Asianet Suvarna News Asianet Suvarna News

ಸರ್ವಾಧಿಕಾರಿ ಹಿಟ್ಲರ್ ಮೀಸೆ ಮಾತ್ರ ಯಾಕೆ ಜೋಕರ್ ರೀತಿ ಇರ್ತಿತ್ತು?

ಸರ್ವಾಧಿಕಾರಿ ಹಿಟ್ಲರ್ ನಿರ್ದಯಿ. ಯಾವುದಕ್ಕೂ ಹೇಸದ ಆತನ ಹೆಸರು ಕೇಳಿದ್ರೆ ಈಗಲು ಭಯಗೊಳ್ಳುವ ಜನರಿದ್ದಾರೆ. ಇಂಥ ಹಿಟ್ಲರ್ ವೇಷಭೂಷಣದಲ್ಲೂ ರಹಸ್ಯವಿತ್ತು. ಆತನ ಮೀಸೆ ಚಿಕ್ಕದಾಗಿರಲು ಒಂದು ಕಾರಣವಿತ್ತು. 
 

Reason Adolf Hitler Sported Odd Toothbrush Styled Moustache roo
Author
First Published Jan 27, 2024, 12:37 PM IST

ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಗ್ಗೆ ಹೇಳಿದಾಗ ನಮಗೆ ಮೊದಲು ಹಿಟ್ಲರ್ ಮುಖ ನೆನಪಿಗೆ ಬರುತ್ತದೆ. ಹಿಟ್ಲರ್ ಚಿಕ್ಕ ದೇಹ, ಭಾವನೆ ಇಲ್ಲದ ಮುಖ, ದೊಡ್ಡ ಕಣ್ಣಿನ ಜೊತೆ ದಪ್ಪದಾದ ಸಣ್ಣ ಮೀಸೆಯನ್ನು ನಾವು ಕಲ್ಪಿಸಿಕೊಳ್ಳುತ್ತವೆ. ಹಿಟ್ಲರ್ ಒಬ್ಬ ಅಸಮಾನ್ಯ ವ್ಯಕ್ತಿ. ಆತನ ನಡವಳಿಕೆ ಮಾತ್ರವಲ್ಲ ವೇಷಭೂಷಣ ಕೂಡ ಭಿನ್ನವಾಗಿತ್ತು. ವಿಚಿತ್ರವಾದ ಆದರೆ ದಪ್ಪ ಮೀಸೆಯನ್ನು ಹೊಂದಿದ್ದ  ಹಿಟ್ಲರ್ ಅದನ್ನು ಕ್ಷೌರ ಮಾಡ್ತಿರಲಿಲ್ಲ. 

ಬರ್ಲಿನ್‌ (Berlin) ನಲ್ಲಿ ಸೋವಿಯತ್ ಪಡೆಗಳ ದಾಳಿಯ ನಂತರ ಹಿಟ್ಲರ್ (Hitler) ತನ್ನ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ. ಆ ದಿನ ಕೂಡ ಹಿಟ್ಲರ್ ತನ್ನ ಮೀಸೆ (moustache) ಯನ್ನು ಟ್ರಿಮ್ ಮಾಡಿದ್ದ. ಹಿಟ್ಲರ್ ನನ್ನು ನಿರ್ದಯಿ ವ್ಯಕ್ತಿ ಎಂದೇ ಕರೆಯಲಾಗುತ್ತದೆ. ಆತ  80 ವರ್ಷಗಳ ಹಿಂದೆ ಏಪ್ರಿಲ್ 30, 1945 ರಂದು ತನ್ನ ಭೂಗತ ಫ್ಯೂರರ್‌ಬಂಕರ್‌ನಲ್ಲಿ ಆತ್ಮಹತ್ಯೆ (suicide) ಮಾಡಿಕೊಂಡ. ಹಿಟ್ಲರ್ ಮೀಸೆಯ ಬಗ್ಗೆ ಕುತೂಹಲಕಾರಿ ಕೆಲ ಅಂಶಗಳಿವೆ.

ಗಂಡನ ಗೆಳತಿ ಸಂಬಂಧಿಯಲ್ಲ ಎಂದು ಗರ್ಲ್‌ಫ್ರೆಂಡ್‌ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್‌

ಹಿಟ್ಲರ್ ಮೀಸೆ ಬಗ್ಗೆ ಈ ಪುಸ್ತಕದಲ್ಲಿದೆ ವಿವರ : ಹಿಟ್ಲರ್‌ನ ಕೊನೆಯ ದಿನ : ನಿಮಿಷದಿಂದ ನಿಮಿಷ ಎಂಬ ಪುಸ್ತಕದಲ್ಲಿ ಈ ಬಗ್ಗೆ ವಿವರವಿದೆ.  ಹಿಟ್ಲರ್‌ನ ಮೀಸೆಯ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಪುಸ್ತಕದಲ್ಲಿ ಬಹಿರಂಗಪಡಿಸಲಾಗಿದೆ. ಈ ಪುಸ್ತಕವನ್ನು ಜೊನಾಥನ್ ಮೇಯೊ ಮತ್ತು ಎಮ್ಮಾ ಕ್ರೇಗಿ ಬರೆದಿದ್ದಾರೆ. 

ಹಿಟ್ಲರ್ ನ ದೊಡ್ಡ ಮೂಗನ್ನು ಮುಚ್ಚಲು ಮೀಸೆಯನ್ನು ಈ ರೀತಿ ಟ್ರಿಮ್ ಮಾಡಲಾಗಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಹಿಟ್ಲರ್ ಮೀಸೆಗೂ ಅಮೆರಿಕಾಕ್ಕೂ ಸಂಬಂಧವಿದೆ. ಈ ಮೀಸೆ ಹುಟ್ಟಿದ್ದು ಅಮೆರಿಕಾದಲ್ಲಿ. ಈ ಮೀಸೆಯನ್ನು ಅಮೆರಿಕಾದಲ್ಲಿ ಟೂತ್ ಬ್ರಷ್ ಮೀಸೆ ಎಂದು ಕರೆಯಲಾಗುತ್ತದೆ. ಚಾರ್ಲಿ ಚಾಪ್ಲಿನ್ ಮತ್ತು ವಾಲ್ಟ್ ಡಿಸ್ನಿ ಅವರೂ ಹಿಟ್ಲರ್‌ನಂತೆ ಮೀಸೆಯನ್ನು ಹೊಂದಿದ್ದರು. ಜರ್ಮನ್ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಗೆ ಆತನ ಮೂಗಿನ ಮೇಲೆ ಪ್ರೀತಿ ಇರಲಿಲ್ಲ. ಅದ್ರ ಬಗ್ಗೆ ಅಸುರಕ್ಷತೆ ಇತ್ತು. ಇದೇ ಕಾರಣಕ್ಕೆ ಮೂಗನ್ನು ಮುಚ್ಚಿಡಲು ಮೀಸೆ ಟ್ರಿಮ್ ಮಾಡ್ತಿದ್ದ. ಆದ್ರೆ ಹಿಟ್ಲರ್ ಮೀಸೆ ಆರಂಭದಿಂದಲೂ ಹೀಗಿರಲಿಲ್ಲ. ಆತ ಆರಂಭಿಕ ದಿನಗಳಲ್ಲಿ ತಂದೆಯಂತೆ ಹ್ಯಾಂಡಲ್‌ಬಾರ್ ಮೀಸೆಯನ್ನು ಹೊಂದಿದ್ದ. 

ದಿ ವರ್ಲ್ಡ್ ವಾರ್ಸ್ ಎಂಬ ಹಿಸ್ಟರಿ ಚಾನೆಲ್ ಶೋನಲ್ಲಿ ಹಿಟ್ಲರ್ ಮೀಸೆಯ ಬಗ್ಗೆ ಹೇಳಲಾಗಿದೆ. ಹ್ಯಾಂಡಲ್ ಬಾರ್ ಮೀಸೆಯಿಂದ ಟೂತ್ ಬ್ರಷ್ ಮೀಸೆಗೆ ಹಿಟ್ಲರ್ ಬದಲಾಗಿದ್ದು ಹೇಗೆ ಎಂಬುದನ್ನು ತಿಳಿಸಲಾಗಿದೆ. ಅದ್ರ ಪ್ರಕಾರ, ಯುವಕನಾಗಿದ್ದಾಗ ಹಿಟ್ಲರ್ ಮೊದಲನೆಯ ಮಹಾಯುದ್ಧದಲ್ಲಿ ಸೈನಿಕನಾಗಿದ್ದ. ಅವನ ಹ್ಯಾಂಡಲ್‌ಬಾರ್ ಮೀಸೆಯು ಅವನ ಗ್ಯಾಸ್ ಮಾಸ್ಕ್ ಅನ್ನು ಬಿಗಿಯಾಗಿ ಮುಚ್ಚಲು ತೊಂದರೆ ನೀಡ್ತಿತ್ತು. ಈ ಕಾರಣದಿಂದಾಗಿ ಅವನು ಮೀಸೆಯನ್ನು ಕತ್ತರಿಸಿದ್ದ. ಮೀಸೆ ಬೋಳಿಸಲು ಹಿಟ್ಲರ್ ಎಂದೂ ಆದೇಶ ನೀಡಿರಲಿಲ್ಲ. ಆದ್ರೆ ಆತ ಆಸ್ಪತ್ರೆ ಸೇರಿದಾಗ ಮೀಸೆಯನ್ನು ಬೋಳಿಸಲಾಯ್ತು. 

ತಿಂಗಳುಫೋನ್ ಬಿಡಿ, ನಿಮಗೆ 8 ಲಕ್ಷ ಬಹುಮಾನ ಗೆಲ್ಲಿ!

ಜರ್ಮನಿಯಲ್ಲಿ ನಾಜಿ ಪಕ್ಷವು ಅಧಿಕಾರಕ್ಕೆ ಬಂದಾಗ ಹಿಟ್ಲರ್ ಟೂತ್ ಬ್ರಷ್ (Tooth Brush) ಶೈಲಿಯ ಮೀಸೆ ಹೊಂದಿದ್ದ. ಮೊದಲನೇ ಮಹಾಯುದ್ಧದ ನಂತ್ರ ಹಾಗೂ ಎರಡನೇ ಮಹಾಯುದ್ಧದ ಮಧ್ಯೆ ಈ ಟೂತ್ ಬ್ರಷ್ ಮೀಸೆ ಫ್ಯಾಷನ್ (Fashion) ಆಗಿ ಬದಲಾಗಿತ್ತು. ಅನೇಕರು ಹಿಟ್ಲರ್ ಮೀಸೆಯನ್ನು ಹೊಂದಿದ್ದರು. ಹಿಟ್ಲರ್ ಸಾವಿನ ಕೆಲವು ಸೆಕೆಂಡುಗಳ ನಂತರ ಹಿಟ್ಲರನ ಕ್ಷೌರಿಕ (Barber) ಆಗಸ್ಟ್ ವೊಲೆನ್ಹಾಟ್, ಹಿಟ್ಲರ್ ಕೂದಲು ಮತ್ತು ಮೀಸೆಯನ್ನು ಟ್ರಿಮ್ ಮಾಡಲು ಮಲಗುವ ಕೋಣೆಗೆ (Bed Room) ಬರುತ್ತಾನೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ. 

Follow Us:
Download App:
  • android
  • ios