ಐದು ವಾಷ್‌ನಲ್ಲೇ ಮಬ್ಬಾದ ದುಬಾರಿ ಜೀನ್ಸ್‌, ಆದಿತ್ಯ ಬಿರ್ಲಾ ಫ್ಯಾಷನ್‌ ಮೇಲೆ ಕೇಸು ಹಾಕಿ 5 ಸಾವಿರ ರೀಫಂಡ್‌ ಪಡೆದ!

ಸಾಮಾನ್ಯವಾಗಿ ನಾವು ಎಷ್ಟೇ ದುಡ್ಡು ಕೊಟ್ಟು ದುಬಾರಿ ಜೀನ್ಸ್‌ ತಂದರೂ ಅದು ಕೆಲವು ವರ್ಷಗಳ ಕಾಲ ಬರಲಿ ಎನ್ನುವ ಆಸೆ ಇರುತ್ತದೆ. ಆದರೆ, ಬೆಂಗಳೂರು ಮೂಲದ ವ್ಯಕ್ತಿಗೆ ಹಾಗಾಗಿಗಲ್ಲ. ದುಬಾರಿ ಬೆಲೆಕೊಟ್ಟು ತಂದ ಜೀನ್ಸ್‌ ಐದೇ ವಾಷ್‌ನಲ್ಲಿ ಮಬ್ಬಾಗಿದೆ. ಇದಕ್ಕಾಗಿ ಆತ ಮಾಡಿದ್ದೇನು ಅನ್ನೋದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ.
 

In Bengaluru Over Van Heusen Jeans Fading Man Sues Aditya Birla Fashion Gets Rs 5000 Refund san

ಬೆಂಗಳೂರು (ಫೆ.15): ದುಬಾರಿ ಬೆಲೆ ತೆತ್ತು ಜೀನ್ಸ್‌ ಖರೀದಿ ಮಾಡಿದ ಬಳಿಕ ಕೆಲವೇ ಕೆಲವು ವಾಷ್‌ಗಳಲ್ಲಿ ಅದು ಮಬ್ಬಾದಲ್ಲಿ ನಾವಾದಲ್ಲಿ ಅದನ್ನು ನಮ್ಮ ವಾರ್ಡ್‌ರೋಬ್‌ನಿಂದ ಹೊರಹಾಕುತ್ತೇವೆ. ಎಂಥಾ ಡಬ್ಬಾ ಜೀನ್ಸ್ ಇದು ಅಂತಾ ಆ ಬ್ರ್ಯಾಂಡ್‌ನ ಬೈದುಕೊಳ್ಳುತ್ತೇವೆ. ಆದರೆ, ಬೆಂಗಳೂರಿನ ಹರಿಹರನ್‌ ಬಾಬು ಎಕೆ ಹಾಗೆ ಮಾಡಿಲ್ಲ. ಬರೋಬ್ಬರಿ 4499 ರೂಪಾಯಿ ಕೊಟ್ಟು ವ್ಯಾನ್‌ ಹ್ಯೂಸನ್‌ ಕಂಪನಿಯ ಜೀನ್ಸ್‌ಅನ್ನು ಖರೀದಿಸಿದ್ದ ಇವರಿಗೆ ಐದು ವಾಷ್‌ಗಳನ್ನೇ ಇದು ಜೀನ್ಸ್‌ನ ಕಲರ್‌ ಮಬ್ಬಾಗಿದ್ದು ಕಂಡಿದೆ. ಇದಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಇವರಿಗೆ ಪ್ರಮುಖ ಗೆಲುವು ಸಿಕ್ಕಿದೆ. 2023ರ ಏಪ್ರಿಲ್‌ 16 ರಂದು ಆದಿತ್ಯ ಬಿರ್ಲಾ ಫ್ಯಾಶನ್‌ & ರಿಟೇಲ್‌ ಲಿಮಿಟೆಡ್‌ (ಎಬಿಎಫ್‌ಆರ್‌ಎಲ್‌) ಮೂಲಕ ಖರೀದಿ ಮಾಡಿದ್ದ ಜೀನ್ಸ್‌ ಮೂರೇ ತಿಂಗಳಲ್ಲಿ ಐದು ವಾಷ್‌ಗಳಲ್ಲೇ ಸಂಪೂರ್ಣ ಮಬ್ಬಾಗಿ ಹೋಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಹರಿಹರನ್‌, ಶೋರೂಮ್‌ಗೆ ದೂರು ನೀಡಿ ಇದರ ಮರುಪಾವತಿ ಮಾಡುವಂಗೆ ವಿನಂತಿ ಮಾಡಿದ್ದರು. ಆದರೆ, ಅಲ್ಲಿನ ಸಿಬ್ಬಂದಿ ಈ ಜೀನ್ಸ್‌ನ ನಿರ್ಮಾಣಕ್ಕೆ ಇಂಡಿಗೋ ಬಣ್ಣವನ್ನು ಬಳಕೆ ಮಾಡಲಾಗುತ್ತದೆ. ಕ್ರಮೇಣ ಇದರ ನೈಸರ್ಗಿಕ ಬಣ್ಣ ಮರೆಯಾಗುತ್ತದೆ ಎಂದು ತಿಳಿಸಿದ್ದರು. ಇದರಿಂದ ತೃಪ್ತಿ ಹೊಂದದ ಹರಿಹರನ್‌ ತನಗಾದ ಮೋಸದ ವಿರುದ್ಧ ಗ್ರಾಹಕ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಈ ಪ್ರಕರಣದ ಕಾನೂನು ಪ್ರಕ್ರಿಯೆಗಳು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಇದು ಅಂತ್ಯ ಕಂಡಿತ್ತು. ಗ್ರಾಹಕ ಪರಿಹಾರ ಆಯೋಗದ ನ್ಯಾಯಮೂರ್ತಿಗಳು ಆದಿತ್ಯ ಬಿರ್ಲಾ ಪ್ಯಾಶನ್ ಕಂಪನಿ ಗ್ರಾಹಕನಿಗೆ ಈ ಜೀನ್ಸ್‌ಅನ್ನು ವಾಶ್‌ ಮಾಡುವ ಕುರಿತಾದ ಸೂಚನೆಗಳನ್ನು ನೀಡಿಲ್ಲ.  ಇನ್ನು ಕಂಪನಿಗೆ ಈ ಕುರಿತಾಗಿ ಸಾಕಷ್ಟು ನೋಟಿಸ್‌ಗಳನ್ನು ನೀಡಲಾಗಿದ್ದರೂ, ಕಂಪನಿಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿಲ್ಲ. ಇನ್ನು ಜೀನ್ಸ್‌ ಖರೀದಿ ಮಾಡಿದ ವ್ಯಕ್ತಿ ಈ ಕುರಿತಾದ ಬಿಲ್‌ಅನ್ನೂ ನೀಡಿಲ್ಲ. ಕೊನೆಗೆ ಬೆಂಗಳೂರಿನ ಗ್ರಾಹಕ ಪರಿಹಾರ ಆಯೋಗವು ಜೀನ್ಸ್‌ನ ಹಣವನ್ನು (4016 ರೂಪಾಯಿ) ಹಾಗೂ ಹೆಚ್ಚುವರಿಯಾಗಿ 1 ಸಾವಿರ ರೂಪಾಯಿಯನ್ನು ಎರಡು ತಿಂಗಳ ಒಳಗಾಗಿ ಗ್ರಾಹಕನಿಗೆ ನೀಡಬೇಕು ಎಂದು ತೀರ್ಪು ನೀಡಿದೆ.

'ಇದು ರಾಮ ರಾಜ್ಯವೋ, ಹರಾಮ್‌ ರಾಜ್ಯವೋ..' ನಟ ಕಿಶೋರ್‌ ಟೀಕೆ!

ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ಭಾರತೀಯ ಫ್ಯಾಷನ್ ಮತ್ತು ರಿಟೇಲ್‌ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿದೆ. ಇದು ಆದಿತ್ಯ ಬಿರ್ಲಾ ಗ್ರೂಪ್‌ನ ಒಂದು ಭಾಗವಾಗಿದೆ, ಇದು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ABFRL ಔಪಚಾರಿಕ ಮತ್ತು ಸಾಂದರ್ಭಿಕ ಉಡುಗೆಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳನ್ನು ಪೂರೈಸುವ ಫ್ಯಾಷನ್ ಬ್ರಾಂಡ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೊವನ್ನು ನಿರ್ವಹಿಸುತ್ತದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ವ್ಯಾನ್ ಹ್ಯೂಸೆನ್, ಅಲೆನ್ ಸೋಲಿ, ಪ್ಯಾಂಟಲೂನ್ಸ್, ಪೀಟರ್ ಇಂಗ್ಲೆಂಡ್, ಮತ್ತು ಇತರವು ಸೇರಿವೆ. ಕಂಪನಿಯು ಉಡುಪು ಮತ್ತು ಪರಿಕರಗಳ ಉತ್ಪಾದನೆ, ವಿತರಣೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ, ಇದು ಭಾರತದಲ್ಲಿನ ಫ್ಯಾಷನ್ ಲ್ಯಾಂಡ್‌ಸ್ಕೇಪ್‌ಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

Chamarajanagar: ಪತ್ನಿಯ 'ಕರಿಮಣಿ ಮಾಲೀಕ ನೀನಲ್ಲ..' ರೀಲ್ಸ್‌, ಪತಿಯ ಆತ್ಮಹತ್ಯೆ!

Latest Videos
Follow Us:
Download App:
  • android
  • ios