ರಾಜಾ ರಾಣಿ ಷೋ ಶೂಟಿಂಗ್ ವೇಳೆ ಆ್ಯಂಕರ್ ಅನುಪಮಾ ಬೆಳಿಗ್ಗೆಯಿಂದ ಏನೆಲ್ಲಾ ಮಾಡ್ತಾರೆ?
ರಾಜಾ ರಾಣಿ ರೀಲೋಡೆಡ್ ರಿಯಾಲಿಟಿ ಷೋನಲ್ಲಿ ಆ್ಯಂಕರ್ ಆಗಿರೋ ಬಿಗ್ಬಾಸ್ ಖ್ಯಾತಿಯ ಅನುಪಮಾ ಗೌಡ ಬೆಳಿಗ್ಗೆಯಿಂದ ಸಂಜೆಯವರವರೆಗೆ ದಿನಚರಿ ಹೇಗಿರುತ್ತೆ ಎನ್ನುವುದು ತೋರಿಸಿದ್ದಾರೆ.
ಕಲರ್ಸ್ ಕನ್ನಡ ಚಾನೆಲ್ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ ಆರಂಭವಾಗಿದೆ. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಜೂನ್ 8ರಿಂದ ಆರಂಭವಾಗಿದೆ. ಈ ಷೋಗೆ ಸೃಜನ್ ಲೋಕೇಶ್, ತಾರಾ ಅನುರಾಧ ಹಾಗೂ ಅದಿತಿ ಪ್ರಭುದೇವ ತೀರ್ಪುಗಾರರಾದರೆ, ಅನುಪಮಾ ಗೌಡ ನಿರೂಪಕಿಯಾಗಿದ್ದಾರೆ. ರಾಜಾ ರಾಣಿ ರೀಲೋಡೆಡ್ ಶೂಟಿಂಗ್ಗೆ ಹೋಗುವ ಸಮಯದಲ್ಲಿ ತಾವು ಹೇಗೆಲ್ಲಾ ರೆಡಿಯಾಗುತ್ತೇವೆ ಎನ್ನುವ ಬಗ್ಗೆ ಅನುಪಮಾ ಗೌಡ ಅವರು ಇದೀಗ ಮಾಹಿತಿ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ನಲ್ಲಿ ಅನುಪಮಾ ಅವರು ಬೆಳಿಗ್ಗೆ ಬೇಗನೇ ಎದ್ದು ಹೇಗೆ ರೆಡಿಯಾಗ್ತೇನೆ ಎಂದು ತಿಳಿಸಿದ್ದಾರೆ. ಬ್ರೇಕ್ಫಾಸ್ಟ್ನಿಂದ ಹಿಡಿದು ಮಧ್ಯಾಹ್ನದ ಊಟ, ರಾತ್ರಿಯ ಊಟ ನಡುನಡುವೆ ಸ್ನ್ಯಾಕ್ಸ್ಸ್ ಎಲ್ಲವನ್ನೂ ಮನೆಯಲ್ಲಿಯೇ ರೆಡಿ ಮಾಡಿಕೊಂಡು ದೊಡ್ಡ ಬುತ್ತಿ ಕಟ್ಟಿಕೊಂಡು ಹೋಗುತ್ತಾರೆ ಅನುಪಮಾ. ಸೆಟ್ನಲ್ಲಿ ಟೈಂ ಇದ್ದಾಗ ಅವರು ಸೇವನೆ ಮಾಡುತ್ತಾರೆಯೇ ಹೊರತು ಹೊರಗಡೆಯಿಂದ ಊಟ ತರಿಸಿ ತಿನ್ನುವುದಿಲ್ಲ. ಇದೇ ವಿಡಿಯೋದಲ್ಲಿ ಅವರು ಕೆಲವೊಂದು ರೆಸಿಪಿಗಳನ್ನೂ ಹೇಳಿಕೊಟ್ಟಿದ್ದಾರೆ. ಇವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್ ಬಂದಿವೆ. ಹೊರಗಡೆ ಊಟ ಮಾಡುವ ಎಲ್ಲಾ ಅವಕಾಶ ಇದ್ದರೂ ಮನೆಯಲ್ಲಿಯೇ ಬೇಗ ಎದ್ದು ಅಷ್ಟೆಲ್ಲಾ ರೆಡಿ ಮಾಡಿಕೊಂಡು ಹೋಗುವುದು ನಿಜಕ್ಕೂ ಗ್ರೇಟ್. ನೀವು ಎಲ್ಲರಿಗೂ ಸ್ಫೂರ್ತಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಅಮ್ಮನಾದ ಮೇಲೆ ಹೇಗಿದೆ ಲೈಫ್? 2 ತಿಂಗಳ ಮಗು ಬಿಟ್ಟು ರಿಯಾಲಿಟಿ ಷೋಗೆ ಬಂದ ಅದಿತಿ ಹೇಳಿದ್ದೇನು?
ಅಂದಹಾಗೆ, ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ. ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು, ಅಕ್ಕ ಸೀರಿಯಲ್ ಮೂಲಕ. ಈ ಸೀರಿಯಲ್ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್ ಯಾವುದಕ್ಕೂ ಸೈ ಎನಿಸಿಕೊಂಡರು. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್ ಫೇಮಸ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ ನಂತರ.
ಅನುಪಮಾ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಇದರಲ್ಲಿ ತಮ್ಮ ಪರ್ಸನಲ್ ಲೈಫ್, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ಯಾಂಡಲ್ವುಡ್ನಲ್ಲಿಯೂ ಛಾಪು ಮೂಡಿಸಿರುವ ಅನುಪಮಾ ಅವರು, ಜಯರಾಮ್ ಕಾರ್ತಿಕ್ ಅಭಿನಯದ ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 2019ರಲ್ಲಿ ಬಿಡುಗಡೆಗೊಂಡ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದರು.
ಭಾಗ್ಯಲಕ್ಷ್ಮಿ ಅಮ್ಮ-ಮಗಳ ಸಕತ್ ರೀಲ್ಸ್: ಇವರಿಬ್ಬರ ನಿಜ ಜೀವನದ ಕುತೂಹಲ ವಿಷ್ಯ ಇಲ್ಲಿದೆ...