ಫ್ಯಾಷನ್‌ಗೆ ಅಪ್‌ಡೇಟ್‌ ಆಗಿರುವುದು ಎಲ್ಲರಿಗೂ ಇಷ್ಟ. ಆದರೆ ಯಾರೂ ಟ್ರೆಂಡೀ ಬಟ್ಟೆಗಳಿಗಾಗಿ, ಮೇಕಪ್‌ ಐಟಂಗಳಿಗಾಗಿ ಬೇಕಾಬಿಟ್ಟಿ ದುಡ್ಡು ಸುರಿಯಲು ರೆಡಿಯಿಲ್ಲ. ಇಂಥವರಿಗೆಂದೇ ಕಡಿಮೆ ಬೆಲೆಯಲ್ಲಿ ಫ್ಯಾಷನೆಬಲ್‌ ಬಟ್ಟೆಗಳನ್ನು ಒದಗಿಸುವ ಸ್ಟೋರ್‌ಗಳು ಲಭ್ಯವಿರುತ್ತವೆ. ಅಂಥಾ ಸ್ಟೋರ್‌ಗಳಲ್ಲಿ ಒಂದಾದ ಝುಡಿಯೋ  ಪ್ರತಿ ನಿಮಿಷಕ್ಕೆ 90 ಟೀ ಶರ್ಟ್ಸ್‌, 20 ಡೆನಿಮ್‌ಗಳು, 19 ಪರ್ಫ್ಯೂಮ್‌ ಮಾರಾಟ ಮಾಡಿರುವುದಾಗಿ ಮಾಹಿತಿ ನೀಡಿದೆ. 

ಇತ್ತೀಚಿನ ವರ್ಷಗಳಲ್ಲಿ, ಟಾಟಾ ಗ್ರೂಪ್‌ನ ಬಜೆಟ್ ಸ್ನೇಹಿ ಬಟ್ಟೆ ಬ್ರ್ಯಾಂಡ್ ಝುಡಿಯೊ ಭಾರತೀಯ ಗ್ರಾಹಕರಿಗೆ ಹೆಚ್ಚು ಪ್ರಿಯವಾಗುತ್ತಿದೆ. ಟಾಟಾ ಗ್ರೂಪ್‌ನ ಫ್ಯಾಶನ್ ಸ್ಟೋರ್ ಆಗಿರುವ ಝುಡಿಯೊ 2023-24 (ಎಫ್‌ವೈ 24) ಹಣಕಾಸು ವರ್ಷದಲ್ಲಿ ಪ್ರತಿ ನಿಮಿಷಕ್ಕೆ 90 ಟೀ ಶರ್ಟ್‌ಗಳು ಮತ್ತು 17 ಲಿಪ್‌ಸ್ಟಿಕ್‌ಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಮಾತ್ರವಲ್ಲ ಪ್ರತಿ ನಿಮಿಷಕ್ಕೆ 20 ಡೆನಿಮ್‌ಗಳು, 19 ಪರ್ಫ್ಯೂಮ್‌ಗಳನ್ನು ಮಾರಾಟ ಮಾಡಿರುವುದಾಗಿ ಮಾಹಿತಿ ನೀಡಿದೆ. 

ತ್ರೈಮಾಸಿಕ ಲಾಭಕ್ಕೆ Zudio ಗಣನೀಯವಾಗಿ ಕೊಡುಗೆ ನೀಡಿದೆ. ಇದು ಕಳೆದ ವರ್ಷಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ಸಂಸ್ಥೆಯು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಝುಡಿಯೊದಲ್ಲಿ ಕಡಿಮೆ ಬೆಲೆಯಲ್ಲಿ ಬಟ್ಟೆ ದೊರಕುವ ಕಾರಣ ಯುವಜನತೆ ತಮ್ಮ ಬಜೆಟ್‌ನಲ್ಲಿ ಖರೀದಿಸಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 

ಐದು ವಾಷ್‌ನಲ್ಲೇ ಮಬ್ಬಾದ ದುಬಾರಿ ಜೀನ್ಸ್‌, ಆದಿತ್ಯ ಬಿರ್ಲಾ ಫ್ಯಾಷನ್‌ ಮೇಲೆ ಕೇಸು ಹಾಕಿ 5 ಸಾವಿರ ರೀಫಂಡ್‌ ಪಡೆದ!

ಬೇಡಿಕೆಗೆ ಅನುಗುಣವಾಗಿ, ಬ್ರಾಂಡ್ 2024ರಲ್ಲಿ 46 ನಗರಗಳಲ್ಲಿ ಹೊಸದಾಗಿ ಆರಂಭಗೊಂಡಿದೆ. 48 ನಗರಗಳಲ್ಲಿ ಸ್ಟೋರ್‌ಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗಿದೆ. Zudio ತನ್ನ ಪೋರ್ಟ್‌ಫೋಲಿಯೊಗೆ 203 ಹೊಸ ಸ್ಟೋರ್‌ಗಳನ್ನು ಸೇರಿಸಿತು ಮತ್ತು 10 ಸ್ಟೋರ್‌ಗಳನ್ನು ಏಕೀಕರಿಸಿತು ಎಂದು ತಿಳಿದುಬಂದಿದೆ.

ಮಾರ್ಚ್ 2024 ರ ಹೊತ್ತಿಗೆ, Zudio 164 ನಗರಗಳಲ್ಲಿ 545 ಮಳಿಗೆಗಳನ್ನು ಹೊಂದಿದೆ. ಅತಿ ಹೆಚ್ಚು ಝುಡಿಯೋ ಔಟ್‌ಲೆಟ್‌ಗಳು ಮಹಾರಾಷ್ಟ್ರದಲ್ಲಿದ್ದು ಇದು ಬರೋಬ್ಬರಿ 86 ಸ್ಟೋರ್‌ಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಬರುವ ಗುಜರಾತ್‌ನಲ್ಲಿ 82 ಸ್ಟೋರ್‌ಗಳಿವೆ. ಕರ್ನಾಟಕದಲ್ಲಿ 58 ಮತ್ತು ದೆಹಲಿಯಲ್ಲಿ 14 ಔಟ್‌ಲೆಟ್‌ಗಳನ್ನು ಜುಡಿಯೋ ಹೊಂದಿದೆ ಎಂದು ಮೇ 18 ರಂದು ಬಿಡುಗಡೆ ಮಾಡಿದ ವರದಿ ಹೇಳಿದೆ. ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ಮತ್ತು ಸಿಕ್ಕಿಂನಲ್ಲಿ ತಲಾ ಒಂದು ಮಳಿಗೆಗಳಿವೆ. 

ಮನುಷ್ಯ ಬಟ್ಟೆಗಳಿಗೆ ಬಳಸಿದ ಮೊದಲ ಬಣ್ಣ ಇದು, ಇದೇ ಈ ಜಗತ್ತಿನ ಅತಿ ಹಳೆಯ ಬಣ್ಣ!

ಟ್ರೆಂಟ್ ಅಂಗಸಂಸ್ಥೆಯಾದ ಬುಕರ್ ಇಂಡಿಯಾ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಫಿಯೋರಾ ಹೈಪರ್‌ಮಾರ್ಕೆಟ್ ಲಿಮಿಟೆಡ್ ಅಡಿಯಲ್ಲಿ ಝುಡಿಯೋ ಕಾರ್ಯನಿರ್ವಹಿಸುತ್ತದೆ. ಹೊಸ ಝಡಿಯೋ ಸ್ಟೋರ್‌ಗೆ ಹೂಡಿಕೆಯು ಸಾಮಾನ್ಯವಾಗಿ 3-4 ಕೋಟಿ ರೂ.ಗಳ ವರೆಗೆ ಇರುತ್ತದೆ

FY24 ರಲ್ಲಿ, Fiora Hypermarket Limited ಹಿಂದಿನ ವರ್ಷದ ಒಟ್ಟು ಆದಾಯ 187.25 ಕೋಟಿ ರೂ.ಗೆ ಹೋಲಿಸಿದರೆ ಒಟ್ಟು ಆದಾಯದಲ್ಲಿ 192.33 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿ ಮಾಡಿದೆ. ಕಂಪನಿಯ ಒಟ್ಟು ಸಮಗ್ರ ಆದಾಯವು ರೂ 12.47 ಕೋಟಿಗಳಷ್ಟಿತ್ತು, ಇದು ಹಿಂದಿನ ವರ್ಷದಲ್ಲಿ ರೂ 11.98 ಕೋಟಿಗಳ ಒಟ್ಟು ಸಮಗ್ರ ನಷ್ಟದಿಂದ ಗಮನಾರ್ಹ ಸುಧಾರಣೆಯಾಗಿದೆ.