ಶಾಂಪಿಂಗ್‍ಗೆ ಹೋದಾಗ ಮಹಿಳೆಯರಿಗೆ ಡ್ರೆಸ್‍ಗಳಷ್ಟೇ ಆಕರ್ಷಕವಾದ ಇನ್ನೊಂದು ವಸ್ತುವೆಂದರೆ ಶೂಗಳು.ಹೊಸ ವಿನ್ಯಾಸದ, ವಿವಿಧ ಬಣ್ಣಗಳ ಶೂಗಳು ಕಣ್ಣಿಗೆ ಬಿದ್ದರೆ ಸಾಕು, ಅದನ್ನು ಖರೀದಿಸಿ ತಂದು ಶೂ ಸ್ಟ್ಯಾಂಡ್‍ನಲ್ಲಿಟ್ಟ ಮೇಲೆಯೇ ಮನಸ್ಸಿಗೆ ನೆಮ್ಮದಿ. ಡ್ರೆಸ್‍ನಷ್ಟೇ ನಾವು ಧರಿಸುವ ಶೂಗಳಿಗೂ ಮಹತ್ವ ನೀಡುವುದು ಅಗತ್ಯ. ಏಕೆ ಅಂತೀರಾ? ನಾವು ಧರಿಸುವ ಡ್ರೆಸ್ ಮಾತ್ರವಲ್ಲ,ಶೂಗಳು ಕೂಡ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ.ಶೂ ವ್ಯಕ್ತಿಯ ಗುಣ ವಿಶೇಷಗಳನ್ನು ಪ್ರತಿಬಿಂಬಿಸುವ ಜೊತೆಗೆ ಅವರ ಕುರಿತು ಉಪಯುಕ್ತ ಮಾಹಿತಿಗಳನ್ನು ಹೊರಹಾಕಬಲ್ಲದು ಎಂಬುದನ್ನು ಅನೇಕ ಅಧ್ಯಯನಗಳು  ದೃಢಪಡಿಸಿವೆ. ಹಾಗಾದ್ರೆ ನೀವು ಧರಿಸುವ ಪಾದರಕ್ಷೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತೆ?

ಫ್ಲ್ಯಾಟ್ಸ್: ನೀವು ಫ್ಲ್ಯಾಟ್ ಪಾದರಕ್ಷೆಗಳನ್ನು ಇಷ್ಟಪಡುತ್ತಿದ್ದೀರಿ ಎಂದರೆ ನೀವು ಸದಾ ಹೊರಗಡೆ ಸುತ್ತಾಡಲು ಬಯಸುವ ವ್ಯಕ್ತಿ. ದಿನವಿಡೀ ಚಟುವಟಿಕೆಯಿಂದ ಆ ಕಡೆ ಈ ಕಡೆ ಸುತ್ತಾಡಲು ಇಷ್ಟಪಡುತ್ತೀರಿ. ಫ್ಲ್ಯಾಟ್ ಪಾದರಕ್ಷೆಗಳನ್ನು ಇಷ್ಟಪಡುವ ವ್ಯಕ್ತಿಗಳು ಫ್ಯಾಷನ್‍ಗಿಂತ ಕಂಫರ್ಟ್ ಹಾಗೂ ಬಾಳಿಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ.ಇವರಿಗೆ ತಾವು ಧರಿಸುವ ಶೂ ಪಾದಗಳಿಗೆ ರಕ್ಷಣೆ ನೀಡಿದರೆ ಸಾಕು,ಬೇರೆ ಯಾವುದೇ ವಿಚಾರಗಳ ಬಗ್ಗೆಯೂ ಇವರು ತಲೆಕೆಡಿಸಿಕೊಳ್ಳುವುದಿಲ್ಲ.ಇವರು ಸರಳತೆಗೆ ಮಾರು ಹೋಗುತ್ತಾರೆ.

ನೈಲ್ ಪಾಲಿಶ್ ನೈಸ್ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ

ಹೈ ಹೀಲ್ಸ್: ನೀವು ಹೀಲ್ಸ್ ಧರಿಸುವವರಾಗಿದ್ದರೆ ಖಂಡಿತಾ ಆತ್ಮವಿಶ್ವಾಸ ಹೊಂದಿರುವ ಮಹಿಳೆ. ಪ್ರತಿದಿನ ಆಫೀಸ್, ಕಾರ್ಯಕ್ರಮ, ಪಾರ್ಟಿ..ಹೀಗೆ ಎಲ್ಲ ಸ್ಥಳಗಳಿಗೂ ಹೀಲ್ಸ್ ಧರಿಸಿ ಆರಾಮವಾಗಿ ಹೋಗಿ ಬರುವ ಮಹಿಳೆಯಲ್ಲಿ ಸ್ತ್ರೀವಾದಿ ಧೋರಣೆ ಎದ್ದು ಕಾಣುತ್ತದೆ. ಸ್ಟಿಲೆಟ್ಟೋಸ್ ಹಾಗೂ ಕಿಟ್ಟನ್ ಹೀಲ್ಸ್ಗಳು ನಿಮ್ಮೊಳಗಿರುವ ಉತ್ತಮ ಅಭಿರುಚಿ ಹಾಗೂ ಆಧುನಿಕತೆಯನ್ನು ಸೂಚಿಸುತ್ತವೆ. ಪಾಯಿಟೆಂಡ್ ಹೀಲ್ಸ್ ಧರಿಸುವ ವ್ಯಕ್ತಿಗಳು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅದಕ್ಕೆ ಅಗತ್ಯವಾದ ಆತ್ಮವಿಶ್ವಾಸ ಕೂಡ ಅವರಲ್ಲಿರುತ್ತದೆ. ಹೀಲ್ಸ್ ನೀವು ಗ್ಲಾಮರಸ್, ಸಮಾಧಾನ ಚಿತ್ತ ಹಾಗೂ ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡುವ ಗುಣ ಹೊಂದಿರುವವರು ಎಂಬುದನ್ನು ಸೂಚಿಸುತ್ತದೆ. ಹೀಲ್ಸ್ ಧರಿಸುವ ವ್ಯಕ್ತಿಗಳು ಬದುಕನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡುವ ಸಾಮಥ್ರ್ಯ ಹೊಂದಿರುತ್ತಾರೆ.

ಫ್ಲಿಪ್-ಫ್ಲಾಪ್ಸ್: ಈ ಪಾದರಕ್ಷೆಗಳನ್ನು ಧರಿಸುವವರು ಸದಾ ಖುಷಿ ಖುಷಿಯಾಗಿರಲು ಬಯಸುವ ಜೊತೆಗೆ ಕಂಫರ್ಟ್ ಇಷ್ಟಪಡುತ್ತಾರೆ. ಫ್ಲಿಪ್-ಫ್ಲಾಪ್ಸ್ ಮನೆಯ ಒಳಗಡೆ ಧರಿಸಲು ಅತ್ಯಂತ ಸೂಕ್ತವಾದ ಚಪ್ಪಲಿಗಳಾಗಿವೆ.ರಜೆಯಲ್ಲಿ ಸುತ್ತಾಡಲು ಹೋಗುವಾಗ ದುಬಾರಿ ಬೆಲೆಯ ಫ್ಲಿಪ್-ಫ್ಲಾಪ್ಸ್ ಚಪ್ಪಲಿಗಳನ್ನು ನೀವು ಬಳಸುತ್ತೀರಾದರೆ ಇದು ನಿಮ್ಮೊಳಗಿನ ಅದ್ದೂರಿತನವನ್ನು ಸೂಚಿಸುತ್ತದೆ. ಒಂದು ವೇಳೆ ನೀವು ಫ್ಲಿಪ್-ಫ್ಲಾಪ್ಸ್ ಪಾದರಕ್ಷೆಗಳನ್ನು ಅದು ಸೂಟಾಗದ ಸಂದರ್ಭಗಳಿಗೆ ಬಳಸಿದರೆ ಜೀವನದ ಬಗ್ಗೆ ನೀವು ಗಂಭೀರ ಚಿಂತನೆ ಹೊಂದಿಲ್ಲ ಎಂದರ್ಥ.

2020 ಗೆ ಈ ಸೀರೆಗಳು ನಿಮ್ಮ ವಾರ್ಡ್‌ರೋಬ್‌ ತುಂಬಲಿ

ಸ್ನೀಕರ್ಸ್: ನೀವು ಲಿಮಿಟೆಡ್ ಎಡಿಷನ್ ಸ್ನೀಕರ್ಸ್ ಧರಿಸುವುದನ್ನು ಇಷ್ಟಪಡುತ್ತೀರಾದರೆ ನೀವು ಸ್ಟೈಲಿಷ್ ಆಗಿ ಕಾಣಬಯಸುತ್ತೀರಿ ಎಂದರ್ಥ. ನಿಮಗೆ ಲೇಟೆಸ್ಟ್ ಟ್ರೆಂಡ್ಸ್ ಮಾಹಿತಿಯಿರುವುದು ಮಾತ್ರವಲ್ಲ, ಅಂಥ ಶೂಗಳನ್ನು ಧರಿಸಲು 10-15 ಸಾವಿರ ರೂ. ವ್ಯಯಿಸಲು ಹಿಂದೆಮುಂದೆ ನೋಡುವುದಿಲ್ಲ.ನೀವು ಬಹುಮುಖ ವ್ಯಕ್ತಿತ್ವ ಹೊಂದಿದ್ದು, ಸದಾ ಎಕ್ಸ್ಪೆರಿಮೆಂಟ್ ಮಾಡಲು ಬಯಸುತ್ತಿರುತ್ತೀರಿ.ಅಷ್ಟೇ ಅಲ್ಲ, ಗುಂಪಿನಲ್ಲಿ ನಾನು ಎದ್ದು ಕಾಣಬೇಕು ಎಂಬ ಬಯಕೆ ನಿಮ್ಮಲ್ಲಿರುತ್ತದೆ.ಉತ್ಸಾಹಿಯಾಗಿರುವ ನೀವು ಅಂದ್ಕೊಂಡಿದ್ದನ್ನು ಸಾಧಿಸುವ ಛಲ ಹೊಂದಿರುತ್ತೀರಿ. ಬ್ರ್ಯಾಂಡೆಡ್ ಅಲ್ಲದ ಸ್ನೀಕರ್ಸ್ ಶೂಗಳನ್ನು ಧರಿಸುವ ವ್ಯಕ್ತಿ ನೀವಾಗಿದ್ದರೆ, ವೈಯಕ್ತಿಕ ಸ್ಟೈಲ್ ಹಾಗೂ ಫ್ಯಾಷನ್‍ಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದಾಯಿತು. ಟ್ರೆಂಡ್ಸ್ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ. ಕೈಗೆಟುಕುವ ದರದಲ್ಲಿ ಕಂಫರ್ಟ್ ಆಗಿರುವ ಶೂಗಳನ್ನು ನೀವು ಇಷ್ಟಪಡುತ್ತೀರಿ.ಬ್ರ್ಯಾಂಡ್‍ಗಳು ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂಬುದನ್ನು ನೀವು ಒಪ್ಪುವುದಿಲ್ಲ. ಉದ್ಯೋಗದ ವಿಚಾರದಲ್ಲಿ ಸಂಘಟಿತ, ಗುರಿ ಕೇಂದ್ರೀಕೃತ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ ನೀವಾಗಿರುತ್ತೀರಿ.  

ಮದುವೆ ದಿನ ಮಿರಿ ಮಿರಿ ಮಿಂಚಬೇಕೇ?

ಸ್ಟ್ರಾಪ್ಪೆ ಗ್ಲಾಡಿಯೇಟರ್ ಸ್ಯಾಂಡಲ್ಸ್: ಇದು ನಿಮ್ಮ ಫ್ಲರ್ಟ್ ನೇಚರ್ ಹಾಗೂ ಸ್ತ್ರೀವಾದಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.ಇದರಲ್ಲಿ ಸ್ಟ್ರ್ಯಾಪ್ಸ್ ಇರುವ ಕಾರಣ ಕೆಲವರಿಗೆ ಕಂಫರ್ಟ್ ಅನಿಸದಿರಬಹುದು. ಹೀಗಾಗಿ ಈ ಪಾದರಕ್ಷೆಗಳನ್ನು ಆತ್ಮವಿಶ್ವಾಸದೊಂದಿಗೆ ಧರಿಸುವುದು ಅಗತ್ಯ. ಮೃದು ಹಾಗೂ ಪುಟ್ಟ ಪಾದಗಳನ್ನು ಹೊಂದಿರುವವರಿಗೆ ಇದು ತುಂಬಾ ಸೂಟ್ ಆಗುತ್ತದೆ.