಯವರು ಪುನರ್ಜನ್ಮ(rebirth), ರೂಪಾಂತರ(transformation) ಮತ್ತು ಸಾವಿನಂತಹ ಅಂಶಗಳನ್ನು ಎದುರಿಸುತ್ತಾರೆ. ಅವರು ತಮ್ಮನ್ನು ತಾವು ಮರುಶೋಧಿಸುತ್ತಲೇ(reinvent) ಇರುತ್ತಾರೆ. ಹಲವಾರು ಬಾರಿ ತಮ್ಮನ್ನು ತಾವು ವಿವೇಕದಿಂದ ಇರಿಸಿಕೊಳ್ಳಲು ಜನರೊಂದಿಗೆ ಸಂಬಂಧವನ್ನು ಕಡಿತಗೊಳಿಸಬೇಕಾದ ಸನ್ನಿವೇಶ ಎದುರಿಸುತ್ತಾರೆ. ಇದರಿಂದ ಈ ರಾಶಿಯವರನ್ನು ಭಾವನಾ ಹೀನರು ಹಾಗೂ ಲೆಕ್ಕಾಚಾರ ಸ್ವಭಾವದವರು ಎಂದು ಜಡ್ಜ್ ಮಾಡಲಾಗುತ್ತದೆ. ಆದರೆ, ನಿಜವೆಂದರೆ ಅವರು ತಾವು ಕನೆಕ್ಟ್ ಆಗದ ಜನರೊಂದಿಗೆ ಸಮಯ ಕಳೆಯುವುದೆಂದರೆ ಸಮಯ ವ್ಯರ್ಥ ಮಾಡುವುದೆಂದು ಭಾವಿಸುತ್ತಾರೆ. ಹೀಗಾಗಿ, ತಮ್ಮ ಪಾಡಿಗೆ ತಾವಿರಲು ಬಯಸುತ್ತಾರೆ. 

ಕನ್ಯಾ(Virgo)
ಇವರನ್ನು ಸಾಮಾನ್ಯವಾಗಿ ಬೋರಿಂಗ್, ಪರಿಪೂರ್ಣತಾವಾದಿಗಳು(perfectionists) ಎಂದು ತಿಳಿಯಲಾಗುತ್ತದೆ. ಆದರೆ ಇವೆಲ್ಲ ಉತ್ಪ್ರೇಕ್ಷೆಯ ಮಾತುಗಳು. ಕನ್ಯಾರಾಶಿಯವರು ಹೀಗೆ ವರ್ತಿಸಲೂ ಹಲವಾರು ಕಾರಣಗಳಿರುತ್ತವೆ. ಅವರ ವರ್ತನೆಯ ಹಿಂದೆೊಂದು ಕತೆ ಇರುತ್ತದೆ. ಇವರು ನಿಜವಾಗಿಯೂ ತುಂಬಾ ಆಪ್ತರಾದವರ ಜೊತೆ ಸಂತೋಷವಾಗಿಯೂ, ಮಜವಾಗಿಯೂ ಇರುತ್ತಾರೆ. ಹೆಚ್ಚು ಹತ್ತಿರದವರಲ್ಲದವರ ಜೊತೆ ಬೆರೆಯಲು ಕೊಂಚ ಕಷ್ಟ ಪಡುತ್ತಾರೆ. ಗುರಿಯ ಹಿಂದೆ ಬಿದ್ದಾಗ ಅದನ್ನು ಚೆನ್ನಾಗಿ ಮಾಡಬೇಕೆಂಬ ಇವರ ಹಟ ಒಳ್ಳೆಯದೇ. ಅದಕ್ಕಾಗಿ ಪರ್ಫೆಕ್ಷನಿಸ್ಟ್ ಎಂಬ ಹಣೆಪಟ್ಟೆ ಕಟ್ಟುವುದು ಸರಿಯಲ್ಲ. 

ಈ ಐದು ರಾಶಿಗಿದೆ ಈ ವರ್ಷ ಕನಸಿನ ಮನೆ ಕೊಳ್ಳೋ ಯೋಗ

ಸಿಂಹ(Leo)
ಗಮನ ಸೆಳೆಯುವ ಸಾಹಸದಲ್ಲೇ ಸದಾ ಇರುತ್ತಾರೆ ಎಂದು ಸಿಂಹ ರಾಶಿಯನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಆದರೆ, ಅವರೇನೆಂಬುದು ಕೆಲವೇ ಜನರಿಗೆ ಮಾತ್ರ ತಿಳಿಯುತ್ತದೆ. ಇವರು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ ಮತ್ತು ಯಾರ ಮೇಲೂ ಅವಲಂಬಿತರಾಗಬಾರದು ಎಂಬ ಹಟದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರು ಶೋ ಆಫ್ ಮಾಡುವುದಲ್ಲ, ಆದರೆ, ತಮ್ಮ ಸಾಧನೆಯನ್ನು ಜನ ಗುರುತಿಸಿ ಮೆಚ್ಚಲಿ ಎಂಬ ಸಹಜ ಬಯಕೆಯಷ್ಟೇ ಅವರದು. ತಮ್ಮೆಲ್ಲ ಕೆಲಸಗಳನ್ನು ಎಲ್ಲರೂ ಮೆಚ್ಚಲಿ ಎಂಬ ಆಸೆಯನ್ನೇ ಇತರರು ತಪ್ಪು ತಿಳಿಯುತ್ತಾರೆ. 

ವಾರದ ಯಾವ ದಿನ ಯಾವ ಕೆಲಸಕ್ಕೆ ಸೂಕ್ತ?

ಕಟಕ(Cancer)
ಕರ್ಕಾಟಕ ರಾಶಿಯವರು ತುಂಬಾ ಭಾವುಕರು. ಈ ಕಾರಣದಿಂದ ಇವರನ್ನು ಅಳುಬುರುಕರು ಎಂದು ಭಾವಿಸಲಾಗುತ್ತದೆ. ಗೋಳಿನ ಮೂಟೆ ಎನ್ನಲಾಗುತ್ತದೆ. ಆದರೆ, ಕಟಕ ರಾಶಿಯವರು ಹಾಗಲ್ಲ, ಅವರಿಗೆ ಸಹಾನುಭೂತಿ ಹೆಚ್ಚು. ಎಲ್ಲರ ನೋವು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಅದಕ್ಕಾಗಿ ಮಿಡಿಯಬಲ್ಲರು. ಆದರೆ, ಅದನ್ನು ತೋರಿಸಿಕೊಳ್ಳುವ ರೀತಿ ನೋಡುಗರಿಗೆ ಬಾಲಿಶ ಎನಿಸುವಂತೆ ಮಾಡುತ್ತದೆ. ಬಹಳ ಧನಾತ್ಮಕ ಸ್ವಭಾವದವರಾದ ಇವರನ್ನು ವಾಸ್ತವಕ್ಕಿಂತ ದೂರದವರು ಎಂದು ಭಾವಿಸುವುದೂ ಹೆಚ್ಚು. ಆದರೆ ವಾಸ್ತವವಾಗಿ ಅವರು ಎಲ್ಲರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.

ಮಿಥುನ(Gemini)
ಈ ರಾಶಿಯವರನ್ನು ಹೆಚ್ಚಿನ ಜನರು ಒಳಗೊಂದು ಹೊರಗೊಂದು ಎಂದು ಭಾವಿಸುತ್ತಾರೆ. ಎರಡು ಮುಖದವರು, ಮುಖವಾಡದ ಬದುಕು ಎಂದು ಜಡ್ಜ್ ಮಾಡುತ್ತಾರೆ. ಅವರು ಯಾವುದೇ ಉದ್ದೇಶದಿಂದ ಮಾತಾಡಿದರೂ ಅದು ದುರುದ್ದೇಶಪೂರಿತ ಎಂದುಕೊಳ್ಳುತ್ತಾರೆ. ಆದರೆ, ಇದು ತಪ್ಪುಗ್ರಹಿಕೆಯಾಗಿದ್ದು ಇವರು ನಕಲಿ ಮಾಡುವವರಲ್ಲ. ತುಂಬಾ ಉತ್ತಮ ಸಂವಹನ ಛಾತಿ ಹೊಂದಿದವರಾಗಿದ್ದು, ಬುದ್ದಿವಂತರಾಗಿರುತ್ತಾರೆ. ಅವರು ತುಂಬಾ ಮಾತಾಡುವುದರಿಂದಲೇ ಜನರು ಇವರ ಮಾತನ್ನು ತಪ್ಪಾಗಿ ಅರ್ಥೈಸುವುದು ಹೆಚ್ಚು. 
 

Latest Videos
Follow Us:
Download App:
  • android
  • ios