Asianet Suvarna News Asianet Suvarna News

ಐಶ್ವರ್ಯ ರೈ ಕಣ್ಣನ್ನು ಝೂಮ್​ ಮಾಡಿ ನೋಡಿದ್ರಂತೆ ಮಿಸ್​ ವರ್ಲ್ಡ್​ ಆಯೋಜಕರು! ರೋಚಕ ಕಥೆ ಇಲ್ಲಿದೆ

ಐಶ್ವರ್ಯ ರೈ ಕಣ್ಣನ್ನು ಝೂಮ್​ ಮಾಡಿ ನೋಡಿದ್ರಂತೆ ಮಿಸ್​ ವರ್ಲ್ಡ್​ ಆಯೋಜಕರು! ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿದ ರೋಚಕ ಕಥೆ ಇಲ್ಲಿದೆ

 

Miss World CEO Julia Morley recalls about Aishwarya Rais eyes suc
Author
First Published Sep 16, 2023, 4:35 PM IST

ನಟಿ ಐಶ್ವರ್ಯ ರೈ ಅವರ ಸೌಂದರ್ಯದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಇವರಿಗಿಂತಲೂ ಮೊದಲು ಹಾಗೂ ನಂತರ ಹಲವಾರು ಮಂದಿ ಮಿಸ್‌ ವರ್ಲ್ಡ್‌ ಆಗಿದ್ದರೂ, ಸೌಂದರ್ಯದ ಬಗ್ಗೆ ಕಂಪೇರ್‌ ಮಾಡುವಾಗ ಎಲ್ಲರ ಬಾಯಲ್ಲೂ ನಟಿ ಐಶ್ವರ್ಯ ರೈ ಅವರ ಹೆಸರು ಬರುವುದು ಮಾಮೂಲು. ವಯಸ್ಸು 49 ಆಗಿದ್ದರೂ ಇಂದಿಗೂ ಮುಖದ ಚಾರ್ಮ್‌ ಹಾಗೆಯೇ ಉಳಿಸಿಕೊಂಡಿದ್ದಾರೆ. ಇವರ ಸೌಂದರ್ಯದ ಗುಟ್ಟು ಅವರ ಕಣ್ಣು ಕೂಡ ಹೌದು. ಕೆಲ ದಿನಗಳ ಹಿಂದೆ  ಅವರ ಕಣ್ಣಿನ ವರ್ಣನೆ ಮಾಡುವ ಭರದಲ್ಲಿ ಮಹಾರಾಷ್ಟ್ರದ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ (Vijaykumar Gavit) ಅವರು ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದು ಬಹುತೇಕರಿಗೆ ತಿಳಿದಿದೆ.  ಬುಡಕಟ್ಟು ಮೀನುಗಾರಿಗೆ ಮೀನುಗಾರಿಕೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್  ನಟಿ ಐಶ್ವರ್ಯಾ ರೈ ಪ್ರತಿದಿನ ಮೀನು ತಿನ್ನುತ್ತಿದ್ದರು. ಆದ್ದರಿಂದಲೇ ಅವಳ ಕಣ್ಣುಗಳು  ಸುಂದರವಾಗಿರುತ್ತದೆ. ಐಶ್ವರ್ಯಾ ರೈ  ಅವರು ಬೆಂಗಳೂರು ಸಮುದ್ರ ತೀರದಲ್ಲಿ ವಾಸಿಸುತ್ತಾರೆ. ಪ್ರತಿದಿನ ಸಮುದ್ರ ತೀರದಲ್ಲಿ ಮೀನು ತಿನ್ನುತ್ತಾರೆ. ಇದು ಪ್ರಯೋಜನಕಾರಿಯಾಗಿದೆ.  ಇದರಿಂದ ನಿಮ್ಮ  ಚರ್ಮವೂ ಹೊಳೆಯುತ್ತದೆ. ಮೀನಿನಲ್ಲಿ ಎಣ್ಣೆ ಇರುತ್ತದೆ. ಆದ್ದರಿಂದ ಫಲಿತಾಂಶವು ಕಣ್ಣುಗಳಿಗೆ (Eyes) ಒಳ್ಳೆಯದು ಎಂದಿದ್ದರು. ಹೀಗೆ ಹೇಳಿದ್ದರಿಂದ ಸಕತ್​ ಟ್ರೋಲ್​ಗೂ ಒಳಗಾಗಿ ಮಹಿಳಾ ಆಯೋಗ ನೋಟಿಸೂ ಜಾರಿ ಮಾಡಿತ್ತು.
 
ಇದೀಗ ಐಶ್ವರ್ಯ ರೈ (Aishwarya Rai) ಅವರ ಕಣ್ಣಿನ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ, ಈ ವರ್ಷ ಪುನಃ ವಿಶ್ವಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ. ಹೌದು.  ವಿಶ್ವ ಸುಂದರಿ ಸ್ಪರ್ಧೆಯು 27 ವರ್ಷಗಳ ನಂತರ ಭಾರತಕ್ಕೆ ಮರಳುತ್ತಿದೆ. 1996 ರಲ್ಲಿ ಬೆಂಗಳೂರಿನಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗಿತ್ತು.  ಅಂದಿನಿಂದ ಹಲವಾರು ಭಾರತೀಯ ಹುಡುಗಿಯರು  ಈ ಕಿರೀಟವನ್ನು ಗೆದ್ದರೂ, ಭಾರತದಲ್ಲಿ ಈ ಈವೆಂಟ್​ ನಡೆದಿರಲಿಲ್ಲ. ಪ್ರತಿ ದೇಶದ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಬೇರೆ ಬೇರೆ ದೇಶಗಳಲ್ಲಿ ನಡೆಸಲಾಗುತ್ತದೆ. ಆದ್ದರಿಂದ ಭಾರತದಲ್ಲಿ ಪುನಃ ಇದನ್ನು ಆಯೋಜಿಸಲು ವಿಳಂಬವಾಯಿತು ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ತಿಳಿಸಿದ್ದಾರೆ. 

27 ವರ್ಷಗಳ ಬಳಿಕ ಭಾರತದಲ್ಲಿ 'ವಿಶ್ವ ಸುಂದರಿ ಸ್ಪರ್ಧೆ' ಆಯೋಜನೆ

ಈ ಸಂದರ್ಭದಲ್ಲಿ ಕೆಲವೊಂದು ಕುತೂಹಲದ ಅಂಶವನ್ನು ಅವರು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಕೊನೆಯ ಬಾರಿಗೆ ವಿಶ್ವ ಸುಂದರಿ ನಡೆದದ್ದು ಒಂದು ತಲೆಮಾರಿನ ಹಿಂದೆ. ಇದೇ ಕಿರೀಟವನ್ನು ಧರಿಸಿದ್ದ ಮಾನುಷಿ ಛಿಲ್ಲರ್, ಭಾರತದಲ್ಲಿ ಈ ಈವೆಂಟ್​ ಆಯೋಜಿಸಿದ್ದಾಗ ಇನ್ನೂ ಹುಟ್ಟಿರಲೇ ಇಲ್ಲ. ಮಿಸ್​ ವರ್ಲ್ಡ್​ ಕಿರೀಟ ಧರಿಸಿದ್ದ ಇನ್ನೋರ್ವ ಸ್ಪರ್ಧಿ ಪ್ರಿಯಾಂಕಾ ಚೋಪ್ರಾ ಅವರಿಗೆ ಕೇವಲ 14 ವರ್ಷವಾಗಿತ್ತು. ಇದೀಗ ಮತ್ತೆ 27 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವುದು ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಜೂಲಿಯಾ ಮೊರ್ಲೆ (Julia Morley). ನವೆಂಬರ್/ಡಿಸೆಂಬರ್ ತಿಂಗಳಿನಲ್ಲಿ ನಡೆಯುವ  ಗ್ರ್ಯಾಂಡ್ ಫಿನಾಲೆಗೆ (Grand finale) ಒಂದು ತಿಂಗಳ ಮೊದಲು ಭಾಗವಹಿಸುವವರನ್ನು ಶಾರ್ಟ್‌ಲಿಸ್ಟ್ ಮಾಡಲು ಹಲವಾರು ರೌಂಡ್ಸ್‌ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ನಡೆದಿದ್ದ ಮಿಸ್​ ವರ್ಲ್ಡ್​ ಸ್ಪರ್ಧೆಯನ್ನು ನೆನಪಿಸಿಕೊಂಡಿರುವ ಜೂಲಿಯಾ ಮೊರ್ಲೆ ಅವರು, ಐಶ್ವರ್ಯರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.  ಪ್ರಿಯಾಂಕಾ ಚೋಪ್ರಾ ಮತ್ತು ಐಶ್ವರ್ಯಾ ರೈ (ಕ್ರಮವಾಗಿ 2000 ಮತ್ತು 1994 ರಲ್ಲಿ ವಿಜೇತರು) ಅವರ  ಬಗ್ಗೆ ಮಾತನಾಡುತ್ತಾ,  ಪ್ರಿಯಾಂಕಾ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದರು, ಇವರು  ಯಾವಾಗಲೂ ಆಕರ್ಷಕ ವ್ಯಕ್ತಿತ್ವ ಹೊಂದಿರುವವರೇ. ಆದರೆ ಐಶ್ವರ್ಯ ಮಾತ್ರ ಡಿಫರೆಂಟ್​. ಇವರದ್ದು ಮಗು ಸ್ವಭಾವ ಎಂದು ಹೊಗಳಿದ್ದಾರೆ.  ನಾವು ಇತ್ತೀಚೆಗೆ ಮಿಸ್ ವರ್ಲ್ಡ್ ಶೋಗಳನ್ನು ಮಾಡಿದಾಗ, ಕೆಲವೊಮ್ಮೆ ಐಶ್ವರ್ಯ  ಹಲೋ ಹೇಳಲು ಬಂದಿದ್ದೂ ಇದೆ, ಅಷ್ಟು ಒಳ್ಳೆಯ ವ್ಯಕ್ತಿತ್ವ ಅವರದ್ದು, ಅವರ  ನಗುವಿನಲ್ಲಿ  ಏನೋ ಮಾಂತ್ರಿಕತೆಯಿದೆ ಎಂದು ಹೊಗಳಿದ್ದಾರೆ.
 

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಿಸ್​ ವರ್ಲ್ಡ್​ 1994ರಲ್ಲಿ ಭಾಗವಹಿಸಿದ್ದ ವೇಳೆ ಸಂಘಟಕರೇ ಐಶ್ವರ್ಯ ಅವರನ್ನು ನೋಡಿ ದಿಗ್ಭ್ರಮೆಗೊಂಡಿದ್ದರು ಎಂದು ಜೂಲಿಯಾ ನೆನಪಿಸಿಕೊಳ್ಳುತ್ತಾರೆ. ನನಗೆ ಇನ್ನೂ ನೆನಪಿದೆ, ಆಕೆಯ ಕಣ್ಣುಗಳ ಮಾಂತ್ರಿಕತೆ ಎಲ್ಲರನ್ನೂ ಮೋಡಿಗೊಳಿಸುತ್ತದೆ ಎಂದಿರುವ ಜೂಲಿಯಾ,  ಕಾರ್ಯಕ್ರಮವನ್ನು ಮಾಡುತ್ತಿದ್ದ ನಿರ್ದೇಶಕರು, ಓ ದೇವರೇ, ಇಂಥ  ಅದ್ಭುತವಾದ ಕಣ್ಣುಗಳನ್ನು ಹೊಂದಿರುವ ಅಪರೂಪದ ಹುಡುಗಿಯನ್ನು ನೀನು ಸೃಷ್ಟಿಸಿರುವೆ ಎಂದಿದ್ದರು. ಅಂಥ ಸುಂದರ ಕಣ್ಣುಗಳನ್ನು ಐಶ್ವರ್ಯಾ ಹೊಂದಿದ್ದಾರೆ ಎಂದಿದ್ದಾರೆ. ಮಾತ್ರವಲ್ಲದೇ, ಐಶ್ವರ್ಯ ಅವರ ಫೋಟೋ ನೋಡಿದ್ದ ಆಯೋಜಕರು ಆಕೆಯ ಕಣ್ಣುಗಳನ್ನೇ ಝೂಮ್​ ಮಾಡಿ ಮಾಡಿ ನೋಡಿದ್ದರು. ಅವರ ವ್ಯಕ್ತಿತ್ವದಂತೆಯೇ ಕಣ್ಣುಗಳೂ ಸುಂದರವಾಗಿವೆ ಎಂದಿದ್ದಾರೆ.

Aishwarya Rai: ಮೀನು​ ತಿಂದ್ರೆ ಬಾಲಿವುಡ್​​ ನಟಿಯಂತೆ ಆಗ್ತಾರಾ? ಸಚಿವರ ಮಾತೀಗ ಸಖತ್​ ಟ್ರೋಲ್​
 

Follow Us:
Download App:
  • android
  • ios