ಪೂಜೆಗೆ ನೀತಾ ಅಂಬಾನಿ ಸದಾ ಕೆಂಪು ವಸ್ತ್ರದಲ್ಲಿಯೇ ಇರೋದ್ಯಾಕೆ?
ನೀತಾ ಅಂಬಾನಿ ಭಾರತೀಯ ಮಹಿಳೆಯರಿಗೆ ಸ್ಪೂರ್ತಿ. ಮನೆ, ಮಕ್ಕಳು, ಉದ್ಯಮ, ಫ್ಯಾಷನ್, ಸಂಪ್ರದಾಯ, ಸಂಸ್ಕೃತಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗ್ತಿರುವ ಆದರ್ಶ ಮಹಿಳೆ ನೀತಾ ಅಂಬಾನಿ. ಅವರು ಮನೆಯ ಪೂಜೆ ಕಾರ್ಯದಲ್ಲಿ ಕೆಂಪು ಬಟ್ಟೆ ಧರಿಸಲು ಕಾರಣವೇನು ಗೊತ್ತಾ?
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ನಮ್ಮ ದೇಶದಲ್ಲಿ ಈಗ್ಲೂ ಪದ್ಧತಿ, ಸಂಪ್ರದಾಯಗಳನ್ನು ನಂಬಿ ಅದರಂತೆ ನಡೆದುಕೊಳ್ಳುವವರಿದ್ದಾರೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ. ಅವರು ಧರಿಸುವ ಬಟ್ಟೆ ಕೂಡ ಮಹತ್ವ ಪಡೆಯುತ್ತದೆ. ಯಾವ ಸಂದರ್ಭದಲ್ಲಿ ಯಾವ ಬಟ್ಟೆಯನ್ನು ಧರಿಸಿದ್ರೆ ಶುಭಕರ ಎಂಬುದನ್ನು ಕೂಡ ಗ್ರಂಥಗಳಲ್ಲಿ ಹೇಳಲಾಗಿದೆ. ಮಹಿಳೆಯರು ಸಾಮಾನ್ಯವಾಗಿ ಪೂಜೆಯಲ್ಲಿ ಕೆಂಪು ಬಣ್ಣವನ್ನು ಬಳಸುತ್ತಾರೆ. ಕೆಂಪು ಬಟ್ಟೆಗಳನ್ನು ಧರಿಸಿ ಪೂಜಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಂಪು ಸೌಭಾಗ್ಯದ ಸಂಕೇತ. ಇದನ್ನು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಉದ್ಯಮಿ ನೀತಾ ಅಂಬಾನಿ ಕೂಡ ನಂಬುತ್ತಾರೆ.
ಕುಟುಂಬದ ಪ್ರತಿ ಕಾರ್ಯಕ್ರಮದಲ್ಲೂ ಕೆಂಪು (Red) ಬಟ್ಟೆ ಧರಿಸ್ತಾರೆ ನೀತಾ ಅಂಬಾನಿ (Nita Ambani) : ನೀತಾ ಅಂಬಾನಿ ಬರೀ ಉದ್ಯಮ ಕ್ಷೇತ್ರಕ್ಕೆ ಮೀಸಲಾಗಿಲ್ಲ. ಅವರು ಫ್ಯಾಷನ್ ಐಕಾನ್ ಕೂಡ ಹೌದು. ಅವರ ಫ್ಯಾಷನ್ (Fashion) ಸೆನ್ಸ್ ಸಿನಿಮಾ ತಾರೆಯರನ್ನು ಸೆಳೆಯುತ್ತದೆ. ಆಕರ್ಷಕ ಬಟ್ಟೆಗಳನ್ನು ಧರಿಸುವ ನೀತಾ ಅಂಬಾನಿ ಬಹುತೇಕ ಭಾರತೀಯ ಡ್ರೆಸ್ ಗೆ ಆದ್ಯತೆ ನೀಡ್ತಾರೆ. ಆದ್ರೆ ಭಾರತೀಯ ಬಟ್ಟೆಯಲ್ಲೂ ನಾವು ಭಿನ್ನತೆ ಹಾಗೂ ವಿಶೇಷತೆಯನ್ನು ಕಾಣಬಹುದು.
ಮಹಿಳೆಯರು ವಾಷ್ರೂಮ್ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ
ಅಂಬಾನಿ ಕುಟುಂಬ ಪರಂಪರೆ, ಪೂಜೆ, ಅನುಷ್ಟಾನದಲ್ಲಿ ವಿಶ್ವಾಸವನ್ನಿಟ್ಟಿದೆ. ಅಂಬಾನಿ ಕುಟುಂಬದಲ್ಲಿ ನಡೆಯುವ ಪೂಜೆಯಲ್ಲಿ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮನೆಯ ಹಿರಿಯ ಸೊಸೆ ಹಾಗೂ ಉನ್ನತ ಸ್ಥಾನದಲ್ಲಿರುವ ನೀತಾ ಅಂಬಾನಿ ಹಿಂದಿನ ಸಂಪ್ರದಾಯವನ್ನು ಈಗ್ಲೂ ಪಾಲಿಸಿಕೊಂಡು ಬರ್ತಿದ್ದಾರೆ. ಯಾವ ಕಾರ್ಯಕ್ರಮದಲ್ಲಿ ಯಾವ ಬಟ್ಟೆಯನ್ನು ಧರಿಸಬೇಕೆನ್ನುವ ಮಹತ್ವ ನೀತಾ ಅಂಬಾನಿಗೆ ತಿಳಿದಿದೆ. ಕಾರ್ಯಕ್ರಮಕ್ಕೆ ತಕ್ಕಂತೆ ಅವರು ತಮ್ಮ ಬಟ್ಟೆಯನ್ನು ಡಿಸೈನ್ ಮಾಡಿಸುತ್ತಾರೆ. ನೀತಾ ಅಂಬಾನಿ ಯಾವಾಗ್ಲೂ ತಮ್ಮ ವಿನ್ಯಾಸಕಾರರಿಂದ ಸಿದ್ದಪಡಿಸಿದ ಬಟ್ಟೆಯನ್ನೇ ಧರಿಸ್ತಾರೆ. ಕುಟುಂಬದ ಯಾವುದೇ ವಿಶೇಷ ಕಾರ್ಯಕ್ರಮವಿದ್ದರೂ ನೀತಾ ಅಂಬಾನಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಕೆಂಪು ಬಣ್ಣವನ್ನು ಶುಭವೆಂದು ನಂಬುವ ನೀತಾ ಅಂಬಾನಿ, ಮುಖ್ಯ ಪೂಜೆಯಲ್ಲಿ ಕೆಂಪು ಬಣ್ಣದ ಬಟ್ಟೆಗೆ ಆದ್ಯತೆ ನೀಡ್ತಾರೆ.
ಅಪ್ಪಟ ರೇಷ್ಮೆ ಸೀರೆ ಗುರುತಿಸೋದು, ಕಾಪಾಡೋದು ಹೇಗೆಂದು ತಿಳಿಸಿದ ನಟಿ ಅಮೃತಾ ರಾಮಮೂರ್ತಿ
ಗಣೇಶ ಪೂಜೆಯ ಸಮಯದಲ್ಲಿ ನೀತಾ ಅಂಬಾನಿ ಯಾವಾಗಲೂ ಕೆಂಪು ಬಣ್ಣವನ್ನು ಧರಿಸುತ್ತಾರೆ. ಇಷ್ಟೇ ಅಲ್ಲ, ತಮ್ಮ ಮಗಳ ಮದುವೆ ಆಹ್ವಾನದ ಪತ್ರಿಕೆ ಹಿಡಿದು ದೇವಸ್ಥಾನಕ್ಕೆ ಬಂದಾಗ ಕೂಡ ಅವರು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಆಕಾಶ್ ಅಂಬಾನಿ ಮದುವೆ ಸಮಾರಂಭದಲ್ಲಿ ಕೂಡ ನೀತಾ ಅಂಬಾನಿ ಕೆಂಪು ಬಣ್ಣದ ಬಟ್ಟೆಗೆ ಮಹತ್ವ ನೀಡಿದ್ದರು. ಕಚೇರಿಯಲ್ಲಿ ನಡೆದ ಪೂಜೆ ವೇಳೆಯೂ ಕೆಂಪು ಸೂಟ್ ನಲ್ಲಿ ಬಂದಿದ್ದ ನೀತಾ ಅಂಬಾನಿ ಅತ್ತೆ ಕೋಕಿಲಾಬೆನ್ ಅಂಬಾನಿ ಜೊತೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ್ದ ಅವರು, ಗೃಹಿಣಿ ಪೂಜೆಗೆ ಹಾಜರಾಗದಿದ್ದರೆ ಪೂಜೆ ಯಶಸ್ವಿಯಾಗುವುದಿಲ್ಲ ಎಂದಿದ್ದರು.
ಪೂಜೆ ವೇಳೆ ಯಾಕೆ ಕೆಂಪು ಬಟ್ಟೆ ಧರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೂ ನೀತಾ ಉತ್ತರ ನೀಡಿದ್ದರು, ಪೂಜೆಯಲ್ಲಿ ಯಾವಾಗ್ಲೂ ಕೆಂಪು ಬಟ್ಟೆಯನ್ನು ಧರಿಸಬೇಕು. ಬರೀ ಪೂಜೆ ಮಾಡುವವರು ಮಾತ್ರವಲ್ಲ ಪೂಜೆಯಲ್ಲಿ ಪಾಲ್ಗೊಳ್ಳುವವರು ಕೂಡ ಕೆಂಪು ಬಟ್ಟೆ ಧರಿಸಬೇಕು ಎಂದಿದ್ದರು. ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದ ನೀತಾ, ನಮ್ಮ ಮನೆಯಲ್ಲಿ ಪೂಜೆ ಸಂದರ್ಭದಲ್ಲಿ ಎಲ್ಲರೂ ಕೆಂಪು ಬಟ್ಟೆ ಧರಿಸುತ್ತಾರೆ ಎಂದಿದ್ದರು. ಹಿಂದೂ ಧರ್ಮದ ಪ್ರಕಾರ, ಪೂಜೆ ವೇಳೆ ಮನೆಯ ಪುರುಷ ಬಿಳಿ ಬಣ್ಣದ ಬಟ್ಟೆ ಹಾಗೂ ಮಹಿಳೆ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಈ ಬಣ್ಣ ಮಂಗಳಕರವಾಗಿದ್ದು, ಮಾಡಿದ ಪೂಜೆ ಫಲ ನೀಡುತ್ತದೆ ಎಂದು ನಂಬಲಾಗಿದೆ.