Asianet Suvarna News Asianet Suvarna News

ಇಂದು ಸಂಜೆ ಶಬರಿಮಲೆ ಮಕರಜ್ಯೋತಿ ದರ್ಶನ: ಜ್ಯೋತಿ ವೀಕ್ಷಿಸಲು ಸಕಲ ಏರ್ಪಾಡು

ಇಂದು ಮಕರ ಸಂಕ್ರಾಂತಿ ಶುಭದಿನದಂದು ಶ್ರೀ ಅಯ್ಯಪ್ಪ ಕ್ಷೇತ್ರವಾದ ಶಬರಿಮಲೆಯಲ್ಲಿ ಸಂಜೆ ಮಕರಜ್ಯೋತಿ ದರ್ಶನವಾಗಲಿದೆ. ಹೀಗಾಗಿ, ಮಕರವಿಳಕ್ಕು ಆಚರಣೆ ಮತ್ತು ಮಕರಜ್ಯೋತಿ ದರ್ಶನಕ್ಕಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

Makar Sankranti today evening Sabarimala, Sri Ayyappa Kshetra Makarjyoti Darshan held All arrangements made to view jyoti akb
Author
First Published Jan 15, 2024, 9:47 AM IST

ಪಟ್ಟಣಂತಿಟ್ಟ: ಇಂದು ಮಕರ ಸಂಕ್ರಾಂತಿ ಶುಭದಿನದಂದು ಶ್ರೀ ಅಯ್ಯಪ್ಪ ಕ್ಷೇತ್ರವಾದ ಶಬರಿಮಲೆಯಲ್ಲಿ ಸಂಜೆ ಮಕರಜ್ಯೋತಿ ದರ್ಶನವಾಗಲಿದೆ. ಹೀಗಾಗಿ, ಮಕರವಿಳಕ್ಕು ಆಚರಣೆ ಮತ್ತು ಮಕರಜ್ಯೋತಿ ದರ್ಶನಕ್ಕಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಮಾಧ್ಯಮಗಳ ಜೊತೆ ಈ ಬಗ್ಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಪಿ.ಎಸ್‌. ಪ್ರಶಾಂತ್‌, ಮರಕವಿಳಕ್ಕು ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಹೆಚ್ಚಿನ ಜನರು ಸೇರಲಿದ್ದಾರೆ. ಅಲ್ಲದೇ ಸೋಮವಾರ ಮಕರಜ್ಯೋತಿ ದರ್ಶನವೂ ಸಹ ಇರುವುದರಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೀಡುವ ಸೂಚನೆಯನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೇ ಈ ಸಮಯದಲ್ಲಿ ಭಕ್ತರಿಗೆ ಹಂಚಲು ತಮಿಳುನಾಡಿನ ಹಿಂದೂ ಚಾರಿಟೇಬಲ್‌ ಟ್ರಸ್ಟ್‌ವೊಂದು 80 ಲಕ್ಷ ಬಿಸ್ಕತ್‌ಗಳನ್ನು ದಾನ ನೀಡಿದೆ. ಇದನ್ನು ಸೋಮವಾರ ಔಷಧಯುಕ್ತ ನೀರಿನ ಜೊತೆಗೆ ಭಕ್ತರಿಗೆ ಹಂಚಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಗುಜರಾತಲ್ಲಿ ರಸ್ತೆ ಬದಿ ನಮಾಜ್‌ ಮಾಡಿದ ಲಾರಿ ಚಾಲಕ ಬಂಧನ

ಪಾಲನ್‌ಪುರ: ಪೂರ್ವಾನುಮತಿ ಪಡೆಯದೇ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ನಮಾಜ್‌ ಮಾಡುತ್ತಿದ್ದ ಎಂಬ ಕಾರಣಕ್ಕೆ ಲಾರಿ ಚಾಲಕನೊಬ್ಬನನ್ನು ಬಂಧಿಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಚಾಲಕ ಬಚಲ್‌ ಖಾನ್‌ (37) ರಸ್ತೆ ಬದಿಯಲ್ಲಿ ನಮಾಜ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಬಾನಸ್‌ಕಾಂಥ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಚಾರ ದಟ್ಟಣೆ ಇರುವ ರಸ್ತೆಯಲ್ಲೇ ಟ್ರಕ್‌ ನಿಲ್ಲಿಸಿ ಅದರ ಎದುರು ಖಾನ್‌ ನಮಾಜ್‌ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈತನ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ಕೆಲಸ, ಸಾರ್ವಜನಿಕ ಅಧಿಕಾರಿಗಳಿಗೆ ತೊಂದರೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆ ಭಕ್ತರಿಗೆ ಆಶ್ರಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ತಿತಿಮತಿ ಜಾಮಾ ಮಸೀದಿ!

ಬೇಡಿಕೆ ಹೆಚ್ಚಾದ ಹಿನ್ನೆಲೆ: ರಾಮಚರಿತ ಮಾನಸ ಫ್ರೀ ಡೌನ್‌ಲೋಡ್‌

ಗೋರಖ್‌ಪುರ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಬೆನ್ನಲ್ಲೇ ಲಕ್ಷ ಲಕ್ಷ ಶ್ರೀರಾಮಚರಿತ ಮಾನಸ ಪುಸ್ತಕಗಳಿಗೆ ಬೇಡಿಕೆ ಬರುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲವಾದ್ದರಿಂದ ನಮ್ಮ ವೆಬ್‌ಸೈಟ್‌ನಲ್ಲಿ ಶ್ರೀರಾಮಚರಿತಮಾನಸವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಅನುಮತಿಸಿದ್ದೇವೆ ಎಂದು ವಿಶ್ವದ ಅತಿ ದೊಡ್ಡ ಪ್ರಕಾಶಕರಲ್ಲಿ ಒಬ್ಬರಾದ ಉತ್ತರ ಪ್ರದೇಶದ ಗೋರಖ್‌ಪುರ್‌ನ ಗೀತಾ ಪ್ರೆಸ್‌ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಗೀತಾ ಪ್ರೆಸ್‌ನ ಅಧಿಕಾರಿಯೊಬ್ಬರು ಗೀತಾ ಪ್ರೆಸ್ ವೆಬ್‌ಸೈಟ್‌ಗೆ ರಾಮಚರಿತಮಾನಸವನ್ನು ಅಪ್‌ಲೋಡ್ ಮಾಡುತ್ತಿದ್ದೇವೆ. ಮಂಗಳವಾರದಿಂದ ಇದು ಉಚಿತ ಡೌನ್‌ಲೋಡ್‌ಗೆ ಲಭ್ಯವಿರುತ್ತದೆ. 15 ದಿನಗಳವರೆಗೆ ಈ ಸೇವೆಯನ್ನು ಒದಗಿಸುತ್ತೇವೆ. 50,000 ಜನರಿಗೆ ಡೌನ್‌ಲೋಡ್ ಮಾಡಲು ಅವಕಾಶ ನೀಡುತ್ತೇವೆ. ಈ ಸೇವೆ ವಿಸ್ತರಿಸುತ್ತೇವೆ ಎಂದಿದ್ದಾರೆ.

ಶಬರಿಮಲೆ ಅಯ್ಯಪ್ಪ ಮಾಲಾಧಾರಿಗಳ ಕಾರು ಅಪಘಾತ: ಒಬ್ಬ ಸಾವು, ಮೂವರ ಸ್ಥಿತಿ ಗಂಭೀರ

Follow Us:
Download App:
  • android
  • ios