ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡು ಬಾರ್ಬಿಡಾಲ್ ಆಗ್ಬಹುದು..! ಖರ್ಚು ಕೇಳಿದ್ರೆ ಮೂರ್ಛೆ ಹೋಗ್ತೀರಾ
ಚಿಕ್ಕವರಿರುವಾಗ ಬಾರ್ಬಿಡಾಲ್ ಎಲ್ಲರ ಫೆವರೆಟ್. ಅದ್ರಂತೆ ಕಾಣ್ಬೇಕು ಅಂತಾ ಅನೇಕರು ಕನಸು ಕಾಣ್ತಾರೆ. ಈಗ ಆ ಕನಸು ನನಸಾಗುತ್ತೆ. ಕೈನಲ್ಲಿ ಹಣವಿದ್ರೆ ನೀವೂ ಬಾರ್ಬಿಡಾಲ್ ಆಗಿ ಮಿಂಚಬಹುದು. ಅದ್ರ ಫುಲ್ ಡಿಟೇಲ್ ಇಲ್ಲಿದೆ.
ಪ್ಲಾಸ್ಟಿಕ್ ಸರ್ಜರಿ ಮೂಲಕ ಈಗ ಏನು ಬೇಕಾದ್ರೂ ಮಾಡ್ಬಹುದು. ನಮ್ಮ ಮುಖವನ್ನು ಸಂಪೂರ್ಣ ಬದಲಿಸಿಕೊಳ್ಳಬಹುದು. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಕಲಾವಿದರ ಜೊತೆ ಅನೇಕ ಸೆಲೆಬ್ರಿಟಿಗಳು ತಮ್ಮ ಮುಖ, ದೇಹದ ಅಂದ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಾರೆ. ಈಗಿನ ದಿನಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಕಾಮನ್ ಎನ್ನುವಂತಾಗಿದೆ. ಆದ್ರೆ ಇದ್ರಿಂದ ಆಗುವ ನಷ್ಟ ಬಹಳಷ್ಟಿದೆ. ಅದೇನೇ ಇರಲಿ, ಬಾರ್ಬಿ ಡಾಲ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯರವರೆಗೆ ಎಲ್ಲರೂ ಬಾರ್ಬಿ ಡಾಲ್ ಮೇಲೆ ವಿಶೇಷ ಮೋಹ ಹೊಂದಿರುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯಲ್ಲಿ ಒಂದಾದ್ರೂ ಬಾರ್ಬಿ ಡಾಲ್ ಇದ್ದೇ ಇರುತ್ತೆ. ಈ ಬಾರ್ಬಿ ಡಾಲ್ ನೋಡೋಕೆ ಬಹಳ ಸುಂದರವಾಗಿರುತ್ತೆ. ನಿಮ್ಮ ಮುಖ ಮತ್ತೆ ದೇಹ ಬಾರ್ಬಿ ಡಾಲ್ ನಂತೆ ಇರ್ಬೇಕೆಂದ್ರೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಸಾಧ್ಯ.
ಹೌದು, ನೀವೂ ಕೂಡ ಈಗ ಬಾರ್ಬಿ ಡಾಲ್ (Barbie Doll) ನಂತಹ ಮುಖ, ದೇಹ ಹೊಂದಬಹುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿದ್ದಲ್ಲಿ ಮಾತ್ರ ನಿಮ್ಮ ಈ ಕನಸು ಈಡೇರಲು ಸಾಧ್ಯ. ಅಮೆರಿಕಾ (America) ದ ಒಬ್ಬ ಪ್ಲಾಸ್ಟಿಕ್ ಸರ್ಜನ್, ಮಹಿಳೆಯರಿಗಾಗಿ ವಿಶೇಷ ಆಫರ್ ನೀಡಿದ್ದಾರೆ. ಇದಕ್ಕೆ ನೀವು ಖರ್ಚು ಮಾಡೋ ಹಣದಲ್ಲಿ ನೀವು ಬೆಂಗಳೂರಿನಲ್ಲೊಂದು ಐಷಾರಾಮಿ ಫ್ಲಾಟ್ ಇಲ್ಲವೆ ಮನೆ ಖರೀದಿ ಮಾಡಬಹುದು.
ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ ಯಶಸ್ವಿ, 'ಇನ್ನು ಮುಂದೆ ಜಗತ್ತಲ್ಲಿ ಅಜ್ಜ-ಅಜ್ಜಿ ಆಗೋರೇ ಇಲ್ಲ'!
ಬಾರ್ಬಿ ಡಾಲ್ ರೂಪ ಪಡೆಯಲು ಎಷ್ಟು ನೀಡ್ಬೇಕು ಹಣ? : ನೀವು ಬಾರ್ಬಿ ಡಾಲ್ ನಂತೆ ಕಾಣ್ಬೇಕು, ಆಕೆಯಂತೆ ಎಲ್ಲರ ಗಮನ ಸೆಳೆಯಬೇಕು ಎಂದಾದ್ರೆ ನಿಮ್ಮ ಕೈನಲ್ಲಿ ಐದೋ ಆರೋ ಲಕ್ಷವಿದ್ರೆ ಸಾಲೋದಿಲ್ಲ. ಅಮೆರಿಕಾದ ಸರ್ಜನ್ (Surgeon) ಪ್ರಕಾರ, ನಿಮ್ಮ ಮುಖವನ್ನು ಬಾರ್ಬಿ ಡಾಲ್ ನಂತೆ ಬದಲಿಸಲು ಬರೋಬ್ಬರಿ 95 ಲಕ್ಷ ರೂಪಾಯಿ ಖರ್ಚು ಮಾಡ್ಬೇಕು. ಅಮೆರಿಕಾ ಡಾಲರ್ ನಲ್ಲಿ ಇದರ ಬೆಲೆ 1,20,000 ಡಾಲರ್. ಕೇವಲ ಬಾರ್ಬಿ ಡಾಲ್ ಮುಖ ಮಾತ್ರವಲ್ಲ ಬ್ರೆಸ್ಟ್ ಸೇರಿದಂತೆ ದೇಹದ ಅನೇಕ ಭಾಗದಲ್ಲಿ ಬದಲಾವಣೆ ಮಾಡಲಾಗುತ್ತದೆ. ಲಿಪೊಸಕ್ಷನ್, ಸಿಕ್ಸ್-ಪ್ಯಾಕ್ ಎಬಿಎಸ್ ಮತ್ತು ದೇಹದ ಇತರ ಭಾಗಗಳಿಂದ ಕೊಬ್ಬನ್ನು ಎದೆಗೆ ವರ್ಗಾಯಿಸುವಂತಹ ಕಾರ್ಯವಿಧಾನಗಳನ್ನು ಈ ಸರ್ಜರಿ ಒಳಗೊಂಡಿದೆ.
ಸಂಪೂರ್ಣ ಹರಿದಿರೋ ಜೀನ್ಸ್ ಲೇಟೆಸ್ಟ್ ಫ್ಯಾಷನ್, ಈ ಪ್ಯಾಂಟ್ ಬೆಲೆಯಲ್ಲಿ ಐಫೋನ್ ಕೊಳ್ಬೋದು!
ಬಾರ್ಬಿ ಡಾಲ್ ಆಗ್ಬೇಕೆಂದ್ರೆ ಎಷ್ಟು ಸರ್ಜರಿ ಮಾಡಿಸಿಕೊಳ್ಳಬೇಕು? : ಅಮೆರಿಕಾದ ಕ್ಯಾಮಿಯೊ ಸರ್ಜರಿ ಸೆಂಟರ್‌ನ ಪ್ಲಾಸ್ಟಿಕ್ ಸರ್ಜನ್ ಡಾ. ಸ್ಕಾಟ್ ಬ್ಲೇರ್ ಈ ಸರ್ಜರಿ ಮಾಡಲಿದ್ದಾರೆ. ಅವರ ಹೇಳಿಕೆ ಈಗ ವಿಶ್ವದಾದ್ಯಂತ ಸುದ್ದಿ ಮಾಡಿದೆ. ಸ್ಕಾಟ್ ಬ್ಲೇರ್ ಪ್ರಕಾರ, ಮಹಿಳೆಯರು ತಮ್ಮ ನೆಚ್ಚಿನ ಬಾರ್ಬಿ ಪಾತ್ರದ ನೋಟವನ್ನು ಪಡೆಯಬಹುದು. ಇದಕ್ಕಾಗಿ ಅವರ ದೇಹಕ್ಕೆ 3 ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಮುಖಕ್ಕೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಬಾರ್ಬಿ ಡಾಲ್ ಗುರುತಿಸೋದೇ ಅದ್ರ ಕೇಶ ವಿನ್ಯಾಸದ ಮೇಲೆ. ಹಾಗಾಗಿ ಕೇಶವಿನ್ಯಾಸಕ್ಕೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಬಾರ್ಬಿಯಂತ ಹೇರ್ ಸ್ಟೈಲ್ ಮಾಡಲಾಗುವುದು. ಅದು ಪರ್ಮನೆಂಟ್ ಆಗಿರಲಿದೆ. ಪಿಂಕ್ ನೈಲ್ಸ್ ಮತ್ತು ಟೀತ್ ವೈಟ್ನಿಂಗ್ ಶಸ್ತ್ರಚಿಕಿತ್ಸೆ ಕೂಡ ನಡೆಯಲಿದೆ. ಇದಲ್ಲದೆ ಮಹಿಳೆಯರ ದೇಹಕ್ಕೆ ತಕ್ಕಂತೆ ವಿವಿಧ ಚಿಕಿತ್ಸೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಸರ್ಜನ್. ಕೆಲವು ಮಹಿಳೆಯರಿಗೆ ಬ್ರೆಜಿಲಿಯನ್ ಬಟ್ ಲಿಫ್ಟ್ ಮಾತ್ರ ಮಾಡಬೇಕಾಗಿರುತ್ತದೆ. ಆದರೆ ಇನ್ನು ಕೆಲವು ಮಹಿಳೆಯರಿಗೆ ದೇಹದ ಕೆಲ ಭಾಗಗಳಿಂದ ಕೊಬ್ಬನ್ನು ತೆಗೆದು, ಎದೆ ಮತ್ತು ಸೊಂಟದ ಭಾಗಕ್ಕೆ ಅಳವಡಿಸಬೇಕಾಗುತ್ತದೆ ಎಂದು ಸರ್ಜನ್ ಹೇಳಿದ್ದಾರೆ.
ಪುರುಷರಿಗೂ ಇದೆ ಆಫರ್ : ಬರಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸರ್ಜನ್ ಆಫರ್ ನೀಡಿದ್ದಾರೆ. ಕೆನ್ ಡಾಲ್ ನಂತೆ ಕಾಣುವ ಶಸ್ತ್ರಚಿಕಿತ್ಸೆ ಮಾಡೋದಾಗಿ ಸರ್ಜನ್ ಹೇಳಿದ್ದಾರೆ.