Asianet Suvarna News Asianet Suvarna News

ದಿನ ಭವಿಷ್ಯ: ಸಂಕ್ರಾಂತಿಯ ಈ ದಿನ ನಿಮ್ಮ ರಾಶಿ ಫಲದಲ್ಲಿ ಏನಿದೆ?

15 ಜನವರಿ 2024, ಸೋಮವಾರ, ಮಿಥುನಕ್ಕೆ ಪ್ರಯಾಣ ಸಾಧ್ಯತೆ, ಸಿಂಹಕ್ಕೆ ಸಂತಸದ ದಿನ

Daily Horoscope of January 15th 2024 in Kannada SKR
Author
First Published Jan 15, 2024, 5:05 AM IST

ಮೇಷ: ಬಯಸಿದ ಕೆಲಸವನ್ನು ಪೂರ್ಣಗೊಳಿಸುವುದು ಶಾಂತಿ ಮತ್ತು ಸಂತೋಷವನ್ನು ತರುತ್ತದೆ. ಹಬ್ಬದ ಸಡಗರದಲ್ಲಿ ದಿನ ವೇಗವಾಗಿ ಕಳೆದು ಹೋಗುತ್ತದೆ. ಬಂಧುಮಿತ್ರರ ಭೇಟಿ ಮನಸ್ಸಿಗೆ ಉಲ್ಲಾಸ ತರುತ್ತದೆ. ಸಂಚಾರ ಉಲ್ಲಂಘನೆ ಮಾಡಿದರೆ ಸಂಕಷ್ಟವಿದೆ. 

ವೃಷಭ: ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಹೆಚ್ಚಿನ ಕೆಲಸದ ಹೊರೆ ಹೈರಾಣಾಗಿಸಿದರೂ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಎರವಲು ಪಡೆದ ಹಣವನ್ನು ಹಿಂಪಡೆಯಬಹುದು, ಅದಕ್ಕಾಗಿ ಪ್ರಯತ್ನಿಸುತ್ತಿರಿ. 

ಮಿಥುನ: ನೀವು ಕೆಲವು ಕಾನೂನು ತೊಂದರೆಗೆ ಸಿಲುಕಬಹುದು. ಕುಟುಂಬದ ಸಹಕಾರದಿಂದ ಪರಿಹಾರ ಕಾಣಬಹುದು. ಆರೋಗ್ಯ ಸಮಸ್ಯೆಗಳು ಕೊಂಚ ಕಾಡಿಸಲಿವೆ. ಹೊರಾಂಗಣ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ದೂರ ಪ್ರಯಾಣ ಸಾಧ್ಯತೆಯೂ ಇದೆ.

ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳಿಗೆ ಮೇವು ತಿನ್ನಿಸಿದ ಪ್ರಧಾನಿ ಮೋದಿ!

ಕಟಕ: ಭವಿಷ್ಯದ ಗುರಿಯತ್ತ ನಿಮ್ಮ ಗಮನವನ್ನು ಇರಿಸಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಮನೆಯಲ್ಲಿ ಕೆಲವು ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಿಮ್ಮನ್ನು ಬ್ಯುಸಿಯಾಗಿಸುತ್ತವೆ. 

ಸಿಂಹ: ಪ್ರಮುಖ ಒಪ್ಪಂದಗಳು ಆಗಬಹುದು. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಗಂಟಲಿನಲ್ಲಿ ಕೆಲವು ರೀತಿಯ ಸೋಂಕಿನ ಸಮಸ್ಯೆ ಇರಬಹುದು. ಹಣದ ವ್ಯವಹಾರ ಲಾಭ ತರಲಿದೆ. ಸಾಕುಪ್ರಾಣಿಗಳ ಆರೋಗ್ಯದ ಕಡೆ ಗಮನ ವಹಿಸಿ. 

ಕನ್ಯಾ: ನಿಮ್ಮ ಸಕಾರಾತ್ಮಕ ಮತ್ತು ಸಮತೋಲಿತ ಚಿಂತನೆಯು ಖಂಡಿತವಾಗಿಯೂ  ಕೆಲವು ಸಮಯದಿಂದ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತದೆ. ಸದ್ಯಕ್ಕೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಭವಿಷ್ಯದ ಯೋಜನೆಗಳನ್ನು ತಪ್ಪಿಸಿ. ವೈವಾಹಿಕ ಜೀವನ ಸಾಮಾನ್ಯವಾಗಿರುತ್ತದೆ. 

ತುಲಾ: ಒತ್ತಡ ಮತ್ತು ಆತಂಕವು ನಿದ್ರಾಹೀನತೆಯಂತಹ ದೂರುಗಳಿಗೆ ಕಾರಣವಾಗಬಹುದು. ನಿಮ್ಮ ವೈಯಕ್ತಿಕ ವ್ಯವಹಾರಗಳನ್ನು ಬಹಿರಂಗಪಡಿಸಬೇಡಿ. ಸಂಗಾತಿಯೊಂದಿಗೆ ಜಗಳವಿದ್ದರೆ ಮಾತುಕತೆ ಮೂಲಕ ರಾಜಿ ಮಾಡಿಕೊಳ್ಳಿ. ಅದೇ ಸರಿಯಾದ ನಿರ್ಧಾರವಾಗಿರುತ್ತದೆ. 

ವೃಶ್ಚಿಕ: ಅಸಾಧ್ಯವಾದ ಕೆಲಸವು ಹಠಾತ್ ಪೂರ್ಣಗೊಂಡು ಹೆಚ್ಚಿನ ತೃಪ್ತಿಯನ್ನು ತರುತ್ತದೆ. ಮನೆ ಸೌಕರ್ಯಗಳಿಗೆ ಖರ್ಚು ಮಾಡುವಾಗ ನಿಮ್ಮ ಬಜೆಟ್ ಬಗ್ಗೆ ಗಮನವಿರಲಿ. ನೆರೆಹೊರೆಯವರೊಂದಿಗೆ ಕೆಲವು ರೀತಿಯ ಜಗಳ ಅಥವಾ ವಾದ ಇರಬಹುದು. ಸಂಬಂಧದಲ್ಲಿ ಉದ್ವಿಗ್ನತೆ ಇರುತ್ತದೆ. 

ಯಾವುದೇ ತಿಂಗಳ 16ರಂದು ಹುಟ್ಟಿದವರ ಸ್ವಭಾವ ಹೇಗೆ? ಅದಿತೆ ಹೇಳ್ತಾರೆ ಕೇಳಿ..

ಧನು: ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಮತ್ತು ಮಧುಮೇಹ ಹೊಂದಿರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಹಾರದಲ್ಲಿ ಸ್ಟ್ರಿಕ್ಟ್ ಡಯಟ್ ಅನುಸರಿಸಬೇಕು. ಮಕ್ಕಳ ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳು ಆಗಲಿವೆ.

ಮಕರ: ನಿಮ್ಮ ಶ್ರಮ ಮತ್ತು ಪ್ರಯತ್ನಗಳು ಫಲಪ್ರದವಾಗುತ್ತವೆ. ಪತಿ ಪತ್ನಿ ಸಂಬಂಧ ಸಮರಸದಿಂದ ಕೂಡಿರುತ್ತದೆ. ಗೆಳೆಯರ ಭೇಟಿ, ಹೊರಾಂಗಣ ಚಟುವಟಿಕೆಗಳು ಸಂತಸ ತರುತ್ತದೆ. ವಾಹನ ಓಡಿಸುವಾಗ ವಿಶೇಷ ಜಾಗರೂಕತೆ ಅಗತ್ಯ. 

ಕುಂಭ: ನಿಮ್ಮ ಆತ್ಮವಿಶ್ವಾಸದಿಂದ ಕೆಲವು ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳು ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ವೃತ್ತಿ ಮತ್ತು ಅಧ್ಯಯನದೊಂದಿಗೆ ಆಟವಾಡಬಾರದು. ಬೆನ್ನು, ಕಾಲು ನೋವು ಕಾಡಬಹುದು.

ಮೀನ: ನಿಕಟ ಸಂಬಂಧಿಗಳೊಂದಿಗೆ ನಡೆಯುತ್ತಿರುವ ಅಪಶ್ರುತಿ ದೂರವಾಗುತ್ತದೆ. ಹೊಸ ನಿವೇಶನ ಖರೀದಿ ಸಾಧ್ಯತೆ ಇದೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಬಹುದು. ಆತ್ಮೀಯ ಸ್ನೇಹಿತನ ಬಗ್ಗೆ ಅಹಿತಕರ ಮಾಹಿತಿ ಕಿವಿಗೆ ಬೀಳಬಹುದು. 

Follow Us:
Download App:
  • android
  • ios