ಮಹಿಳೆಯರು ವಾಷ್​ರೂಮ್​ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ

ಮಹಿಳೆಯರು ಹೆಚ್ಚು ಹೊತ್ತು ವಾಷ್​ರೂಮ್​ನಲ್ಲಿ ಇರುವುದು ಏಕೆ? ಪುರುಷರನ್ನು ಸಾಮಾನ್ಯವಾಗಿ ಕಾಡುತ್ತಿರೋ ಈ ಪ್ರಶ್ನೆಗೆ ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಹೀಗೆ ಉತ್ತರಿಸಿದ್ದಾರೆ. 
 

Why do women spend more time in the washroom tells Keerthana

ಪುರುಷರಿಗೆ ಹೋಲಿಸಿದರೆ ಮಹಿಳೆಯರು ರೆಡಿ ಆಗಲು ಲೇಟು, ವಾಷ್​ರೂಮ್​ಗೆ ಹೋದ್ರೆ ಅಲ್ಲೂ ಲೇಟು ಎಂದೆಲ್ಲಾ ಸಾಮಾನ್ಯವಾಗಿ ಆಡಿಕೊಳ್ಳುತ್ತಾರೆ. ಇಂದಿನ ಸ್ಥಿತಿ ಬದಲಾದರೂ ಈ ಮಾತು ಮಾತ್ರ ಇಂದಿಗೂ ಜನಜನಿತ. ಮಹಿಳೆಯರ ಮೇಕಪ್​ ಸಾಮಗ್ರಿಗಳಂತೆ ಪುರುಷರು ಮೇಕಪ್​  ಮಾಡಿಕೊಳ್ಳುವುದರಲ್ಲಿ ಹಿಂದಿಲ್ಲ.  ಕನ್ನಡಿ ಮುಂದೆ ನಿಂತರೆ ತಯಾರಾಗಲು ಕೆಲವು ಪುರುಷರು ಮಹಿಳೆಯರಿಗಿಂತಲೂ ಹೆಚ್ಚಿನ ಟೈಂ ತೆಗೆದುಕೊಳ್ಳುವುದು ಇದೆ. ಅದೇನೆ ಇದ್ದರೂ ಪುರುಷರು ಇಂದಿಗೂ ಹೇಳುವ ಮಾತು ಒಂದೇ. ರೆಡಿಯಾಗಲು ಮಹಿಳೆಯರು ಲೇಟು ಎನ್ನುವುದು. ಇದು ಸುಳ್ಳಾದರೂ ಕೆಲವೊಂದು ವೇಳೆ ಈ ಮಾತು ನಿಜವಾಗುವುದೂ ಇದೆ. ಅದರಲ್ಲಿಯೂ ವಾಷ್​ರೂಮ್​ಗೆ ಹೋದಾಗಲೂ ಮಹಿಳೆಯರು ಲೇಟು ಮಾಡುವುದು ಏಕೆ, ಅಲ್ಲಿ ಹೆಚ್ಚು ಹೊತ್ತು ಇರುವುದು ಯಾಕೆ ಎಂದೂ ಕೆಲವರಿಗೆ ಅನ್ನಿಸುವುದು ಉಂಟು. ಇದಕ್ಕೆ ಸತ್ಯ ಸೀರಿಯಲ್​ ಕೀರ್ತನಾ (Keerthana) ರೀಲ್ಸ್​ ಮಾಡಿ ಇದಕ್ಕೆ ಕಾರಣ ತಿಳಿಸಿದ್ದಾರೆ.

ಅಂದಹಾಗೆ ಕೀರ್ತನಾ ಎಂದೇ ಫೇಮಸ್​ ಆಗಿರೋ ನಟಿ, ಅನು ಜನಾರ್ದನ (Anu Janardhana). ಇವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ದಿನನಿತ್ಯವೂ ಚಿಕ್ಕ ಚಿಕ್ಕ ರೀಲ್ಸ್​ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ.   ಇದೀಗ ಅವರು ವಾಷ್​ರೂಮ್​ನಲ್ಲಿ ಮಹಿಳೆಯರು ಏಕೆ ಹೆಚ್ಚು ಹೊತ್ತು ಇರುತ್ತಾರೆ ಎಂದು ಪುರುಷರು ಕೇಳುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದಕ್ಕೆ ಕಾರಣ ನೀಡಿರೋ ನಟಿ, ವಾಷ್​ರೂಮ್​ನಲ್ಲಿ ಲೈಟಿಂಗ್​ ತುಂಬಾ ಅನುಕೂಲವಾಗಿರುತ್ತದೆ. ಇಲ್ಲಿ ಇರಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.  ಅಂದಹಾಗೆ ನಟಿಯರು ಸದಾ ಶೂಟಿಂಗ್​ನಲ್ಲಿ ಪ್ರಖರ ಲೈಟ್​ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಹಿತವಾದ ಲೈಟ್​ ಅವರಿಗೆ ಬೇಕಾಗುತ್ತದೆ. ಇಂಥದ್ದೊಂದು ಅನುಕೂಲ ಕಲ್ಪಿಸುವುದು ವಾಷ್​ರೂಮ್​ನಲ್ಲಿ ಮಾತ್ರ ಸಾಧ್ಯ ಎನ್ನುವುದು ಅವರ ಮಾತು. ಇದು ನಟಿಯರ ಮಾತಾಯಿತು. ಸಾಮಾನ್ಯ ಮಹಿಳೆಯರಿಗೆ ವಾಷ್​ರೂಮ್​ ಚೆನ್ನಾಗಿದ್ದರೆ,  ಅಲ್ಲಿಯ ಕನ್ನಡಿ ಮುಂದೆ ನಿಂತರೆ  ಟೈಂ ಆಗಿದ್ದೇ ತಿಳಿಯುವುದಿಲ್ಲ. ಇದಕ್ಕೆ ನಟಿಯರೂ ಹೊರತಾಗಿಲ್ಲ. ಅದಕ್ಕಾಗಿಯೇ ಅಲ್ಲಿ ಹೆಚ್ಚು ಹೊತ್ತು ಇರುವುದು ಎಂದು ಹಲವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ. 

'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್​ 'ಕೀರ್ತನಾ'!

ಅಂದಹಾಗೆ, ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿಯಲ್ಲಿ ಕೀರ್ತನಾ ವಿಲನ್​ ಪಾತ್ರಧಾರಿ.  ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ.  ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವುದು ಈಕೆಯ ಕೆಲಸ.


 ಭಾರತನಾಟ್ಯ ಕಲಾವಿದೆಯೂ ಆಗಿರುವ ಅನು ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ  ಆಸಕ್ತಿ.  ಶ್ರೀ ವಿಷ್ಣು, ಜೈ ಹನುಮಾನ್​ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಳಿಕ 'ರಂಗನಾಯಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಅನು,  ಬ್ರಹ್ಮಗಂಟ, ಅಮ್ನೋರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸತ್ಯ ಅವರಿಗೆ ಸಕತ್​ ಹೆಸರು ತಂದುಕೊಟ್ಟಿದೆ. ಸತ್ಯ ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅನು ಬಳಕುವ ಬಳ್ಳಿಯಂತೆ ಇರುವುದನ್ನು ನೋಡಬಹುದು. ಆದರೆ ಅನು ಮೊದಲು ಹೀಗಿರಲಿಲ್ಲವಂತೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ತಾವು ದಪ್ಪ ಆಗಿದ್ದು, ಆಮೇಲೆ ಸಕತ್​ ಡಯಟ್​ ಮಾಡಿ ಒಂದು ವರ್ಷಗಳ ಸತತ ಪರಿಶ್ರಮದ ನಂತರ ತೆಳ್ಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮಿಡಲ್ ಕ್ಲಾಸಲ್ಲಿ ಮಗಳ ಮದುವೆ ಕನಸು, ಸಂಬಂಧದ ಬಾಂಡಿಂಗ್‌ ವ್ಯಾಖ್ಯಾನಿಸಿದ ಅಮೃತಧಾರೆ

Latest Videos
Follow Us:
Download App:
  • android
  • ios