Asianet Suvarna News Asianet Suvarna News

Sibling Jealousy: ಈ 4 ರಾಶಿಗಳಿಗೆ ಒಡಹುಟ್ಟಿದವರ ಮೇಲೆ ಸಿಕ್ಕಾಪಟ್ಟೆ ಅಸೂಯೆ

ಕೆಲವರು ತಮ್ಮ ಒಡಹುಟ್ಟಿದವರ ಉತ್ತಮ ಸ್ನೇಹಿತರಾಗುತ್ತಾರೆ, ಕೆಲವರು ಅವರೊಂದಿಗೆ ನಿಜವಾಗಿಯೂ ಹೊಂದಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವರನ್ನು ಕಂಡರೆ ಹೊಟ್ಟೆಕಿಚ್ಚು, ಕೋಪ ಕುದಿಯುತ್ತದೆ. ಹೀಗೆ ಸೋದರ ಸೋದರಿಯರ ಬಗ್ಗೆ ಅಸೂಯೆ ಹೊಂದಿರುವ ರಾಶಿಗಳಿವು..

4 Zodiac signs who are jealous of their siblings skr
Author
First Published Sep 13, 2022, 12:12 PM IST

ಕೆಲವರಿಗೆ ಒಡಹುಟ್ಟಿದವರೆಂದರೆ ಸ್ನೇಹಿತರಿದ್ದಂತೆ. ಅವರೊಂದಿಗೆ ಎಲ್ಲವನ್ನೂ ಹಂಚಿಕೊಂಡು ಅವರ ಖುಷಿಯಲ್ಲಿ ತಮ್ಮ ಖುಷಿ ಕಾಣುತ್ತಾರೆ. ಅವರ ಯಶಸ್ಸನ್ನು ಸಂಭ್ರಮಿಸುತ್ತಾರೆ. ಮತ್ತೆ ಕೆಲವರಿರುತ್ತಾರೆ, ಅವರು ತಮ್ಮ ಒಡಹುಟ್ಟಿದವರನ್ನು ತಂದೆತಾಯಿಯಿಂದ ತಮ್ಮ ಪಾಲಿನ ಪ್ರೀತಿ, ಗಮನ ಕಸಿದವರೆಂಬಂತೆ ನೋಡುತ್ತಾರೆ. ಶತ್ರುಗಳಂತೆ ಕಾಣುತ್ತಾರೆ. ಅವರನ್ನು ಪೋಷಕರು ಹೊಗಳಿದರೆ ಹೊಟ್ಟೆಕಿಚ್ಚಾಗುತ್ತಾರೆ. ಅವರ ಸಂಭ್ರಮದ ಬಗ್ಗೆ ಅಸೂಯೆ ಪಡುತ್ತಾರೆ. ಒಡಹುಟ್ಟಿದವರ ನಡುವೆ ಹೊಟ್ಟೆಕಿಚ್ಚು ಹೊತ್ತಿಕೊಂಡು ಉರಿಯುತ್ತಿದ್ದರೆ ಪೋಷಕರಿಗೆ ಅದೇ ದೊಡ್ಡ ತಲೆನೋವಾಗಿ ಕಾಡುತ್ತದೆ. ಹೀಗೆ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಯಾಗಿರುವವರು ಇತರರ ಸಾಧನೆಗಳಿಂದ ಸಂತೋಷವಾಗಿರುವುದಿಲ್ಲ. ಅವರಲ್ಲಿ ಆಳವಾದ ಅಭದ್ರತೆ ಅಥವಾ ಸ್ವಯಂ ಸಾಮರ್ಥ್ಯದ ಮೇಲೆ ಅನುಮಾನ ಹೆಚ್ಚಿರುತ್ತದೆ. ಹಾಗಾಗಿ ಅವರು ಅತ್ಯಂತ ಸ್ವಾರ್ಥಿಗಳಾಗಿರುತ್ತಾರೆ. ತಮ್ಮ ಒಡಹುಟ್ಟಿದವರ ಬಗ್ಗೆ ತೀವ್ರವಾಗಿ ಅಸೂಯೆಪಡುವ 4 ರಾಶಿಚಕ್ರ ಚಿಹ್ನೆಗಳ ಪಟ್ಟಿ ಇಲ್ಲಿದೆ.

1. ಕಟಕ ರಾಶಿ(cancer)
ಈ ರಾಶಿಚಕ್ರದ ಮಕ್ಕಳು ತಮ್ಮ ಪೋಷಕರೊಂದಿಗೆ ಹೆಚ್ಚು ಅಟ್ಯಾಚ್‌ಮೆಂಟ್ ಹೊಂದಿರುತ್ತಾರೆ. ಅವರು ಯಾವಾಗಲೂ ತಮ್ಮ ತಂದೆ ತಾಯಿಯಿಂದ ಪ್ರೀತಿ ಮತ್ತು ಕಾಳಜಿಯನ್ನು ಬಯಸುವ ಅತ್ಯಂತ ವಿಧೇಯ ಮಕ್ಕಳು. ಪೋಷಕರ ವಾತ್ಸಲ್ಯವು ಅವರು ತಮ್ಮ ಜೀವನದಲ್ಲಿ ಆದ್ಯತೆ ನೀಡುವ ವಿಷಯವಾಗಿದೆ. ಆದ್ದರಿಂದ ಒಡಹುಟ್ಟಿದವರೆಂದರೆ ಇವರಿಗೆ ಪೋಷಕರಿಂದ ತಮ್ಮ ಪ್ರೀತಿಯನ್ನು ಕಸಿದುಕೊಳ್ಳಲು ಬಂದವರಂತೆ ಕಾಣಿಸುತ್ತಾರೆ. ತಂದೆತಾಯಿಯನ್ನು ಹಂಚಿಕೊಳ್ಳಲು ಇವರು ಬಯಸುವುದಿಲ್ಲ. ಹಾಗಾಗಿ, ಒಡಹುಟ್ಟಿದವರ ಬಗ್ಗೆ ಅಪಾರ ಅಸೂಯೆ ಇವರಿಗೆ. 

Color Astro: ಮೇಷಕ್ಕೆ ಕಪ್ಪು ಬಣ್ಣ ತರುತ್ತೆ ದುರದೃಷ್ಟ, ದೂರವಿಡಿ!

2. ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ತಮ್ಮದೇ ಜೆಂಡರ್‌ನ ಒಡಹುಟ್ಟಿದವರ ಜೊತೆ ಸಂಪರ್ಕವನ್ನು ಸಾಧಿಸುವಲ್ಲಿ ಕಷ್ಟಪಡುತ್ತಾರೆ. ಅವರು ಹುಡುಗನಾಗಿದ್ದರೆ ಅಣ್ಣ ತಮ್ಮನೊಂದಿಗೆ, ಹುಡುಗಿಯಾಗಿದ್ದರೆ ಅಕ್ಕತಂಗಿಯರೊಂದಿಗೆ  ಸಾಕಷ್ಟು ಕಟ್ಟುನಿಟ್ಟಾಗಿರುತ್ತಾರೆ ಮತ್ತು ಆಗಾಗ್ಗೆ ಅವರ ಸಂಬಂಧವನ್ನು ಸ್ಪರ್ಧೆಯಾಗಿ ಪರಿವರ್ತಿಸುತ್ತಾರೆ. ಈ ಸ್ವಭಾವವು ಅವರ ನಡುವಿನ ಬಂಧವನ್ನು ಹಾಳು ಮಾಡುತ್ತದೆ. ಮತ್ತೊಂದೆಡೆ, ಅವರು ವಿರುದ್ಧ ಲಿಂಗದ ಒಡಹುಟ್ಟಿದವರ ಜೊತೆ ತುಂಬಾ ಸಹಾಯಕವಾಗುತ್ತಾರೆ, ಹುರಿದುಂಬಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ ಎಂಬುದು ಸಮಾಧಾನಕರ ವಿಷಯ. 

3. ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯು ನೀರಿನ ಚಿಹ್ನೆಯಾಗಿರುವುದರಿಂದ ಅತಿಯಾದ ಆಲೋಚನೆ ಮತ್ತು ಅನಗತ್ಯ ಚಿಂತೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಅವರು ಬೇಗನೆ ನಿರಾಶೆಗೊಳ್ಳುತ್ತಾರೆ. ಅವರು ಯಾವಾಗಲೂ ತಮ್ಮ ಕುಟುಂಬದಲ್ಲಿ ಕೇಂದ್ರಬಿಂದುವಾಗಿರಲು ಬಯಸುತ್ತಾರೆ.  ತಮ್ಮನ್ನು ತಾವು ಪ್ರದರ್ಶಿಸಲು ಬಯಸುತ್ತಾರೆ. ತಾವೇ ಕುಟುಂಬದ ಕಣ್ಮಣಿಯಾಗುವ ಆಸೆ ಅವರಿಗೆ. ಅದಕ್ಕಾಗಿಯೇ ಅವರು ತಮ್ಮ ಒಡಹುಟ್ಟಿದವರನ್ನು ಸ್ವಭಾವತಃ ದುರ್ಬಲ ವ್ಯಕ್ತಿ ಎಂದು ಕುಟುಂಬಕ್ಕೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಅವರ ಸ್ಪರ್ಧಾತ್ಮಕ ಸ್ವಭಾವವು ಯಾವಾಗಲೂ ಅವರ ಸಹೋದರ ಮತ್ತು ಸಹೋದರಿಯೊಂದಿಗಿನ ಸಂಬಂಧದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ.

Shukra Ast 2022: ಇನ್ನು ಮೂರು ದಿನದಲ್ಲಿ ಅಸ್ತಮಿಸುತ್ತಿರುವ ಶುಕ್ರ, ಈ ರಾಶಿಗಳು ಸಂತೋಷದಿಂದ ವಂಚಿತ

4. ಧನು ರಾಶಿ(Sagittarius)
ಧನು ರಾಶಿಯವರು ತಮ್ಮ ಒಡಹುಟ್ಟಿದವರು ತಮಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುವುದನ್ನು ಕಂಡು ಅಸೂಯೆ ಪಡುತ್ತಾರೆ. ಇದು ಹೆಚ್ಚಿನ ಒತ್ತಡದಲ್ಲಿ ಅವರನ್ನು ಇರಿಸುವ ಜೊತೆಗೆ ಅವರ ಉತ್ಪಾದಕತೆಯನ್ನು ಇನ್ನಷ್ಟು ಕುಂಠಿತಗೊಳಿಸುತ್ತದೆ. ಅವರು ತಮ್ಮ ಒಡಹುಟ್ಟಿದವರನ್ನು ಕುಶಲತೆಯಿಂದ ನಿರ್ವಹಿಸಿ ಅವರು ತಪ್ಪು ದಾರಿಯಲ್ಲಿ ಹೋಗಲು ಅವರಿಗೆ ಮಾರ್ಗದರ್ಶನ ನೀಡಬಹುದು. ಧನು ರಾಶಿಗೆ ತಮ್ಮಷ್ಟು ಸಾಮರ್ಥ್ಯವಿಲ್ಲದ ಒಡಹುಟ್ಟಿದವರಾದರೆ ಪರವಾಗಿಲ್ಲ. ಆದರೆ, ತಾವೇ ಸದಾ ಭೇಶ್ ಎನಿಸಿಕೊಳ್ಳಬೇಕು. ಆ ಹೊಗಳಿಕೆಯನ್ನು ಅವರು ಒಢಹುಟ್ಟಿದವರೊಡನೆ ಹಂಚಿಕೊಳ್ಳಲು ಬಯಸುವುದಿಲ್ಲ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios