Asianet Suvarna News Asianet Suvarna News

Beard Washing Mistakes: ಹುಡ್ಗೀರ್ನ ಮೆಚ್ಸೋಕೆ ಗಡ್ಡ ಬಿಟ್ರೆ ಸಾಲಲ್ಲ, ಅದನ್ನು ಕ್ಲೀನಾಗೂ ಇಟ್ಕೋಬೇಕು!

ಒಂದು ಪ್ಯಾಂಟ್, ಒಂದು ಶರ್ಟ್ ಇದ್ದರೆ ನಾವು ವಾರಗಟ್ಟಲೆ ಇರ್ತೇವೆ ಎನ್ನುವ ಹುಡುಗ್ರನ್ನು ನೀವು ನೋಡಿರ್ತೀರಿ. ಹುಡುಗರ ಈ ಕೊಳಕನ್ನು ಹುಡುಗಿಯರು ಇಷ್ಟ ಪಡೋದಿಲ್ಲ. ಸದಾ ಕ್ಲೀನ್ ಆಗಿರಬೇಕೆಂದು ಹುಡುಗಿಯರು ಬಯಸ್ತಾರೆ. ಗಡ್ಡ ಬಿಟ್ಟ ಹುಡುಗರು ಕೂಡ ಗಡ್ಡಕ್ಕಾಗಿ ಕೆಲ ಸಮಯ ಮೀಸಲಿಡ್ಬೇಕಾಗುತ್ತೆ. 
 

Top beard washing mistakes to avoid
Author
Bangalore, First Published Jan 13, 2022, 2:51 PM IST

ಗಡ್ಡ (Beard)ದ ಹುಡುಗ (Boy), ಹುಡುಗಿ (Girl)ಯರನ್ನು ಸೆಳೆಯುತ್ತಾನೆ. ಇದ್ರಲ್ಲಿ ಅತಿಶಯೋಕ್ತಿಯಿಲ್ಲ. ಬಹುತೇಕ ಹುಡುಗಿಯರಿಗೆ ಗಡ್ಡ ಬಿಟ್ಟ ಹುಡುಗ ಇಷ್ಟವಾಗ್ತಾನೆ. ಹುಡುಗಿಯರನ್ನು ಸೆಳೆಯಲೋ ಅಥವಾ ಬೇರೆ ಮತ್ಯ್ತಾವುದೋ ಕಾರಣಕ್ಕೆ ಗಡ್ಡ ಬಿಟ್ಟ ಹುಡುಗ್ರು ಬೇಕಾಬಿಟ್ಟಿ ಇದ್ರೆ ಆಕರ್ಷಕವಾಗಿ ಕಾಣುವುದಿಲ್ಲ. ಗಡ್ಡ ಬಿಟ್ಟರೆ ಸಾಲದು. ಅದನ್ನು ಮೆಂಟೇನ್ ಮಾಡುವ ಕಲೆ ಗೊತ್ತಿರಬೇಕು.

ಅನೇಕರು ತಮ್ಮ ನೆಚ್ಚಿನ ಸ್ಟಾರ್ ಇಲ್ಲವೆ ಕ್ರಿಕೆಟ್ ಆಟಗಾರ, ಸೆಲೆಬ್ರಿಟಿ (Celebrity )ಗಡ್ಡ ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ತಾವೂ ಶೇವ್ (shaving )ಮಾಡೋದನ್ನು ಬಿಟ್ಟು ಬಿಡ್ತಾರೆ. ಆ ಗಡ್ಡ, ಅಡ್ಡಾದಿಡ್ಡಿ ಬೆಳಕೊಂಡು ನೋಡೋಕೆ ಅಸಹ್ಯವಾಗಿರುತ್ತದೆ. ಗಡ್ಡವನ್ನು ಆಗಾಗ ಟ್ರಿಮ್ ಮಾಡುವ ಜೊತೆಗೆ ಗಡ್ಡ ಸುಂದರವಾಗಿ ಬೆಳೆಯಲು ಏನು ಮಾಡ್ಬೇಕು ಎಂಬುದು ನಿಮಗೆ ಗೊತ್ತಿರಬೇಕು. ಮಾರುಕಟ್ಟೆಯಲ್ಲಿ ಕಪ್ಪಾದ, ಉದ್ದದ ಗಡ್ಡ ಬೆಳೆಯಲು ಸಾಕಷ್ಟು ಸೌಂದರ್ಯವರ್ಧಕಗಳು ಲಭ್ಯವಿವೆ. ಸೌಂದರ್ಯದ ವಿಷ್ಯ ಬಂದಾಗ ಹುಡುಗ್ರು ಲಾಸ್ಟ್ ಬೆಂಚ್‌ನಲ್ಲಿರುತ್ತಾರೆ. ಬೆರಳೆಣಿಕೆಯಷ್ಟು ಹುಡುಗರು ಮಾತ್ರ ಇದ್ರಲ್ಲಿ ಆಸಕ್ತಿ ತೋರುತ್ತಾರೆ.

ಎಲ್ಲರ ಮುಂದೆ ನೀವೂ ಸುಂದರವಾಗಿ ಕಾಣ್ಬೇಕು, ಒಂದಿಷ್ಟು ಹುಡುಗಿಯರು ತಿರುಗಿ, ತಿರುಗಿ ನೋಡ್ಬೇಕೆಂದ್ರೆ ಗಡ್ಡದ ಸೌಂದರ್ಯಕ್ಕೆ ನೀವು ಇಂಪಾರ್ಟೆನ್ಸ್ ನೀಡ್ಲೇಬೇಕು. ಗಡ್ಡ ಬೆಳೆಸಿರ್ತೇವೆ. ಪ್ರತಿ ದಿನ ಸ್ನಾನ ಮಾಡುವಾಗ ಮುಖ ತೊಳೆಯುವಂತೆ ಗಡ್ಡ ತೊಳೆದು ಬರ್ತೇವೆ ಅಂದ್ರೆ ಸಾಕಾಗಲ್ಲ. ಗಡ್ಡವನ್ನು ತೊಳೆಯುವಾಗ ಕೆಲವು ಟ್ರಿಕ್ಸ್ ಪಾಲನೆ ಮಾಡಬೇಕಾಗುತ್ತದೆ. ಗಡ್ಡವನ್ನು ಸ್ವಚ್ಛಗೊಳಿಸುವಾಗ ಏನು ಮಾಡ್ಬೇಕು? ಏನು ಮಾಡ್ಬಾರದು ತಿಳ್ಕೊಳಿ. 

ಗಡ್ಡವನ್ನು ತೊಳೆಯುವಾಗ ಈ ಐದು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ 

ಹೆಚ್ಚು ತೊಳೆಯಬೇಡಿ ಅಥವಾ ತೊಳೆಯದೆ ಇರಬೇಡಿ: ಕೆಲವರು ದಿನಕ್ಕೆ ನಾಲ್ಕೈದು ಬಾರಿ ಗಡ್ಡ ತೊಳೆಯುತ್ತಾರೆ. ಇದು ಒಳ್ಳೆಯದಲ್ಲ. ಹೀಗೆ ಮಾಡಿದ್ರೆ ಚರ್ಮದಲ್ಲಿರುವ ನೈಸರ್ಗಿಕ ತೈಲ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಒಣಗಲು ಪ್ರಾರಂಭಿಸುತ್ತದೆ. ಅದೇ ರೀತಿ ಗಡ್ಡವನ್ನು ಅತಿಯಾಗಿ ತೊಳೆದರೆ ಅದರ ವಿನ್ಯಾಸ ಕೆಡುತ್ತದೆ. ಗಡ್ಡವನ್ನು ದಿನಕ್ಕೆ ಒಮ್ಮೆ ಸ್ವಚ್ಛಗೊಳಿಸಿದರೆ ಸಾಕು. ಗಡ್ಡದ ಮೇಲೆ ಕೊಳೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು. ಕೊಳೆ ಕುಳಿತರೆ ಗಡ್ಡ ಸರಿಯಾಗಿ ಬೆಳೆಯುವುದಿಲ್ಲ.

ನೀರಿನ ಉಷ್ಣತೆ: ಯಾವ ನೀರಿನಲ್ಲಿ ಗಡ್ಡವನ್ನು ಸ್ವಚ್ಛಗೊಳಿಸಬೇಕು ಎಂಬುದನ್ನು ನೀವು ತಿಳಿದಿರಬೇಕಾಗುತ್ತದೆ. ಅತಿಯಾದ ಬಿಸಿ ನೀರು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಗೆಯೇ ಗಡ್ಡಕ್ಕೆ ತುಂಬಾ ಬಿಸಿ ನೀರು ಹಾಕಿದ್ರೆ ಗಡ್ಡಕ್ಕೆ ಹಾನಿಯಾಗುತ್ತದೆ.ಇದರಿಂದ ಕೂದಲು ಒಣಗಿ ಗಡ್ಡದ ಹೊಳಪು ಕಡಿಮೆಯಾಗುತ್ತದೆ.

ಬಿಯರ್ಡ್ ವಾಶ್: ಗಡ್ಡ ತೊಳೆಯಲು ಬಹುತೇಕರು ಸಾಮಾನ್ಯ ಸೋಪ್ ಬಳಸ್ತಾರೆ. ನೀವೂ ಸೋಪ್ ಬಳಸ್ತಿದ್ದರೆ ಇಂದೇ ಬಿಟ್ಬಿಡಿ. ಗಡ್ಡದ ವಾಶ್ ಗಾಗಿಯೇ ಪ್ರತ್ಯೇಕ ಜೆಲ್ ಸಿಗುತ್ತದೆ. ಅದನ್ನು ಬಳಸುವುದು ಅತ್ಯುತ್ತಮ ಆಯ್ಕೆಯಾಗಿದೆ. 

Online Salon : ಬ್ಯೂಟಿಪಾರ್ಲರ್ ಸೇವೆ ಮನೆಯಲ್ಲಿ ಪಡೆಯಲು ಬಯಸಿದ್ದರೆ ಈ ರೂಲ್ಸ್ ಪಾಲಿಸಿ

ಸ್ವಚ್ಚಗೊಳಿಸುವ ವಿಧಾನ: ಮನಸ್ಸಿಗೆ ಬಂದಂತೆ ಜೆಲ್ ಹಾಕಿ ಗಡ್ಡವನ್ನು ಉಜ್ಜುವುದಲ್ಲ. ಗಡ್ಡ ಸ್ವಚ್ಛಗೊಳಿಸಲೂ ಒಂದು ವಿಧಾನವಿದೆ. ಅದೇ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ಸರ್ಕಲ್ ರೀತಿಯಲ್ಲಿ ನೀವು ಗಡ್ಡವನ್ನು ಸ್ವಚ್ಛಗೊಳಿಸಬೇಕು. ಸರ್ಕಲ್ ಹೊರಮುಖವಾಗಿರಬೇಕು. ಹೀಗೆ ಮಾಡಿದರೆ ಚರ್ಮದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ. ಇದ್ರ ಪರಿಣಾಮವನ್ನು ನೀವು ಗಡ್ಡದ ಬೆಳವಣಿಗೆಯಲ್ಲಿ ನೋಡಬಹುದು. ಬೇಕಾಬಿಟ್ಟಿ ಉಜ್ಜಿದರೆ ಗಡ್ಡದ ಕೂದಲು ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಕೂದಲು ಉದುರುವ ಸಾಧ್ಯತೆಯೂ ಇದೆ. 

Skin Care: ಮೊಡವೆ ಕಲೆಯನ್ನು ಹೋಗಲಾಡಿಸಲು ಸುಲಭ ವಿಧಾನವಿದು

ಗಡ್ಡಕ್ಕೆ ಮಾಯ್ಸ್ಚ‌ರೈಸರ್ : ಗಡ್ಡವನ್ನು ಸರಿಯಾದ ಸಮಯಕ್ಕೆ  ತೇವಗೊಳಿಸಬೇಕಾಗುತ್ತದೆ. ನೀವು ತೇವಗೊಳಿಸದಿದ್ದರೆ ಅಥವಾ ಸರಿಯಾದ ಸಮಯದಲ್ಲಿ ಮಾಯ್ಚುರೈಸರ್ ಹಚ್ಚದೆ ಹೋದಲ್ಲಿ ಅದರ ಪರಿಣಾಮವು ಗಡ್ಡದ ಮೇಲೆ ಗೋಚರಿಸುತ್ತದೆ. ಗಡ್ಡವನ್ನು ಸ್ವಚ್ಚಗೊಳಿಸಿದ ತಕ್ಷಣ ಗಡ್ಡಕ್ಕೆ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚಬೇಕು. ಇದು ಗಡ್ಡವನ್ನು ತೇವಗೊಳಿಸಲು ಸರಿಯಾದ ಸಮಯವಾಗಿರುತ್ತದೆ.
 

Follow Us:
Download App:
  • android
  • ios