ಈ ಸುಂದರವಾದ ತ್ವಚೆ ಪಡೆಯಲು ಕೊರಿಯನ್ ಜನರು ಶತ ಶತಮಾನಗಳಿಂದ ನೈಸರ್ಗಿಕ ಪರಿಹಾರಗಳನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಅಕ್ಕಿ ನೀರು ಅತ್ಯಂತ ಮುಖ್ಯವಾಗಿದೆ. 

ಕೊರಿಯನ್ ಬ್ಯೂಟಿ ಟ್ರೆಂಡ್ಸ್ ಇಡೀ ಜಗತ್ತಿನಲ್ಲೇ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಇವುಗಳಲ್ಲಿ ಹೆಚ್ಚು ಚರ್ಚೆಯಾಗುವುದು ಗ್ಲಾಸ್ ಸ್ಕಿನ್. ಈ ಸುಂದರವಾದ ತ್ವಚೆ ಪಡೆಯಲು ಕೊರಿಯನ್ ಜನರು ಶತ ಶತಮಾನಗಳಿಂದ ನೈಸರ್ಗಿಕ ಪರಿಹಾರಗಳನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಅಕ್ಕಿ ನೀರು ಅತ್ಯಂತ ಮುಖ್ಯವಾಗಿದೆ. ಅಕ್ಕಿ ನೀರು ತ್ವಚೆ ಹೊಳೆಯುವಂತೆ ಮಾಡುವುದಲ್ಲದೆ, ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅಕ್ಕಿ ನೀರನ್ನು ಮುಖಕ್ಕೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ...

ಅಕ್ಕಿ ನೀರು ಏಕೆ ಪ್ರಯೋಜನಕಾರಿ?
ಅಕ್ಕಿ ನೀರು ಎಂದರೆ ಅಕ್ಕಿಯನ್ನು ತೊಳೆದ ನಂತರ ಅಥವಾ ನೆನೆಸಿದ ನಂತರ ಉಳಿಯುವ ಬಿಳಿ ನೀರು. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಇ, ಫೆರುಲಿಕ್ ಆಮ್ಲ, ಅಲಾಂಟೊಯಿನ್ ಮತ್ತು ಖನಿಜಗಳಂತಹ ಅನೇಕ ಪೋಷಕಾಂಶಗಳಿವೆ. ಇವು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ಚರ್ಮವನ್ನು ತೇವಗೊಳಿಸುತ್ತದೆ, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.

ಅಕ್ಕಿ ನೀರನ್ನು ತಯಾರಿಸುವುದು ಮತ್ತು ಬಳಸುವುದು ಹೇಗೆ?
ವಿಧಾನ-1
½ ಕಪ್ ಅಕ್ಕಿ ತೆಗೆದುಕೊಳ್ಳಿ.
ಶುದ್ಧ ನೀರಿನಿಂದ 2-3 ಬಾರಿ ತೊಳೆಯಿರಿ.
ನಂತರ ಅಕ್ಕಿಯನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಈ ನೀರನ್ನು ಶೋಧಿಸಿ ಬಾಟಲಿಯಲ್ಲಿ ಸಂಗ್ರಹಿಸಿ.

ವಿಧಾನ-2
ಅಕ್ಕಿಯನ್ನು ತೊಳೆದು ಅದರ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ.
ಕೋಣೆಯ ಉಷ್ಣಾಂಶದಲ್ಲಿ 24-48 ಗಂಟೆಗಳ ಕಾಲ ಬಿಡಿ.
ಸ್ವಲ್ಪ ಹುಳಿ ವಾಸನೆ ಬರಲು ಪ್ರಾರಂಭಿಸಿದಾಗ ಅದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ.
ಈ ಹುದುಗಿಸಿದ ಅಕ್ಕಿ ನೀರು ತುಂಬಾ ಪವರ್‌ಫುಲ್ ಮತ್ತು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಅಕ್ಕಿ ನೀರನ್ನು ಬಳಸುವುದು ಹೇಗೆ ?
*ಅಕ್ಕಿ ನೀರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
*ಅಕ್ಕಿ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ, ದಿನವಿಡೀ ನಿಮ್ಮ ಮುಖದ ಮೇಲೆ ಸಿಂಪಡಿಸುತ್ತಿರಬಹುದು.
*ಅಕ್ಕಿ ನೀರಿನಲ್ಲಿ ಜೇನುತುಪ್ಪ ಅಥವಾ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ.

ಅಕ್ಕಿ ನೀರಿನ ಪ್ರಯೋಜನಗಳೇನು?
ಕಲೆಗಳು ಮತ್ತು ಪಿಗ್ಮೆಂಟೇಶನ್ ಕಡಿಮೆ ಮಾಡಲು
ಅಕ್ಕಿ ನೀರಿನಲ್ಲಿರುವ ಫೆರುಲಿಕ್ ಆಮ್ಲ ಮತ್ತು ಅಲಾಂಟೊಯಿನ್ ಚರ್ಮದ ಕಲೆ ಮಸುಕಾಗುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ಮೆಲನಿನ್ ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಅನ್ನು ಕಡಿಮೆ ಮಾಡುತ್ತದೆ.

ತ್ವಚೆ ಹೊಳೆಯುವಂತೆ ಮಾಡಲು
ಅಕ್ಕಿ ನೀರು ಕೊರಿಯನ್ ಗ್ಲಾಸ್ ಸ್ಕಿನ್ ಪಡೆಯಲು ಅತ್ಯುತ್ತಮವಾದ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸ್ಕಿನ್ ಟೈಟ್ ಮಾಡಿ, ನೈಸರ್ಗಿಕ ಹೊಳಪನ್ನು ತರುತ್ತದೆ.

ಮೊಡವೆ ಕಡಿಮೆ ಮಾಡಲು
ಅಕ್ಕಿ ನೀರು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು , ಇದು ಮೊಡವೆಗಳ ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. ಇದು ಮೊಡವೆ ಪೀಡಿತ ತ್ವಚೆಗೂ ಪ್ರಯೋಜನಕಾರಿಯಾಗಿದೆ.

ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಕಡಿಮೆಯಾಗಲು
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಇದು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯನ್ನು ಯಂಗ್ ಆಗಿ ಕಾಣುವಂತೆ ನೋಡಿಕೊಳ್ಳುತ್ತದೆ.

ತ್ವಚೆ ಸಾಫ್ಟ್ ಆಗಲು
ಅಕ್ಕಿ ನೀರು ಚರ್ಮದಲ್ಲಿ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ ಮತ್ತು ಶುಷ್ಕತೆಯನ್ನು ತೆಗೆದುಹಾಕುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಒಣ ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿದೆ.