Asianet Suvarna News Asianet Suvarna News

ಈ ನಾಲ್ಕು ಶಂಕರಾಚಾರ್ಯರು ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಗೈರು; ಕಾರಣವೇನು?

ಸನಾತನ ಹಿಂದೂ ಧರ್ಮದ ಪ್ರಮುಖ ನಾಲ್ಕು 'ಶಂಕರಾಚಾರ್ಯರು' ಎಂದು ಕರೆಯಲ್ಪಡುವ ಆಧ್ಯಾತ್ಮಿಕ ನಾಯಕರು ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ.

4 Shankaracharyas refusing to attend Ram Mandir event on Jan 22 skr
Author
First Published Jan 15, 2024, 10:21 AM IST

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸದಿರಲು 'ಶಂಕರಾಚಾರ್ಯರು' ಎಂದು ಕರೆಯಲ್ಪಡುವ ಸನಾತನ ಹಿಂದೂ ಧರ್ಮದ ಪ್ರಮುಖ ನಾಲ್ವರು ನಿರ್ಧರಿಸಿದ್ದಾರೆ. ಆದರೂ ಅವರಲ್ಲಿ ಇಬ್ಬರು ಸಮಾರಂಭವನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಿದ್ದಾರೆ. 

ನಾಲ್ವರು ಶಂಕರಾಚಾರ್ಯರು ಯಾರು?
ನಾಲ್ಕು ಪ್ರಮುಖ ಹಿಂದೂ ಮಠಗಳ ಮುಖ್ಯಸ್ಥರಾಗಿರುವ ಅಗ್ರ ನಾಲ್ಕು ಶಂಕರಾಚಾರ್ಯರು ಉತ್ತರಾಖಂಡ, ಒಡಿಶಾ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ನೆಲೆಸಿದ್ದಾರೆ.

ಶಂಕರಾಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದ ಸರಸ್ವತಿ
ಪುರಿ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಒಡಿಶಾದ ಜಗನ್ನಾಥ ಪುರಿಯಲ್ಲಿರುವ ಗೋವರ್ಧನ ಪೀಠದ 145ನೇ ಶಂಕರಾಚಾರ್ಯರು. ಅವರು ಫೆಬ್ರವರಿ 9, 1992 ರಂದು ಪೀಠದ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಶಂಕರಾಚಾರ್ಯ ಅವರು ರಾಮಮಂದಿರ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ, ಏಕೆಂದರೆ ಅದು ಧರ್ಮಗ್ರಂಥಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸಮಾರಂಭವು ರಾಜಕೀಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಇಂದು ಸಂಜೆ ಶಬರಿಮಲೆ ಮಕರಜ್ಯೋತಿ ದರ್ಶನ: ಜ್ಯೋತಿ ವೀಕ್ಷಿಸಲು ಸಕಲ ಏರ್ಪಾಡು

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಉತ್ತರಾಖಂಡದ ಜ್ಯೋತಿರ್ಮಠದಲ್ಲಿ ಎಲ್ಲಾ ಸಮಾರಂಭಗಳು ಮತ್ತು ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಇದು ಸಂತ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಪೀಠಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ, ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಹಿಂದೂ ಧರ್ಮದ ನಿಯಮಗಳನ್ನು ಅನುಸರಿಸದ ಕಾರಣ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. 'ನಾವು ಮೋದಿ ವಿರೋಧಿಗಳಲ್ಲ, ಆದರೆ ಅದೇ ಸಮಯದಲ್ಲಿ ನಮ್ಮ ಧರ್ಮ ಶಾಸ್ತ್ರಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.

ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ
ಶೃಂಗೇರಿ ಶಾರದಾ ಪೀಠದ ಶಂಕರಾಚಾರ್ಯ ಭಾರತೀ ತೀರ್ಥರು ಪೀಠದ 36ನೇ ಶಂಕರಾಚಾರ್ಯರು. ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಕಾರ್ಯಕ್ರಮಕ್ಕೆ ಅವರು ಹಾಜರಾಗುವುದಿಲ್ಲ ಎಂದು ಮಾಧ್ಯಮ ವರದಿಗಳು ಸೂಚಿಸಿದ್ದರೂ, ಶೃಂಗೇರಿ ಮಠವು ಇದನ್ನು ತಿರಸ್ಕರಿಸಿದೆ. ಶಂಕರಾಚಾರ್ಯರು ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದಿನ ಭವಿಷ್ಯ: ಸಂಕ್ರಾಂತಿಯ ಈ ದಿನ ನಿಮ್ಮ ರಾಶಿ ಫಲದಲ್ಲಿ ಏನಿದೆ?

ಶಂಕರಾಚಾರ್ಯ ಸದಾನಂದ ಸರಸ್ವತಿ
ಸದಾನಂದ ಸರಸ್ವತಿ ಪಶ್ಚಿಮ ದ್ವಾರಕಾ ಶಾರದಾಪೀಠದ ಶಂಕರಾಚಾರ್ಯರು- ಇದು ಸಂತ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಪೀಠಗಳಲ್ಲಿ ಒಂದಾಗಿದೆ. ಗುಜರಾತಿನ ದ್ವಾರಕಾದಲ್ಲಿರುವ ಇದನ್ನು ಕಾಳಿಕಾ ಮಠ ಎಂದೂ ಕರೆಯುತ್ತಾರೆ. ವರದಿಗಳ ಪ್ರಕಾರ, ಶಂಕರಾಚಾರ್ಯ ಸದಾನಂದ ಸರಸ್ವತಿ ಅವರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಆದಾಗ್ಯೂ,ಅವರಿದನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.

ಜನವರಿ 22ರಂದು ರಾಮ ಮಂದಿರದ ಶಂಕುಸ್ಥಾಪನೆ ನಡೆಯಲಿದ್ದು, ಜನವರಿ 16ರಂದು ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾಗಲಿವೆ. ಗಣ್ಯರು, ಸಂತರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರು ಆಗಮಿಸುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

Follow Us:
Download App:
  • android
  • ios