ಹುಟ್ಟುತ್ತಲೇ ಈಕೆ ಯುವತಿ! ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್​-10ಗೆ ಏರಿರೋ ಭಾರತ ಸುಂದರಿಯ ರೋಚಕ ಸ್ಟೋರಿ

ಹುಟ್ಟುತ್ತಲೇ ಈಕೆ ಯುವತಿ! ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್​-10ಗೆ ಏರಿದ್ದಾಳೆ ಈ ಭಾರತ ಸುಂದರಿ ಜಾರಾ ಶತಾವರಿ. ಯಾರಿವಳು? ಇವಳ ಹಿನ್ನೆಲೆ ಏನು?
 

Zara Shatavari an AI generated model  top 10 finalists in the inaugural Miss AI Competition suc

 ಈ ಚಿತ್ರದಲ್ಲಿ ಕಾಣುತ್ತಿರುವ ಸುಂದರಿಯ ಹೆಸರು ಜಾರಾ ಶತಾವರಿ. ಭಾರತದಲ್ಲಿಯೇ ಹುಟ್ಟಿರೋ ಈಕೆಗೆ ಜಗತ್ತಿನ ಸೌಂದರ್ಯ ಸ್ಪರ್ಧೆಯಲ್ಲಿ ಈಗ ಉನ್ನತ ಸ್ಥಾನ ಸಿಕ್ಕಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಹಲವು ದೇಶಗಳ ಸುಂದರಿಯನ್ನು ಹಿಂದಿಕ್ಕಿ     ಟಾಪ್​ 10 ಸ್ಥಾನಕ್ಕೆ ಏರಿದ್ದಾಳೆ. ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಕುತೂಹಲದ ವಿಷಯ ಏನಪ್ಪಾ ಎಂದ್ರೆ ಇವಳು ಮನುಷ್ಯಳಲ್ಲ. ನಿಜ ನಿಜ... ಈ ರೂಪದರ್ಶಿ ಜಾರಾ ಶತಾವರಿ ಎಐ ಅಂದರೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ನಿಂದ) ಹುಟ್ಟಿರೋ ಯುವತಿ. ಅಂದರೆ ಹುಟ್ಟುತ್ತಲೇ ಈಕೆ ಯುವತಿ! ಮಿಸ್ ಎಐ ಸ್ಪರ್ಧೆಯಲ್ಲಿ ಅಗ್ರ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ ಜಾರಾ! 

ಅಷ್ಟಕ್ಕೂ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಯುಗ. ಕೃತಕ ಮನುಷ್ಯರು ವಿವಿಧ ಕ್ಷೇತ್ರಗಳಲ್ಲಿ ಲಗ್ಗೆ ಇಟ್ಟಾಗಿದೆ. ಹಲವರು ಇದರಿಂದಾಗಿ ಇದಾಗಲೇ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಹತ್ತಾರು ಮಂದಿ ಮಾಡುವ ಕೆಲಸವನ್ನು ಒಂದೇ ಮಾಡೆಲ್​ ಮಾಡುವಷ್ಟು ನೈಪುಣ್ಯ ಇರುವ ಹಿನ್ನೆಲೆಯಲ್ಲಿ, ಹಲವಾರು ಕ್ಷೇತ್ರಗಳಲ್ಲಿ ಎಐಗೆ ಅಗ್ರಸ್ಥಾನ ಸಿಗುತ್ತಿದೆ. ಇದೀಗ ಇದಕ್ಕಾಗಿಯೇ ಸೌಂದರ್ಯ ಸ್ಪರ್ಧೆಯನ್ನೂ ಇಡಲಾಗಿದೆ.  Fanvue ಆಯೋಜಿಸಿದ ಈ  ಸ್ಪರ್ಧೆಯು ಸೌಂದರ್ಯ, ತಂತ್ರಜ್ಞಾನ ಮತ್ತು ಸಾಮಾಜಿಕ ಪ್ರಭಾವ ಎಲ್ಲವನ್ನೂ ಒಳಗೊಂಡಂತಹ ಒಂದು ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾರತದ ಜಾರಾ ಟಾಪ್​ 10 ಸ್ಥಾನ ಪಡೆದಿದ್ದಾಳೆ.  ಈ ಸೌಂದರ್ಯ ಸ್ಪರ್ಧೆಯಲ್ಲಿ ಒಂದೂವರೆ ಸಾವಿಕ್ಕೂ ಅಧಿಕ ಅಂತರಾಷ್ಟ್ರೀಯ ಮಾಡೆಲ್​ಗಳನ್ನು ಹಿಂದಿಕ್ಕಿ ಇವಳು ಆಯ್ಕೆಯಾಗಿದ್ದಾಳೆ. ಕಳೆದ ಏಪ್ರಿಲ್‌ನಲ್ಲಿ ಪ್ರಾರಂಭವಾದ ಮಿಸ್ ಎಐ ಸ್ಪರ್ಧೆಯು ಈ ರೀತಿಯ ಮೊದಲನೆಯ ಸ್ಪರ್ಧೆಯನ್ನು ಏರ್ಪಡಿಸಿದೆ. ಇದನ್ನು ವರ್ಲ್ಡ್ ಎಐ ಕ್ರಿಯೇಟರ್ ಅವಾರ್ಡ್ಸ್ ಆಯೋಜಿಸಿದೆ. ಸ್ಪರ್ಧಿಗಳನ್ನು ಅವರ ಸೌಂದರ್ಯ, ತಾಂತ್ರಿಕ ಕೌಶಲ್ಯ ಮತ್ತು ಸಾಮಾಜಿಕ ಪ್ರಭಾವದ ಮೇಲೆ ಮೌಲ್ಯಮಾಪನ ಮಾಡುತ್ತಾರೆ., AI- ರಚಿತವಾದ ತೀರ್ಪುಗಾರರಾದ ಐತಾನಾ ಲೋಪೆಜ್ ಮತ್ತು ಎಮಿಲಿ ಪೆಲ್ಲೆಗ್ರಿನಿ ಸೇರಿದಂತೆ ನಾಲ್ಕು ತೀರ್ಪುಗಾರರಿದ್ದಾರೆ.

ರಾಜಾ ರಾಣಿ ಷೋ ಶೂಟಿಂಗ್​ ವೇಳೆ ಆ್ಯಂಕರ್​ ಅನುಪಮಾ ಬೆಳಿಗ್ಗೆಯಿಂದ ಏನೆಲ್ಲಾ ಮಾಡ್ತಾರೆ?

ಅಂದಹಾಗೆ, ಜಾರಾಳನ್ನು ತಯಾರು ಮಾಡಿದ್ದು, ಭಾರತೀಯ ಮೊಬೈಲ್ ಜಾಹೀರಾತು ಏಜೆನ್ಸಿಯ ಸಹ-ಸಂಸ್ಥಾಪಕ ರಾಹುಲ್ ಚೌಧರಿ. ಜಾರಾ ಇದಾಗಲೇ  ಈಗಾಗಲೇ ಇನ್​ಸ್ಟಾಗ್ರಾಮ್​ನಲ್ಲಿ ಸುಮಾರು 15 ಸಾವಿರ  ಫಾಲೋವರ್ಸ್​​ ಹೊಂದಿದ್ದಾಳೆ.  ಇದರಲ್ಲಿ ಜಾರಾ ವಿವಿಧ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾಳೆ. ವಿಶೇಷ ಎಂದರೆ  ದೀಪಾವಳಿಯನ್ನು ಆಚರಿಸುವ ಫೋಟೋ ಕೂಡ ಇದೆ.  ಅಷ್ಟಕ್ಕೇ ಮುಗಿಯುವುದಿಲ್ಲ ಇವಳ ಪ್ರೊಫೈಲ್​. ಭಾರತದ ಮೊದಲ AI ರಚಿತ ಬ್ರ್ಯಾಂಡ್ ರಾಯಭಾರಿ ಕೂಡ ಆಗಿದ್ದಾಳೆ ಜಾರಾ. ಈ ಮೂಲಕ  ಫ್ಯಾಷನ್  ಜಗತ್ತಿನಲ್ಲಿ ಟಾಪೆಸ್ಟ್​ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.  
 
ಅಷ್ಟಕ್ಕೂ ಸೌಂದರ್ಯ ಸ್ಪರ್ಧೆಯಲ್ಲಿ ಅಥವಾ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುವ ಬಹುತೇಕ ತಾರೆಯರೂ ಕೃತಕ ಮೇಕಪ್​ನಿಂದಲೇ ಸುಂದರಿಯಾಗಿ ಕಾಣುವುದು ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ ಎನ್ನುವುದು ನಿಜವಾದರೂ ತೆಳ್ಳಗೆ, ಬೆಳ್ಳಗೆ ಇದ್ದು, ಒಂದಿಷ್ಟು ಮೇಕಪ್​  ಮೆತ್ತಿಕೊಂಡರೆ ಅದೇ ಸೌಂದರ್ಯ ಎಂದು ಬಗೆಯುವ ದೊಡ್ಡ ವರ್ಗವೇ ಇದೆ. ಇನ್ನು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ರೂಪದರ್ಶಿಗಳು ಕೂಡ ತಮ್ಮ ಮೈಮಾಟಕ್ಕೆ ಕೋಟಿಗಟ್ಟಲೆ ಖರ್ಚು  ಮಾಡುವುದು ಇದೆ. ಮೇಕಪ್​ ತೆಗೆದ ಮೇಲಷ್ಟೇ ಅವರ ನಿಜವಾದ ರೂಪ ತಿಳಿಯುವುದು. ಆದರೆ ಈ ಕೃತಕ ಬುದ್ಧಿಮತ್ತೆಯ ಸುಂದರಿ ಕೂಡ ನಕಲಿಯ ರೂಪದಲ್ಲಿಯೇ ಸೌಂದರ್ಯ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾಳೆ. 
 

ಇಬ್ರಿಬ್ರು ಸಿಂಡ್ರೆಲ್ಲಾ... ಯಾರಿಗೆ ಐ ಲವ್​ ಯು ಹೇಳೋದಂತೆನೇ ಗೊತ್ತಾಗ್ತಿಲ್ವಲ್ಲಾ... ಅಂತಿದ್ದಾರೆ ಫ್ಯಾನ್ಸ್​!

Zara Shatavari an AI generated model  top 10 finalists in the inaugural Miss AI Competition suc

Latest Videos
Follow Us:
Download App:
  • android
  • ios