Asianet Suvarna News Asianet Suvarna News

ಹುಟ್ಟಿದ ಕೂಸಿಗೆ ಅಂಬಾನಿ ಫ್ಯಾಮಿಲಿ 32 ಬೆಂಗಾವಲು ವಾಹನಗಳ ಭರ್ಜರಿ ಸ್ವಾಗತ, ಅಬ್ಬಬ್ಬಾ ಎಂದು ನೆಟ್ಟಿಗರು!

ಮೇ 31ರಂದು ಹುಟ್ಟಿದ ಮೊಮ್ಮಗಳಿಗೆ ಮುಕೇಶ್​ ಅಂಬಾನಿ ಮನೆಯವರು 32 ಬೆಂಗಾವಲು ವಾಹನದೊಂದಿಗೆ ಭರ್ಜರಿ ಸ್ವಾಗತ ಕೋರಿದ್ದು ಅದರ ವಿಡಿಯೋ ವೈರಲ್​ ಆಗಿದೆ. 
 

Mukesh Ambani welcomes granddaughter home with convoys of 32 luxury cars
Author
First Published Jun 4, 2023, 11:27 AM IST

ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವವರಲ್ಲಿ ಒಬ್ಬರು  ಮುಕೇಶ್​ ಅಂಬಾನಿ (Mukesh Ambani). ಅವರು ರಿಲಯನ್ಸ್​ ಇಂಡಸ್ಟ್ರೀಸ್​ನ  ಚುಕ್ಕಾಣಿ ಹಿಡಿದು  21 ವರ್ಷವಾಗಿದೆ.  2002ರ ಜುಲೈ 6 ರಂದು ತಮ್ಮ ತಂದೆ ಮತ್ತು ರಿಲಯನ್ಸ್ ಸಂಸ್ಥಾಪಕ  ಧೀರೂಭಾಯಿ ಅಂಬಾನಿ  ಅವರ ನಿಧನದ ನಂತರ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಅದರನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.  ಎರಡು ದಶಕಗಳಲ್ಲಿ ಅವರು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ.  20 ವರ್ಷಗಳಲ್ಲಿ ಕಂಪೆನಿಯು ಆದಾಯ, ಲಾಭಗಳು, ನಿವ್ವಳ ಮೌಲ್ಯ, ಆಸ್ತಿಗಳು ಮತ್ತು ಮಾರುಕಟ್ಟೆ ಬಂಡವಾಳೀಕರಣ ಎಲ್ಲವೂ ಎರಡರಷ್ಟು ಅಭಿವೃದ್ಧಿಯಾಗಿದೆ. ಕಳೆದ 20  ವರ್ಷಗಳಲ್ಲಿ ರಿಲಯನ್ಸ್‌ನ (Reliance) ಮಾರುಕಟ್ಟೆ ಬಂಡವಾಳೀಕರಣದಲ್ಲಿ 20.6% ವಾರ್ಷಿಕ ದರ ಹೆಚ್ಚಾಗಿದೆ.  ಮಾರ್ಚ್ 2002 ರಲ್ಲಿ 41,989 ಕೋಟಿ ರೂಪಾಯಿಗಳಿಂದ ಬಂಡವಾಳೀಕರಣ 2022ರ ಮಾರ್ಚ್​​ ಹೊತ್ತಿಗೆ 17,81,841 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 

ಇಂತಿಪ್ಪ ಅಂಬಾನಿ ಬಂಗಲೆಯಲ್ಲೀಗ  ಮತ್ತೊಂದು ಗುಡ್​ನ್ಯೂಸ್​.  ಅವರ ಸೊಸೆ ಶ್ಲೋಕಾ ಅಂಬಾನಿ (Shloka Ambani) ಮತ್ತು ಮಗ ಆಕಾಶ್ ಅಂಬಾನಿ ಎರಡನೆಯ ಬಾರಿ ಮಗುವಿನ ಪಾಲಕರಾಗಿದ್ದಾರೆ. ಶ್ಲೋಕಾ ಅಂಬಾನಿ ಬುಧವಾರ ಮುದ್ದಾದ ಮಗಳಿಗೆ ಜನ್ಮ ನೀಡಿದ್ದು, ಇಡೀ ಅಂಬಾನಿ ಕುಟುಂಬದಲ್ಲಿ ಸಂತಸದ ವಾತಾವರಣವಿದೆ.  ದಂಪತಿಗೆ ಮೇ 31ರಂದು ಹೆಣ್ಣು ಮಗು ಜನಿಸಿದೆ.  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ  ನಂತರ ಶ್ಲೋಕಾ ಮನೆಗೆ ಬಂದಿದ್ದಾರೆ.  ಅಂಬಾನಿ ಕುಟುಂಬ ಮತ್ತು ಮೆಹ್ತಾ ಕುಟುಂಬ ಹೊಸ ಅತಿಥಿಯನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ನಡೆಸಿದೆ. 

IPL 2023: ಮುಂಬೈ ಇಂಡಿಯನ್ಸ್‌ ಮಾಲೀಕತ್ವದಿಂದ ನೀತಾ, ಮುಕೇಶ್ ಅಂಬಾನಿ ಆದಾಯವೆಷ್ಟು?

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗಿದ್ದು, ಮುದ್ದಾದ ಲಕ್ಷ್ಮಿ ಮನೆಗೆ ಬಂದ ಖುಷಿ ವಿಡಿಯೋದಲ್ಲಿ ಗೋಚರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ವೈರಲ್ ಆಗಿದ್ದು, ಅಂಬಾನಿ ಮತ್ತು ಮೆಹ್ತಾ ಕುಟುಂಬಗಳು ಹೊಸ ಅತಿಥಿಯ  ಪ್ರವೇಶಕ್ಕೆ ಸಜ್ಜಾಗಿರುವುದನ್ನು ನೋಡಬಹುದು.  ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಬಲೂನ್‌ಗಳು ಮತ್ತು ಆಲಂಕಾರಿಕ ವಸ್ತುಗಳನ್ನು ವಾಹನಗಳಿಂದ ಹೊರತೆಗೆದು ಬಂಗಲೆಯೊಳಗೆ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ವಿವಿಧ ರೀತಿಯ ಬಲೂನ್‌ಗಳು, ಆಲಂಕಾರಿಕ ವಸ್ತುಗಳು ಬಂದಿದ್ದು,  ಇದನ್ನು ನೋಡಿದರೆ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಪುಟ್ಟ ಗೊಂಬೆಯ ಸ್ವಾಗತವು ತುಂಬಾ ಗ್ರ್ಯಾಂಡ್ ಆಗಲಿದೆ ಎಂದು ಹೇಳಬಹುದು.


ಈ ವೀಡಿಯೊ ಕಾಣಿಸಿಕೊಂಡ ನಂತರ, ಜನರು ಅದರ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.  ಇದರೊಂದಿಗೆ, ಜನರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಲೈಕ್ ಮತ್ತು ಶೇರ್ ಮಾಡುತ್ತಿದ್ದಾರೆ.   ಇದರಲ್ಲಿ ಆಕಾಶ್ ಅಂಬಾನಿ (Akash Ambani) ಮತ್ತು ಶ್ಲೋಕಾ ಮೆಹ್ತಾ ಆಸ್ಪತ್ರೆಯಿಂದ ವಾಹನಗಳ ಬೆಂಗಾವಲುಗಳೊಂದಿಗೆ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಈ ಬೆಂಗಾವಲು ಪಡೆಯಲ್ಲಿ ಒಂದಕ್ಕಿಂತ ಹೆಚ್ಚು ಐಷಾರಾಮಿ ವಾಹನಗಳಿವೆ. ಅದೇ ಸಮಯದಲ್ಲಿ, ಹೆಚ್ಚಿನ ಬಳಕೆದಾರರು ಈ ಬೆಂಗಾವಲು ಪಡೆಯಲ್ಲಿ ಒಟ್ಟು 32 ವಾಹನಗಳಿವೆ. 

Success Mantra: ಮುಖೇಶ್ ಅಂಬಾನಿಯಂತಾಗ್ಬೇಕೆಂದ್ರೆ ಏನೆಲ್ಲ ಬೇಕು?

ಅಂದಹಾಗೆ  ಮುಕೇಶ್ ಅಂಬಾನಿ (Mukesh Ambani) ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ.

Follow Us:
Download App:
  • android
  • ios