ದೇಹದ ಮೇಲೆ 667 ಬಾರಿ ಮಗಳ ಹೆಸರನ್ ಟ್ಯಾಟೂ ಹಾಕಿಸಿಕೊಂಡ ಅಪ್ಪ!
ಜನರು ತಮಗಿಷ್ಟವಾದ ಕ್ಷೇತ್ರದಲ್ಲಿ ದಾಖಲೆ ನಿರ್ಮಾಣ ಮಾಡುವ ಗುರಿ ಹೊಂದಿರುತ್ತಾರೆ. ಕ್ರೀಡೆ, ಹವ್ಯಾಸ ಹೀಗೆ ನಾನಾ ಕ್ಷೇತ್ರದಲ್ಲಿ ದಾಖಲೆ ಬರೆದವರಿದ್ದಾರೆ. ಈ ವ್ಯಕ್ತಿ ಮಗಳ ಪ್ರೀತಿಯನ್ನು ಟ್ಯಾಟೂ ಮೂಲಕ ತೋರಿಸಿ ದಾಖಲೆ ನಿರ್ಮಾಣ ಮಾಡಿದ್ದಾನೆ.

ಮೈಮೇಲೆ ಚೆಂದದ ಒಂದೋ ಎರಡೋ ಟ್ಯಾಟು ಇರೋದನ್ನು ನೀವು ನೋಡಿರುತ್ತೀರಿ. ಜನರು ಫ್ಯಾಷನ್ ಗಾಗಿ ತಮ್ಮಿಷ್ಟದ, ನಮ್ಮ ಪ್ರೀತಿ ಪಾತ್ರರ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ. ಈಗಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಇಡೀ ಮೈಮೇಲೆಲ್ಲ ಹಚ್ಚೆ ಹಾಕಿಸಿಕೊಂಡು ದಾಖಲೆ ನಿರ್ಮಾಣ ಮಾಡ್ತಾರೆ. ಅವರಲ್ಲಿ ಯುಕೆಯ 49 ವರ್ಷದ ಮಾರ್ಕ್ ಓವನ್ ಇವಾನ್ಸ್ ಕೂಡ ಸೇರಿದ್ದಾರೆ.
ಹಿಂದಿನದಕ್ಕಿಂತ ಈ ಬಾರಿ ಹೆಚ್ಚು ಹಚ್ಚೆ ಹಾಕಿಸಿಕೊಂಡು ದಾಖಲೆ (Record) ಬರೆದಿದ್ದಾರೆ. ಮಾರ್ಕ್ ಓವನ್ ಇವಾನ್ಸ್ ತನ್ನ ಏಳು ವರ್ಷದ ಮಗಳು ಲೂಸಿ (Lucy) ಹೆಸರನ್ನು ತನ್ನ ದೇಹದ ಮೇಲೆ ಹಾಕಿಕೊಂಡಿದ್ದಾರೆ. ಬೆನ್ನು, ತೊಡೆ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಈಗ 400 ಕ್ಕೂ ಹೆಚ್ಚು ಹಚ್ಚೆ ಹಾಕಿಸಿಕೊಂಡಿರುವ ಇವಾನ್ಸ್ ಮೈಮೇಲೆ ಈಗ ಒಟ್ಟೂ 667 ಹಚ್ಚೆ (Tattoos) ಇದೆ.
ಮಾರ್ಕ್ ತನ್ನ ಬೆನ್ನಿನ ಮೇಲೆ 267 ಬಾರಿ ಲೂಸಿ ಟ್ಯಾಟೂಗಳನ್ನು ಹಾಕಿಕೊಳ್ಳುವ ಮೂಲಕ 2017 ರಲ್ಲಿ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ. ಆದ್ರೆ 2020 ರಲ್ಲಿ ಯುಎಸ್ ಎಯ 27 ವರ್ಷದ ಡೀಡ್ರಾ ವಿಜಿಲ್ ತನ್ನ ಹೆಸರನ್ನೇ 300 ಬಾರಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಇವಾನ್ಸ್ ದಾಖಲೆ ಮುರಿದಿದ್ದ.
ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಅಂತ ಏನೇನೋ ಮಾಡ್ಬೇಡಿ, ಇದನ್ನು ಟ್ರೈ ಮಾಡಿ ನೋಡಿ
ಮಾರ್ಕ್ ಈ ದಾಖಲೆಯನ್ನು ಮರಳಿ ಪಡೆಯಲು ನಿರ್ಧರಿಸಿದ್ದಲ್ಲದೆ ಬೆನ್ನು ಹಾಗೂ ತೊಡೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಮೂಲಕ ಮತ್ತೆ ದಾಖಲೆ ಬರೆದಿದ್ದಾನೆ. ಪ್ರತಿ ಕಾಲಿನ ಮೇಲೆ 200 ಟ್ಯಾಟೂಗಳಂತೆ 400 ಟ್ಯಾಟೂ ಹಾಕಲು ಐದೂವರೆ ಗಂಟೆಗಳನ್ನು ತೆಗೆದುಕೊಂಡಿದೆ. ಮಾರ್ಕ್, ಲೂಸಿ ಜನ್ಮದಿನ ಹಾಗೂ ಆಸ್ಪತ್ರೆಗೆ ಹಣ ನೀಡುವ ಉದ್ದೇಶದಿಂದ ಈ ದಾಖಲೆ ಬರೆಯುವ ನಿರ್ಧಾರಕ್ಕೆ ಬಂದಿದ್ದ. ಮಾರ್ಕ್ ತನ್ನ ದೇಹದ ಎಲ್ಲ ಕಡೆ ಮಗಳ ಹೆಸರನ್ನು ಬರೆದುಕೊಂಡಿದ್ದಾನೆ. ಇಬ್ಬರು ಟ್ಯಾಟೂ ಕಲಾವಿದರು ಮಾರ್ಕ್ ಗೆ ಒಂದೇ ಬಾರಿ ಟ್ಯಾಟೂ ಹಾಕಿದ್ದಾರೆ. ಇಬ್ಬರು ಒಂದೇ ಬಾರಿ ಹಾಕ್ತಿದ್ದ ಕಾರಣ ನೋವು ಕಡಿಮೆಯಿತ್ತು ಎಂದು ಮಾರ್ಕ್ ಹೇಳಿದ್ದಾನೆ.
ಆರಂಭದಲ್ಲಿ ಬರೀ ನೂರು ಹಚ್ಚೆ ಹಾಕುವ ಉದ್ದೇಶ ಹೊಂದಿದ್ದ ಮಾರ್ಕ್ ಗೆ ಇಷ್ಟೊಂದು ಸಾಧನೆ ಮಾಡಲು ಟ್ಯಾಟೂ ಕಲಾವಿದರು ನೆರವಾದರಂತೆ. ಇದರಿಂದಾಗಿ ಅವನಿಗೆ ಹೆಚ್ಚು ಹಣ ಸಂಗ್ರಹವಾಗಿದೆ. ದಾಖಲೆ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೆ. ಇದನ್ನು ಮಗಳಿಗೆ ಅರ್ಪಿಸುತ್ತೇನೆ ಎನ್ನುವ ಮಾರ್ಕ್, ಈ ದಾಖಲೆ, ಹೆಸರು ಸದಾ ನನ್ನ ಜೊತೆಗಿರುತ್ತದೆ ಎಂದು ಹೆಮ್ಮೆ ಪಡುತ್ತಾರೆ. ಮಾರ್ಕ್ ಪತ್ನಿ ಹೆಸರು ಕ್ಯಾಥರೀನ್. ಮಾರ್ಕ್ ಮತ್ತೆ ಮಕ್ಕಳನ್ನು ಪಡೆಯಲು ಇಷ್ಟಪಡ್ತಿಲ್ಲ. ಒಂದ್ವೇಳೆ ಪ್ಲಾನ್ ಮಾಡಿದ್ರೆ ಅದು ಇದಕ್ಕಿಂತ ಭಿನ್ನ ಹಾಗೂ ದೊಡ್ಡದಿರಬೇಕು ಎನ್ನುತ್ತಾರೆ.
ಬ್ರಿಟನ್ ಪ್ರಧಾನಿ ಪತ್ನಿ ಕರ್ನಾಟಕದ ಮಗಳು ಅಕ್ಷತಾ ಮೂರ್ತಿ ಡ್ರೆಸ್ ಕೋಡ್ ಗೆ ಭಾರತೀಯರು ಫಿದಾ
ಹಚ್ಚೆ ಹಾಕಿಸಿಕೊಂಡು ದಾಖಲೆ ಮಾಡಿದವರು : ಮಾರ್ಕ್ ಜೊತೆ ಇನ್ನೂ ಅನೇಕರು ತಮ್ಮ ಮೈಮೇಲೆ ಭಿನ್ನ ಹಚ್ಚೆ ಹಾಕಿಸಿಕೊಂಡು ದಾಖಲೆ ಬರೆದಿದ್ದಾರೆ. ದೇಹದ ಮೇಲೆ ಒಂದೇ ಕಾರ್ಟೂನ್ ಪಾತ್ರದ ಹೆಚ್ಚಿನ ಹಚ್ಚೆ ಹಾಕಿಸಿಕೊಂಡು ದಾಖಲೆ ಬರೆದವರು ನ್ಯೂಜಿಲ್ಯಾಂಡ್ ನ ಲೀ ವೀರ್. ಅವರು ತಮ್ಮ ಎಡಗೈಯಲ್ಲಿ 55 ಹೋಮರ್ ಸಿಂಪ್ಸನ್ ಟ್ಯಾಟೂಗಳನ್ನು ಹೊಂದಿದ್ದಾರೆ. ಅವರು ಮೊದಲು 2014 ರಲ್ಲಿ 41 ಹಚ್ಚೆಗಳೊಂದಿಗೆ ದಾಖಲೆ ಬರೆದಿದ್ದರು. ನಂತರ 2020 ರಲ್ಲಿ 14 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ದೇಹದ ಮೇಲೆ ಒಬ್ಬ ಸಂಗೀತಗಾರನ ಹೆಸರನ್ನು ಅತಿ ಹೆಚ್ಚು ಬಾರಿ ಹಚ್ಚೆ ಹಾಕಿಕೊಂಡು ದಾಖಲೆ ಬರೆದ ವ್ಯಕ್ತಿ ಹೆಸರು ಯುಕೆಯ ನಿಕ್ಕಿ ಪ್ಯಾಟರ್ಸನ್. ಅವರು ಎಮಿನೆಮ್ ನ 15 ಟ್ಯಾಟೂಗಳನ್ನು ಹಾಕಿಕೊಂಡಿದ್ದಾರೆ. ಇನ್ನು ಗ್ರೀಸ್ ನ ಕೋಸ್ಟಾಸ್ ಮೌಟ್ಸಿಯೋಸ್ ತನ್ನ ದೇಹದ ಮೇಲೆ ಒಂದೇ ಕಾಮಿಕ್ ಬುಕ್ ನಲ್ಲಿ ಬರುವ ಪಾತ್ರ ಬ್ಯಾಟ್‌ಮ್ಯಾನ್ ಟ್ಯಾಟೂವನ್ನು ಒಂಬತ್ತು ಬಾರಿ ಹಾಕಿಕೊಂಡು ದಾಖಲೆ ಬರೆದಿದ್ದಾರೆ.