Asianet Suvarna News Asianet Suvarna News

ಪಿಗ್ಗಿ ಧರಿಸಿದ ಮಾಂಗಲ್ಯ ಸರದ ಬೆಲೆಗೆ 3 iMac ಕೊಳ್ಬೋದು..!

  • ಪ್ರಿಯಾಂಕ ಚೋಪ್ರಾ ಧರಿಸಿದ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ ?
  • ಎಷ್ಟೋ ಜನರ ವಾರ್ಷಿಕ ಆದಾಯವೇ ಇಷ್ಟಿರಲ್ಲ..!
Priyanka Chopra Promotes Mangalsutra Worth Rs 3 Lakhs By Bvlgari dpl
Author
Bangalore, First Published Sep 5, 2021, 10:37 AM IST
  • Facebook
  • Twitter
  • Whatsapp

ಸೆಲೆಬ್ರಿಟಿಗಳಿಂದ ಫೇಮಸ್ ಆಗುವಂಥಹ ಐಷಾರಾಮಿ ವಸ್ತುಗಳನ್ನು ನೋಡಿ ನಾವು ಅಚ್ಚರಿಗೊಳಗಾಗುತ್ತಲೇ ಇರುತ್ತೇವೆ. ಡ್ರೆಸ್, ಸೀರೆ, ಬ್ಯಾಗ್, ಆಭರಣಗಳು ಮತ್ತು ಅವರು ಏನು ಧರಿಸಿದರೂ ಅದು ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆಗುತ್ತದೆ. ಬಾಲಿವುಡ್‌ನ ದೇಸಿ ಗರ್ಲ್, ಪ್ರಿಯಾಂಕಾ ಚೋಪ್ರಾ ಕೂಡಾ ಆಗಾಗ ಅಭಿಮಾನಿಗಳನ್ನು ತಮ್ಮ ಸ್ಟೈಲಿಷ್ ಲುಕ್, ಎಸೆಸರಿಗಳಿಂದ ಬೆರಗುಗೊಳಿಸುತ್ತಾರೆ. ನಟಿ ಆಗಾಗ ಆಧುನಿಕ ಅಥವಾ ಸಾಂಪ್ರದಾಯಿಕವಿರಲಿ ಪ್ರತಿ ಲುಕ್‌ನಲ್ಲಿಯೂ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

Priyanka Chopra Promotes Mangalsutra Worth Rs 3 Lakhs By Bvlgari dpl

ಆಗಸ್ಟ್ 2021 ರಲ್ಲಿ ಇಟಾಲಿಯನ್ ಬ್ರ್ಯಾಂಡ್ ಬ್ಲಗರಿ ಪ್ರಿಯಾಂಕಾ ಚೋಪ್ರಾ ಅವರನ್ನು ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತು. ಪ್ರಿಯಾಂಕಾ ರೋಮನ್ ಹೈ ಜ್ಯುವೆಲ್ಲರಿ ಹೌಸ್ ಅನ್ನು ಬೆಂಬಲಿಸುತ್ತಾರೆ. ಅದನ್ನು ವಿಶ್ವಾದ್ಯಂತ ಪ್ರತಿಬಿಂಬಿಸುತ್ತಾರೆ ಎಂದು ಕಂಪನಿ ಬಹಿರಂಗಪಡಿಸಿದೆ. Bvlgari ಅದರ ಅತ್ಯಾಧುನಿಕ ರತ್ನದ ಕಲ್ಲುಗಳು, ಆಭರಣಗಳು ಮತ್ತು ಕೈಗಡಿಯಾರಗಳನ್ನು ಲಾಂಚ್ ಮಾಡುತ್ತವೆ.

ಲೇಟೆಸ್ಟ್ ಶೂಟ್‌ನಲ್ಲಿ ಕರಿಮಣಿ ಧರಿಸಿದ ಪ್ರಿಯಾಂಕ ಚೋಪ್ರಾ

ಕೆಲವು ದಿನಗಳ ಹಿಂದೆ, Bvlgari ತನ್ನ ಮೊದಲ ವಿಶೇಷ ಭಾರತೀಯ ಆಭರಣವಾದ ಚಿನ್ನದ ಮಾಂಗಲ್ಯವನ್ನು ಲಾಂಚ್ ಮಾಡಿತು. ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 18-ಕ್ಯಾರೆಟ್ ಐಷಾರಾಮಿ ಮಾಂಗಲ್ಯ ಸರದ ಒಂದು ಲುಕ್ ತೋರಿಸಿದ್ದಾರೆ. ನಟಿ ಈ ಮಾಂಗಲ್ಯವನ್ನು ಇದನ್ನು ವೋಗ್ ಇಂಡಿಯಾದ ಇತ್ತೀಚಿನ ಕವರ್ ಪೇಜ್‌ನಲ್ಲಿ ಧರಿಸಿದ್ದರು. 'Bvlgari Bvlgari ಹಾರ' ಎಂದು ಕರೆಯಲ್ಪಡುವ ಮಾಂಗಲ್ಯ ಸರದ ಮಧ್ಯದಲ್ಲಿ ಸಣ್ಣ ಕಪ್ಪು ಓನಿಕ್ಸ್ ಕಲ್ಲುಗಳನ್ನು ಹೊಂದಿದ್ದು ವಜ್ರವನ್ನು ಹೊಂದಿದೆ. ಇದನ್ನು ಡಬಲ್-ಲೋಗೋ ಚಿನ್ನದ ವಲಯಗಳಲ್ಲಿ ಮುಚ್ಚಲಾಗಿದೆ. ಸುಂದರವಾದ ತುಂಡನ್ನು ಚಿನ್ನದ ಸರಪಳಿಯಿಂದ ಜೋಡಿಸಲಾಗಿದೆ. ಅದರ ನಡುವೆ ಕಪ್ಪು ಓನಿಕ್ಸ್ ಮಣಿಗಳಿವೆ. ಈ ಲಕ್ಷುರಿ ಮಾಂಗಲ್ಯದ ಬೆಲೆ 3,49,000 ರೂಪಾಯಿ.

ಪ್ರಾಚೀನ ರೋಮನ್ ನಾಣ್ಯಗಳ ಬಾಗಿದ ಶಾಸನಗಳನ್ನು ನೆನಪಿಸಿಕೊಳ್ಳುತ್ತಾ, ಡಬಲ್ ಲೋಗೋ ಮೊದಲ ಬಾರಿಗೆ ಲಾಂಛನವು ಪ್ರಮುಖ ಆಭರಣ ವಿನ್ಯಾಸದ ಐಕಾನ್ ಆಗಿದ್ದು ಬಿವಿಲ್ಗರಿಯ ಟೈಮ್ಲೆಸ್ ಟ್ರೇಡ್ ಮಾರ್ಕ್ ಆಗಿ ಉಳಿದಿದೆ. ಇದು ಇಂದಿಗೂ ಸೃಜನಶೀಲತೆ ಎಂದಿದೆ. ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಪಾಪ್ ಸೆನ್ಸೇಷನ್ ನಿಕ್ ಜೋನಾಸ್ ಅವರನ್ನು ಡಿಸೆಂಬರ್ 1-2, 2018 ರಂದು ವಿವಾಹವಾದರು. ಈ ಜೋಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಅವರ ಕ್ರಿಶ್ಚಿಯನ್ ಮದುವೆಗೆ, ದಂಪತಿಗಳು ರಾಲ್ಫ್ ಲಾರೆನ್ ಅನ್ನು ಧರಿಸಿದ್ದರು ಮತ್ತು ಅವರ ಹಿಂದೂ ವಿವಾಹಕ್ಕಾಗಿ, ಅವರು ಡಿಸೈನರ್, ಸಬ್ಯಸಾಚಿ ಮುಖರ್ಜಿಯನ್ನು ಆರಿಸಿಕೊಂಡರು.

Follow Us:
Download App:
  • android
  • ios