ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಅಂತ ಏನೇನೋ ಮಾಡ್ಬೇಡಿ, ಇದನ್ನು ಟ್ರೈ ಮಾಡಿ ನೋಡಿ
ಮುಖದ ಸೌಂದರ್ಯ ಎಲ್ಲರನ್ನು ಸೆಳೆಯುತ್ತೆ. ಮುಖ ಕಪ್ಪಗಾದ್ರೆ, ಅಲ್ಲಲ್ಲಿ ಕಲೆಯಾದ್ರೆ ಇದು ಮುಖದ ಅಂದವನ್ನು ಕಡಿಮೆ ಮಾಡುತ್ತೆ. ಬ್ಯೂಟಿಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲೇ ಬ್ಯೂಟಿ ಮಾಸ್ಕ್ ತಯಾರಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಎದುರಿಸಬೇಕಾದ ಸಮಸ್ಯೆಗಳಲ್ಲಿ ಬಹುಮುಖ್ಯವಾದದ್ದು ಟ್ಯಾನಿಂಗ್. ಸೂರ್ಯನ ಬೆಳಕಿನಿಂದ ಚರ್ಮದ ಮೈಬಣ್ಣ ಹಾಳಾಗುತ್ತದೆ. ಅದನ್ನು ಟ್ಯಾನಿಂಗ್ ಎಂದು ಕರೆಯಲಾಗುತ್ತದೆ. ಟ್ಯಾನಿಂಗ್ ನಿಂದಾಗಿ ಚರ್ಮದ ನೈಸರ್ಗಿಕ ಹೊಳಪು ಮರೆಯಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವು ಸ್ಥಳಗಳಲ್ಲಿ ಕೊಳಕು ಸಂಗ್ರಹವಾದಂತೆ ತೋರುತ್ತದೆ. ದೇಹದ ಇತರ ಭಾಗಗಳಿಗಿಂತ ಮುಖ ಟ್ಯಾನ್ ಆದ್ರೆ ಮಹಿಳೆಯರು ಸ್ವಲ್ಪ ಟೆನ್ಷನ್ ಗೆ ಒಳಗಾಗ್ತಾರೆ. ಬೇಸಿಗೆ ಇರಲಿ ಇಲ್ಲ ಮಳೆಗಾಲ, ಚಳಿಗಾಲವಿರಲಿ ಮುಖ ಬಂಗಾರದಂತೆ ಹೊಳೆಯಬೇಕು ಎಂದುಕೊಳ್ತಾರೆ. ಮುಖ ಹಾಗೂ ಕತ್ತು, ಕೈ ಗೋಲ್ಡನ್ ಫಿನಿಶಿಂಗ್ ಪಡೆಯಬೇಕು, ಟ್ಯಾನ್ ಕಡಿಮೆ ಆಕ್ಬೇಕು ಎಂದಾದ್ರೆ ನೀವು ಮನೆಯನ್ನೇ ಪಾರ್ಲರ್ ಮಾಡಿಕೊಳ್ಳಬಹುದು. ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಬ್ಯೂಟಿ ಪ್ರಾಡಕ್ಟ್ ಆಗಿ ಬಳಕೆ ಮಾಡಬಹುದು. ನಾವಿಂದು ನಿಮ್ಮ ದೇಹ ಗೋಲ್ಡನ್ ಫಿನಿಶಿಂಗ್ ಪಡೆಯಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ದೇಹ ಡಿ ಟ್ಯಾನ್ (De Tan) ಆಗಿ ಗೋಲ್ಡನ್ ಬಣ್ಣ ಬರಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ? :
ಡಿ ಟ್ಯಾನ್ ಮಾಸ್ಕ್ (Mask) ಗೆ ಬೇಕಾಗುವ ಸಾಮಗ್ರಿ : ಅರ್ಧ ಕಪ್ ತೆಂಗಿನ ಎಣ್ಣೆ, ಒಂದು ಚಮಚ ಅರಿಶಿನ, ಕಾಲು ಕಪ್ ಮೊಸರು, ಒಂದು ಚಮಚ ಕಡಲೆ ಹಿಟ್ಟು, ಅರ್ಧ ಟೊಮಾಟೊ ಹಣ್ಣಿನ ರಸ, ಅರ್ಧ ನಿಂಬೆ ಹಣ್ಣಿನ ರಸ.
ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!
ಡಿ ಟ್ಯಾನ್ ಮಾಸ್ಕ್ ತಯಾರಿಸುವ ವಿಧಾನ : ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ. ಅದಕ್ಕೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿ. ನಂತ್ರ ಕಾಲು ಕಪ್ ಮೊಸರನ್ನು ಸೇರಿಸಿ. ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ. ಅರ್ಧ ಕಟ್ ಮಾಡಿದ ಟೊಮಾಟೊ ಹಣ್ಣಿನ ರಸವನ್ನು ಇದಕ್ಕೆ ಬೆರೆಸಿ. ಅರ್ಥ ನಿಂಬೆ ರಸವನ್ನು ಬೆರೆಸಿ. ಈ ಎಲ್ಲ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಮುಖ, ಕತ್ತು, ಕೈ ಸೇರಿದಂತೆ ಟ್ಯಾನ್ ಆದ ಎಲ್ಲ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಎರಡು ನಿಮಿಷ ಮಸಾಜ್ ಮಾಡಿದ ನಂತ್ರ ಶುದ್ಧ ನೀರಿನಲ್ಲಿ ತೊಳೆದುಕೊಳ್ಳಿ. ವಾರಕ್ಕೆ ನೀವು ಎರಡು ಬಾರಿ ಈ ಮಾಸ್ಕ್ ಬಳಸಬೇಕು. ಹೀಗೆ ಮಾಡಿದಲ್ಲಿ ನೀವು ಮ್ಯಾಜಿಕ್ ನೋಡ್ಬಹುದು. ನಿಮ್ಮ ಮುಖ, ದೇಹ ವಿಶೇಷ ಕಾಂತಿಯನ್ನು ಪಡೆಯುತ್ತದೆ.
ಇದಲ್ಲದೆ ನೀವು ಇನ್ನು ಕೆಲ ಮಾಸ್ಕ್ ಗಳನ್ನು ಟ್ಯಾನಿಂಗ್ ಹೋಗಲಾಡಿಸಲು ಬಳಸಬಹುದು.
1. ಓಟ್ಸ್ ಮಾಸ್ಕ್ : ಒಂದು ಪಾತ್ರೆಗೆ ಅಗತ್ಯಕ್ಕೆ ಅನುಗುಣವಾಗಿ ಪುಡಿ ಮಾಡಿದ ಓಟ್ಸ್ ಹಾಕಿ. ಅದಕ್ಕೆ ಮೊಸರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ನಂತ್ರ ಮುಖ ತೊಳೆಯಿರಿ.
ಈ ಹೆಣ್ಣು ಸುಂದರವಾಗಿ ಕಾಣಬೇಕು ಅಂದ್ರೆ ಹೀಗೂ ಮಾಡ್ತಾರಾ? ವ್ಯಾಕ್!
2. ಮೊಸರು - ಜೇನುತುಪ್ಪ : ಮೊಸರು ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಟ್ಯಾನಿಂಗ್ ಕಡಿಮೆ ಆಗುತ್ತದೆ.
3. ಹಾಲು ಮತ್ತು ಸೌತೆಕಾಯಿ : ಸೌತೆಕಾಯಿಯನ್ನು ಹಾಲಿನಲ್ಲಿ ಅದ್ದಿ ಅಥವಾ ಸೌತೆಕಾಯಿ ರಸಕ್ಕೆ ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿದ್ರೆ ಸನ್ ಬರ್ನ್ ಸಮಸ್ಯೆ ನಿವಾರಣೆಯಾಗುತ್ತದೆ.
4. ಬಾಳೆ ಹಣ್ಣು – ಸಕ್ಕರೆ : ಬಲಿತ ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿ, ಅದಕ್ಕೆ ಸಕ್ಕರೆ ಸೇರಿಸಿ ಮುಖಕ್ಕೆ ಹಚ್ಚಿ. 10 – 15 ನಿಮಿಷ ಬಿಟ್ಟು ಮುಖ ವಾಶ್ ಮಾಡಿದ್ರೆ ಟ್ಯಾನಿಂಗ್ ಕಡಿಮೆಯಾಗುತ್ತದೆ.