Mars transit 2022: ಈ ರಾಶಿಗಳ ಲಕ್ ತಿರುಗಲು ಇನ್ನು ಹದಿನೈದೇ ದಿನ!
ಪಂಚಾಂಗದ ಪ್ರಕಾರ ಮಂಗಳ ಗ್ರಹವು ಅಕ್ಟೋಬರ್ 16ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದ ಯಾವ ರಾಶಿಗಳಿಗೆ ಲಾಭ, ಯಾವುದಕ್ಕೆ ನಷ್ಟ ನೋಡೋಣ..
ಜ್ಯೋತಿಷ್ಯದಲ್ಲಿ ಗ್ರಹಗಳ ಬದಲಾಗುತ್ತಿರುವ ಸ್ಥಾನಕ್ಕೆ ವಿಶೇಷ ಮಹತ್ವವಿದೆ. ಇದು ವ್ಯಕ್ತಿಯ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಮಂಗಳವು ಆಕ್ರಮಣಶೀಲತೆ, ಮುಖಾಮುಖಿ, ಶಕ್ತಿ, ಮಹತ್ವಾಕಾಂಕ್ಷೆ ಮತ್ತು ಹಠಾತ್ ಪ್ರವೃತ್ತಿಗೆ ಸಂಬಂಧಿಸಿದೆ. ಮಂಗಳವು ಸಾಮಾನ್ಯವಾಗಿ ಕ್ರೀಡೆಗಳು, ಸ್ಪರ್ಧೆಗಳು ಮತ್ತು ದೈಹಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಅದಾಗಿ 15 ದಿನಗಳ ನಂತರ ಮಂಗಳ ವಕ್ರಿ ಕೂಡ ಇರುತ್ತದೆ. ಈ ತಿಂಗಳು ಮಂಗಳವು ಮಿಥುನ ರಾಶಿಯಲ್ಲಿ ಸಾಗಲಿದೆ. ಮಿಥುನ ರಾಶಿಯಲ್ಲಿನ ಈ ಬದಲಾವಣೆಯು ಕೆಲ ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಲಿದೆ. ಮತ್ತೆ ಕೆಲವಕ್ಕೆ ಸಮಸ್ಯೆ ಹೆಚ್ಚಲಿದೆ.
ಪಂಚಾಂಗದ ಪ್ರಕಾರ ಮಂಗಳ ಗ್ರಹವು ಅಕ್ಟೋಬರ್ 16ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ನಂತರ ಅಕ್ಟೋಬರ್ 30ರಂದು 6.19 ಗಂಟೆಗೆ ಕುಜ ವಕ್ರಿಯಾಗಲಿದೆ. ಈ ಸ್ಥಿತಿಯಲ್ಲಿ ನವೆಂಬರ್ 13ರವರೆಗೆ ಮಂಗಳನು ಮಿಥುನ ರಾಶಿಯಲ್ಲಿ ಇರುತ್ತಾನೆ. ಕುಜನ ಈ ರಾಶಿ ಪರಿವರ್ತನೆಯಿಂದ ಈ ರಾಶಿಚಕ್ರ ಚಿಹ್ನೆಗಳು ದೊಡ್ಡ ಲಾಭಗಳನ್ನು ಪಡೆಯುತ್ತವೆ.
ಮೇಷ ರಾಶಿ(Aries)
ಮಂಗಳ ಸಂಚಾರವು ಮೇಷ ರಾಶಿಯವರಲ್ಲಿ ಧೈರ್ಯ ಮತ್ತು ತಾಳ್ಮೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆ ಪಡೆಯುತ್ತೀರಿ. ಅದೃಷ್ಟದ ಸಹಾಯದಿಂದ ನೀವು ಬಡ್ತಿ ಪಡೆಯಬಹುದು. ಆದಾಯವೂ ಹೆಚ್ಚಲಿದೆ.
ವೃಷಭ ರಾಶಿ(Taurus)
ಮಂಗಳನ ಸಂಚಾರವು ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಅವಧಿಯಲ್ಲಿ ನೀವು ಏನನ್ನಾದರೂ ಹೂಡಿಕೆ ಮಾಡಿದರೆ, ಲಾಭ ಇರುತ್ತದೆ. ಆದರೆ ಅನಗತ್ಯವಾಗಿ ಹಣ ಖರ್ಚು ಮಾಡಬೇಡಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದರೆ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಕೆಲವು ದೊಡ್ಡ ಕೆಲಸಗಳು ಪೂರ್ಣಗೊಳ್ಳಲಿವೆ.
ಕುಂಭ ರಾಶಿ(Aquarius)
ಕುಂಭ ರಾಶಿಯ ಜನರು ಸಹ ಧನಾತ್ಮಕ ಪರಿಣಾಮಗಳನ್ನು ಬೀರಲಿದ್ದಾರೆ. ಈ ರಾಶಿಯ ಜನರ ಜಾತಕದಲ್ಲಿ ಮಂಗಳವು ಐದನೇ ಮನೆಯಲ್ಲಿರುತ್ತಾನೆ. ಅದು ಮಕ್ಕಳು, ಶಿಕ್ಷಣ, ಬುದ್ಧಿವಂತಿಕೆ, ಪ್ರೀತಿಗೆ ಸಂಬಂಧಿಸಿದೆ. ಈ ಅವಧಿಯಲ್ಲಿ ನಿಮ್ಮ ದಕ್ಷತೆ ಹೆಚ್ಚಾಗುತ್ತದೆ.
ಸಿಂಹ ರಾಶಿ(Leo)
ಸಿಂಹ ರಾಶಿಯ ಜನರ ಆರ್ಥಿಕ ಭಾಗವು ಈ ಅವಧಿಯಲ್ಲಿ ಬಲವಾಗಿ ಉಳಿಯುತ್ತದೆ. ಈ ಸಮಯದಲ್ಲಿ ಲಾಭ ಮತ್ತು ಖರ್ಚು ಎರಡೂ ಇರುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲವು ಪೂರ್ಣವಾಗಿರುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡುವುದರಿಂದ ಸಂಬಳವೂ ಹೆಚ್ಚಾಗುತ್ತದೆ.
ಕನ್ಯಾ ರಾಶಿ(Virgo)
ಮಂಗಳ ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗ ದೊರೆಯಬಹುದು. ನೀವು ವ್ಯಾಪಾರದಲ್ಲಿ ಹೊಸದನ್ನು ಮಾಡಬಹುದು. ಹೊಸ ಅವಕಾಶಗಳು ಬರಲಿವೆ. ಆರ್ಥಿಕ ಪ್ರಗತಿ ಇರುತ್ತದೆ. ನೀವು ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಒಟ್ಟಾರೆ ಈ ಸಮಯ ಲಾಭವನ್ನು ಮಾತ್ರ ನೀಡುತ್ತದೆ.