ಸಿಂಪಲ್ ಟ್ರಿಕ್ಸ್ ಬಳಸಿದ್ರೆ ನಿಮ್ ಫೋಟೋ ಸೂಪರೋ ಸೂಪರ್: ನಟಿ ಅದಿತಿ ಪ್ರಭುದೇವ್ ಟಿಪ್ಸ್ ಕೇಳಿ
ಸಿಂಪಲ್ ಟ್ರಿಕ್ಸ್ ಬಳಸಿದ್ರೆ ನಿಮ್ ಫೋಟೋ ಸೂಪರೋ ಸೂಪರ್ ಎನ್ನುವ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ಹೇಳಿರುವ ಟಿಪ್ಸ್ಗಳೇನು?

ಫೋಟೋ ಸುಂದರ ಕಾಣಿಸಬೇಕು ಎನ್ನುವುದು ಬಹುತೇಕ ಮಂದಿಯ ಕನಸಾಗಿರುತ್ತದೆ. ಈ ವಿಷಯದಲ್ಲಿ ಹೆಣ್ಣು ಮಕ್ಕಳು ಒಂದು ಹೆಜ್ಜೆ ಮುಂದೆಯೇ ಎನ್ನಬೇಕು. ಆದರೆ ಏನೇ ಮಾಡಿದರೂ ಫೋಟೋ ಚೆನ್ನಾಗಿ ಬರುವುದೇ ಇಲ್ಲ. ನೋಡಲು ಸುಂದರವಾಗಿಲ್ಲ ಎಂದುಕೊಂಡವರ ಫೋಟೋ (photo) ಕೂಡ ಚೆನ್ನಾಗಿ ಬರುತ್ತದೆ, ಆದರೆ ನಾನು ನೋಡಲು ತುಂಬಾ ಸುಂದರವಾಗಿದ್ದರೂ ಫೋಟೋ ಚೆನ್ನಾಗಿ ಬರಲ್ಲ ಎನ್ನುಕೊಳ್ಳುವವರೇ ಹಲವರು. ಇದೀಗ ಫೇಸ್ ಆ್ಯಪ್ ಸೇರಿದಂತೆ ಇರುವ ಮುಖವನ್ನು ಸುಂದರ/ಸುಂದರಿಯರಂತೆ ಕಾಣಿಸಲು ಹಲವರು ಆ್ಯಪ್ಗಳೇ ಇವೆ ಅನ್ನಿ. ಫೋಟೋ ತೆಗೆದು ಈ ಆ್ಯಪ್ ಬಳಸಿ ತಮ್ಮನ್ನು ತಾವು ಹೊಗಳಿಕೊಂಡು ಇತರರಿಂದಲೂ ಹೊಗಳಿಸಿಕೊಳ್ಳುವ ಕ್ರೇಜ್ ಕೆಲವರಿಗೆ ಇರುತ್ತದೆ. ಆದರೆ ನಿಜವಾಗಿಯೂ ಫೋಟೋಶೂಟ್ ಎನ್ನುವುದು ಒಂದು ಕಲೆಯೇ. ಹೇಗೆಯೇ ಇದ್ದರೂ ಸುಂದರವಾಗಿ ಫೋಟೋ ತೆಗೆಸಿಕೊಳ್ಳುವ ಕಲೆ ಎಲ್ಲರಿಗೂ ಕರಗತವಾಗಿರುವುದಿಲ್ಲ.
ಇದೀಗ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು, ಸುಂದರವಾಗಿ ಕಾಣಲು ಹಾಗೂ ಸುಂದರವಾಗಿ ಫೋಟೋ ತೆಗೆಯುವ ಕೆಲವೊಂದು ಟಿಪ್ಸ್ ಹೇಳಿದ್ದಾರೆ. ಅಂದಹಾಗೆ ನಟಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ಔಟ್: ನಟಿ ಅದಿತಿ ಅಮ್ಮನ ಟಿಪ್ಸ್
ಕೆಲವರ ಫೋಟೋ ಮಾತ್ರ ಯಾಕೆ ಸೂಪರ್ (Super) ಕಾಣಿಸತ್ತೆ ಎಂಬ ಬಗ್ಗೆ ನಟಿ ಅದಿತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ಹೇಳುವ ಪ್ರಕಾರ, ಮೊದಲು ಯಾವ ಆ್ಯಂಗಲ್ನಿಂದ ಫೋಟೋ ತೆಗೆದುಕೊಂಡರೆ ಉತ್ತಮ ಎನ್ನುವುದನ್ನು ನೋಡಬೇಕು, ಬಲಗಡೆ, ಎಡಗಡೆ ಅಥವಾ ಸ್ಟ್ರೇಟ್ ಎನ್ನುವುದು. ಅವರವರ ಪ್ರೊಫೈಲ್ ಕಂಡುಹಿಡಿದು ಫೋಟೋಶೂಟ್ ಮಾಡಿಸಬೇಕು. ಕ್ಯಾಮೆರಾದಲ್ಲಿ 5-6 ಕೆ.ಜಿ ಕಾಣಿಸುವುದು ಮಾಮೂಲು. ಆದ್ದರಿಂದ ತೊಡುವ ಬಟ್ಟೆ ಫಿಟ್ಟಿಂಗ್ ಇರಲಿ, ವರ್ಟಿಕಲ್ ಡಿಸೈನ್ ಇರುವ ಬಟ್ಟೆ ಹಾಕಿ, ಹಾರಿಜಾಂಟಲ್ ಇರುವ ಬಟ್ಟೆ ಬೇಡ. ಕಪ್ಪು ಬಣ್ಣದ ಬಟ್ಟೆ ಹಾಕಿದಾಗ ತೆಳ್ಳಗೆ ಕಾಣಿಸುವುದು ಸಾಮಾನ್ಯ. ನಿಮಗೆ ಯಾವುದು ಫಿಟ್ ಎನ್ನುವುದನ್ನು ನೋಡಿಕೊಳ್ಳಿ. ಎಲ್ಲಕ್ಕಿಂತಲೂ ಮುಖ್ಯವಾಗಿ ಕಾನ್ಫಿಡೆನ್ಸ್ ತುಂಬಾ ಮುಖ್ಯವಾಗಿದೆ. ಅದಕ್ಕಿಂತಲೂ ಹೆಚ್ಚು ಮುಖ್ಯವಾದ ವಿಷಯ ಎಂದರೆ ನೀವು ಸುಂದರವಾಗಿದ್ದೀರಿ ಎನ್ನುವ ಮನಸ್ಥಿತಿ ನಿಮ್ಮದಾಗಿರಲಿ ಎಂದು ನಟಿ ಹೇಳಿದ್ದಾರೆ.
ಇದರ ಜೊತೆಗೆ ಕಾಲನ್ನು ಸ್ವಲ್ಪ ಮುಂದೆ ಇಡುವುದು, ಹಿಂದೆ ಇಡುವುದು ಹೀಗೆ ಮಾಡಿದರೆ ಬಾಡಿ ಕರ್ವ್ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಕಾಲಿನ ಜೊತೆ ಆಡುವುದನ್ನು ಕಲಿಯಬೇಕು. ಸ್ಟ್ರೇಟ್ ಆಗಿ ನಿಲ್ಲಬೇಡಿ. ಅದೇ ರೀತಿ ಕೈಯನ್ನು ಸುಮ್ಮನೆ ಇಡಬೇಡಿ. ಏನಾದರೂ ಆ್ಯಕ್ಟಿವಿಟಿ ಇರಲಿ. ಸೈಡ್ ಪೋಸ್ನಲ್ಲಿ ನಿಂತಾಗ ಕೈಯನ್ನು ಬಾಡಿಗೆ ಪ್ರೆಸ್ ಮಾಡಬೇಡಿ. ಇದರಿಂದ ತುಂಬಾ ದಪ್ಪ ಕಾಣುವ ಚಾನ್ಸಸ್ ಇರುತ್ತದೆ, ಆದ್ದರಿಂದ ಕೈಯನ್ನು ಸ್ವಲ್ಪ ದೂರವಿಡಿ.
ಮಿಕ್ಕಿರೋ ಇಡ್ಲಿಯಿಂದ ನಟಿ ಅದಿತಿ ಮಾಡಿದ್ರು ಯಮ್ಮಿ ಬ್ರೇಕ್ಫಾಸ್ಟ್, ಸುಲಭದ ಟೊಮ್ಯಾಟೊ ಚಟ್ನಿ!