ಅಪ್ಪಟ ರೇಷ್ಮೆ ಸೀರೆ ಗುರುತಿಸೋದು, ಕಾಪಾಡೋದು ಹೇಗೆಂದು ತಿಳಿಸಿದ ನಟಿ ಅಮೃತಾ ರಾಮಮೂರ್ತಿ

ಕಿರುತೆರೆ ನಟಿ ಅಮೃತಾ ರಾಮಮೂರ್ತಿಯವರು ತಮ್ಮ ಮತ್ತು ಅಮ್ಮನ ಬಳಿ ಇರುವ ಅಪ್ಪಟ ರೇಷ್ಮೆ ಸೀರೆಗಳನ್ನು ತೋರಿಸಿ, ರೇಷ್ಮೆ ಸೀರೆಗಳ ಕೆಲವೊಂದು ಟಿಪ್ಸ್​ ನೀಡಿದ್ದಾರೆ. ಏನದು?
 

TV actress Amrita Ramamurthy showed the pure silk sarees

ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ.  'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸ್ತಿದ್ದ  ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ.  ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮಗಳಿವೆ ಹೇರ್​ಕಟ್​ (Haircut) ಮಾಡಿಸೋ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಇದೀಗ ತಮ್ಮ ಮತ್ತು ಅಮ್ಮನ ಬಳಿ ಇರುವ ರೇಷ್ಮೆ ಸೀರೆಗಳ ಕುರಿತು ಹೇಳಿಕೊಂಡಿದ್ದಾರೆ.

ಸೀರೆ ಅಂದ್ರೆ ಬಹುತೇಕ ಎಲ್ಲ  ಮಹಿಳೆಗೂ ಇಷ್ಟನೇ. ಇದನ್ನು ಉಟ್ಟುಕೊಂಡರೆ ಮಹಿಳೆಯರ ಲುಕ್ಕೇ ಬೇರೆ. ಇದೇ ಕಾರಣಕ್ಕೆ ವಿದೇಶದ ಮಹಿಳೆಯರೂ ಸೀರೆಯ ಮೊರೆ ಹೋಗುವುದು ಇದೆ. ಅದರಲ್ಲಿಯೂ  ರೇಷ್ಮೆ ಸೀರೆ ಅಂದ್ರೆ ಅದೆಷ್ಟೋ ಜನರಿಗೆ ಪಂಚಪ್ರಾಣ. ಮದುವೆ ಸಮಾರಂಭಗಳಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ರೇಷ್ಮೆ ಸೀರೆ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಇದರ ಕ್ರೇಜ್​ ಇದೆ.  ಇದೀಗ ನಟಿ ಅಮೃತಾ ರಾಮಮೂರ್ತಿ ಅವರು ತಮ್ಮ ಮತ್ತು ಅಮ್ಮನ ಬಳಿ ಇರುವ ರೇಷ್ಮೆ ಸೀರೆಯ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ರೇಷ್ಮೆ ಸೀರೆಯನ್ನು ಕಾಪಾಡಿಕೊಳ್ಳುವ ಟಿಪ್ಸ್​ ಕೂಡ ಕೊಟ್ಟಿದ್ದಾರೆ. 

ಕಿರುತೆರೆಯ ಅಮೃತಾ- ರಾಘವೇಂದ್ರ ಪುತ್ರಿಯ ಮೊದಲ ಹೇರ್​ ಕಟ್​: ಹೇಗಿತ್ತು ರಿಯಾಕ್ಷನ್​?

ಮೊದಲಿಗೆ ವಾರಣಾಸಿಯಲ್ಲಿದ್ದ ಚಿಕ್ಕಮ್ಮ ಕೊಟ್ಟಿರುವ ಪ್ಯೂರ್​ ಬನಾರಸ್​ ಸೀರೆ ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ.  ಈಗ ಬನಾರಸ್​ ಸೀರೆಯ ಹೆಸರಿನಲ್ಲಿ ನಕಲಿ ಸಿಗುತ್ತವೆ. ಅಪ್ಪಟ ರೇಷ್ಮೆ ಸೀರೆ ಸಿಗುವುದು ಕಷ್ಟ ಎಂದಿದ್ದಾರೆ. ಅವರ ಅಮ್ಮ ಕೂಡ ಈಗ ಕಾಶಿಗೆ ಹೋದರೂ ಮೋಸ ಮಾಡುತ್ತಾರೆ ಎಂದು ಮಾಹಿತಿ ನೀಡಿದರು. ಈ ಸೀರೆಯ ಬೆಲೆ 40-45 ಸಾವಿರ ರೂಪಾಯಿಗಳಾಗಬಹುದು ಎಂದಿರುವ ಅವರು, ಸರಿಯಾದ ತಿಳಿವಳಿಕೆ ಇರುವವರನ್ನು ರೇಷ್ಮೆ ಸೀರೆ ಖರೀದಿಗೆ ಕರೆದುಕೊಂಡು ಹೋಗಬೇಕು ಎಂದಿದ್ದಾರೆ. ಇದೇ ವೇಳೆ KSIC ರೇಷ್ಮೆ ಸೀರೆಗಳನ್ನು ತೋರಿಸಿರುವ ಅವರು, ಇವೆಲ್ಲವೂ ಅಪ್ಪಟ ರೇಷ್ಮೆ ಸೀರೆ ಎಂದಿದ್ದಾರೆ. ಅವರ ಅಪ್ಪ, ಅಮ್ಮನಿಗೆ ಮದುವೆ  ವಾರ್ಷಿಕೋತ್ಸವಕ್ಕೆ ಕೊಟ್ಟ ಸೀರೆಯಿಂದ ಹಿಡಿದು ಅಮ್ಮನ ಬಳಿ ಇರುವ ಸೀರೆಗಳನ್ನು ಅಮೃತಾ ತೋರಿಸಿದ್ದಾರೆ. ಇದೇ ವೇಳೆ ಕೆಎಸ್​ಐಸಿಯ ಅಪ್ಪಟ ರೇಷ್ಮೆ ಸೀರೆ ಎಂದು ಗುರುತಿಸುವುದು ಹೇಗೆ ಎಂಬ ಬಗ್ಗೆಯೂ ಟಿಪ್ಸ್​ ಕೊಟ್ಟಿರೋ ನಟಿ, ಸೀರೆಯ ಮೇಲೆ ಕೆಎಸ್​ಐಸಿ ಎಂದು  ಎಂಬೋಡೆಡ್​ ಮಾಡಿರುತ್ತಾರೆ. ಅದನ್ನೇ ತೆಗೆದುಕೊಳ್ಳಿ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕೆಲವೊಂದು ಟಿಪ್ಸ್​ಗಳನ್ನು ರೇಷ್ಮೆ ಸೀರೆ (Silk Sarees) ಕುರಿತು ನಟಿ ಹೇಳಿದ್ದಾರೆ. ಅದೇನೆಂದರೆ, ರೇಷ್ಮೆ ಸೀರೆಗಳನ್ನು ಯಾವಾಗಲೂ ವಾಷ್​ ಮಾಡಬೇಡಬಾರದು. ರೇಷ್ಮೆ ಸೀರೆ ಮಾತ್ರವಲ್ಲದೇ ಕ್ರಿಯಾನ್​ ಸೀರೆಗಳನ್ನೂ ತೊಳೆಯಬಾರದು. ಅದನ್ನು ಸದಾ  ಡ್ರೈ ಕ್ಲೀನ್​ ಮಾಡಿಸಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ, ಸ್ಟಾರ್ಚ್​ ಇಲ್ಲದೇ ಇಸ್ತ್ರಿ ಮಾಡಿಸಬೇಕು ಎಂದು ಟಿಪ್ಸ್​ ಕೊಟ್ಟರೆ, ಅವರ ಅಮ್ಮ, ಸ್ಯಾರಿ ಗಟ್ಟಿ ಇದ್ದರೆ ಡೈ ಮಾಡಿಸಿದರೆ ಏನೂ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios