Asianet Suvarna News Asianet Suvarna News

Skin Care: ಮೊಡವೆ ಕಲೆಯನ್ನು ಹೋಗಲಾಡಿಸಲು ಸುಲಭ ವಿಧಾನವಿದು

ಹೆಣ್ಣುಮಕ್ಕಳು ತಮ್ಮ ಸೌಂದರ್ಯ (Beauty)ದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸುತ್ತಾರೆ. ತ್ವಚೆಯ ನುಣುಪು ಹಾಳಾಗದಂತೆ, ಮುಖದಲ್ಲಿ ಮೊಡವೆ (Pimple)ಗಳು ಆಗಬಾರದು ಎಂದು ಹಲವು ಆರ್ಯುವೇದ (Ayurveda) ಪದ್ಧತಿಗಳನ್ನು ಅನುಸರಿಸುತ್ತಾರೆ. ಹಾಗಿದ್ರೂ ಮೊಡವೆ, ಕಲೆಗಳ ಕಾಟ ತಪ್ಪಲ್ಲ. ಮುಖದಲ್ಲಿರುವ ಮೊಡವೆ, ಕಲೆ ಇಲ್ಲದಾಗಲು ಏನು ಮಾಡಬೇಕು ?

Good Habits That Can Help Clear Pimple and Acne
Author
Bengaluru, First Published Jan 12, 2022, 5:13 PM IST

ಮೊಡವೆಗಳಿಲ್ಲದ ಕ್ಲಿಯರ್ ಆಗಿರುವ ಸ್ಕಿನ್ ಇರಬೇಕೆಂಬುದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಕನಸು. ಆದರೆ, ಇವತ್ತಿನ ಜೀವನಶೈಲಿ, ಆಹಾರ, ವಾತಾವರಣ ಎಲ್ಲವೂ ಸೇರಿ ಆರೋಗ್ಯಕರ ಚರ್ಮವನ್ನು ಹೊಂದಿರುವುದು ಕಷ್ಟ. ಹಲವರ ಮುಖದಲ್ಲಿ ಮೊಡವೆಗಳು, ಕಲೆಗಳು ಕಂಡು ಬರುತ್ತವೆ. ಹೊಸ ಮೊಡವೆಗಳು ಬರದಂತೆ, ಇರೋ ಕಲೆಯನ್ನು ಹೋಗಲಾಡಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿರುತ್ತಾರೆ. ಹಾಗಿದ್ರೆ ಮುಖದಲ್ಲಿರುವ ಕಲೆಯನ್ನು ಸುಲಭವಾಗಿ ಹೋಗಲಾಡಿಸಲು ಏನು ಮಾಡಬಹುದು ?

ಮೊಡವೆಗಳು ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ವಿಶೇಷವಾಗಿ ಎಣ್ಣೆಯುಕ್ತ ಅಥವಾ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಮೊಡವೆಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಮೊಡವೆ ಎಂದರೆ ಕೂದಲಿನ ಕಿರುಚೀಲಗಳು ಎಣ್ಣೆ ಮತ್ತು ಸತ್ತ ಚರ್ಮದ ಕೋಶಗಳಿಂದ ಮುಚ್ಚಿಹೋಗುವ ಸ್ಥಿತಿಯಾಗಿದೆ. ಇದು ಬ್ರೇಕೌಟ್‌ಗಳು, ಮೊಡವೆಗಳು, ವೈಟ್‌ಹೆಡ್‌ಗಳು ಮತ್ತು ಬ್ಲ್ಯಾಕ್‌ಹೆಡ್‌ಗಳಿಗೆ ಕಾರಣವಾಗುತ್ತದೆ. ಇದು ಮುಖದ ಒಟ್ಟಾರೆ ಸೌಂದರ್ಯವನ್ನು ಹಾಳುಗೆಡಹುತ್ತದೆ.

ಮೊಡವೆ (Pimple) ಗಳು ಇಲ್ಲವಾಗುವಂತೆ ಮಾಡಲು ಅಲೋಪತಿ, ಆರ್ಯುವೇದಿಕ್ ಎಂದು ಹಲವು ಚಿಕಿತ್ಸಾ ವಿಧಾನಗಳಿದ್ದರೂ ಎಲ್ಲವನ್ನೂ ಅನುಸರಿಸುವುದು ಕಷ್ಟ. ಹೀಗಾಗಿ ನಮ್ಮ ದೇಹಕ್ಕೆ ಹೊಂದುವಂತಹಾ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಬೇಕು. ಚರ್ಮ (Skin)ದ ಕಾಳಜಿಯನ್ನು ಮಾಡುವ ಮೂಲಕ ಮುಖವನ್ನು ಮೊಡವೆಯಿಂದ ಮುಕ್ತಗೊಳಿಸಬಹುದು ಎಂದು ತ್ವಚೆ ತಜ್ಞರು ಹೇಳುತ್ತಾರೆ. ಮುಖವನ್ನು ಪಿಂಪಲ್ ಫ್ರೀ ಮತ್ತು ಕಲೆ ಹೋಗಲಾಡಿಸಲು ಏನು ಮಾಡಬಹುದು ಎಂಬ ಬಗ್ಗೆ ಚರ್ಮರೋಗ ತಜ್ಞೆ ಡಾ.ಜುಶ್ಯಾ ಸರಿನ್ ಅವರು ನೀಡಿರುವ ಸಲಹೆಗಳು ಹೀಗಿವೆ. ಮುಖದ ಸೌಂದರ್ಯ (Beauty)ವನ್ನು ನೀವು ಯಾವುದನ್ನು ಮಾಡಬಾರದು, ಬದಲಾಗಿ ಏನು ಮಾಡಬೇಕು ಎಂಬುದನ್ನು ಅವರು ತಿಳಿಸಿದ್ದಾರೆ.

ಸುಕ್ಕುಗಳು, ಮೊಡವೆ ನಿವಾರಣೆಗೆ ಸೀಬೆ ಎಲೆಯೇ ಬೆಸ್ಟ್

ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುವ 3 ಅಭ್ಯಾಸಗಳು ಇಲ್ಲಿವೆ
1. ಬೆವರುವುದರಿಂದ ಮುಖದಲ್ಲಿ ಹೆಚ್ಚು ಮೊಡವೆಗಳಾಗುತ್ತವೆ. ಮುಖವನ್ನು ಮುಚ್ಚುವ ಹೆಲ್ಮೆಟ್‌ಗಳು, ಟೋಪಿಗಳು ಇತ್ಯಾದಿಗಳನ್ನು ಧರಿಸಿದಾಗ ಮೊಡವೆಗಳು ಉಲ್ಬಣಗೊಳ್ಳಬಹುದು. ಹೀಗಾಗಿ ಬೆವರುವಿಕೆಯ ನಂತರ ನಿಮ್ಮ ಮುಖವನ್ನು ಸಾಧ್ಯವಾದಷ್ಟು ಬೇಗ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

2. ಮುಖವನ್ನು ಕ್ಲೀನ್ ಮಾಡಲು ಸ್ಪಾಂಜ್, ಸ್ಕ್ರಬ್‌ಗಳನ್ನು ಬಳಸುವುದು ಚರ್ಮಕ್ಕೆ ಕಿರಿಕಿರಿಯುಂಟಾಗಿ ಹೆಚ್ಚೆಚ್ಚು ಮೊಡವೆಗಳಾಗಬಹುದು. ಹೀಗಾಗಿ ಮುಖಕ್ಕೆ ಏನನ್ನಾದರೂ ಅಪ್ಲೈ ಮಾಡುವುದಿದ್ದರೂ ಬೆರಳ ತುದಿಯಿಂದ ಅಪ್ಲೈ ಮಾಡಿ.

3. ನೀವು ಎಣ್ಣೆಯುಕ್ತ ಕೂದಲನ್ನು ಹೊಂದಿದ್ದರೆ, ನಿಯಮಿತವಾಗಿ ಶಾಂಪೂ ಬಳಸಿ. ಪ್ರತಿ ದಿನ ಅಥವಾ ಒಂದು ದಿನ ಬಿಟ್ಟು ತಲೆಯಲ್ಲಿರುವ ಎಣ್ಣೆಯಂಶವನ್ನು ತೆಗೆದು ಹಾಕಿ. ಇಲ್ಲದಿದ್ದರೆ ತಲೆಕೂದಲಲ್ಲಿರುವ ಎಣ್ಣೆಯಂಶ ಮುಖಕ್ಕೆ ಹರಡುತ್ತದೆ ಮತ್ತು ಇದರಿಂದ ಮುಖದಲ್ಲಿ ಮೊಡವೆಯ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. 

ಮೊಡವೆ ಆಗಿದ್ಯಾ? ಏನೇನೋ ಮಾಡಬೇಡಿ, ಸಿಂಪಲ್ಲಾಗ್ ಹೀಗ್ ಮಾಡಿ ನೋಡಿ

ಯಾವಾಗಲೂ ಮುಖದಲ್ಲಿ ಮೊಡವೆಗಳು ಆಗುತ್ತಿರುತ್ತದೆಯೇ ?
ಕೆಲವೊಬ್ಬರಿಗೆ ಯಾವಾಗಲೂ ಮುಖದಲ್ಲಿ ಮೊಡವೆಗಳು ಆಗುತ್ತಲೇ ಇರುತ್ತವೆ. ಆರ್ಯುವೇದದ (Ayurveda) ಅನುಸಾರವಾಗಿ ಮುಖಕ್ಕೆ ಅರಿಶಿನ, ಗಂಧ ಯಾವುದನ್ನು ಹಚ್ಚಿದರೂ ಮೊಡವೆಗಳ ಕಾಟ ಕಡಿಮೆಯಾಗುವುದಿಲ್ಲ. ಇಂಥಹಾ ಸಂದರ್ಭದಲ್ಲಿ ಯಾವ ಕಾರಣಕ್ಕೆ ಮೊಡವೆಗಳಾಗುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಡಾ.ಸರಿನ್ ಹೇಳುವಂತೆ ಪ್ರತಿಯೊಬ್ಬರ ಮುಖದಲ್ಲಿ ಮೊಡವೆಗಳಾಗುವುದಕ್ಕೆ ಪ್ರತ್ಯೇಕ ಕಾರಣಗಳಿವೆ. ಓಯ್ಲೀ ಸ್ಕಿನ್, ಒತ್ತಡ, ಕಡಿಮೆ ನಿದ್ದೆ ಸೇರಿದಂತೆ ಇತರ ಹಲವು ಕಾರಣಗಳು ಸತತವಾಗಿ ಮುಖದಲ್ಲಿ ಮೊಡವೆಯಾಗಲು ಕಾರಣವಾಗುತ್ತವೆ. ಅಷ್ಟೇ ಅಲ್ಲ ಜೀವನಶೈಲಿ (Lifestyle0, ಅಹಾರಕ್ರಮವೂ ಪರಿಣಾಮ ಬೀರುತ್ತದೆ. ಹೀಗಾಗಿ ಇಂಥಹಾ ಮೊಡವೆಗಳಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ಡಾ.ಸರಿನ್ ತಿಳಿಸುತ್ತಾರೆ. 

ಮುಖದಲ್ಲಿ ಹೆಚ್ಚು ಮೊಡವೆಗಳಾಗದಿರಲು ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಅತಿಯಾಗಿ ಮೇಕಪ್ (Makeup) ಮಾಡುವುದರಿಂದ ಮುಖದಲ್ಲಿ ಹೆಚ್ಚು ಮೊಡವೆಗಳಾಗುತ್ತದೆ. ಅಲ್ಲದೆ ಧೂಳಿನಲ್ಲಿ ಓಡಾಡುವುದರಿಂದ, ಸ್ವಚ್ಛವಿಲ್ಲದ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಯಾವಾಗಲೂ ಮುಖದ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ದಿನವೊಂದಕ್ಕೆ 2ರಿಂದ ಮೂರು ಸಾರಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಅಷ್ಟು ಸಾಕು. ಅದಲ್ಲದೆ ಫೇಸ್ ವಾಶ್, ಕ್ಲೆನ್ಸರ್‌ನಿಂದ ದಿನಕ್ಕೆ ಹಲವಾರು ಬಾರಿ ಮುಖ ತೊಳೆಯಬೇಡಿ. ಇದರಿಂದ ಒಂದು ಬಾರಿ ಮುಖ ತುಂಬಾ ಸ್ವಚ್ಛಗೊಂಡಂತೆ, ಚರ್ಮ ನುಣುಪಾದಂತೆ ಅನಿಸಿದರೂ ಇದು ಸ್ಕಿನ್ ಅನ್ನು ಡ್ರೈ ಮಾಡುತ್ತದೆ. ಇದರಿಂದ ಮುಖದಲ್ಲಿ ಸಹಜವಾಗಿ ಎಣ್ಣೆ ಉತ್ಪಾದನೆಯಾಗುತ್ತದೆ, ಇದು ಮೊಡವೆಗೆ ಕಾರಣವಾಗುತ್ತದೆ. ಹೀಗಾಗಿ ಮುಖದಲ್ಲಿ ಸಹಜವಾಗಿ ಇರುವ ಎಣ್ಣೆಯಂಶವನ್ನು ತೊಡೆದು ಹಾಕಿ ಚರ್ಮವನ್ನು ಡ್ರೈ ಮಾಡಲೇಬೇಡಿ.

Follow Us:
Download App:
  • android
  • ios