ಗಂಡನ ಗೆಳತಿ ಸಂಬಂಧಿಯಲ್ಲ ಎಂದು ಗರ್ಲ್‌ಫ್ರೆಂಡ್‌ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್‌

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್‌.ಆರ್. ಬೋರ್ಕರ್ ಅವರನ್ನೊಳಗೊಂಡ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ.

bombay high court quashes fir against husband s girlfriend saying she is not relative ash

ಮುಂಬೈ (ಜನವರಿ 26, 2024): ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನ ಗೆಳತಿಯ ವಿರುದ್ಧದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಆ ವ್ಯಕ್ತಿಯ ಪತ್ನಿಯೇ ಗರ್ಲ್‌ಫ್ರೆಂಡ್‌ ವಿರುದ್ಧ ದೂರು ದಾಖಲಿಸಿದ್ದರು. 

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್‌.ಆರ್. ಬೋರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ. ಹಾಗೂ, ಗೆಳತಿಯು ಗಂಡನ ಸಂಬಂಧಿಯಲ್ಲ ಮತ್ತು ಆಕೆಯ ವಿರುದ್ಧದ ಏಕೈಕ ಆರೋಪವೆಂದರೆ ಪತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದು ಎಂದೂ ಹೇಳಿದೆ. ಅಲ್ಲದೆ, ಗೆಳತಿಯನ್ನು ಮದುವೆಯಾಗಲು ವಿಚ್ಛೇದನ ನೀಡುವಂತೆ ಪತ್ನಿಗೆ ಪತಿ ಒತ್ತಡ ಹೇರುತ್ತಿದ್ದ. ಆದರೆ, ಇದು ಗರ್ಲ್‌ಫ್ರೆಂಡ್‌ ತಪ್ಪಲ್ಲ ಎಂದೂ ದ್ವಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

ಇದನ್ನು ಓದಿ: ಪ್ರಿಯತಮನಿಗೆ 108 ಬಾರಿ ಇರಿದು ಕೊಂದ್ರೂ ಜೈಲು ಶಿಕ್ಷೆಯಿಂದ ಪಾರಾದ ಮಹಿಳೆ! ಕಾರಣ ಇಲ್ಲಿದೆ..

ಪ್ರಕರಣದ ವಿವರ..

ಈ ಪುರುಷ ಮತ್ತು ಮಹಿಳೆ ಜುಲೈ 2016 ರಲ್ಲಿ ವಿವಾಹವಾದರು. ನಂತರ ಮಹಿಳೆ, ಡಿಸೆಂಬರ್ 2022 ರಲ್ಲಿ ಸುರ್ಗಾನಾ ಪೊಲೀಸ್ ಠಾಣೆ, ನಾಸಿಕ್ ಗ್ರಾಮಾಂತರದಲ್ಲಿ 498A (ಗಂಡ ಅಥವಾ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಭಾರತೀಯ ದಂಡ ಸಂಹಿತೆಯ (IPC) 34 (ಸಾಮಾನ್ಯ ಉದ್ದೇಶ) ದಡಿ ದೂರು ನೀಡಲಾಗಿದೆ. ಪತಿ ಮತ್ತು ಆತನ ಕುಟುಂಬ ಸದಸ್ಯರು ತನ್ನನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು.

ಇನ್ನು, ಗೆಳತಿಯ ಪರ ವಾದ ಮಂಡಿಸಿದ ವಕೀಲರಾದ ಅಭಿಷೇಕ್ ಕುಲಕರ್ಣಿ ಮತ್ತು ಸಾಗರ್ ವಾಕಾಳೆ ಅವರು, ಗೆಳತಿಯು ಪತಿಯ ಸಂಬಂಧಿ ಅಥವಾ ಕುಟುಂಬದ ಸದಸ್ಯರಲ್ಲ ಎಂಬುದು ವಿವಾದವಲ್ಲ. ಪತಿ, ಗೆಳತಿಯೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದು, ಪತಿ-ಪತ್ನಿಯ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂಬ ಆರೋಪ ಎಫ್‌ಐಆರ್‌ನಲ್ಲಿದೆ ಎಂದು ಕುಲಕರ್ಣಿ ತಿಳಿಸಿದರು. ಹಾಗೂ, ಗೆಳತಿಯಿಂದ ತನ್ನ ಪತಿಗೆ ವಾಟ್ಸಾಪ್ ಸಂದೇಶಗಳು ಬಂದಿವೆ ಮತ್ತು ಅವನು ಅವಳನ್ನು ಮದುವೆಯಾಗಲು ಉದ್ದೇಶಿಸಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ ಎಂದೂ ಕುಲಕರ್ಣಿ ಕೋರ್ಟ್‌ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗರ್ಲ್‌ಫ್ರೆಂಡ್‌ ಪರವಾಗಿ ಎಕ್ಸಾಂ ಬರೆಯಲು ಆಕೆಯಂತೆಯೇ ವೇಷ ಧರಿಸಿದ ಭೂಪ; ಈ ಒಂದು ಕಾರಣಕ್ಕೆ ಸಿಕ್ಕಿಬಿದ್ದ!

ಎಫ್‌ಐಆರ್‌ ಬಗ್ಗೆ ಕೋರ್ಟ್ ಹೇಳಿದ್ದೇನು?
ಎಫ್‌ಐಆರ್‌ನಲ್ಲಿರುವ ಆರೋಪಗಳನ್ನು ಸಂಪೂರ್ಣವಾಗಿ ಅಂಗೀಕರಿಸಿದರೂ, ಗೆಳತಿಯ ಮೇಲೆ ಯಾವುದೇ ಅರಿಯಬಹುದಾದ ಅಪರಾಧ ಬಹಿರಂಗವಾಗಿಲ್ಲ. ಅಂತಹ ಸಂದರ್ಭಗಳಲ್ಲಿ, ಆಕೆಯ ಮೇಲೆ ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಪೀಠ ಹೇಳಿದ್ದು, ನಂತರ ಗೆಳತಿಯ ವಿರುದ್ಧ ಎಫ್‌ಐಆರ್ ಅನ್ನು ರದ್ದುಗೊಳಿಸಿತು. 

Latest Videos
Follow Us:
Download App:
  • android
  • ios