ಬಿ-ಟೌನ್‌ನಲ್ಲಿ 40 ರಲ್ಲೂ 18 ರಂತೆ ಕಾಣುವ ಯಂಗ್ ಮಮ್ಮಿ ಮಲೈಕಾ ಅರೋರಾ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸುಂದರಿ. ಕೆಲ ದಿನಗಳ ಹಿಂದೆ ಅಪ್ಲೋಡ್‌ ಮಾಡಿರುವ ಮೇಕಪ್‌ ಫೋಟೋ ಟ್ರೋಲಿಗರಿಗೆ ಆಹಾರವಾಗಿದೆ.

ಜಾರಿದ ಮೇಲುಡಿಗೆ, ಕ್ಯಾಮರಾ ಮುಂದೆ ಬಯಲಾದ ಮಲೈಕಾ ರಹಸ್ಯ!

'A world is stronger for all' ಎಂದು ಹೇಳುತ್ತಾ ಹೈ ಮೇಕಪ್‌ನಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು 'ಸೇಮ್‌ ರಾನೂ ಮಂಡಾಲ್‌ ತರ ಇದ್ದೀರಾ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು 'ಮೇಕಪ್‌ ಇಲ್ಲದೆನೇ ಚೆನ್ನಾಗಿ ಕಾಣಿಸುತ್ತಿರಾ' ಎಂದು ಕಾಮೆಂಟ್ ಮಾಡಿದ್ದಾರೆ.

ಸ್ವಿಮ್ ಸೂಟ್‌, ಟೈಟ್‌ ಡ್ರೆಸ್‌ ಧರಿಸಿ ಚಿಕ್ಕ ಹುಡುಗನನ್ನು ಡೇಟ್‌ ಮಾಡುತ್ತಿರುವ ಆಂಟಿ ಎಂದು ಹೆಸರು ಪಡೆದುಕೊಂಡಿರುವ ಮಲೈಕಾರನ್ನು ರೈಲ್ವೇ ಗಾಯಕಿ ರಾನೂ ಮಂಡಾಲ್‌ಗೆ ಹೋಲಿಸಿದ್ದಾರೆ. ಫೇಕ್ ಮೇಕಪ್‌ ಲುಕ್‌ ವೈರಲ್‌ ಆಗಿದ್ದು ಅದರ ಬಗ್ಗೆ ಪ್ರೊಫೆಷನಲ್‌ ಮೇಕಪ್‌ ಆರ್ಟಿಸ್ಟ್‌ ಸ್ಪಷ್ಟನೆ ನೀಡಿದ್ದಾರೆ.