ಸ್ಕರ್ಟ್‌ನಲ್ಲಿ ಎಷ್ಟುವಿಧ, ಅವು ಯಾವುವು?
ಯಾವುದೋ ಒಂದು ಬಣ್ಣ, ಮತ್ಯಾವುದೋ ಹೆಸರು, ಇನ್ಯಾವುದೋ ಡ್ರೆಸ್.. ಹೆಣ್ಮಕ್ಕಳನ್ನು ಕ್ಷಣ ಕಾಲ ಭಾವುಕರನ್ನಾಗಿ ಮಾಡಬಲ್ಲದು. ಮೊನ್ನೆ ಸಂಜೆ ಐದರ ಸುಮಾರಿಗೆ ಅವಳ ಫೋನು. ಮತ್ತೇನಿಲ್ಲ, ‘ಬೋ..ರು’ ಅಂತ. ಅದು ಪೀಠಿಕೆ. ಆ ನೆವದಲ್ಲಿ ಮುಂದೇನೋ ಕೇಳೋದು ಅವಳ ಸ್ವಭಾವ. ‘ನಾನು ಸ್ಟ್ರೀಟ್ ವಾಕ್’ ಮಾಡಬೇಕು ಅಂದಳು. ನಗು ಬಂತು. ಸ್ಟ್ರೀಟ್‌ವಾಕ್ ಅಂದ್ರೆ ಅವಳರ್ಥದಲ್ಲಿ ಎಂಜಿ ರೋಡ್, ಬ್ರಿಗೇಡ್ ರೋಡ್‌ಗೆ ರೌಂಡ್ ಹೊಡಿಯೋದು. ರೋಡ್‌ಬದಿ ಯಾವುದೋ ಯಿಯರ್ ರಿಂಗ್‌ಅನ್ನೇ ಗಂಟೆಗಟ್ಟಲೆ ನೋಡಿ, ಇನ್ನೇನು ಪರ್ಚೇಸ್ ಮಾಡ್ಬೇಕು ಅನ್ನುವಾಗ ಬೇಡ ಬಿಡು ಅಂತ ಮುಂದೆ ನಡೆದುಬಿಡೋದು. ಗುರಾಯಿಸುತ್ತಾ ನಿಲ್ಲುವ ಅಂಗಡಿಯವನ ಸಿಟ್ಟಿಗೆ ನಾನು ಬಲಿಪಶುವಾಗೋದು.. ಹೀಗಾಗಿ ಇವಳು ಸ್ಟ್ರೀಟ್‌ವಾಕ್ ಅಂದರೆ ಬೆವರುತ್ತೇನೆ.
ವಿಶಾಂತ ಕಮ್ಮರಡಿ
ಮೊನ್ನೆ ಹೋದಾಗ ಒಂದು ವಿಚಿತ್ರ ಆಯ್ತು. ಫುಟ್‌ಪಾತ್ ಮೇಲೆ ಹರವಿಟ್ಟಸ್ಕರ್ಟ್‌ಗಳನ್ನು ನೋಡುತ್ತಾ ಕೂತಿದ್ಲು. ಅಪಾಯದ ಅರಿವಿದ್ದ ನಾನು ಎರಡು ಹೆಜ್ಜೆ ಮುಂದೆಯೇ ನಿಂತು ನೋಡುತ್ತಿದ್ದೆ. ಅವಳು ಸುಮ್ನೆ ನಿಂತು ನೋಡಿದ್ರೂ, ಸುತರಾಂ ಇಷ್ಟಆಗಲ್ಲ ಅಂತ ಗೊತ್ತಿತ್ತು. ಯಾಕೆಂದರೆ ಅವು ತೀರಾ ಹಳ್ಳಿ ಹುಡುಗಿಯರು ಜಾತ್ರೆಗೆ ಧರಿಸುವಂಥಾ ಫಳ ಫಳ ಸ್ಕರ್ಟ್. ಆದರೆ ಎಲ್ಲ ಯೋಚನೆಗಳನ್ನೂ ಬುಡಮೇಲು ಮಾಡಿ ಮುಖದ ತುಂಬ ನಗೆ ತುಳುಕಿಸುತ್ತಾ ಅವಳು ಸ್ಕರ್ಟ್ ಪ್ಯಾಕ್ ಮಾಡಿಸಿಯೇ ಬಿಟ್ಟಳು. ದುಡ್ಡನ್ನೂ ಅವಳೇ ಕೊಟ್ಟು, ಆ ಕವರ್‌ಅನ್ನು ಎದೆಗವಚಿಕೊಂಡು ಮೌನವಾಗಿ ನಡೆದಳು. ಎಂಥಾಯ್ತು ಅಂತ ದೇವ್ರಾಣೆ ಗೊತ್ತಾಗ್ಲಿಲ್ಲ. ಆಮೇಲೆ ಗೊತ್ತಾದದ್ದು, ಅಂಥದ್ದೇ ಸ್ಕರ್ಟ್‌ಅನ್ನು ಅವಳೂ ಬಾಲ್ಯದಲ್ಲಿ ತೊಟ್ಟು ಮೆರೆಯುತ್ತಿದ್ದಳು. ಅದನ್ನು ನೋಡುತ್ತಲೇ ಊರು, ಅಪ್ಪ, ಅಮ್ಮ ಎಲ್ಲ ನೆನಪಾಗಿ ಹನಿಗಣ್ಣಾದಳು. ಅವಳನ್ನು ಸಮಾಧಾನಿಸಿದರೂ ನನಗೆ ಒಂದು ಡೌಟ್ ಇತ್ತು. ನೆನಪಲ್ಲಿ ಸ್ಕರ್ಟ್ ಖರೀದಿಸಿದ್ದೇನೋ ಸರಿ, ಆದರೆ ಅಂಥಾ ಜಾತ್ರೆ ಸ್ಕರ್ಟ್‌ಅನ್ನು ಈಗವಳು ತೊಡಲಿಕ್ಕುಂಟಾ ಅಂತ.
ಪಾದರಕ್ಷೆ ಎಂಬ ನಿರ್ಲಕ್ಷ್ಯ ಬೇಡ; ಶೂಸ್ ನೋಡಿ ವ್ಯಕ್ತಿತ್ವ ಅಳೆಯುವ ಕಾಲವಿದು
ಇದಾಗಿ ಎರಡೇ ದಿನಕ್ಕೆ ಪ್ರಿಯಾಂಕಾ ಚೋಪ್ರಾ, ಅಲಿಯಾ ಭಟ್ ಮೊದಲಾದವರು ಇಂಥದ್ದೇ ಸ್ಕರ್ಟ್ ತೊಟ್ಟು ಫೋಟೋಗೆ ಫೋಸ್ ಕೊಟ್ಟರು ಎಂಬಲ್ಲಿಗೆ ನನ್ನ ಡೌಟ್ ಕ್ಲಿಯರ್ ಆಯ್ತು.
ಮೆಟಾಲಿಕ್ ಸ್ಕರ್ಟ್
2020ಯಲ್ಲಿ ಟ್ರೆಂಡಿಂಗ್‌ನಲ್ಲಿರೋ ಸ್ಕರ್ಟ್. ಫಳ ಫಳ ಮಿರುಗುವ ಲೋಹದ ಬಣ್ಣ. ಇದು 2016 ರಲ್ಲಿ ಸಖತ್ ಫೇಮಸ್ ಆಗಿತ್ತು. ಮಾಧುರಿ ದೀಕ್ಷಿತ್‌ರಿಂದ ಹಿಡಿದು ಅಲಿಯಾ ಭಟ್‌ವರೆಗೆ ಹಲವಾರು ತಾರೆಯರು ನೆರಿಗೆಯುಳ್ಳ ಮೆಟಾಲಿಕ್ ಸ್ಕರ್ಟ್ ಹಾಕಿ ಮಿಂಚಿದ್ರು. ಈಗ ಮತ್ತೆ ಈ ಟ್ರೆಂಡ್ ಬಂದಿದೆ. ಈ ಸ್ಟೈಲ್‌ನಲ್ಲಿ ಸ್ಕರ್ಟ್ ಡಿಸೈನ್ ಹಾಗೇ ಇದ್ದರೂ ಬ್ಲೌಸ್ ಡಿಸೈನ್ ವ್ಯತ್ಯಾಸವಾಗಿದೆ. ಕತ್ತಿನ ಸುತ್ತ ಆವರಿಸಿಕೊಳ್ಳುವ, ಬಟರ್‌ಫ್ಲೈ ಸ್ಲೀವ್‌್ಸ ಇರುವ ಟಾಪ್‌ಗಳನ್ನು ಮೆಟಾಲಿಕ್ ಸ್ಕರ್ಟ್ ಜೊತೆಗೆ ಪೇರ್ ಮಾಡಬಹುದು. ಈ ಡ್ರೆಸ್ಸೇ ಹೆಚ್ಚು ಥಳುಕಾಗಿರೋ ಕಾರಣ ಮಿನಿಮಲ್ ಮೇಕಪ್ ಮತ್ತು ಆ್ಯಕ್ಸೆಸರೀಸ್ ಸಾಕು.
ಪ್ಲೇನ್ ಸ್ಕರ್ಟ್
ಸನ್ನಿ ಲಿಯೋನ್ ಇತ್ತೀಚೆಗೆ ಈ ಬಗೆಯ ಸ್ಕರ್ಟ್ ತೊಟ್ಟು ಸಲ್ಮಾನ್‌ಖಾನ್ ಜೊತೆಗೆ ಪ್ರೋಗ್ರಾಂ ಒಂದರಲ್ಲಿ ಕಾಣಿಸಿಕೊಂಡರು. ಸುತ್ತ ನೆರಿಗೆ ಇರುವ, ನ್ಯೂಡ್ ಪ್ಲೇನ್ ಕಲರ್‌ನ ಈ ಸ್ಕರ್ಟ್ ನೋಡಿದಾಗ ನಮ್ಮ ಸ್ಕೂಲ್ ಡೇಸ್‌ನಲ್ಲಿ ಹುಡುಗೀರು ತೊಟ್ಟುಕೊಂಡು ಬರುತ್ತಿದ್ದ ಯುನಿಫಾರಂ ಸ್ಕರ್ಟ್ ನೆನಪಾಗದೇ ಇರಲು ಚಾನ್ಸೇ ಇಲ್ಲ. ಇದಕ್ಕೆ ಕಾಂಬಿನೇಶನ್ ಆಗಿ ಆಫ್ ಶೋಲ್ಡರ್ ಮಿನಿ ಕ್ರಾಪ್‌ಟಾಪ್ ಇದೆ. ಈ ಡಿಸೈನ್ ಎಷ್ಟುಸಿಂಪಲ್ಲೋ ಅಷ್ಟೇ ಅಟ್ರಾಕ್ಟಿವ್ ಅಂತಾರೆ ಫ್ಯಾಶನ್ ಪ್ರಿಯರು.
2020ರ ನಿಮ್ಮ ಕಾಸ್ಟ್ಯೂಮ್ಸ್ ಗೆ ನಮ್ಮ ಪ್ಲ್ಯಾನ್ ಏನ್ ಗೊತ್ತಾ?
ಉದ್ದ ಪಾರದರ್ಶಕ ಸ್ಕರ್ಟ್
ಇದೊಂದು ಹೊಸ ಡಿಸೈನ್. ಪಾರದರ್ಶಕ ಅಂದ ಮಾತ್ರಕ್ಕೆ ಇಡೀ ಸ್ಕರ್ಟೇ ಪಾರದರ್ಶಕ ಆಗಿರೋದಿಲ್ಲ. ದಪ್ಪ ಮಿನಿ ಸ್ಕರ್ಟ್ ಮೇಲೆ ಉದ್ದದ ಪಾರದರ್ಶಕ ಲಂಗ ಇರುತ್ತದೆ. ನೀವು ನೀಳಕಾಲಿನ ಸುಂದರಿಯಾಗಿದ್ದರೆ ಈ ಸ್ಟೈಲ್ ಮಾಡಬಹುದು. ಇತರರಿಗೂ ಚಂದವೇ ಕಾಣುತ್ತೆ. ಇದಕ್ಕೆ ಕಾಂಬಿನೇಶನ್ ಆಗಿ ಕ್ರಾಪ್‌ಟಾಪ್ ಇದ್ರೆ ಸಖತ್ತಾಗಿರುತ್ತೆ. ಹಸಿರು, ಹಳದಿ ಬಣ್ಣಗಳ ಸ್ಕರ್ಟ್ ಇದ್ದರೆ ಇದಕ್ಕೆ ಕಪ್ಪು ಬಣ್ಣದ ಕ್ರಾಪ್‌ಟಾಪ್ ಚೆನ್ನಾಗಿರುತ್ತೆ.
ಇದಲ್ಲದೆ ಡೆನಿಮ್ ಸ್ಕರ್ಟ್‌ಗಳು, ಮೊನೊಕ್ರೋಮ್ ಸ್ಕರ್ಟ್, ಕಲಂಕಾರಿಯಂಥಾ ದೇಸಿ ಟಾಪ್- ಪ್ಲೇನ್ ಸ್ಕರ್ಟ್ ಇತ್ಯಾದಿ ಸ್ಕರ್ಟ್ ಟ್ರೆಂಡ್‌ಗಳೂ ಚಾಲ್ತಿಯಲ್ಲಿವೆ. ಮೆಟಾಲಿಕ್‌ನಲ್ಲಿ ಬಂಗಾರದ ಬಣ್ಣದ ಸ್ಕರ್ಟ್ ಇದ್ದರೆ ಯಾವ ಕ್ರಾಪ್‌ಟಾಪ್‌ಗೂ ತೊಟ್ಟುಕೊಳ್ಳಬಹುದು. ಈಗಿನ ಟ್ರೆಂಡ್ ಪ್ರಕಾರ ಸ್ಕರ್ಟ್‌ಗೆ ಕ್ರಾಪ್‌ಟಾಪ್ ಬೆಸ್ಟ್ ಕಾಂಬಿನೇಶನ್. ಸನ್ನಿ ಲಿಯೋನ್ ಧರಿಸಿದಂಥಾ ಆಫ್ ಶೋಲ್ಡ್ ಟಾಪ್ ಮತ್ತು ನ್ಯೂಡ್ ಕಲರ್ ಸ್ಕರ್ಟ್ ಟ್ರೈ ಮಾಡಬಹುದು. ಇವಕ್ಕೆಲ್ಲ ಮೇಕಪ್, ಆ್ಯಕ್ಸೆಸರೀಸ್ ಏನೂ ಇಲ್ಲದಿದ್ರೂ ನಡಿಯುತ್ತೆ. ಹೀಲ್ಸ್ ಇರುವ ಸ್ಯಾಂಡಲ್ಸ್ ಧರಿಸಿ. ಕಣ್ಣುಗಳು ಹೈಲೈಟ್ ಆಗುವಂಥಾ ಮೇಕಪ್ ಮಾಡಿ.