2022ರ ವರ್ಷ ಮುಗಿದು 2023 ಶುರುವಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಜನರು 2022ರಲ್ಲಿ ಟ್ರೆಂಡ್ ಆದ ವಿಷಯಗಳನ್ನು ಮೆಲುಕು ಹಾಕುತ್ತಿದ್ದಾರೆ. ಮಾತ್ರವಲ್ಲ, 2023ರಲ್ಲಿ ಏನು ಟ್ರೆಂಡ್ ಆಗಬಹುದು ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಹಾಗಿದ್ರೆ 2023ರಲ್ಲಿ ಬ್ಯೂಟಿ ಟ್ರೆಂಡ್ಸ್ ಹೇಗಿರಬಹುದು ?

ಬದಲಾವಣೆ ನಿರಂತರ ಅನ್ನೋ ಮಾತೇ ಇದೆ. ವರ್ಷದಿಂದ ವರ್ಷಕ್ಕೆ ಎಲ್ಲಾ ವಿಷಯದಲ್ಲೂ ಬದಲಾವಣೆ (Changes) ಆಗುತ್ತಲೇ ಹೋಗುತ್ತದೆ. ಅದು ಫ್ಯಾಷನ್, ಶಿಕ್ಷಣ (Education), ಉದ್ಯಮ ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಅದರಲ್ಲೂ ಫ್ಯಾಷನ್ ಜಮಾನ ದಿನದಿಂದ ದಿನಕ್ಕೆ ಅಪ್‌ಡೇಟ್ ಆಗುತ್ತದೆ. ಅದರಲ್ಲೂ ಬ್ಯೂಟಿ ಟ್ರೆಂಡ್ಸ್ ಹೆಚ್ಚು ಬದಲಾವಣೆಗೆ ಒಳಗಾಗುತ್ತದೆ. ಹಾಗಿದ್ರೆ 2023ರಲ್ಲಿ ಟ್ರೆಂಡ್ ಆಗುವ ಸೌಂದರ್ಯ ಪ್ರವೃತ್ತಿಗಳು ಯಾವುದೆಲ್ಲಾ ತಿಳಿಯೋಣ.

1. ಸ್ಕಿನ್‌ಕೇರ್ ಅಂಶಗಳು: 2023ರಲ್ಲಿ ಸ್ಕಿನ್ ಕೇರ್ ಪ್ರಾಡಕ್ಟ್‌ಗಳಿಗೆ ಜನರು ಹೆಚ್ಚು ಹಾತೊರೆಯುತ್ತಾರೆ. ಗ್ರೀನ್ ಟೀ, ಪೆಪ್ಟೈಡ್‌ಗಳು, ಸಿಕಾ, ಅಸ್ಟಾಕ್ಸಾಂಥಿನ್‌ಗಳು, ಕ್ರಿಸ್ಟಲ್ ಟೊಮೇಟೊ, ಫೈಟೊಫ್ಲೋರೆನ್‌ಗಳಂತಹ ಹಲವಾರು ಹೊಸ ಪದಾರ್ಥಗಳು ತ್ವಚೆಯ ಮಾರುಕಟ್ಟೆಯಲ್ಲಿವೆ. ಹೀಗೆಯೇ ತ್ವಚೆಯ ಪ್ರಾಡಕ್ಟ್‌ಗಳು 2023 ರಲ್ಲಿ ತ್ವಚೆ ಮಾರುಕಟ್ಟೆಯನ್ನು ಚಾಲನೆ ಮಾಡುವಂತಿದೆ. ಸ್ಕಿನ್ ಬಯೋಮ್ ಮತ್ತು ಮೈಕ್ರೋಫ್ಲೋರಾ-ಸ್ನೇಹಿ ತ್ವಚೆ ಉತ್ಪನ್ನಗಳು ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಫೇಸ್ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು, ಹ್ಯಾಂಡ್ ಕೇರ್ ಕ್ರೀಮ್‌ಗಳು, ಸನ್‌ಸ್ಕ್ರೀನ್ ಮತ್ತು ಮೊಡವೆ (Pimple) ವಿರೋಧಿ ಉತ್ಪನ್ನಗಳು ಸಹ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವಂತೆ ತೋರುತ್ತದೆ. ತ್ವಚೆಯ ಆರೈಕೆಯಲ್ಲಿ (Skin care) ಇಷ್ಟೊಂದು ಬೆಳವಣಿಗೆ ಕಾಣುತ್ತಿರುವುದು ಉಲ್ಲಾಸದಾಯಕವಾಗಿದೆ.

ಟಾಲ್ಕಮ್ ಪೌಡರ್‌ ಬಳಸೋ ಮುನ್ನ ಎಚ್ಚರ, ಕ್ಯಾನ್ಸರ್‌ಗೂ ಕಾರಣವಾಗುತ್ತೆ

2. DIY ಚಿಕಿತ್ಸೆಗಳು: 2023 ಮತ್ತು ನಂತರ DIY ಚಿಕಿತ್ಸೆಗಳು (Treatment) ಹೆಚ್ಚು ಫೇಮಸ್ ಆಗಲಿದೆ. ಸೆಲ್ಫ್ ಹೋಮ್-ಕೇರ್ ಪಿಲ್ಸ್ ಮತ್ತು DIY ಸ್ಕಿನ್‌ಕೇರ್ ಕಳೆದ ಕೆಲವು ತಿಂಗಳುಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿದೆ. ಮಾಸ್ಕ್‌ಗಳು, ಫೇಶಿಯಲ್ ಕಿಟ್‌ಗಳು, ಮನೆಯಲ್ಲಿಯೇ ಲೇಸರ್‌ಗಳು ಮತ್ತು ಎಲ್‌ಇಡಿ ಸಾಧನಗಳು ಪ್ರಸ್ತುತ ಟ್ರೆಂಡ್‌ನಂತೆ ಕಾಣುತ್ತವೆ ಮತ್ತು ಮುಂದಿನ ವರ್ಷಕ್ಕೂ ಇದು ಸರಾಗವಾಗಿ ಸಾಗುತ್ತವೆ. ಆದರೆ, ಲೇಸರ್‌ಗಳು, ಪಿಲ್‌ಗಳು ಇತ್ಯಾದಿಗಳು ಆರೋಗ್ಯಕ್ಕೆ (Health) ಹೆಚ್ಚು ಅಪಾಯಕಾರಿ. ಲೇಸರ್ ಮನೆಯಲ್ಲಿ ಮಾಡಬಹುದಾದ ಚಿಕಿತ್ಸೆ ಅಲ್ಲ. ಇವುಗಳು ಚರ್ಮರೋಗ ವೈದ್ಯರ ಮೇಲ್ವಿಚಾರಣೆಯಲ್ಲಿ ಕ್ಲಿನಿಕ್ ಸೆಟಪ್‌ನಲ್ಲಿ ಪ್ರೋಟೋಕಾಲ್‌ಗಳೊಂದಿಗೆ ಮಾಡಬೇಕಾದ ವೈದ್ಯಕೀಯ ಚಿಕಿತ್ಸೆಗಳಾಗಿವೆ. 

3. ಸಾಮಾಜಿಕ ಮಾಧ್ಯಮದ ಪ್ರಭಾವ: 2023ರಲ್ಲಿಯೂ ಸೌಂದರ್ಯ ಉದ್ಯಮವು ಸಾಮಾಜಿಕ ಮಾಧ್ಯಮದ (Social media) ಪ್ರಭಾವಿಗಳು, ಬ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳಿಂದ ನಡೆಸಲ್ಪಡುತ್ತದೆ. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ಎಷ್ಟರಮಟ್ಟಿಗೆ ಬ್ಯೂಟಿ ಪ್ರಾಡಕ್ಟ್‌ಗಳನ್ನು ಪ್ರಚಾರ ಮಾಡುತ್ತಾರೆ ಎಂಬುದನ್ನು ನಾವು ನೋಡಬಹುದು. ಈ ಟ್ರೆಂಡ್‌ 2023ರಲ್ಲಿಯೂ ಮುಂದುವರಿಯಲಿದೆ.

ಕೆಮಿಕಲ್‌ಯುಕ್ತ ಕಾಸ್ಮೆಟಿಕ್ಸ್‌ ಬಿಟ್ವಿಡಿ, ನೈಸರ್ಗಿಕ ಪರ್ಯಾಯ ಬಳಸಿ

4. ಸೌಂದರ್ಯದ ಚಿಕಿತ್ಸೆ: ಜನರು ಎಂದಿಗಿಂತಲೂ ಹೆಚ್ಚು ವೈದ್ಯಕೀಯ ಸೌಂದರ್ಯದ ಚಿಕಿತ್ಸೆಗಳನ್ನು ಆಶ್ರಯಿಸುತ್ತಾರೆ. ಮೊಡವೆಗಳನ್ನು ಗುಣಪಡಿಸುವ ರೇಡಿಯೋ ಫ್ರೀಕ್ವೆನ್ಸಿ ಮತ್ತು ಫಿಲ್ಲರ್‌ಗಳು ಮತ್ತು ಬೊಟೊಕ್ಸ್‌ಗಳಿವೆ. ಒತ್ತಡವು ವಯಸ್ಸಿನ ಗುಂಪುಗಳಲ್ಲಿ ಸಾಕಷ್ಟು ಕೂದಲು ಉದುರುವಿಕೆಗೆ ಕಾರಣವಾಗುತ್ತಿದೆ. ಹಾಗಾಗಿ ಕ್ಲಿನಿಕ್‌ಗಳಲ್ಲಿ ಕೂದಲಿಗೆ ಪಿಆರ್‌ಪಿ ಮತ್ತು ಸ್ಟೆಮ್ ಸೆಲ್ ಚಿಕಿತ್ಸೆಗಳು ಹೆಚ್ಚುತ್ತಿವೆ. HIFU, Ulthera, ರೇಡಿಯೋ ಫ್ರೀಕ್ವೆನ್ಸಿ ಮತ್ತು ಥ್ರೆಡ್‌ಗಳಂತಹ ಮುಖದ ಕಾರ್ಶ್ಯಕಾರಣ ವಿಧಾನಗಳಿಂದ ಜನರು ದೂರ ಸರಿಯುವುದಿಲ್ಲ. ಸ್ವಯಂ-ಅರಿವು ಮತ್ತು ಸುಂದರವಾದ ತ್ವಚೆಯ ಬಯಕೆಯು ಸಹ ರೋಗಿಗಳನ್ನು ಸೌಂದರ್ಯವರ್ಧಕ ಚಿಕಿತ್ಸಾಲಯಗಳಿಗೆ ಕರೆದೊಯ್ಯುತ್ತಿದೆ. ಲಿಪ್ ಫಿಲ್ಲರ್‌ಗಳು, ಟಿಯರ್ ಟ್ರಫ್ ಇಂಜೆಕ್ಷನ್‌ಗಳು ಮತ್ತು ಬೇಬಿ ಬೊಟೊಕ್ಸ್ 2023 ರಲ್ಲಿ ಫೇವರಿಟ್ ಆಗುವ ಸಾಧ್ಯತೆ ಹೆಚ್ಚು.

5. ಆನ್‌ಲೈನ್ ವೈದ್ಯಕೀಯ ಆರೈಕೆ: ಆನ್‌ಲೈನ್ ವೈದ್ಯಕೀಯ ಆರೈಕೆಯು ಹೆಚ್ಚು ಪ್ರಾಮುಖ್ಯತೆಯ ವಿಷಯವಾಗಿ ಮುಂದುವರಿಯುತ್ತದೆ. ಆನ್‌ಲೈನ್ ಸಮಾಲೋಚನೆಗಳು ಈಗ ಟ್ರೆಂಡ್ ಆಗಿರುವುದರಿಂದ, 2023ರಲ್ಲಿಯೂ ಇದು ಕಂಟಿನ್ಯೂ ಆಗಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ತ್ವಚೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಯೋಜನೆಯ ಅಗತ್ಯವಿದೆ ಮತ್ತು ವೀಡಿಯೊ ಕರೆ ಮೂಲಕ ಚರ್ಮದ ತಜ್ಞರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. 

6. ರೋಗನಿರೋಧಕ ಶಕ್ತಿ ವರ್ಧಕಗಳು: ತ್ವಚೆಯ ಹೊಳಪಿಗಾಗಿ ರೋಗನಿರೋಧಕ ಶಕ್ತಿ (Immunity power) ವರ್ಧಕಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ರೋಗನಿರೋಧಕ ಶಕ್ತಿ, ಮೌಖಿಕ ಪೂರಕಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವುದರ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಿ, ಮುಂಬರುವ ವರ್ಷದಲ್ಲಿ ಈ ಪ್ರವೃತ್ತಿಯು ಮುಂದುವರಿಯುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ (Skin) ಪ್ರಯೋಜನಕಾರಿಯಾಗಿದೆ. ವಿಟಮಿನ್ ಸಿ, ಗ್ಲುಟಾಥಿಯೋನ್, ಕ್ರಿಸ್ಟಲ್ ಟೊಮೇಟೊ, ಸೆಲರ್ಜೆನ್, ಅಸ್ತಕ್ಸಾಂಥಿನ್, ಕರ್ಕ್ಯುಮಿನ್ ಇತ್ಯಾದಿಗಳು ತ್ವಚೆಯನ್ನು ಕಾಂತಿಯುತಗೊಳಿಸಲು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.