ಮಾಡರ್ನ್ ಕರಿಮಣಿ ಧರಿಸಿ ಕಾಣಿಸಿಕೊಂಡ ಪಿಗ್ಗಿ ಸ್ಟೈಲಿಶ್ ಫೋಟೋ ಶೂಟ್‌ನಲ್ಲಿ ಭಾರತೀಯ ಕರಿಮಣಿಯಲ್ಲಿ ಪೋಸ್

ನಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗಷ್ಟೇ ಭಾರತೀಯ ಮಾಡರ್ನ್ ಕರಿಮಣಿ ಧರಿಸಿಕೊಂಡು ಮ್ಯಾಗಝಿನ್‌ಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವೋಗ್ ಇಂಡಿಯಾಗೆ ಪೋಸ್ ಕೊಟ್ಟ ದೇಸಿ ಗರ್ಲ್ ರೆಡ್ ಗೌನ್ ಧರಿಸಿದ್ದು ಬಲ್ಗರಿ ಕರಿಮಣಿ ಸರವನ್ನೂ ಧರಿಸಿದ್ದಾರೆ. ಆದರೆ ಇದು ಆಕೆ ತನ್ನ ಮದುವೆ ಸಂದರ್ಭದಲ್ಲಿ ಧರಿಸಿ ಕರಿಮಣಿ ಸರ ಅಲ್ಲ. ಇತ್ತೀಚಿನ ಭಾರತೀಯ ಮಾಡರ್ನ್ ಮಹಿಳೆಯರು ಧರಿಸೋ ಸ್ಟೈಲಿಶ್ ಕರಿಮಣಿ ಇದು.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್‌ನ ಫೋಟೋಗಳನ್ನು ಪೋಸ್ಟ್ ಮಾಡಿದ ಪ್ರಿಯಾಂಕಾ ಚೋಪ್ರಾ, ಮಂಗಳಸೂತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದು ಹಲವು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸಂಬಂಧ, ಮತ್ತು ಹಲವು ಕಾರಣಗಳಿಗಾಗಿ ನನಗೆ ಸಂತೋಷವನ್ನು ತರುತ್ತಿದೆ. ಅದರಲ್ಲಿ ಒಂದು ಕರಿಮಣಿ ನಾವು ರಚಿಸಿದ್ದೇವೆ. ತಂಡವು ಸುಮಾರು 3 ವರ್ಷಗಳ ಹಿಂದೆಯಿಂದ ಶ್ರಮಿಸುತ್ತಿದ್ದು ಅದು ಕಾರ್ಯರೂಪಕ್ಕೆ ಬರುವುದನ್ನು ನೋಡುವುದು ತುಂಬಾ ಖುಷಿಯ ಭಾವನೆಯಾಗಿದೆ. ಇದು ತುಂಬಾ ಸೊಗಸಾಗಿ ಸ್ಟೈಲಿಷ್ ಆಗಿದೆ. ಇದು ತನ್ನ ಸ್ವಂತ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಆಧುನಿಕ ಭಾರತೀಯ ಮಹಿಳೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಪಾಲುದಾರಿಕೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ದೀಪಿಕಾ ಪಡುಕೋಣೆ -ಅನುಷ್ಕಾ ಶರ್ಮ: ಬಾಲಿವುಡ್‌ ನಟಿಯರ ದುಬಾರಿ ಮಂಗಳಸೂತ್ರಗಳು!

ಸಂದರ್ಶನವೊಂದರಲ್ಲಿ ಮಾತನಾಡಿದ ದೇಸಿ ಗರ್ಲ್, ತಂದೆ ನೀಡಿದ ಕರಿಮಣಿ ಸರ ಹಾಗೂ ವಜ್ರದುಂಗರ ತನ್ನ ಬೆಲೆಬಾಳುವ ಗಿಫ್ಟ್ ಎಂದಿದ್ದಾರೆ. ನನ್ನ ಕರಿಮಣಿ. ಭಾರತೀಯ ವಿವಾಹದಲ್ಲಿ ಅದುವೇ ವರ ವಧುವಿನ ಕೊರಳಿಗೆ ಕಟ್ಟುವ ನೆಕ್ಲೆಸ್. ನನ್ ವಜ್ರದುಂಗರ ತಂದೆ ನೀಡಿದ್ದಾರೆ ಎಂದಿದ್ದಾರೆ.

ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!

ಪ್ರಿಯಾಂಕ ಚೋಪ್ರಾ ನಿಕ್ ಜೋನಸ್ ಅವರನ್ನು 2018ರಲ್ಲಿ ಜೋಧಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಸದ್ಯ ನಟಿ ಅಮೆರಿಕದಲ್ಲಿದ್ದಾರೆ. ಅಮೆರಿಕದಲ್ಲಿ ಸೋನಾ ಎಂಬ ರೆಸ್ಟೋರೆಂಟ್ ಆರಂಭಿಸಿದ ದೇಸಿ ಗರ್ಲ್ ಪ್ರಯತ್ನಕ್ಕೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.

View post on Instagram