Asianet Suvarna News Asianet Suvarna News

Success Mantra: ಮುಖೇಶ್ ಅಂಬಾನಿಯಂತಾಗ್ಬೇಕೆಂದ್ರೆ ಏನೆಲ್ಲ ಬೇಕು?

ನಿದ್ರೆಯಲ್ಲಿ ನಾನು ಅದಾಗ್ಬೇಕು, ಇದಾಗ್ಬೇಕು ಅಂತಾ ಕನಸು ಕಂಡ್ರೆ ಪ್ರಯೋಜನವಿಲ್ಲ. ನಿರ್ದಿಷ್ಟ ಗುರಿ ಜೊತೆ ಅದನ್ನು ಸಾಧಿಸುವ ಛಲವಿರಬೇಕು.  ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗ್ಬೇಕೆಂದ್ರೆ ಕೆಲ ರೂಲ್ಸ್ ನೆನಪಿನಲ್ಲಿಟ್ಟುಕೊಂಡು ಪಾಲಿಸಿ.

Success Mantra Follow Mukesh Ambani These Five Tips For Success
Author
First Published May 25, 2023, 12:39 PM IST | Last Updated May 25, 2023, 12:39 PM IST

ಬೇಗ ಶ್ರೀಮಂತರಾಗ್ಬೇಕು, ಯಶಸ್ಸು ಸಿಗ್ಬೇಕು, ವ್ಯಾಪಾರ – ವ್ಯವಹಾರದಲ್ಲಿ ಏಕಾಏಕಿ ಏಳ್ಗೆಯಾಗ್ಬೇಕು ಎಂದು ನಾವೆಲ್ಲ ಬಯಸ್ತೇವೆ. ಒಬ್ಬರು ಮಾಡಿದ ಕೆಲಸವನ್ನು ಮಾದರಿಯಾಗಿಟ್ಟುಕೊಂಡು ಅವರಿಗೆ ಸ್ಪರ್ಧೆ ನೀಡಲು ಮುಂದಾಗ್ತೇವೆ. ಅವರಿಗಿಂತ ಹೆಚ್ಚು ಹಣ ಸಂಪಾದನೆ ಮಾಡ್ಬೇಕೆಂಬ ಕಾರಣಕ್ಕೆ ಅನಾರೋಗ್ಯಕರ ಸ್ಪರ್ಧೆ ನಡೆಸ್ತೇವೆ. ಇದ್ರಿಂದ ಯಶಸ್ಸು ಸಿಗುವ ಬದಲು ನಷ್ಟವುಂಟಾಗುತ್ತದೆ. ಅದೆಷ್ಟು ಪ್ರಯತ್ನಿಸಿದ್ರೂ ಸಫಲತೆ ಪ್ರಾಪ್ತಿಯಾಗುವುದಿಲ್ಲ.

ಮುಖೇಶ್ (Mukesh) ಧೀರೂಭಾಯಿ ಅಂಬಾನಿ ಯಾರಿಗೆ ತಿಳಿದಿಲ್ಲ ಹೇಳಿ?  ರಿಲಯನ್ಸ್ (Reliance) ಇಂಡಸ್ಟ್ರೀಸ್‌ನ ಮಾಲೀಕರಾಗಿರುವ ಮುಖೇಶ್ ಅಂಬಾನಿ  ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರು ಇಷ್ಟು ಎತ್ತರಕ್ಕೆ ಏರೋದು ಸುಲಭವಾಗಿರಲಿಲ್ಲ. ಕೆಲವೊಂದು ತತ್ವಗಳ ಪಾಲನೆಯೇ ಮುಖೇಶ್ ಅಂಬಾನಿ ಯಶಸ್ಸಿನ ಹಿಂದಿರುವ ಗುಟ್ಟು. ವಿಶ್ವದಾದ್ಯಂತ ಅಧ್ಬುತ ಆಲೋಚನೆ ಮೂಲಕವೇ ಹೆಸರು ಮಾಡಿರುವ ಮುಖೇಶ್ ಅಂಬಾನಿಯಂತೆ ನೀವಾಗ್ಬೇಕು ಅಂದ್ರೆ ನೀವು ಅವರ  ತತ್ವಗಳನ್ನು ತಿಳಿದು ಪಾಲಿಸಬೇಕು. ಅದು ನಿಮಗೆ ಗುರು ಮಂತ್ರವಾಗ್ಬೇಕು. ಜೀವನದಲ್ಲಿ ಯಶಸ್ಸಿನ ಮಂತ್ರವನ್ನು ಪಾಲಿಸಿದವರು ಮಾತ್ರ ಶ್ರೀಮಂತರಾಗಲು ಸಾಧ್ಯ. ನಾವಿಂದು ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಏನು ಪಾಲನೆ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಭೂಕಂಪ, ಬಾಂಬ್‌ ಅಟ್ಯಾಕ್‌ಗೂ ಜಗ್ಗಲ್ಲ..ಅಂಬಾನಿ ಮನೆ ಅಂಟಿಲಿಯಾದ ಡೋರ್‌ ಸೇಫ್ಟಿ ಹೇಗಿದೆ ನೋಡಿ

ಯಶಸ್ಸಿನ ಜೊತೆ ಶ್ರೀಮಂತಿಕೆ ಸಿಗ್ಬೇಕೆಂದ್ರೆ ಇದೆಲ್ಲ ಪಾಲಿಸಿ : 

ಥಿಂಕಿಂಗ್ ಔಟ್ ಆಫ್ ದಿ ಬಾಕ್ಸ್ : ಯಶಸ್ವಿ ವ್ಯಕ್ತಿ ಯಾವಾಗ್ಲೂ ಚೌಕಟ್ಟಿನ ಹೊರಗೆ ಆಲೋಚನೆ ಮಾಡ್ತಾನೆ. ಮುಖೇಶ್ ಅಂಬಾನಿ ಆಲೋಚನೆಗಳು ಕೂಡ ಹಾಗಿಯೇ ಇವೆ. ಯಾರೊಬ್ಬರೂ ಊಹಿಸಿರದ ಆಲೋಚನೆ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂಬುದನ್ನು ಇಡೀ ವಿಶ್ವದೇ ನಂಬುತ್ತದೆ. ನೀವೂ ಅಂಬಾನಿಯಾಗ್ಬೇಕೆಂದ್ರೆ ಔಟ್ ಆಫ್ ದಿ ಬಾಕ್ಸ್ ಆಲೋಚನೆ ಮಾಡೋದನ್ನು ಕಲಿಯಿರಿ. ಕುರಿಗಳಂತೆ ಬೇರೆಯವರನ್ನು ಅನುಸರಿಸ್ತಾ ದಾರಿತಪ್ಪಬೇಡಿ.

ಗುರಿ ಹಾಗೂ ಗುರಿಯೆಡೆಗೆ ಪಯಣ : ಮನುಷ್ಯ ಯಶಸ್ವಿಯಾಗ್ಬೇಕೆಂದ್ರೆ ಗುರಿ ಮುಖ್ಯ. ಗುರಿಯಿರದ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮೊದಲು ನೀವೇನಾಗ್ಬೇಕು ಎಂಬುದನ್ನು ಪತ್ತೆ ಮಾಡಿ. ನಂತ್ರ ಆ ಗುರಿಮುಟ್ಟಲು ನಿರಂತರ ಪ್ರಯತ್ನ ನಡೆಸಿ. ಅನೇಕರು ಸಮಸ್ಯೆಗಳು ಬರ್ತಿದ್ದಂತೆ ಗುರಿ ಮರೆಯುತ್ತಾರೆ. ದಿನಕ್ಕೊಂದು ಗುರಿ ಅವರ ತಲೆಯಲ್ಲಿ ಓಡುತ್ತಿರುತ್ತದೆ. ಇದು ಎಂದಿಗೂ ಯಶಸ್ಸು, ಶ್ರೀಮಂತಿಗೆ ನೀಡಲು ಸಾಧ್ಯವಿಲ್ಲ. ಮುಖೇಶ್ ಅಂಬಾನಿ ಕೂಡ ಆರಂಭದಲ್ಲಿಯೇ ಒಂದು ಗುರಿ ಇಟ್ಟುಕೊಂಡಿದ್ದರು. ಈಗ ಅದ್ರ ಹಿಂದೆ ಓಡ್ತಿದ್ದಾರೆ.

ಅಂಬಾನಿ ಮನೆಯಲ್ಲಿದ್ದಾರೆ 600 ಕೆಲಸಗಾರರು, ಹೈಲಿ ಎಜುಕೇಟೆಡ್ ಆಗಿರೋ ಇವ್ರ ಸ್ಯಾಲರಿ ಎಷ್ಟ್‌ ಗೊತ್ತಾ?

ನಿತ್ಯದ ಕೆಲಸದ ಜೊತೆ ರಾಜಿ ಬೇಡ್ವೇಬೇಡ : ಗುರಿಯೆಡೆಗೆ ಸಾಗ್ಬೇಕೆಂದ್ರೆ ಅಕ್ಕಪಕ್ಕದನ್ನು ಮರೆಯಬೇಕೆಂದಲ್ಲ. ಕೆಲಸದಲ್ಲಿ ಬ್ಯುಸಿಯಾಗುವ ಜನರು ನಿತ್ಯದ ಕೆಲಸ ಮರೆಯುತ್ತಾರೆ. ಅದು ಸರಿಯಾದ ಮಾರ್ಗವಲ್ಲ. ಮುಖೇಶ್ ಅಂಬಾನಿ ಎಷ್ಟೇ ಯಶಸ್ವಿ ವ್ಯಕ್ತಿಯಾಗಿರಲಿ ನಿತ್ಯದ ಕೆಲಸವನ್ನು ಅವರು ಮರೆಯುವುದಿಲ್ಲ. ಕೆಲಸದ ಒತ್ತಡದ ಮಧ್ಯೆಯೇ ಕುಟುಂಬಕ್ಕೆ ಸಮಯ ನೀಡ್ತಾರೆ. ತಮ್ಮ ಇತರ ಕೆಲಸಗಳನ್ನು ತಪ್ಪದೆ ಮಾಡ್ತಾರೆ. ಸಂಯಮ ಹಾಗೂ ಶಿಸ್ತು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನೀವು ಕೂಡ ಎಲ್ಲವನ್ನೂ ಸಂಭಾಳಿಸುವ ಸ್ವಭಾವ ಕಲಿಯಬೇಕು. ಒಂದಕ್ಕಾಗಿ ಇನ್ನೊಂದನ್ನು ಬಿಡಬಾರದು.

ಅದೃಷ್ಟ ಬದಲಿಸುತ್ತೆ ಸಕಾರಾತ್ಮಕ ಚಿಂತನೆ : ಧನಾತ್ಮಕ ಚಿಂತನೆ ನಮ್ಮ ಬಲವನ್ನು ಹೆಚ್ಚಿಸುತ್ತದೆ. ಗುರಿ ತಲುಪುವ ವೇಳೆ ಎಡವಿದ್ರೆ ಆಡಿಕೊಳ್ಳೋರು ಸಾಕಷ್ಟು ಮಂದಿ. ಆದ್ರೆ ಅವರ ಮಾತನ್ನು ಎಂದಿಗೂ ಕಿವಿಗೆ ಹಾಕಿಕೊಳ್ಳಬಾರದು. ನಿಮ್ಮ ಕೆಲಸದ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಕೆಲಸ ಮಾಡಿದ್ರೆ ನಿಮ್ಮ ಅದೃಷ್ಟ ಬದಲಾಗೋದ್ರಲ್ಲಿ ಡೌಟಿಲ್ಲ.

ಹಿರಿಯರ ಮಾತಿಗೆ ಮನ್ನಣೆ : ನಮ್ಮ ಯಶಸ್ಸಿಗೆ ಹಿರಿಯರ ಆಶೀರ್ವಾದ ಬಹಳ ಮುಖ್ಯ. ಎಷ್ಟೇ ಎತ್ತರಕ್ಕೆ ಏರಿದ್ದರೂ ಹಿರಿಯರನ್ನು ಮರೆಯಬಾರದು. ಇದನ್ನು ಕೂಡ ಮುಖೇಶ್ ಅಂಬಾನಿ ಪಾಲಿಸುತ್ತಾರೆ. ಹಿರಿಯರ ಮಾತನ್ನು ಕಡೆಗಣಿಸುವುದಿಲ್ಲ. ತಂದೆ ಹೇಳಿದ ಮಾತುಗಳನ್ನು ಮೆಲುಕು ಹಾಕುವ ಜೊತೆಗೆ ಅದನ್ನು ಈಗ್ಲೂ ಪಾಲಿಸಿಕೊಂಡು ಬರ್ತಿದ್ದಾರೆ. 

Latest Videos
Follow Us:
Download App:
  • android
  • ios