ಅಲ್ಲೊಂಚೂರು ಲಿಪ್‌ಸ್ಟಿಕ್‌, ಇಲ್ಲೊಂಚೂರು ಐಲೈನರ್‌, ಸ್ವಲ್ಪ ಮಸ್ಕರಾ, ಕೊಂಚ ಕ್ರೀಮ್‌ ಇವೆಲ್ಲ ನಿಮ್ಮ ಮುಖದ ಸೊಬಗನ್ನು ಹೆಚ್ಚಿಸುತ್ತವೆ. ನ್ಯಾಚುರಲ್‌ ಬ್ಯೂಟಿಗೆ ಒಂದು ಬಗೆಯ ಚೆಲುವನ್ನು ಇನ್ನಷ್ಟು ಸೇರಿಸುತ್ತವೆ. ಪಾರ್ಟಿಗೆ ಇದು ಇಲ್ಲದೆ ಹೋಗುವುದಾದರೂ ಹೇಗೆ? ಆದರೆ ಇವು ಸಾಕಷ್ಟು ಕೆಮಿಕಲ್‌ಗಳಿಂದಲೂ ಕೂಡಿವೆ. ನಿಮ್ಮ ತ್ವಚೆಗೆ ಹಾನಿ ಮಾಡುವ ಅಂಶಗಳೂ ಇದರಲ್ಲಿವೆ. ಹಾಗಿದ್ದರೆ ಯಾವ ಪ್ರಾಡಕ್ಟ್ನಲ್ಲಿ ಯಾವ ಕೆಮಿಕಲ್‌ ಇದೆ ಅಂತ ತಿಳಿದಿದ್ದರೆ ಒಳಿತು ಅಲ್ಲವೇ. ಮುಂದೆ ಇವುಗಳನ್ನು ಕೊಳ್ಳುವಾಗ, ಅಂಥ ಕೆಮಿಕಲ್‌ ಇಲ್ಲದ ಪ್ರಾಡಕ್ಟ್ ತೆಗೆದುಕೊಳ್ಳುವಷ್ಟು ನೀವು ಹುಷಾರಾದರೆ ಸಾಕು.

Fact check: ಮೋದಿ ಮೇಕಪ್‌ಗೆ ತಿಂಗಳಿಗೆ .15 ಲಕ್ಷ ಬೇಕಂತೆ, ಹೌದಾ!

ಥಾಲೇಟ್‌

ಇವುಗಳನ್ನು ಸಾಮಾನ್ಯವಾಗಿ ಗೋಂದು, ಅಂಟು, ಮನೆ ನಿರ್ಮಾಣ ಸಾಮಗ್ರಿ, ಕೀಟನಾಶಕಗಳಲ್ಲಿ ಮೊದಲು ಯೂಸ್‌ ಮಾಡಲಾಗುತ್ತಿತ್ತು. ನಂತರ ನಿಧಾನವಾಗಿ ಇದು ಕಾಸ್ಮೆಟಿಕ್‌ ವಲಯಕ್ಕೂ ಬಂತು. ಈಗ ಇವುಗಳನ್ನು ನೇಲ್‌ ಪಾಲಿಶ್‌ಗಳಲ್ಲಿ ಹಾಗೂ ಹೇರ್‌ ಸ್ಪ್ರೇಗಳಲ್ಲಿ ಬಳಸಲಾಗುತ್ತದೆ, ಇವುಗಳ ಶೆಲ್ಫ್‌ ಲೈಫ್‌ ಹೆಚ್ಚಿಸುವುದಕ್ಕೆ ಇವುಗಳ ಸೇರ್ಪಡೆ. ಹೆಚ್ಚು ಹೆಚ್ಚಾಗಿ ಬಳಸಿದರೆ ಇವು ಅಸ್ತಮಾ, ಜೀರ್ಣಾಂಗ ತೊಂದರೆಗಳಿಗೆ ಕಾರಣವಾಗುತ್ತವೆ. ಥಾಲೇಟ್‌ ಇಲ್ಲದ ನೇಲ್‌ ಪಾಲಿಶ್‌ ಹುಡುಕಿ ಬಳಸುವುದು ಉತ್ತಮ.

ಆಕ್ಸಿಬೆಂಜೋನ್‌

ಚಳಿಗಾಲದಲ್ಲಿ ನೀವು ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದು ಸಾಮಾನ್ಯ ಅಲ್ಲವೇ. ಇವುಗಳಲ್ಲಿ ಸಾಮಾನ್ಯವಾಗಿ ಇರುವ ಕೆಮಿಕಲ್‌ ಅಂದರೆ ಆಕ್ಸಿಬೆಂಜೋನ್‌. ಇದರ ಹೆಚ್ಚಿನ ಬಳಕೆಯಿಂದ ಹಾರ್ಮೋನಲ್‌ ಪ್ರಾಬ್ಲೆಮ್‌ಗಳು ನಮ್ಮ ದೇಹದಲ್ಲಿ ಉಂಟಾಗುತ್ತವೆ. ಇತ್ತೀಚೆಗೆ ಆಕ್ಸಿಬೆಂಜೋನ್‌ ಇಲ್ಲದ ಪ್ರಾಡಕ್ಟ್ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಮಲೈಕಾ ಮೇಕಪ್‌ ನೋಡಿ 'ಮುದುಕಿ' ಎಂದ ನೆಟ್ಟಿಗರು!

ಸತು

ಸತುವನ್ನು ನೀವು ಬಳಸುವ ಲಿಪ್‌ಸ್ಟಿಕ್‌ನಲ್ಲಿ ಕಾಣಬಹುದು. ಆದರೆ ಇದನ್ನು ನೇರವಾಗಿ ಸೇರಿಸುವುದಿಲ್ಲ. ಐರನ್‌ ಆಕ್ಸೈಡ್‌ ಅನ್ನು ಲಿಪ್‌ಸ್ಟಿಕ್‌ಗಳಿಗೆ ರಂಗು ತುಂಬಲು ಸೇರಿಸುವುದರಿಂದ, ಅದರಲ್ಲಿರುವ ಸತು ಸೇರಿಕೊಳ್ಳುತ್ತದೆ. ಸತುವಿನ ಉಪಯೋಗವನ್ನು ಕಾಸ್ಮೆಟಿಕ್ಸ್‌ಗಳಲ್ಲಿ ಸರಕಾರ ನಿಷೇಧಿಸಿದೆ. ಸತು ಹೊಟ್ಟೆಗ ಹೋದರೆ ವಿಷಕಾರಿ.

ಬೆಂಜಾಲ್ಕೋನಿಯಂ ಕ್ಲೋರೈಡ್‌

ಇವುಗಳನ್ನು ಐಲೈನರ್‌, ಮಸ್ಕರಾ ಮುಂತಾದವುಗಳಲ್ಲಿ ಬಳಸುವುದು ವಾಡಿಕೆ. ಸಾಮಾನ್ಯಕ್ಕಿಂತ ಹೆಚ್ಚಾಗಿ ಇವುಗಳ ಬಳಕೆಯಿಂದ ಚರ್ಮದಲ್ಲಿ ತುರಿಕೆ, ಕಣ್ಣಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಕಣ್ಣನ್ನು ಧೂಳು, ನೀರು, ಬ್ಯಾಕ್ಟೀರಿಯಾದಿಂದ ರಕ್ಷಿಸುವ ಎಪಿಥೀಲಿಯಲ್‌ ಜೀವಕೋಶಗಳನ್ನು ಇದು ಬಾಧಿಸುತ್ತವೆ.

ಸೋಡಿಯಂ ಲಾರೆತ್‌ ಸಲ್ಫೇಟ್‌

ಇದೊಂದು ನೊರೆ ಸೃಷ್ಟಿಸುವ ಕೆಮಿಕಲ್‌. ಟೂತ್‌ಪೇಸ್ಟ್‌, ಶಾಂಪೂ, ಫೇಸ್‌ ಕ್ರೀಮ್‌ಗಳಲ್ಲಿ ಜಸ್ತಿ ಬಳಸಲ್ಪಡುತ್ತದೆ. ಅಲ್ಲಿಂದ ಇದು ರಕ್ತವನ್ನು ಸೇರಬಹುದು. ಇದರ ಹಾನಿಕಾರಕ ಪರಿಣಾಮಗಳೆಂದರೆ ಚರ್ಮದಲ್ಲಿ ತುರಿಕೆ, ತ್ವಚೆಯ ಬಣ್ಣ ಬದಲಾಗುವುದು, ಇತ್ಯಾದಿ. ಮುಂದಿನ ಸಲ ಟೂತ್‌ಪೇಸ್ಟ್‌ ಕೊಳ್ಳುವಾಗ ಇದು ಇದೆಯೇ ನೋಡಿಕೊಳ್ಳಿ.

ಟ್ರೈಕ್ಲೋಸನ್‌

ಸೋಪ್‌, ಟೂತ್‌ಪೇಸ್ಟ್‌ಗಳಲ್ಲಿ ಇದು ಸಾಮಾನ್ಯ. ಕಾಸ್ಮೆಟಿಕ್ಸ್‌ಗಳಲ್ಲಿಯೂ ಇರುವುದುಂಟು. ಈ ಸಿಂಥೆಟಿಕ್‌ ಕೆಮಿಕಲ್‌ ನಿಮ್ಮ ಕೊಬ್ಬಿನ ಜೀವಕೋಶಗಳಲ್ಲಿ ಸೇರಿಕೊಳ್ಳುತ್ತದೆ. ಸ್ತನ್ಯದಲ್ಲೂ ಕಂಡುಬರಬಹುದು. ಹ್ಯಾಂಡ್‌ಮೇಡ್‌ ಸಾಬೂನು ಬಳಸಿದರೆ ಇದರ ಕಾಟ ಇರೋಲ್ಲ.

ಮೇಕಪ್‌ನಿಂದ ವಯಸ್ಸನ್ನು ಮರೆ ಮಾಚುವುದು ಹೇಗೆ?

ಪ್ಯಾರಾಬೆನ್ಸ್‌

ಹೆಚ್ಚಿನ ಎಲ್ಲ ಕಾಸ್ಮೆಟಿಕ್‌ಗಳಲ್ಲಿ ಬಳಸುವ ಹಲವು ಪ್ಯಾರಾಬೆನ್‌ಗಳಿವೆ. ಇವುಗಳನ್ನು ಬಳಸುವುದು ಪ್ರಾಡಕ್ಟ್ಗಳು ಹೆಚ್ಚು ಕಾಲ ಕೆಡದಂತೆ ಕಾಪಾಡಲು. ಮೀಥೈಲ್‌ಪ್ಯಾರಾಬೆನ್‌ನಿಂದ ಅಪಾಯವಿದೆ. ಇದು ಅತಿನೇರಳೆ ಕಿರಣಗಳನ್ನು ಆಕರ್ಷಿಸಿ ನಿಮ್ಮ ತ್ವಚೆ ಸುಡುವಂತೆ ಮಾಡುತ್ತದೆ. ಡಿಎನ್‌ಎಗೂ ಅಪಾಯ ಉಂಟುಮಾಡಬಹುದು.

ಇವುಗಳನ್ನು ಬಳಸಿ ಅಪಾಯ ತಂದುಕೊಳ್ಳುವುದಕ್ಕಿಂತಲೂ, ಈ ರಾಸಾಯನಿಕಗಳಿಲ್ಲದ ಕಾಸ್ಮೆಟಿಕ್‌ಗಳನ್ನು ಬಳಸುವುದು ಅಥವಾ ನ್ಯಾಚುರಲ್‌- ಪ್ರಾಕೃತಿಕ ಸೌಂದರ‍್ಯವರ್ಧಕಗಳ ಮೊರೆ ಹೋಗುವುದು ಒಳ್ಳೆಯದಲ್ಲವೇ? ಅಥವಾ ಇವುಗಳನ್ನು ಬಳಸುವ ಸಮಯವನ್ನು ಮಿತಗೊಳಿಸುವುದು, ಅವುಗಳ ಉದ್ದೇಶ ಮುಗಿದ ಬಳಿಕ ಚೆನ್ನಾಗ ಮುಖ ತೊಳೆದುಕೊಳ್ಳುವುದು ಮುಂತಾದವನ್ನು ಕಲಿತರೆ ಅಪಾಯವಿಲ್ಲ.