Holi 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!

ಹೋಳಿ ಹಬ್ಬ ಹತ್ತಿರ ಬರ್ತಿದೆ. ಅದಕ್ಕೆ ಸಿದ್ಧತೆ ನಡೆಯುತ್ತಿದೆ. ಹೋಳಿ ಹಬ್ಬದಂದು ಬಣ್ಣ ಎರೆಚಲು ಈಗಿನಿಂದ್ಲೇ ಪ್ಲಾನ್ ಶುರುವಾಗಿದೆ. ಆದ್ರೆ ಭಾರತದ ಒಂದು ನಗರದಲ್ಲಿ ಈಗಾಗಲೇ ಹೋಳಿ ಹಬ್ಬ ಆರಂಭವಾಗಿದೆ. ಅದೆಲ್ಲಿ ಗೊತ್ತಾ?
 

12 day Holi Festival Is Held In This City

ಹೋಳಿ (Holi) ಬಣ್ಣ (Color)ಗಳ ಹಬ್ಬ (Festival). ಈ ಬಾರಿ ಮಾರ್ಚ್ 17-18 ರಂದು ಹೋಳಿ ಹಬ್ಬವನ್ನು ಆಚರಿಸಲಾಗ್ತಿದೆ. ಹೋಳಿ ಹಬ್ಬವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಾರೆ. ಎಲ್ಲಿ ನೋಡಿದ್ರೂ ಬಣ್ಣಗಳು ಕಂಗೊಳಿಸಲಿವೆ. ಈ ಬಾರಿ ಹೋಳಿ ಆಚರಣೆಗೆ ತಯಾರಿ ನಡೆಯುತ್ತಿದೆ. ಅಂದ ಹಾಗೆ, ಈ ಬಣ್ಣಗಳ ಹಬ್ಬ ಹೋಳಿಯನ್ನು ಮುಖ್ಯವಾಗಿ ಎರಡು ದಿನಗಳವರೆಗೆ ಆಚರಿಸಲಾಗುತ್ತದೆ. ಇದರಲ್ಲಿ ಕಾಮ ದಹನ ಮೊದಲ ದಿನ ನಡೆಯುತ್ತದೆ ಮತ್ತು ಹೋಳಿಯನ್ನು ಮರುದಿನ ಬಣ್ಣಗಳೊಂದಿಗೆ ಆಡಲಾಗುತ್ತದೆ.

ಭಾರತ ವೈವಿಧ್ಯಮಯ ದೇಶ. ಇಲ್ಲಿ ಅನೇಕ ಸಂಪ್ರದಾಯಗಳು ಬೆರೆತಿವೆ. ಹೋಳಿಯನ್ನೂ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹೋಳಿಯನ್ನು 12 ದಿನಗಳ ಕಾಲ ಆಚರಿಸುವ ನಗರವೂ ಇದೆ. ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಜನರು ಆಗಮಿಸುತ್ತಾರೆ. ಈಗಾಗಲೇ ಈ ವರ್ಷದ ಹೋಳಿ ಸಡಗರ ಅಲ್ಲಿ ಶುರುವಾಗಿದೆ. 12 ದಿನಗಳ ಹೋಳಿ ಹಬ್ಬ ಮಾರ್ಚ್ 7 ರಿಂದ ಆರಂಭವಾಗಿದೆ. ಮಾರ್ಚ್ 18 ರವರೆಗೆ ಹೋಳಿ ಹಬ್ಬ ನಡೆಯಲಿದೆ. ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಹೋಳಿ ಹಬ್ಬವನ್ನು ಜನರು ಆಚರಿಸಿಲ್ಲ. ಈ ಬಾರಿಯೂ ಕೊರೊನಾ ನಿಯಮಗಳನ್ನು ಪಾಲಿಸುತ್ತಲೇ ಹಬ್ಬ ಆಚರಿಸಬೇಕು. ಆದ್ರೆ ಇಷ್ಟು ದಿನ ಮನೆಯಲ್ಲಿದ್ದು ಬೋರ್ ಆಗಿರೋರು, ಮನೆಯಿಂದ ಹೊರಗೆ ಹೋಳಿ ಆಚರಿಸಬೇಕೆಂಬ ಪ್ಲಾನ್ ಮಾಡ್ತಿರುವವರಿಗೆ ಈಗ್ಲೂ ಅವಕಾಶವಿದೆ.  12 ದಿನಗಳ ಹೋಳಿ ಹಬ್ಬ ನಡೆಯುವ ಜಾಗಕ್ಕೆ ನೀವೂ ಹೋಗಿ ಎಂಜಾಯ್ ಮಾಡ್ಬಹುದು. ಇಂದು ನಾವು 12 ದಿನಗಳ ಹೋಳಿ ಹಬ್ಬ ಎಲ್ಲಿ ನಡೆಯುತ್ತಿದೆ ಮತ್ತು ಆಚರಣೆ ಹೇಗಿರುತ್ತದೆ ಎಂಬುದನ್ನು ಹೇಳ್ತೇವೆ.  

12 ದಿನಗಳ ಹೋಳಿ ಎಲ್ಲಿ ಆಚರಿಸಲಾಗುತ್ತದೆ?
ರಾಜಸ್ಥಾನದ ಅಜ್ಮೇರ್‌ನಲ್ಲಿ ಪುಷ್ಕರ್ ಎಂಬ ಹೆಸರಿನ ಹಿಂದೂ ಯಾತ್ರಾ ಸ್ಥಳವಿದೆ. ಪುಷ್ಕರದಲ್ಲಿ ಬ್ರಹ್ಮದೇವನ ಏಕೈಕ ದೇವಾಲಯವಿದೆ. ಈ ಯಾತ್ರಾ ನಗರದಲ್ಲಿ 12 ದಿನಗಳ ಕಾಲ ಹೋಳಿ ಹಬ್ಬ ಆಚರಿಸಲಾಗುತ್ತದೆ. ಮೊದಲೇ ಹೇಳಿದಂತೆ ಪುಷ್ಕರ್ ನಲ್ಲಿ ಹೋಳಿ ಸಂಭ್ರಮ ಆರಂಭವಾಗಿದೆ. ಇಲ್ಲಿನ ಲೇಬೆಲ್ಲಾ ಹೋಳಿ ಮಂಡಳದ ಆಶ್ರಯದಲ್ಲಿ ಪ್ರತಿದಿನ ವರಾಹ ಘಾಟ್ ಚೌಕದಲ್ಲಿ ಮಾರ್ಚ್ 7 ರಿಂದ ಮಾರ್ಚ್ 18 ರವರೆಗೆ ಹೋಳಿ ಹಬ್ಬ ನಡೆಯಲಿದೆ. 

BIJLI MAHADEV TEMPLE: 12 ವರ್ಷಗಳಿಗೊಮ್ಮೆ ಸಿಡಿಲಿಗೆ ಒಡೆವ ಶಿವಲಿಂಗ!

ಪುಷ್ಕರದಲ್ಲಿ ಹೋಳಿ ಹಬ್ಬದ ಆಚರಣೆ ಹೇಗಿರುತ್ತದೆ? : ಇಲ್ಲಿ ಹೋಳಿ ಹಬ್ಬವನ್ನು ಬರೀ ಬಣ್ಣಗಳ ಮೂಲಕ ಮಾತ್ರ ಆಚರಿಸುವುದಿಲ್ಲ. ಪ್ರತಿ ದಿನ ಒಂದೊಂದು ವಿಶೇಷ ಕಾರ್ಯಕ್ರಮಗಳಿರುತ್ತವೆ. ಸಂಗೀತ ಕಾರ್ಯಕ್ರಮಗಳು, ವರ್ಣರಂಜಿತ ಕಾರ್ಯಕ್ರಮಗಳು, ರಾಜಸ್ಥಾನದ ಸಾಂಪ್ರದಾಯಿಕ ನೃತ್ಯ ದಾಂಡಿಯಾ, ಚಾಂಗ್ ಬೀಟ್ ನಲ್ಲಿ ನೃತ್ಯ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳಲು ದೇಶೀಯ ಪ್ರವಾಸಿಗರು ಮಾತ್ರವಲ್ಲ ವಿದೇಶಿ ಪ್ರವಾಸಿಗರು ಕೂಡ ಇಲ್ಲಿಗೆ ಬರ್ತಾರೆ.  

Gemology: ರಾಹು ಗ್ರಹದ ಕೆಟ್ಟ ಪ್ರಭಾವದಿಂದ ಪಾರಾಗಲು ಧರಿಸಿ ಈ ರತ್ನ

ಪುಷ್ಕರದಲ್ಲಿ ಹೋಳಿ : ಈ ವರ್ಷವೂ ಅನೇಕ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಅಲ್ಲಿನ ಆಡಳಿತಮಂಡಳಿ ಹೇಳಿದೆ. ಹೋಳಿ ದಹನದ  ಮಧ್ಯರಾತ್ರಿ ಸಾಂಪ್ರದಾಯಿಕ ನೃತ್ಯಗಳು ನಡೆಯಲಿವೆಯಂತೆ. ಮಾರ್ಚ್ 17 ರಂದು ಕಾಮ ದಹನ ನಡೆಯಲಿದೆ. ಮಾರ್ಚ್ 18 ರಂದು ವಿಶ್ವ ಪ್ರಸಿದ್ಧ ಪುಷ್ಕರ್ ಕಿ ಹೋಳಿ ಆಚರಿಸಲಾಗುವುದು.  
ಪುಷ್ಕರನ ಹೋಳಿ ಇನ್ನೊಂದು ಕಾರಣಕ್ಕಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷ ಕಪ್ಡಾ ಫಾಡ್ ಹೋಳಿ ಆಡಲಾಗುತ್ತದೆ. ಆದರೆ ಈ ಬಾರಿ ಕೋವಿಡ್  ಗಮನದಲ್ಲಿಟ್ಟುಕೊಂಡು ಕಪ್ಡಾ ಫಾಡ್ ಹೋಳಿ ಆಯೋಜಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Latest Videos
Follow Us:
Download App:
  • android
  • ios