ಲೇಸ್‌ ಚಿಪ್ಸ್‌ ಕವರ್‌ನಿಂದ ಸಾರಿ ತಯಾರಿಸಿದ ನಾರಿ

  • ಒಂದು ಸೀರೆಯನ್ನೇ ಮಾಡಬೇಕಾದರೆ ಈಕೆ ತಿಂದಿರುವ ಲೇಸ್‌ ಎಷ್ಟಿರಬಹುದು
  • ಲೇಸ್‌ ಕವರ್‌ನಿಂದ ಸಾರಿ ತಯಾರಿಸಿದ ನಾರಿ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
Woman makes saree with potato chips packets watch viral video akb

ಲೇಸ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ತಿಂದಷ್ಟು ತಿನ್ನುತ್ತಲೇ ಇರೋಣ ಎನಿಸುವ ಲೇಸ್‌ನ್ನು ಇಷ್ಟಪಡದವರೇ ಇಲ್ಲ. ಹೀಗೆ ಲೇಸ್ ತಿಂದು ತಿಂದು ಸಂಗ್ರಹಿಸಿಟ್ಟ ಅದರ ಪ್ಯಾಕೇಟ್‌ನಿಂದ ಯುವತಿಯೊಬ್ಬಳು ಸಾರಿ ತಯಾರಿಸಿ ಧರಿಸಿದ್ದು, ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯಾರಾದರೂ ಅತ್ಯಂತ ಜನಪ್ರಿಯ ಮತ್ತು ರುಚಿಕರವಾದ ತಿಂಡಿಗಳ ಪಟ್ಟಿ ಮಾಡಿದರೆ ಅಲ್ಲಿ ಆಲೂಗೆಡ್ಡೆ ಚಿಪ್ಸ್ ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ. ಬಹುಪಾಲು ಜನರು ಇದನ್ನು ಒಪ್ಪುತ್ತಾರೆ. ಈ ಅಲೂಗಡ್ಡೆ ಚಿಪ್ಸ್‌ ತ್ವರಿತ ಮತ್ತು ಸುಲಭವಾದ ತಿಂಡಿಯಾಗಿದ್ದು ವಿವಿಧ ಸುವಾಸನೆಗಳಲ್ಲಿ ಬರುತ್ತದೆ ಮತ್ತು ಆ ಹಸಿವನ್ನು ಇದು ತಕ್ಷಣವೇ ನಿವಾರಿಸುತ್ತದೆ. ಆದಾಗ್ಯೂ, ಸಾಮಾನ್ಯವಾಗಿ, ತಿಂದ ನಂತರ, ಬಹುತೇಕರು ಪ್ಯಾಕೆಟ್ ಅನ್ನು ತೊಟ್ಟಿಯಲ್ಲಿ ಎಸೆಯುತ್ತಾರೆ. ಆದರೆ, ಈ ಹುಡುಗಿ ಮಾತ್ರ ಸೃಜನಾತ್ಮಕವಾಗಿ ಯೋಚಿಸಿದ್ದಾಳೆ. ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ಗಳಿಂದ ಸೀರೆ ತಯಾರಿಸಿ ಅದನ್ನುಟ್ಟು ಮೆರೆದಾಡಿದ್ದಾಳೆ.

ಈ ವಿಡಿಯೋವನ್ನು  ಇನ್ಸ್ಟಾಗ್ರಾಮ್‌ನಲ್ಲಿ(Instagram)  bebadass.in ಎಂಬ ಖಾತೆಯಿಂದ  ಪೋಸ್ಟ್ ಮಾಡಲಾಗಿದೆ. ಇದನ್ನು ಮೂಲತಃ mae.co.in ಎಂಬ ಇನ್ಸ್ಟಾ ಪುಟದಿಂದ ಪೋಸ್ಟ್‌ ಮಾಡಲಾಗಿತ್ತು. ಈ ಚಿಕ್ಕ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಲೇಸ್‌ ಚಿಪ್ಸ್ ಪ್ಯಾಕೆಟ್ ಅನ್ನು ಕ್ಯಾಮೆರಾದ ಮುಂದೆ ಬೀಸುತ್ತಿರುವುದನ್ನು ಕಾಣಬಹುದು. ಅಲ್ಲದೇ ಆಕೆ ಉಟ್ಟಿರುವ ಬೆಳ್ಳಿ ಬಣ್ಣದ ಸೀರೆಯ ಬಾರ್ಡರನ್ನು ಲೇಸ್ ಪ್ಯಾಕೇಟ್‌ನಿಂದ ತಯಾರಿಸಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

 
 
 
 
 
 
 
 
 
 
 
 
 
 
 

A post shared by BeBadass.in (@bebadass.in)

ನೀಲಿ ಲೇಸ್ ಮತ್ತು ಸೀರೆ ಮೇಲಿನ ಪ್ರೀತಿಗಾಗಿ ಎಂದು ಈ ವಿಡಿಯೋ ಪೋಸ್ಟ್‌ಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದನ್ನು ನೋಡಿದ ಒಬ್ಬ ವ್ಯಕ್ತಿ ಓ ದೇವರೆ ಎಂದು ಕಾಮೆಂಟ್ ಮಾಡಿದ್ದಾನೆ.  ಓರ್ವ ಸೀರೆ ಪ್ರೇಮಿ ಹಾಗೂ ಕಲಾವಿದನಾಗಿ ನಾನಿದನ್ನು ಇಷ್ಟ ಪಡುವುದಿಲ್ಲ. ಇಂದಿನ ದಿನಗಳಲ್ಲಿ ಜನರು ಕಲೆಯ ಹೆಸರಿನಲ್ಲಿ ಏನೇನೋ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಲೇಸ್‌ ಸ್ಟೈಲ್‌ನ ಆಲೂಗೆಡ್ಡೆ ಚಿಪ್ಸ್‌ ರಿಸಿಪಿ ಇಲ್ಲಿದೆ ನೋಡಿ...

ಒಟ್ಟಿನಲ್ಲಿ ಈಕೆ ತಾನು ತಿಂದ ಲೇಸ್‌ ಪ್ಯಾಕೇಟ್‌ಗಳಿಂದ ಒಂದು ಸೀರೆಯನ್ನೇ ತಯಾರಿಸ ಬೇಕಾದರೆ ಈಕೆ ಎಷ್ಟು ಪ್ಯಾಕೇಟ್ ಲೇಸ್‌ ತಿಂದಿರಬಹುದು ಎಂದು ಜನ ಅಚ್ಚರಿಗೊಳಗಾಗಿ ನೋಡುತ್ತಿದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ನಿರ್ದಿಷ್ಟ ಆಲೂಗಡ್ಡೆ ತಳಿಗೆ ಸಂಬಂಧಿಸಿ ಪೆಪ್ಸಿಕೋ ಇಂಡಿಯಾ ಹೊಂದಿರೋ ಹಕ್ಕುಸ್ವಾಮ್ಯವನ್ನು ಸಸ್ಯ ವೈವಿಧ್ಯ ಹಾಗೂ ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ ರದ್ದುಪಡಿಸಿದೆ. ಈ ಆಲೂಗಡ್ಡೆ ಬೆಳೆದ ಗುಜರಾತಿನ 9 ರೈತರ ವಿರುದ್ಧ ಪೆಪ್ಸಿಕೋ ಇಂಡಿಯಾ ಎರಡು ವರ್ಷಗಳ ಹಿಂದೆ ಮೊಕದ್ದಮೆ ಹೂಡಿತ್ತು.

PepsiCo India: ವಿಶೇಷ ತಳಿ ಆಲೂಗಡ್ಡೆ ಮೇಲಿನ ಪೆಪ್ಸಿಕೋ ಹಕ್ಕುಸ್ವಾಮ್ಯ ರದ್ದು

ಗುಜರಾತಿನ(Gujarat) 9 ರೈತರು ಪೇಟೆಂಟ್ ಹಕ್ಕುಗಳನ್ನು ಉಲ್ಲಂಘಿಸಿ ನೋಂದಾಯಿತ ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಎರಡು ವರ್ಷಗಳ ಹಿಂದೆ ಪೆಪ್ಸಿಕೋ ಇಂಡಿಯಾ ಆರೋಪಿಸಿತ್ತು. ಈ ತೀರ್ಪು ಗುಜರಾತ್ ನಲ್ಲಿ ಪೆಪ್ಸಿಕೋ ನೀತಿಯ ವಿರುದ್ಧ ಹೋರಾಟ ನಡೆಸಿದ ರೈತರಿಗೆ ಸಿಕ್ಕ ಗೆಲುವು ಎಂದೇ ಹೇಳಬಹುದು. 'ಈ ತೀರ್ಪು ಭಾರತದ ರೈತರ ಪಾಲಿಗೆ ಇತಿಹಾಸಿಕ ಗೆಲುವಾಗಿದೆ. ಇದು ಇತರ ಯಾವುದೇ ಬೀಜ ಅಥವಾ ಆಹಾರ ನಿಗಮ ಕಾನೂಬದ್ಧವಾಗಿ ಅನುಮತಿ ನೀಡಿರೋ ಭಾರತದ ರೈತರ ಬಿತ್ತನೆ ಕಾಳು ಸ್ವಾತಂತ್ರ್ಯದ ಮೇಲೆ ಅತಿಕ್ರಮಣ ಮಾಡೋದನ್ನುತಡೆಯುವಂತಾಗಬೇಕು' ಎಂದು ಸುಸ್ಥಿರ ಹಾಗೂ ಸಮಗ್ರ ಕೃಷಿ ಮೈತ್ರಿಯ ವಕ್ತಾರೆ ಕವಿತಾ ಕುರುಗಂಟಿ ಹೇಳಿದ್ದಾರೆ. ಇವರು ಪೆಪ್ಸಿಕೋ ನಿರ್ದಿಷ್ಟ ತಳಿಯ ಆಲೂಗಡ್ಡೆಗೆ ಪಡೆದಿರೋ ಹಕ್ಕುಸ್ವಾಮ್ಯವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
 

Latest Videos
Follow Us:
Download App:
  • android
  • ios