Bijli Mahadev temple: 12 ವರ್ಷಗಳಿಗೊಮ್ಮೆ ಸಿಡಿಲಿಗೆ ಒಡೆವ ಶಿವಲಿಂಗ!
ಈ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಿಂಚು ಹೊಡೆದು ಶಿವಲಿಂಗ ಹೋಳಾಗುತ್ತದೆ. ಆದರೆ, ಮತ್ತೇನೂ ಹಾನಿಯಾಗುವುದಿಲ್ಲ. ಇದರ ಹಿಂದಿನ ಕಾರಣವೇನು, ಪೌರಾಣಿಕ ಕತೆಯೇನು, ಎಲ್ಲಿದೆ ಈ ದೇವಾಲಯ- ಎಲ್ಲ ತಿಳ್ಕೋಬೇಕಾ? ಇಲ್ಲಿದೆ ವಿವರ.
ಭಾರತ(India)ದಲ್ಲಿ ಪ್ರಸಿದ್ಧ ದೇವಾಲಯಗಳ(temples) ಸಂಖ್ಯೆಯೇನು ಕಡಿಮೆಯಿಲ್ಲ. ಕೆಲ ದೇವಾಲಯಗಳು ಪುರಾಣ ಹಿನ್ನೆಲೆಯಿಂದ ಪ್ರಸಿದ್ಧಿ ಪಡೆದಿದ್ದರೆ ಮತ್ತೆ ಕೆಲವು ತಮ್ಮ ವಾಸ್ತುಶಿಲ್ಪಕ್ಕಾಗಿ ಹೆಸರಾಗಿವೆ. ಇನ್ನೂ ಕೆಲವು ಅಲ್ಲಿ ಸಂಭವಿಸುವ ಪವಾಡ(miracle)ಕ್ಕಾಗಿ ಹೆಸರಾಗಿವೆ. ಇದೂ ಕೂಡಾ ಹಾಗೆ ಪವಾಡಕ್ಕಾಗಿ ಹೆಸರಾಗಿರುವ ಶಿವಧಾಮ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶಿವಲಿಂಗದ ಮೇಲೆ ಸಿಡಿಲು ಬಡಿಯುತ್ತದೆ. ಉಳಿದಂತೆ ಮತ್ತೇನೂ ಹಾನಿಯಾಗುವುದಿಲ್ಲ. ಅರೆ! ಎಷ್ಟೊಂದು ವಿಶೇಷವಾಗಿದೆಯಲ್ಲವೇ? ಇದೆಲ್ಲ ಹೇಗೆ ಸಾಧ್ಯ? ಯಾವುದೀ ದೇವಾಲಯ? ಎಲ್ಲಿದೆ? ಎಲ್ಲ ವಿವರ ನೀಡುತ್ತೇವೆ ಬನ್ನಿ.
ಇದು ತನ್ನ ಪವಾಡದಿಂದಾಗಿ ಬಿಜ್ಲಿ ಮಹಾದೇವ ದೇವಾಲಯ ಎಂದೇ ಹೆಸರಾಗಿದೆ. ಹಿಮಾಚಲದ ಕುಲುವಿನಲ್ಲಿ ಈ ದೇವಾಲಯವಿದೆ. ಇದು 2460 ಮೀ ಎತ್ತರದಲ್ಲಿದ್ದು, ಕುಲು ಜಿಲ್ಲೆಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ತಲುಪಲು ಭಕ್ತರು 3 ಕಿಲೋಮೀಟರ್ ಚಾರಣ ಮಾಡಲೇಬೇಕು.
ಹಿಮಾಲಯದ ಎಲ್ಲ ಪರ್ವತಗಳನ್ನೂ ನಾವು ದೇವರ ಆಲಯಗಳಾಗಿಯೇ ಕಾಣುತ್ತೇವೆ. ಕುಲುವಿನ ಈ ದೇವಾಲಯಕ್ಕೂ ಸ್ಥಳಪುರಾಣವಿದೆ. ಸುಮಾರು ಸಾವಿರ ವರ್ಷಗಳ ಹಿಂದೆ, ಈ ಸ್ಥಳದಲ್ಲಿ ಕುಲಾಂತಕ್ ಎಂಬ ರಾಕ್ಷಸ(demon)ನೊಬ್ಬ ವಾಸಿಸುತ್ತಿದ್ದ. ಒಮ್ಮೆ ಆತ ಅಲ್ಲಿನ ಜನರನ್ನು ಸಾಯಿಸುವ ಯೋಚನೆಯಿಂದ ತಾನು ದೊಡ್ಡ ಹೆಬ್ಬಾವಾಗಿ ಮಲಗಿ ಬೀಸ್ ನದಿಯನ್ನು ತಡೆದು ನಿಲ್ಲಿಸಿದ. ಇದನ್ನು ನೋಡಿದ ಸ್ಥಳೀಯರು ಪರಮೇಶ್ವರ(Lord Shiva)ನಲ್ಲಿ ತಮ್ಮ ರಕ್ಷಣೆಗಾಗಿ ಪ್ರಾರ್ಥಿಸಿದರು. ಆಗ ಬಂದ ಶಿವ ರಾಕ್ಷಸನ ಸಂಹಾರ ಮಾಡಿದ. ಆತನ ದೇಹ ಪರ್ವತವಾಗಿ ಬಿದ್ದಿತು. ಅವನ ಹೆಸರಲ್ಲೇ ಆ ಪರ್ವತ ಕುಲು ಎಂದು ಕರೆಸಿಕೊಂಡಿತು.
ಈ ರಾಶಿಯವರಿಗೆ ತಮ್ಮ ಕೆಟ್ಟ ಸ್ವಭಾವವೇ ಯಶಸ್ಸಿಗೆ ಅಡ್ಡಗಾಲು ಹಾಕುತ್ತದೆ!
ಇದಾಗುತ್ತಿದ್ದಂತೆಯೇ ಸ್ಥಳೀಯರು ಮಹಾದೇವನಲ್ಲಿ ಇಲ್ಲಿಯೇ ಉಳಿಯುವಂತೆ ಬೇಡಿಕೊಂಡರು. ಆಗ ಶಿವ ಲಿಂಗದ ರೂಪದಲ್ಲಿ ಇಲ್ಲಿ ಉದ್ಭವಿಸಿದ. ಕೂಡಲೇ ಗಗನದಲ್ಲಿ ಕಾರ್ಮೋಡ ಕವಿದು ಮಿಂಚು ಗುಡುಗುಗಳ ಮೇಲೈಸತೊಡಗಿದವು. ಭಯಗೊಂಡ ಜನರನ್ನು ಸಮಾಧಾನಿಸಲು ಶಿವ ತಾನೇ ಆ ಎಲ್ಲ ಸಿಡಿಲನ್ನು ಸ್ವೀಕರಿಸಿದ. ಇದರಿಂದ ಲಿಂಗ ಎರಡು ಹೋಳಾಯಿತು. ಆ ಹೋಳಾದ ಭಾಗಕ್ಕೆ ಹಿಟ್ಟು, ಬೆಣ್ಣೆ ತುಂಬಿದರು ಭಕ್ತರು. ತದನಂತರದಲ್ಲಿ ಪ್ರತಿ ವರ್ಷ ಇಲ್ಲಿ ಶಿವಲಿಂಗಕ್ಕೆ ಮಿಂಚು ಹೊಡೆಯುತ್ತದೆ. ಇನ್ನು 12 ವರ್ಷಗಳಿಗೊಮ್ಮೆ ದೊಡ್ಡದಾದ ಗುಡುಗು ಸಹಿತ ಮಳೆ, ಸಿಡಿಲು ಬಡಿಯುತ್ತದೆ. ಅದನ್ನು ಕೂಡಾ ಶಿವ ಈ ಊರಿನ ರಕ್ಷಣೆಗಾಗಿ ತಾನೇ ಸ್ವೀಕರಿಸುತ್ತಾನೆ ಎಂಬ ನಂಬಿಕೆಯಿದೆ. ಆಗ ಶಿವಲಿಂಗ ಹೋಳಾಗುತ್ತದೆ. ಅರ್ಚಕರು ಬೆಣ್ಣೆ ತುಂಬಿ ಶಿವನ ಗಾಯವನ್ನು ಆರೈಕೆ ಮಾಡುತ್ತಾರೆ. ಒಟ್ಟಿನಲ್ಲಿ ಕುಲುವಿನ ಜನರನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿದ್ದಾನೆ ಮಹದೇವ.
Sun transits in Pisces 2022: ಸೂರ್ಯ ಗೋಚಾರದಿಂದ ವೃಷಭ, ಮಿಥುನ ರಾಶಿಗೆ ಲಾಟ್ರಿ, ಉಳಿದ ರಾಶಿಗಳ ಕತೆಯೇನು?
ಸಮುದ್ರ ಮಥನದಿಂದ ಬಂದ ವಿಷವನ್ನು ತಾನು ಕುಡಿದು ವಿಷಕಂಠ ಎಂಬ ಹೆಸರು ಪಡೆದಂತೆಯೇ ಇಲ್ಲಿ ಮಿಂಚ(lightning)ನ್ನು ತಾನು ಹೊಡೆಸಿಕೊಂಡು ಭಕ್ತರನ್ನು ಈತ ರಕ್ಷಿಸುವುದರಿಂದಲೇ ಈತನಿಗೆ ಬಿಜ್ಲಿ ಮಹಾದೇವ ಎಂಬ ಹೆಸರು ಬಂದಿದೆ.
ಪ್ರತಿ ಶಿವರಾತ್ರಿಗೆ ಇಲ್ಲಿ ಬಹಳಷ್ಟು ಭಕ್ತರು ಜಮಾಯಿಸಿ ಮಹಾದೇವನ ಸ್ಮರಣೆ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ವಿಶೇಷ ಜಾತ್ರೆಗಳು ನಡೆಯುತ್ತವೆ. ತನ್ನ ಪವಾಡಗಳಿಗಾಗಿ ಭಾರತದಾದ್ಯಂತ ಖ್ಯಾತಿ ಪಡೆದಿದೆ ಈ ದೇವಾಲಯ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಅತ್ಯುತ್ತಮ ಪ್ರವಾಸ ತಾಣವೊಂದಕ್ಕೆ ಭೇಟಿ ಕೊಟ್ಟ ಸಂತೋಷವೂ ನಿಮ್ಮಲ್ಲಿ ತುಂಬುತ್ತದೆ. ಏಕೆಂದರೆ ಸುತ್ತಲೂ ಹಿಮಚ್ಛಾದಿತ ಪರ್ವತದ ಮೇಲೆ ಶಿವ ದೇವಾಲಯ ಸ್ಥಾಪಿತವಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.