Asianet Suvarna News Asianet Suvarna News

ರಾಶಿ ಪ್ರಕಾರ VijayaDashamiಯಂದು ಹೀಗೆ ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

ಈ ಬಾರಿಯ ವಿಜಯದಶಮಿ ಅಕ್ಟೋಬರ್ 5ರಂದು. ನಿಮ್ಮ ರಾಶಿಚಕ್ರದ ಪ್ರಕಾರ ಈ ದಿನದಂದು ಪೂಜಿಸುವುದರಿಂದ ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂಬ ನಂಬಿಕೆ ಇದೆ.

Vijayadashami Puja 2022 worship According to the zodiac every wish will be fulfilled skr
Author
First Published Oct 2, 2022, 3:54 PM IST | Last Updated Oct 2, 2022, 3:54 PM IST

ಹಿಂದೂ ಧರ್ಮದಲ್ಲಿ ಶರನ್ನವರಾತ್ರಿಗೆ ವಿಶೇಷ ಮಹತ್ವವಿದೆ. ಶರನ್ನವರಾತ್ರಿಯ ಹತ್ತನೇ ದಿನದಂದು ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ದಸರಾ ಎಂದೂ ಕರೆಯುತ್ತಾರೆ. ಈ ಬಾರಿ 5 ಅಕ್ಟೋಬರ್ 2022ರಂದು ದಸರಾ ಆಚರಿಸಲಾಗುತ್ತದೆ. ದಸರಾ ಅಥವಾ ವಿಜಯದಶಮಿಯಂದು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ, ಅವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಭಕ್ತರು ತಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ವಿಜಯ ದಶಮಿಯಂದು ಪೂಜಿಸಿದರೆ, ಅವರು ಉತ್ತಮ ಲಾಭವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

ರಾಶಿಚಕ್ರದ ಪ್ರಕಾರ ದಸರಾ ಪೂಜೆಯನ್ನು ಹೀಗೆ ಮಾಡಿ..

ಮೇಷ ರಾಶಿ(Aries): ಮೇಷ ರಾಶಿಯ ಜನರು ವಿಜಯದಶಮಿಯ ದಿನದಂದು ಶ್ರೀರಾಮನನ್ನು ಪೂಜಿಸಬೇಕು. ಪೂಜೆಯ ಸಮಯದಲ್ಲಿ 'ಓಂ ರಾಮಭದ್ರಾಯ ನಮಃ' ಎಂಬ ಮಂತ್ರವನ್ನು ಜಪಿಸಬೇಕು.
ವೃಷಭ ರಾಶಿ(Taurus): ಈ ರಾಶಿಯ ಜನರು ದಸರಾದಂದು ಆಂಜನೇಯನನ್ನು ಪೂಜಿಸಬೇಕು ಮತ್ತು ಪೂಜೆಯಲ್ಲಿ 'ಓಂ ಆಂಜನೇಯ ನಮಃ' ಎಂದು ಜಪಿಸಬೇಕು. ಹತ್ತಿರದ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡುವುದು ಉತ್ತಮ.

Tarot Readings: ಕುಂಭಕ್ಕೆ ಪಡೆಯುವ ನಿರೀಕ್ಷೆಯಲ್ಲಿ ನಿರಾಸೆ

ಮಿಥುನ ರಾಶಿ(Gemini): ಮಿಥುನ ರಾಶಿಯ ಜನರು ದಸರಾದಲ್ಲಿ ಭಗವಾನ್ ಶ್ರೀರಾಮನಿಗೆ ಲಡ್ಡುಗಳನ್ನು ಅರ್ಪಿಸಬೇಕು. ಇದರೊಂದಿಗೆ ದೇವರ ದಯೆಯಿಂದ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಕರ್ಕ ರಾಶಿ(Cancer): ದಸರಾ ಪೂಜೆಯಲ್ಲಿ ಶ್ರೀರಾಮ ಮತ್ತು ಸೀತೆಗೆ ಸಿಹಿ ವೀಳ್ಯದೆಲೆಯನ್ನು ಅರ್ಪಿಸಬೇಕು. ಇದು ಈ ರಾಶಿಗೆ ತುಂಬಾ ಮಂಗಳಕರವಾದದ್ದಾಗಿದ್ದು, ಲಾಭದಾಯಕವಾಗಿದೆ.
ಸಿಂಹ ರಾಶಿ(Leo): ಸಿಂಹ ರಾಶಿಯ ಜನರು ವಿಜಯದಶಮಿಯಂದು ಭಗವಾನ್ ಶ್ರೀರಾಮನ ಆರಾಧನೆಯ ಸಮಯದಲ್ಲಿ 'ಓಂ ಜನಾರ್ದನಾಯ ನಮಃ' ಮಂತ್ರವನ್ನು ಪಠಿಸಬೇಕು ಹಾಗೂ ರಾಮನ ಶ್ಲೋಕಗಳನ್ನು ಹೇಳಬೇಕು.
ಕನ್ಯಾ ರಾಶಿ(Virgo): ವಿಜಯದಶಮಿಯ ದಿನದಂದು, ಈ ರಾಶಿಚಕ್ರದವರು ಹನುಮಾನ್ ಜಿಯನ್ನು 'ಓಂ ಶರ್ವೈ ನಮಃ' ಎಂಬ ಮಂತ್ರದಿಂದ ಪೂಜಿಸಬೇಕು. ಮತ್ತು ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧಯಿಂದ ನಮಸ್ಕರಿಸಬೇಕು.
ತುಲಾ ರಾಶಿ(Libra): ತುಲಾ ರಾಶಿಯವರು ವಿಜಯ ದಶಮಿಯ ದಿನದಂದು ಶ್ರೀರಾಮನಿಗೆ ಜೇನುತುಪ್ಪವನ್ನು ಅರ್ಪಿಸಬೇಕು ಮತ್ತು ಶ್ರೀ ರಾಮ ಭಜನೆಗಳನ್ನು ಮಾಡಬೇಕು.
ವೃಶ್ಚಿಕ ರಾಶಿ(Scorpio): ವಿಜಯದಶಮಿಯ ದಿನದಂದು ಈ ರಾಶಿಯವರು ಶ್ರೀರಾಮನ ಭಕ್ತನಾದ ಹನುಮಂತನನ್ನು ಪೂಜಿಸಿ ಮಲ್ಲಿಗೆ ಎಣ್ಣೆಯನ್ನು ಅರ್ಪಿಸಬೇಕು. ಜೊತೆಗೆ, ರಾಮಾಯಣದ ಕೆಲವಾದರೂ ಅಧ್ಯಾಯಗಳನ್ನು ಓದಬೇಕು.

ವಾರ ಭವಿಷ್ಯ: ಸಿಂಹಕ್ಕೆ ಹೆಚ್ಚುವ ಶತ್ರುಗಳು, ಧನಸ್ಸಿಗೆ ನಷ್ಟ ತುಂಬಿಕೊಡುವ ಸಮಯ

ಧನು ರಾಶಿ(Sagittarius): ಈ ರಾಶಿಯ ಜನರು ವಿಜಯದಶಮಿಯ ಪೂಜೆಯಲ್ಲಿ ತುಳಸಿ ದಳವನ್ನು ಅರ್ಪಿಸಬೇಕು ಮತ್ತು 'ಓಂ ದಂತಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು. ಇದರೊಂದಿಗೆ ದುರ್ಗೆಯ ಪೂಜೆಯನ್ನೂ ಮಾಡಬೇಕು.
ಮಕರ ರಾಶಿ(Capricorn): ವಿಜಯದಶಮಿಯಂದು ಶ್ರೀರಾಮ ಮತ್ತು ಸೀತಾ ಮಾತೆಯನ್ನು ಪೂಜಿಸಬೇಕು ಮತ್ತು ಅವರಿಗೆ ಅಕ್ಷತೆ ಅರ್ಪಿಸಬೇಕು. ಜೊತೆಗೆ, ಮನೆಗೆ ದಂಪತಿಯನ್ನು ಕರೆದು ಉಪಚರಿಸಬೇಕು.
ಕುಂಭ ರಾಶಿ(Aquarius): ವಿಜಯದಶಮಿಯ ದಿನದಂದು ಕುಂಭ ರಾಶಿಯವರು 'ಓಂ ವಾಯುಪುತ್ರಾಯ ನಮಃ' ಎಂದು ಜಪಿಸಬೇಕು. ಉತ್ತಮ ಲಾಭ ದೊರೆಯಲಿದೆ. 
ಮೀನ ರಾಶಿ(Pisces): ಮೀನ ರಾಶಿಯ ಜನರು ದಸರಾದ ದಿನ ರಾಮನ ದೇವಾಲಯದಲ್ಲಿ ಮೆಹಂದಿಯನ್ನು ಅರ್ಪಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios