ಪದೇ ಪದೇ ಲಿಪ್ ಬಾಮ್ ಹಚ್ಕೊಂಡ್ರೆ ಇಷ್ಟೆಲ್ಲಾ ತೊಂದ್ರೆಯಾಗುತ್ತೆ
ಅಂದದ ಮೊಗಕೆ ಚೆಂದರ ತುಟಿಯೇ (Lips) ಭೂಷಣ. ಹೀಗಾಗಿಯೇ ಹೆಣ್ಮಕ್ಕಳು ತುಟಿಯ ಸೌಂದರ್ಯದ (Beauty) ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೆಚ್ಚಿನ ಹುಡುಗಿಯರು ಯಾವಾಗ್ಲೂ ಲಿಪ್‌ಬಾಮ್ (Lipbalm) ಹಚ್ಚಿಕ್ಕೊಳ್ಳೋದನ್ನು ನೀವು ನೋಡಿರಬಹುದು. ಆದ್ರೆ ಇದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ನಿಮ್ಗೊತ್ತಾ ?
ಹೆಣ್ಮಕ್ಕಳು ಸೌಂದರ್ಯದ (Beauty) ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುತ್ತಾರೆ. ತ್ವಚೆ, ಕೂದಲು ಹಾಳಾಗದಂತೆ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಮುಖದ ಸೌಂದರ್ಯವನ್ನು ಹೆಚ್ಚಿಸಲೆಂದೇ ಸಾಕಷ್ಟು ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಮೇಕ (Makeup) ಕಿಟ್ ಅಂತೂ ಸಾಮಾನ್ಯವಾಗಿ ಬ್ಯಾಗ್‌ನಲ್ಲೇ ಇರುತ್ತದೆ. ಆಗಾಗ ಕೂದಲು ಬಾಚಿಕೊಳ್ಳುವುದು. ಟಚಪ್ ಮಾಡಿಕೊಳ್ಳುವುದು ಹೆಣ್ಮಕ್ಕಳ ಸಾಮಾನ್ಯ ಅಭ್ಯಾಸ, ಅದರಲ್ಲೂ ಹೆಚ್ಚಿನ ಹುಡುಗಿಯರು ಆಗಾಗ ಲಿಪ್‌ಬಾಮ್ (Lip balm) ಹಚ್ಚುವ ಅಭ್ಯಾಸ ಹೊಂದಿರುತ್ತಾರೆ. ತುಟಿ ಒಣಗುತ್ತೆ, ತೇವವಾಗಿರಲಿ ಅನ್ನೋ ಕಾರಣಕ್ಕೆ ಈ ರೀತಿ ಮಾಡುತ್ತಾರೆ. ಆದ್ರೆ ಇದ್ರಿಂದ ಆರೋಗ್ಯದ (Health) ಮೇಲಾಗುವ ತೊಂದ್ರೆಗಳು ಒಂದೆರಡಲ್ಲ
ಯಾವಾಗ್ಲೂ ಲಿಪ್‌ಬಾಮ್ ಹಚ್ಚೋ ಅಭ್ಯಾಸ ಒಳ್ಳೇದಲ್ಲ: ಯಾವಾಗಲೂ ಲಿಪ್ ಬಾಮ್ ಟ್ಯೂಬ್ ಇಟ್ಕೊಂಡಿರೋ ಅದೆಷ್ಟೋ ಹುಡುಗಿಯರನ್ನು ನಾವು ನೋಡಿದ್ದೇವೆ. ಒಂದು ಗಂಟೆಯ ಅವಧಿಯಲ್ಲೇ ಹತ್ತಾರು ಬಾರಿ ಲಿಪ್ ಬಾಮ್ ಹಚ್ಚಿಕೊಂಡು ಬಿಡುತ್ತಾರೆ. ಕೆಲವರು ಒಡೆದ ತುಟಿಗಳನ್ನು ಸರಿಪಡಿಸಲು ಇದನ್ನು ಹಚ್ಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತುಟಿ ತೇವವಾಗಿರಲಿ ಎಂದು ಹಚ್ಚಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಪದೇ ಪದೇ ಲಿಪ್‌ಸ್ಟಿಕ್ ಹಚ್ಚಲು ಯಾವುದೇ ಕಾರಣವಿರುವುದಿಲ್ಲ. ಲಿಪ್ ಬಾಮ್ ಅನ್ನು ಬಳಸುವುದರಿಂದ ನಿಮ್ಮ ತುಟಿಗಳಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗಬಹುದು.
ಹೇಗಾಯ್ತೋ ಹಾಗೆ ಹಚ್ಚಿದರೆ ತುಟಿಗೆ ಒಪ್ಪೋಲ್ಲ ಲಿಪ್‌ಸ್ಟಿಕ್, ಅದಕ್ಕೂ ರೀತಿ ನೀತಿ ಇದೆ!
ಲಿಪ್‌ಬಾಮ್‌ನಲ್ಲಿದೆ ರಾಸಾಯನಿಕ ಅಂಶ: ಆಗಾಗ ಲಿಪ್ ಬಾಮ್ ಹಚ್ಚಿಕೊಳ್ಳುವುದರಿಂದ ತುಟಿ ಮತ್ತಷ್ಟು ಹಾಳಾಗುತ್ತದೆ. ಯಾಕೆಂದರೆ ಲಿಪ್ ಬಾಮ್ ನಲ್ಲಿರುವ ರಾಸಾಯನಿಕ (Chemical) ಅಂಶಗಳು ತುಟಿಗಳ ಸೌಂದರ್ಯವನ್ನು ಹದಗೆಡಿಸುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನೀವು ಬಳಸುವ ಲಿಪ್ ಬಾಮ್ ನಲ್ಲಿ ಮೆಂತಾಲ್ ಅಂಶ ಜಾಸ್ತಿಯಿದೆಯಾ ಎಂದು ಗಮನಿಸಿ. ಯಾಕೆಂದರೆ ಚರ್ಮವನ್ನು ಹಾಳು ಮಾಡುವುದಲ್ಲದೆ, ಚರ್ಮ ಸಂಬಂಧಿತ ಇತರ ಸಮಸ್ಯೆಗಳನ್ನು ಸಹ ಉಂಟು ಮಾಡಬಹುದು. ಅಲ್ಲದೇ ಕೆಲವೊಂದು ಲಿಪ್ ಬಾಮ್ ತುಟಿಗಳ ಅಲರ್ಜಿಗೆ ಕಾರಣವಾಗುತ್ತದೆ. ಇನ್ನು ಲಿಪ್ ಬಾಮ್ ಗಳು ತನ್ನದೇ ಆದ ಪರಿಮಳವನ್ನು ಒಳಗೊಂಡಿದೆ. ಈ ಪರಿಮಳಕ್ಕಾಗಿ ಬಳಸುವ ಕೆಮಿಕಲ್ ಕೆಲವರಿಗೆ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ.
ತುಟಿ ತೇವಾಂಶ ಕಳೆದುಕೊಳ್ಳುತ್ತದೆ: ಕೆಲವರು ಲಿಪ್ ಬಾಮ್‌ಗಳನ್ನು ಅತಿಯಾಗಿ ಬಳಸುವ ಅಭ್ಯಾಸ (Habit) ರೂಡಿಸಿಕೊಂಡುತ್ತಾರೆ. ತುಟಿ ಒಣಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಾರೆ. ಆದರೆ ದಿನವಿಡೀ ಅವುಗಳನ್ನು ಬಳಸುವುದರಿಂದ, ಪ್ರತಿದಿನವೂ ನಮ್ಮ ತುಟಿಗಳು ಇನ್ನೂ ಒಣಗಬಹುದು ಮತ್ತು ಅವುಗಳು ಈಗಾಗಲೇ ಇರುವ ತೇವಾಂಶವನ್ನು ಸಹ ಕಳೆದುಕೊಳ್ಳಬಹುದು.
ಅಪ್ಪರ್ ಲಿಪ್ಸ್ ಹೇರ್ ರಿಮೂವ್ ಮಾಡಲು ವ್ಯಾಕ್ಸಿಂಗ್ - ಥ್ರೆಡ್ಡಿಂಗ್ ಯಾವುದು ಬೆಸ್ಟ್?
ಉರಿಯೂತಕ್ಕೆ ಕಾರಣವಾಗಬಹುದು: ಲಿಪ್ ಬಾಮ್ ಅನ್ನು ಬಳಸುವಾಗ ಎರಡು ಸಂಭಾವ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೊದಲನೆಯದಾಗಿ, ಇದು ಸಂಭಾವ್ಯ ಕಿರಿಕಿರಿಯುಂಟುಮಾಡುವ ಅಂಶವನ್ನು ಹೊಂದಿದ್ದರೆ, ಉರಿಯೂತ ಮತ್ತು ಜಲಸಂಚಯನದ ನಷ್ಟವನ್ನು ಉಂಟುಮಾಡಬಹುದು. ಇದು ನಿಮ್ಮ ತುಟಿಗಳಿಗೆ ಹೆಚ್ಚಿನ ತೇವಾಂಶವನ್ನು ಉಂಟುಮಾಡುತ್ತದೆ ಆದ್ದರಿಂದ ನೀವು ಉತ್ಪನ್ನವನ್ನು ಅನ್ವಯಿಸುತ್ತಲೇ ಇರುತ್ತೀರಿ ಎಂದು ನ್ಯೂಯಾರ್ಕ್ ಚರ್ಮರೋಗ ತಜ್ಞ ಜೋಶುವಾ ಝೀಚ್ನರ್ ಹೇಳುತ್ತಾರೆ.
ಲಿಪ್ ಬಾಮ್ ಅಡಿಕ್ಷನ್ ಒಳ್ಳೆಯದಲ್ಲ: ಲಿಪ್ ಬಾಮ್‌ಗಳನ್ನು ಆಗಾಗ ಬಳಸುವ ಅಭ್ಯಾಸ ಅಡಿಕ್ಷನ್‌ಗೆ ಕಾರಣವಾಗುತ್ತದೆ. ಚರ್ಮ ಒಣಗದಿದ್ದರೂ ಆಗಾಗ ವಿನಾಕಾರಣ ಲಿಪ್‌ಬಾಮ್ ಹಚ್ಚಬೇಕು ಅನಿಸುತ್ತದೆ. ಲಿಪ್‌ಬಾಮ್‌ನ ರುಚಿ, ಪರಿಮಳ ಯಾವುದೇ ಕಾರಣಕ್ಕೂ ಇದನ್ನು ಮತ್ತೆ ಮತ್ತೆ ಹಚ್ಚುವ ಅಭ್ಯಾಸ ಚಟವಾಗಿ ಬದಲಾಗಬಹುದು. ಇದು ಒತ್ತಡ ಅಥವಾ ಆತಂಕದಿಂದ ಸಹಾಯ ಮಾಡುವ ಪ್ರಜ್ಞಾಹೀನ ಅಭ್ಯಾಸಕ್ಕೆ ಕಾರಣವಾಗಬಹುದು, ಕೂದಲನ್ನು ತಿರುಗಿಸುವುದು ಅಥವಾ ಉಗುರುಗಳನ್ನು ಕಚ್ಚುವುದು ಮೊದಲಾದ ಅಭ್ಯಾಸಗಳು ಹೀಗೆಯೇ ಉಂಟಾಗುತ್ತದೆ.