ಯಪ್ಪಾ..ಲುಂಗಿಯನ್ನು ಹೀಗೆಲ್ಲಾ ಬಳಸ್ಬೋದಾ, ಯುವಕನ ವಿಡಿಯೋ ವೈರಲ್
ಯಾವುದೋ ವಸ್ತುವನ್ನು ಇನ್ಯಾವುದಕ್ಕೋ ಬಳಸಿ ಜುಗಾಡ್ ಮಾಡುವ ಕೆಲಸವನ್ನೂ ಎಲ್ಲರೂ ಮಾಡ್ತಾರೆ. ಆದ್ರೆ ಲುಂಗಿಯನ್ನು ಹೀಗೆಲ್ಲಾ ಬಳಸ್ಬೋದು ಅಂದ್ರೆ ನೀವು ನಂಬ್ತೀರಾ. ಯುವಕನೊಬ್ಬ ಮಾಲ್‌ನಲ್ಲಿ ಲುಂಗಿಯನ್ನು ಬಳಸಿರೋ ರೀತಿ ಎಲ್ಲೆಡೆ ವೈರಲ್ ಆಗ್ತಿದೆ.
ದಕ್ಷಿಣಭಾರತದಲ್ಲಿ ಹೆಚ್ಚು ಜನರು ಬಳಸೋ ಉಡುಪು ಲುಂಗಿ. ಪುರುಷರು ಹೆಚ್ಚಾಗಿ ಇದನ್ನು ಬಳಸುತ್ತಾರೆ. ಉತ್ತರಭಾರತದ ಹಲವೆಡೆಯೂ ಇದನ್ನು ಬಳಸುವವರಿದ್ದಾರೆ. ಹೆಚ್ಚು ಕಂಫರ್ಟೆಬಲ್ ಅನ್ನೋ ಕಾರಣಕ್ಕೆ ಬಹುತೇಕ ಜನರು ಇದನ್ನು ಬಳಸೋಕೆ ಇಷ್ಟಪಡುತ್ತಾರೆ. ಆದ್ರೆ ಕೆಲವರು ಇದನ್ನು ಹಾಕ್ಕೊಂಡ್ರೆ ಓಡಾಡೋಕೆ, ನಡೆಯೋಕೆ, ಕೂರೋಕೆ ಎಲ್ಲಾನೂ ತೊಂದ್ರೆ ಅನ್ನೋ ಕಾರಣಕ್ಕೆ ಅವಾಯ್ಡ್ ಮಾಡ್ತಾರೆ. ಆದ್ರೆ ಇಂಥಾ ಲುಂಗಿ ಕೆಲವೊಂದು ಸಂದರ್ಭದಲ್ಲಿ ಆಪತ್ಬಾಂಧವನಂತೆಯೂ ಕಾರ್ಯನಿರ್ವಹಿಸುತ್ತದೆ. ಚಳಿಯಾದಾಗ ಹೊದ್ದು ಮಲಗಲು, ಕೈ ತೊಳೆದು ಕೈ ಒರೆಸಲು ಲುಂಗಿಯನ್ನು ಬಳಸುವವರೂ ಇದ್ದಾರೆ. ಆದ್ರೆ ವಿದೇಶದಲ್ಲೊಬ್ಬ ಭಾರತೀಯ ವ್ಯಕ್ತಿ ಲುಂಗಿ ಬಳಸಿರುವ ರೀತಿಗೆ ಎಲ್ಲರೂ ನಿಬ್ಬೆರಗಾಗಿ ಹೋಗಿದ್ದಾರೆ.
ಮಾಲ್‌ನಲ್ಲಿ ಬ್ಯಾಗ್‌ನಂತೆ ಲುಂಗಿ ಬಳಸಿದ ವ್ಯಕ್ತಿ, ಜನರು ತಬ್ಬಿಬ್ಬು
ಪುರುಷರು ಲುಂಗಿಗಳನ್ನು ಧರಿಸಿ ಭಾರತೀಯ ಬೀದಿಗಳಲ್ಲಿ ನಡೆಯುವುದು ಸಾಮಾನ್ಯವಾಗಿದೆ. ಆದರೂ, ವಿದೇಶದಲ್ಲಿ ಹೀಗೆ ಲುಂಗಿ ಧರಿಸಿರುವ ಭಾರತೀಯರನ್ನು ಕಾಣುವುದು ಅಪರೂಪದ ದೃಶ್ಯವಾಗಿದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಲುಂಗಿಯನ್ನು ಸುತ್ತಿಕೊಂಡು ಶಾಪಿಂಗ್ ಮಾಲ್‌ಗೆ ನಡೆದುಕೊಂಡು ಹೋಗುವುದನ್ನು ಯಾರೂ ನೋಡಿರಲು ಸಾಧ್ಯವಿಲ್ಲ. ಆದ್ರೆ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಲುಂಗಿ ಧರಿಸಿ ಮಾಲ್‌ಗೆ ಹೋಗಿರುವುಷ್ಟೇ ಅಲ್ಲ, ಅಲ್ಲಿ ಲುಂಗಿಯನ್ನು ಜುಗಾಡ್‌ನಂತೆ ಬಳಸಿಕೊಳ್ಳುತ್ತಾನೆ. ಹೌದು, ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಲುಂಗಿಯನ್ನು ಬಿಚ್ಚಿ ಬ್ಯಾಗ್‌ನಂತೆ ಬಳಸಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲುಂಗಿ ಉಟ್ಟು ಪೋಸ್ ನೀಡಿದ ಬೆಯರ್ ಗ್ರಿಲ್ಸ್, ಮುಂದಿನ ಅತಿಥಿ ಸುಳಿವು ನೀಡಿದ ಸಾಹಸಿ!
ಕ್ಯಾರಿ ಬ್ಯಾಗ್ ಬೇಡ, ಲುಂಗಿ ಸಾಕು ಬಿಡಿ
ಭಾರತೀಯ ಯುವಕನೊಬ್ಬ ವಿದೇಶಿ ನೆಲದಲ್ಲಿ ಲುಂಗಿಯಿಂದ ಆಗೋ ಪ್ರಯೋಜನಗಳ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾನೆ.
ವೀಡಿಯೊದಲ್ಲಿ, ಲುಂಗಿ ಧರಿಸಿದ ಯುವಕನು ಶಾಪಿಂಗ್ ಮಾಲ್‌ನಲ್ಲಿ ಕೆಲವು ವಸ್ತುಗಳನ್ನು ತುಂಬಿದ ಟ್ರಾಲಿಯನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಯುವಕ ಪೇಮೆಂಟ್ ಕೌಂಟರ್ ಬಳಿ ನಡೆದು ತನ್ನ ಟ್ರಾಲಿಯನ್ನು ಖಾಲಿ ಮಾಡುತ್ತಾನೆ. ಇದಲ್ಲದೆ, ಯುವಕನು ಕೌಂಟರ್‌ನಿಂದ ಕ್ಯಾರಿ ಬ್ಯಾಗ್‌ನ್ನು ಹೊರತೆಗೆಯುವುದನ್ನು ನೋಡಬಹುದು ಆದರೆ ಮತ್ತೆ ಅದನ್ನು ಹಿಂದಕ್ಕೆ ಹಾಕಿ ತನ್ನ ಟ್ರಾಲಿಗೆ ನಡೆಯುತ್ತಾನೆ.
ಬಳಿಕ ತನ್ನ ಲುಂಗಿಯನ್ನು ಬಿಚ್ಚಿ ನೆಲದ ಮೇಲೆ ಹರಡುತ್ತಾನೆ. ಒಂದೊಂದೇ ಸಾಮಾನುಗಳನ್ನೆಲ್ಲ ಲುಂಗಿಗೆ ಹಾಕಿ ಕಟ್ಟುತ್ತಾನೆ. ಕೌಂಟರ್‌ನಲ್ಲಿ ಪಾವತಿ ಮಾಡಿದ ನಂತರ, ಯುವಕರು ಅಂತಿಮವಾಗಿ ಲುಂಗಿಯಲ್ಲಿ ಸುತ್ತಿದ ವಸ್ತುಗಳನ್ನು ಎತ್ತಿಕೊಂಡು ಹೊರನಡೆಯುತ್ತಾನೆ. ಶಾಪಿಂಗ್ ಮಾಲ್‌ನಲ್ಲಿ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಹಣ ಪಾವತಿಸುವ ಬದಲು ವ್ಯಕ್ತಿ ಈ ಜುಗಾಡ್ ಬಳಸಿದ್ದಾನೆ. ಈ ಐಡಿಯಾಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಲುಂಗಿಯಿಂದ ಹೀಗೂ ಮಾಡುತ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
'ಲುಂಗಿ, ನೈಟಿ ಧರಿಸುವಂತಿಲ್ಲ..' ನೋಯ್ಡಾ ಅಪಾರ್ಟ್‌ಮೆಂಟ್ ಡ್ರೆಸ್‌ಕೋಡ್ ವಿವಾದ
ಹಸ್ನಾ ಜರೂರಿ ಹೈ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 25 ಸಾವಿರಕ್ಕೂ ಹೆಚ್ಚು ವೀವ್ಸ್ ಗಳಿಸಿದೆ. ಮಾತ್ರವಲ್ಲ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಲುಂಗಿಯನ್ನು ಹೀಗೂ ಬಳಸಬಹುದಾ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, 'ಇಂಥಾ ಜುಗಾಡ್ ನಿಜವಾಗಿಯೂ ಪ್ರಯೋಜನಕ್ಕೆ ಬರುತ್ತದೆ' ಎಂದು ಸಂತಸ ವ್ಯಕ್ಯಪಡಿಸಿದ್ದಾರೆ. ಒಟ್ನಲ್ಲಿ ಲುಂಗಿಯ ವಿಡಿಯೋ ಸಖತ್ ವೈರಲ್ ಆಗಿರೋಂತೂ ನಿಜ.