ಕೆಲವರು ಹೊಸ ನಿಯಮಗಳ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಇನ್ನೂ ಕೆಲವರು ಅಪಾರ್ಟ್‌ಮೆಂಟ್‌ ಮಾಲೀಕರ ಒಕ್ಕೂಟ ಅತಿಯಾದ ವರ್ತನೆ ತೋರುತ್ತಿದೆ ಎಂದು ದೂರು ನೀಡಿದೆ.

ನವದೆಹಲಿ (ಜೂ.14): ಗ್ರೇಟರ್‌ ನೋಯ್ಡಾದ ಸೆಕ್ಟರ್‌ ಫಿ-2ನಲ್ಲಿರುವ ಅಪಾರ್ಟ್‌ಮೆಂಟ್‌ ತನ್ನೆಲ್ಲಾ ನಿವಾಸಿಗಳಿಗೆ ಒಂದು ವಿನಂತಿಯನ್ನು ಮಾಡಿದೆ. ಅಪಾರ್ಟ್‌ಮೆಂಟ್‌ನ ಸಾಮಾನ್ಯ ಪ್ರದೇಶಗಳು ಹಾಗೂ ಉದ್ಯಾನವನವನ್ನು ಬಳಸುವ ವೇಳೆ ಉತ್ತರ ರೀತಿಯ ಉಡುಪುಗಳನ್ನು ಬಳಸುವಂತೆ ವಿನಂತಿ ಮಾಡಿದೆ. ಹಿಮ್‌ಸಾಗರ್‌ ಅಪಾರ್ಟ್‌ಮೆಂಟ್‌ ಮಾಲೀಕರ ಒಕ್ಕೂಟ ಜೂನ್‌ 10 ರಂದು ಸೂಚನೆ ನೀಡಿದ್ದು, ನಿಮ್ಮ ನಿಮ್ ಫ್ಲ್ಯಾಟ್‌ನ ಹೊರತಾಗಿ ಎಲ್ಲಿಯೂ ಮಹಿಳೆಯರು ನೈಟಿಗಳನ್ನು ಪುರುಷರು ಲುಂಗಿಗಳನ್ನು ಧರಿಸಬೇಡಿ ಎಂದು ಹೇಳಿದೆ. ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳು ಈ ಸೂಚನೆ ಅಗತ್ಯವಿತ್ತು ಎಂದು ಹೇಳಿದ್ದರೆ, ಇನ್ನೂ ಕೆಲವರು ಅಪಾರ್ಟ್‌ಮೆಂಟ್‌ ಮಾಲೀಕರ ಒಕ್ಕೂಟ (ಎಓಎ) ವ್ಯಕ್ತಿಯ ವೈಯಕ್ತಿಕ ಆಯ್ಕೆ ಹಾಗೂ ಬಟ್ಟೆಯ ಕುರಿತಾದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ. ಈ ಕುರಿತಂತೆ ಮಾತನಾಡಿರುವ ಎಓಎ ಅಧ್ಯಕ್ಷ ಸಿಕೆ ಕಾಲ್ರಾ, 'ನಾವು ಯಾರಿಗೂ ತಾರತಮ್ಯ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ಯೋಗ ಮಾಡುವ ಸ್ಥಳದಲ್ಲಿ ಪುರುಷರು ಹಾಗೂ ಮಹಿಳೆಯರು ಬಹಳ ಸಡಿಲವಾದ ಬಟ್ಟೆಗಳನ್ನು ಧರಿಸಿಕೊಂಡಿರುತ್ತಾರೆ ಎನ್ನುವ ಅತಿಯಾದ ದೂರುಗಳು ಬಂದಿವೆ. ಆ ಕಾರಣದಿಂದಾಗಿ ಈ ಮಾರ್ಗಸೂಚಿ ನೀಡಿದ್ದೇವೆ. ಇದರಲ್ಲಿ ನಾವು ವಿನಂತಿ ಮಾಡಿದ್ದೇವೆಯೇ ಹೊರತು ಕಡ್ಡಾಯ ಮಾಡಿಲ್ಲ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್‌ನ ಹಿರಿಯ ವ್ಯಕ್ತಿಯೊಬ್ಬರು ಲುಂಗಿ ಧರಿಸಿ ಯೋಗ ಮಾಡುತ್ತಿದ್ದರು ಎಂದು ದೂರು ನೀಡಿದ್ದಾರೆ. ಮೊದಲಿಗೆ ನಾವು ಈಗಾಗಲೇ ಎಲ್ಲರಿಗೂ ಮೌಖಿಕವಾಗಿ ಸೂಚನೆಯನ್ನೂ ನೀಡಿದ್ದೇವೆ. ಆ ನಂತರವೇ ಈ ಮಾರ್ಗಸೂಚಿಯನ್ನು ಪ್ರಕಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಕಾಲ್ರಾ ತಿಳಿಸಿದ್ದಾರೆ.

'ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ನಿವಾಸಿಗಳು ತಿರುಗಾಡುವಂಥ ಯಾವುದೇ ಸಮಯದಲ್ಲಿ, ನಿಮ್ಮ ವರ್ತನೆ ಹಾಗೂ ಧರಿಸುವ ವಸ್ತ್ರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ವರ್ತನೆಯ ಬಗ್ಗೆಯಾಗಲಿ ನಿಮ್ಮ ಬಟ್ಟೆಯ ಬಗ್ಗೆಯಾಗಲಿ ಯಾರೂ ಕೂಡ ಆಕ್ಷೇಪಿಸಲು ಅವಕಾಶ ನೀಡಬಾರದು. ನಿಮ್ಮ ಮಕ್ಕಳು ಕೂಡ ನಿಮ್ಮಿಂದ ಕಲಿಯುತ್ತಾರೆ. ಆದ್ದರಿಂದ ನಿಮ್ಮ ಫ್ಲ್ಯಾಟ್‌ನಿಂದ ಹೊರಗೆ ತಿರುಗಾಡುವಾಗ ಲುಂಗು ಹಾಗೂ ನೈಟಿಗಳನ್ನು ಧರಿಸಿ ತಿರುಗಾಡಬೇಡಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳು ಹೊಸ ನಿಯಮಗಳಿಂದ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರೆ, ಇನ್ನೂ ಕೆಲವರು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.

ಹರಿಯಾಣದಲ್ಲಿ ವೈದ್ಯರು ಜೀನ್ಸ್‌, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ ಧರಿಸೋ ಹಾಗಿಲ್ಲ!

ರೆಸಿಡೆಂಟ್‌ ವೆಲ್ಫೇರ್‌ ಅಸೋಸಿಯೇಷನ್‌ ಕೂಡ ಈ ಮಾರ್ಗಸೂಚಿಯ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಜಿಬಿ ನಗರ್‌ ಜಿಲ್ಲಾ ಅಭಿವೃದ್ಧಿ ರೆಸಿಡೆಂಟ್‌ ವೆಲ್ಫೇರ್‌ ಅಸೋಸಿಯೇಷನ್‌ ಡ್ರೆಸ್‌ ಕೋಡ್‌ ನಿರ್ಧಾರವನ್ನು ಬೆಂಬಲಿಸಿದ್ದರೆ, ರೆಸಿಡೆಂಟ್‌ ವೆಲ್ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಎನ್‌ಪಿ ಸಿಂಗ್‌, ಸಾರ್ವಜನಿಕ ಸ್ಥಳಗಳಲ್ಲಿ ಡ್ರೆಸ್‌ ಕೋಡ್‌ ಅಗತ್ಯವಿದೆ ಎಂದಿದ್ದಾರೆ. ಅಪಾರ್ಟ್‌ಮೆಂಟ್‌ನ ಸಾಮಾನ್ಯ ಪ್ರದೇಶಗಳು ಹಾಗೂ ಪಾರ್ಕ್‌ಗಳಲ್ಲಿ ಲುಂಗಿ ಅಥವಾ ನೈಟಿಯಂಥ ಸಡಿಲವಾದ ಬಟ್ಟೆಗಳನ್ನು ಧರಿಸುವುದು ಸೂಕ್ತವಲ್ಲ ಎಂದಿದ್ದಾರೆ.

ದೀದೀ ಸರ್ಕಾರದಿಂದ ಶಾಲೆಗಳಿಗೆ ಹೊಸ ಡ್ರೆಸ್‌ ಕೋಡ್‌, ವಿದ್ಯಾರ್ಥಿಗಳಿಗೆ ಈ ಬಣ್ಣದ ಸಮವಸ್ತ್ರ!